Homeಕರ್ನಾಟಕವಿಧಾನಸೌಧದ ಬಾಗಿಲಿಗೆ ಗೋಮೂತ್ರ ಸಿಂಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು: ಜಾಲತಾಣಗಳಲ್ಲಿ ತೀವ್ರ ಟೀಕೆ

ವಿಧಾನಸೌಧದ ಬಾಗಿಲಿಗೆ ಗೋಮೂತ್ರ ಸಿಂಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು: ಜಾಲತಾಣಗಳಲ್ಲಿ ತೀವ್ರ ಟೀಕೆ

- Advertisement -
- Advertisement -

ಇಂದು ನೂತನ ಸರ್ಕಾರದ ರಚನೆಯ ನಂತರ ಮೊದಲ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಅದಕ್ಕೂ ಮೊದಲು ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದ ಬಾಗಿಲಿಗೆ ಗೋಮೂತ್ರ ಸಿಂಪಡಿಸುವ ಮೂಲಕ 40% ಕಮಿಷನ್ ಸರ್ಕಾರದ ಪಾಪ ತೊಳೆಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ಇಂದು ಬೆಳಿಗ್ಗೆಯೇ ಪೂಜಾರಿಯೊಬ್ಬರು ಗೋ ಮೂತ್ರ ಸಿಂಪಡಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನಿಮಗೂ ಬಿಜೆಪಿ ಸರ್ಕಾರಕ್ಕೂ ಏನು ವ್ಯತ್ಯಾಸ? ಇಷ್ಟು ದಿನ ಗೋ ಮೂತ್ರ ಟೀಕಿಸಿದ್ದೇಕೆ ಎಂದು ಹಲವು ಕಿಡಿಕಾರಿದ್ದಾರೆ.

ಇವ್ಯಾವೋ ಗೋಮೂತ್ರ ಹಾಕಿದ್ರೆ ಪರಿಶುದ್ಧ ಆಗುತ್ತಾ? ಬ್ರಾಹ್ಮಣ್ಯ ತಾಂಡವವಾಡುತ್ತಿದೆ ಈ ಪೆದ್ದರ ತಲೆಯೊಳಗೆ. ಸರಿಯಾಗಿ ಆಡಳಿತ ಮಾಡಬೇಕು. ಆಗಲೇ ಭ್ರಷ್ಟಾಚಾರ ಮಟ್ಟ ಹಾಕೋಕೆ ಸಾಧ್ಯ. ಹೋಮ ಹವನ ಮಾಡಿಸಿ ಚುನಾವಣೆಗೆ ನಿಂತೋರು ಎಷ್ಟೋ ಜನ ಮಣ್ಣು ಮುಕ್ಕಿದ್ದಾರೆ. ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಸಿ ಗೆದ್ದೋರು ಇದ್ದಾರೆ, ಬುದ್ದಿ ಕಲೀರೋ ದಡ್ಡರ.. ಎಂದು ರಾಜು ಎಸ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಜೀವನ ಪೂರ್ತಿ ಬಿಜೆಪಿಯವರಿಗೆ ಗೋ ಮೂತ್ರ ಗೋ ಮೂತ್ರ ಅಂತ ಅಣಕಿಸ್ಕೊಂಡು ಇದ್ದರು. ಪಾಪ ಈಗ ಅವರೆ ಗೋ ಮೂತ್ರ ಸಿಂಪಡಿಸುತ್ತಿದ್ದಾರೆ ಎಂದು ಪ್ರತಾಪ್ ಕಣಗಲ್ ವ್ಯಂಗ್ಯವಾಡಿದ್ದಾರೆ.

ಇದು ಸೆಕ್ಯುಲರ್ ಗೋಮೂತ್ರ. ಹಾಗಾಗಿ ಅದು ಎಲ್ಲರಿಗೂ ಸಮ್ಮತವಾಗುತ್ತದೆ ಎಂದು ಸ್ಮಿತ ಎಂಬುವವರು ವ್ಯಂಗ್ಯದ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಕೂಡ ಗೋ ಮೂತ್ರ ಬಳಸುತ್ತಿದೆ. ಬಿಜೆಪಿಗೆ ದೂರಬೇಡಿ ಎಂದು ಅರ್ಜುನ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಜೀರೊ ಟ್ರಾಪಿಕ್‌ ಸೌಲಭ್ಯ ಬೇಡ ಎಂದ ಸಿಎಂ ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಪುವಾ ನ್ಯೂಗಿನಿಯಾ ಭೂಕುಸಿತ: 670ಕ್ಕೂ ಹೆಚ್ಚು ಜನರು ಸಾವು

0
ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 670ಕ್ಕೂ ಹೆಚ್ಚು ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಭಾನುವಾರ ಅಂದಾಜಿಸಿದೆ. ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಯೋಜನೆಯ ಮುಖ್ಯಸ್ಥ ಸೆರಾನ್‌ ಅಕ್ಟೋಪ್ರಾಕ್‌, ಯಂಬಾಲಿ ಮತ್ತು ಎಂಗಾ...