Homeಮುಖಪುಟಪೆಟ್ರೋಲ್ ಪಂಪ್‌ಗಳಲ್ಲಿ ʼಮೋದಿ ಕಿ ಗ್ಯಾರಂಟಿʼ ಹೋರ್ಡಿಂಗ್‌ ಅಳವಡಿಸಲು ಸೂಚನೆ: ವರದಿ

ಪೆಟ್ರೋಲ್ ಪಂಪ್‌ಗಳಲ್ಲಿ ʼಮೋದಿ ಕಿ ಗ್ಯಾರಂಟಿʼ ಹೋರ್ಡಿಂಗ್‌ ಅಳವಡಿಸಲು ಸೂಚನೆ: ವರದಿ

- Advertisement -
- Advertisement -

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿಶ್ವವಿದ್ಯಾನಿಲಯಗಳಲ್ಲಿ ಮೋದಿ ಸೆಲ್ಫಿ ಪಾಯಿಂಟ್‌, ರೈಲ್ವೇ ನಿಲ್ಧಾಣಗಳಲ್ಲಿ ಮೋದಿ ಸೆಲ್ಫಿ ಪಾಯಿಂಟ್‌, ಪಡಿತರ ಅಕ್ಕಿ ಚೀಲದಲ್ಲಿ ಮೋದಿ ಪೋಟೋ ಕುರಿತ ಆದೇಶಗಳು ಕೇಂದ್ರ ಸರಕಾರದಿಂದ ಬಂದಿದ್ದವು. ಸರಕಾರದ ಬೊಕ್ಕಸದಿಂದ ಇದಕ್ಕೆ ಕೋಟ್ಯಾಂತರ ರೂ. ವೆಚ್ಚವನ್ನು ಮಾಡಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪ್ರತಿಪಕ್ಷಗಳು ಇದು ಬಿಜೆಪಿ ಮತ್ತು ಮೋದಿಯ ಚುನಾವಣಾ ಪ್ರಚಾರದ ಭಾಗ ಎಂದು ಟೀಕೆಯನ್ನು ಮಾಡಿತ್ತು, ಸರಕಾರದ ಬೊಕ್ಕಸದ ಕೋಟ್ಯಾಂತರ ರೂ ಹಣದ ದುರ್ಬಳಕೆ ಎಂದು ವಾಗ್ದಾಳಿಯನ್ನು ನಡೆಸಿತ್ತು. ಇದೀಗ ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಪಂಪ್‌ಗಳು ಮತ್ತು ಇಂಧನ ರಿಟೇಲರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳನ್ನು ಹಾಕಲು ನಿರ್ದೇಶಿಸಲಾಗಿದ್ದು, ಸರ್ಕಾರದ ಪ್ರಮುಖ ಯೋಜನೆಯಾದ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಸಿಲಿಂಡರ್ ನೀಡುತ್ತಿರುವ ಫೋಟೋ ಹೋರ್ಡಿಂಗ್ಸ್‌ನಲ್ಲಿರಲಿದೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಹೊಸ ಫ್ಲೆಕ್ಸ್ ಹೋರ್ಡಿಂಗ್‌ಗಳು ಬುಧವಾರದೊಳಗೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಎಲ್ಲಾ ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ಗಳಿಗೆ ಹೇಳಲಾಗಿದೆ. ತೈಲ ಕಂಪನಿಗಳು ನಿಯೋಜಿಸಲ್ಪಟ್ಟ ಹೋರ್ಡಿಗ್‌ ಅಳವಡಿಸುವವರು ಬಾರದೇ ಇದ್ದಲ್ಲಿ ಆಯಾ ಮೇಲಧಿಕಾರಿಗಳಿಗೆ ತಿಳಿಸುವಂತೆಯೂ ಮ್ಯಾನೇಜರ್‌ಗಳಿಗೆ ಸೂಚಿಸಲಾಗಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅನೌಪಚಾರಿಕ ಸೂಚನೆಯ ಮೇರೆಗೆ ‘ಮೋದಿ ಕಿ ಗ್ಯಾರಂಟಿ’ ಹೋರ್ಡಿಂಗ್‌ಗಳನ್ನು ಹಾಕುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಸಾರ್ವಜನಿಕ ವಲಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂಗಳಲ್ಲಿ ಹೊಸ ಫ್ಲೆಕ್ಸ್ ಹೋರ್ಡಿಂಗ್‌ಗಳನ್ನು ಹಾಕಲು ಸೂಚಿಸಲಾಗಿದೆ.

ಚುನಾವಣಾ ಆಯೋಗವು ಬಹು ನಿರೀಕ್ಷಿತ ಸಾರ್ವತ್ರಿಕ ಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರ ಮತ್ತು ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ಈ ಹೋರ್ಡಿಂಗ್‌ಗಳನ್ನು ತೆಗೆದುಹಾಕಲಾಗುತ್ತದೆ. ಆದರೆ ಚುನಾವಣೆ ಘೋಷಣೆಗೆ ಮೊದಲು ಸರಕಾರ ತಕ್ಷಣಕ್ಕೆ ಈ ಹೋರ್ಡಿಂಗ್‌ಗಳನ್ನು ಅಳವಡಿಸುವಂತೆ ಕೇಳಿಕೊಂಡಿದೆ.

ಮಾರ್ಚ್ 2021ರಲ್ಲಿ, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ, ತೃಣಮೂಲ ಕಾಂಗ್ರೆಸ್‌ನ ದೂರಿನ ಮೇರೆಗೆ ಚುನಾವಣಾ ಆಯೋಗವು ಪೆಟ್ರೋಲ್ ಪಂಪ್‌ಗಳಲ್ಲಿನ ಪಿಎಂ ಮೋದಿಯವರ ಚಿತ್ರವಿರುವ ಎಲ್ಲಾ ಹೋರ್ಡಿಂಗ್‌ಗಳನ್ನು ತೆಗೆದುಹಾಕುವಂತೆ ಸೂಚಿಸಿತ್ತು. ಇತ್ತೀಚೆಗೆ ನಡೆದ ರಾಜಸ್ಥಾನ ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕೂಡ ಬಿಜೆಪಿ “ಮೋದಿ ಕಿ ಗ್ಯಾರಂಟಿ” ಎಂಬ ಚುನಾವಣಾ ಘೋಷಣೆಯೊಂದಿಗೆ ಪ್ರಚಾರವನ್ನು ಮಾಡಿತ್ತು.

ಇದನ್ನು ಓದಿ: ಚುನಾವಣಾ ಬಾಂಡ್‌ ಮಾಹಿತಿ ಒದಗಿಸಲು ಗಡುವು ವಿಸ್ತರಿಸಿ: ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮನವಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...