Homeಕರ್ನಾಟಕದಡಾರ-ರುಬೆಲ್ಲಾ ಲಸಿಕೆ ಪಡೆದ ಮೂರು ಶಿಶುಗಳ ಸಾವು ಪ್ರಕರಣ: ಸಿಎಂಗೆ ವರದಿ ಸಲ್ಲಿಕೆ

ದಡಾರ-ರುಬೆಲ್ಲಾ ಲಸಿಕೆ ಪಡೆದ ಮೂರು ಶಿಶುಗಳ ಸಾವು ಪ್ರಕರಣ: ಸಿಎಂಗೆ ವರದಿ ಸಲ್ಲಿಕೆ

- Advertisement -
- Advertisement -

ಜಿಲ್ಲೆಯಲ್ಲಿ ದಡಾರ-ರುಬೆಲ್ಲಾ ಲಸಿಕೆ ಪಡೆದು ಮೂರು ಶಿಶುಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖಾ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿರುವುದಾಗಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬುಧವಾರ ತಿಳಿಸಿದ್ದಾರೆ. ಶಿಶುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲಸಿಕೆ ನಿಗಾ ಅಧಿಕಾರಿ ಈಶ್ವರ ಗಡದ್ ಅವರು ವರದಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದಾರೆ. ವರದಿಯ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಮತ್ತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ಹೇಳಿದ್ದಾರೆ.

ಇದನ್ನೂ ಓದಿ:ಬೆಳಗಾವಿಯಲ್ಲಿ 3 ಮಕ್ಕಳ ಸಾವು ಪ್ರಕರಣ: ಇಬ್ಬರು ಅಮಾನತು

“ತಯಾರಿಕೆ ಘಟಕ ಹಾಗೂ ಪ್ರಯೋಗಾಲಯಗಳಿಗೆ ಬಾಟಲಿಗಳನ್ನು ಕಳುಹಿಸಲಾಗಿದ್ದು, ಅವರು ವರದಿ ನೀಡಿದ ನಂತರ ಹೆಚ್ಚಿನ ಸ್ಪಷ್ಟತೆ ದೊರೆಯಲಿದೆ. ಚುಚ್ಚುಮದ್ದಿನ ಕಾರಣದಿಂದ ಉಂಟಾದ ಸಾವುಗಳಿಗೆ ಪರಿಹಾರ ಒದಗಿಸುವ ಪದ್ದತಿ ಇಲ್ಲ, ಆದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಅಡಿಯಲ್ಲಿ ಕೆಲವು ಮಾನದಂಡಗಳನ್ನು ಅನುಸರಿಸಿ ಪರಿಹಾರ ನೀಡಲಾಗುತ್ತದೆ. ಇದಕ್ಕಾಗಿ ಜಂಟಿ ಕಾರ್ಯದರ್ಶಿಗೆ ಶಿಫಾರಸು ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.

ಫಾರ್ಮಾಸಿಸ್ಟ್‌ನಿಂದ ಲಸಿಕೆ ಬಾಟಲಿಗಳನ್ನು ಪಡೆದ ನರ್ಸ್ ಎಲ್ಲಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಆಹಾರ ಪದಾರ್ಥಗಳೊಂದಿಗೆ ಹೋಟೆಲ್‌ನ ಫ್ರಿಜ್‌ನಲ್ಲಿ ಇರಿಸಿದ್ದರು ಎಂದು ಮೂರು ಶಿಶುಗಳ ಸಾವಿನ ಬಗ್ಗೆ ನಡೆದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ವರದಿಯಾಗಿದೆ. ಇದರಿಂದಾಗಿ ಬ್ಯಾಕ್ಟೀರಿಯಾದ ಸೋಂಕಿಗೆ ಕಾರಣವಾಗಿ ಮತ್ತು ಈ ಲಸಿಕೆಗಳನ್ನು ಪಡೆದ ಮೂರು ಶಿಶುಗಳು ಅಸೆಪ್ಟಿಕ್ ಶಾಕ್ ಸಿಂಡ್ರೋಮ್‌ನಿಂದ ಸಾವನ್ನಪ್ಪಿದ್ದವು ಎಂದು ನ್ಯಾಶನಲ್ ಹೆರಾಲ್ಡ್‌ ವರದಿ ಮಾಡಿದೆ.

ಜನವರಿ 12 ರಂದು ಬೋಚಗಾಲ ಕ್ಯಾಂಪ್‌ನಲ್ಲಿ ಲಸಿಕೆ ಹಾಕಿದ ನಂತರ ಎರಡು ಸಾವುಗಳು ವರದಿಯಾಗಿದ್ದು, ಜನವರಿ 11 ರಂದು ರಾಮದುರ್ಗ ತಾಲೂಕಿನ ಮಲ್ಲಾಪುರ ಕ್ಯಾಂಪ್‌ನಲ್ಲಿ ಒಂದು ಸಾವು ವರದಿಯಾಗಿದೆ.

ಇದನ್ನೂ ಓದಿ:ಹಸಿವಿನಿಂದ ಮಕ್ಕಳ ಸಾವು: ನಾವು ‘ನಾರ್ಮಲ್’ ಆಗಿರಬಹುದೇ?

ಬೋಚಗಾಲದಲ್ಲಿ 17 ಶಿಶುಗಳಿಗೆ ಲಸಿಕೆ ಹಾಕಲಾಗಿದ್ದು, ಮಲ್ಲಾಪುರದಲ್ಲಿ ನಾಲ್ಕು ಶಿಶುಗಳಿಗೆ ಲಸಿಕೆ ಹಾಕಲಾಗಿದೆ. ಒಂದು 18 ತಿಂಗಳ ಮಗು ಮತ್ತು ಇನ್ನೊಂದು 12 ತಿಂಗಳ ಮಗು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ರಾಜ್ಯ ಆರೋಗ್ಯ ಸಚಿವ ಕೆ.ಸುಧಾಕರ್ ಅವರು ನರ್ಸ್ ಮತ್ತು ಫಾರ್ಮಾಸಿಸ್ಟ್‌ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಶಿಷ್ಟಾಚಾರದ ಪ್ರಕಾರ ಲಸಿಕೆ ಬಾಟಲಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ (ಪಿಎಚ್‌ಸಿ) ಲಸಿಕಾ ಶಿಬಿರಗಳಿಗೆ ತೆಗೆದುಕೊಂಡು ಹೋಗಬೇಕು ಮತ್ತು ಪಿಎಚ್‌ಸಿಗೆ ಹಿಂತಿರುಗಿಸಬೇಕು ಎಂದು ಈಶ್ವರ ಗಡಾದ್ ಹೇಳಿದ್ದಾರೆ.

ಇದನ್ನೂ ಓದಿ:ಉತ್ತರಾಖಂಡ: ಶಾಲೆಯಲ್ಲಿ ದಲಿತ ಮಹಿಳೆ ಅಡಿಗೆ ಮಾಡಿದ ಕಾರಣಕ್ಕೆ ಊಟ ನಿರಾಕರಿಸಿದ ಸವರ್ಣಿಯ ಮಕ್ಕಳು

“ನರ್ಸ್ ಲಸಿಕೆ ಬಾಟಲಿಗಳನ್ನು ತೆಗೆದುಕೊಂಡು ಹೋಗಿ ಹೋಟೆಲ್ ಫ್ರಿಡ್ಜ್‌ನಲ್ಲಿ ಇಡಬಾರದಿತ್ತು. ಅವರು ಪಡೆದ ಎಲ್ಲಾ ಬಾಟಲುಗಳನ್ನು ಹಿಂದಕ್ಕೆ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲಾಗಿದೆ. ಇದು ದುರದೃಷ್ಟಕರ ಘಟನೆಯಾಗಿದೆ. ಆರೋಗ್ಯ ಇಲಾಖೆ ಇದರ ಬಗ್ಗೆ ಕಾಳಜಿ ವಹಿಸಿದ್ದು, ಪೋಷಕರು ತಮ್ಮ ಶಿಶುಗಳಿಗೆ ಲಸಿಕೆ ಹಾಕಲು ಮುಂದೆ ಬರಬೇಕು” ಎಂದು ಅವರು ಹೇಳಿದ್ದಾರೆ.

ಮೊದಲ ಡೋಸ್‌ ನೀಡಿದ ಕೆಲವೇ ಗಂಟೆಗಳ ನಂತರ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಂಡು ಅದೇ ದಿನ ಪವಿತ್ರಾ ಹಲಗೂರ್ ಎಂಬ 13 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ.

ಉಮೇಶ ಕರಗುಂಡಿ ಎಂಬ 14 ತಿಂಗಳ ಮಗು, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸ್ಥಳಾಂತರಗೊಂಡರೂ, ಐಸಿಯುನಲ್ಲಿ ಜನವರಿ 15 ರಂದು ಸಾವನ್ನಪ್ಪಿದೆ. ಮಲ್ಲಾಪುರ ಕ್ಯಾಂಪ್‌ನಲ್ಲಿ ಲಸಿಕೆ ಹಾಕಿಸಿಕೊಂಡ 15 ತಿಂಗಳ ಮಗು ಚೇತನಾ ಕೂಡ ಜನವರಿ 15ರಂದು ಮೃತಪಟ್ಟಿದೆ.

15 ತಿಂಗಳ ಕೆಳಗಿನ ಮಕ್ಕಳಿಗೆ ದಡಾರ-ರುಬೆಲ್ಲಾ ವಿರುದ್ಧ ಮೊದಲ ಲಸಿಕೆ ಡೋಸ್ ನೀಡಲಾಗುತ್ತದೆ ಮತ್ತು 15 ತಿಂಗಳ ಮೇಲ್ಪಟ್ಟವರಿಗೆ ಎರಡನೇ ಲಸಿಕೆ ಡೋಸ್ ನೀಡಲಾಗುತ್ತದೆ.

ಇದನ್ನೂ ಓದಿ:2020ರಲ್ಲಿ ದಿನವೊಂದಕ್ಕೆ ಸರಾಸರಿ 31 ಅಪ್ರಾಪ್ತ ಮಕ್ಕಳು ಆತ್ಮಹತ್ಯೆ: ಒಕ್ಕೂಟ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...