Homeಮುಖಪುಟಇಸ್ರೇಲ್-ಹಮಾಸ್ ಯುದ್ಧ: ಕ್ಷಿಪಣಿ ದಾಳಿಗೆ ಬಲಿಯಾದ ಮ್ಯಾಕ್ಸ್‌ವೆಲ್ ಪತ್ನಿ 7 ತಿಂಗಳ ಗರ್ಭಿಣಿ

ಇಸ್ರೇಲ್-ಹಮಾಸ್ ಯುದ್ಧ: ಕ್ಷಿಪಣಿ ದಾಳಿಗೆ ಬಲಿಯಾದ ಮ್ಯಾಕ್ಸ್‌ವೆಲ್ ಪತ್ನಿ 7 ತಿಂಗಳ ಗರ್ಭಿಣಿ

- Advertisement -
- Advertisement -

ಇಸ್ರೇಲ್-ಲೆಬನಾನ್ ಗಡಿಯಲ್ಲಿ ಕ್ಷಿಪಣಿ ದಾಳಿಗೆ ಬಲಿಯಾದ 31 ವರ್ಷದ ಭಾರತೀಯ ವ್ಯಕ್ತಿ ಎರಡು ತಿಂಗಳ ಹಿಂದೆಯಷ್ಟೇ ಕೇರಳದ ಕೊಲ್ಲಂನಲ್ಲಿರುವ ತನ್ನ ಮನೆಯಿಂದ ತೆರಳಿದ್ದ ಎಂದು ತಿಳಿದುಬಂದಿದೆ. ಅವರ ಐದು ವರ್ಷದ ಮಗಳು ಮತ್ತು ಗರ್ಭಿಣಿ ಪತ್ನಿ ಅವರನ್ನು ಇಸ್ರೇಲಿಗೆ ಬೀಳ್ಕೊಟ್ಟಿದ್ದರು. ಇದೇ ಅವರಿಗೆ ಅಂತಿಮ ವಿದಾಯ ಎಂದು ಯಾರಿಗೂ ತಿಳಿದಿರಲಿಲ್ಲ.

ನಿನ್ನೆ ಉತ್ತರ ಇಸ್ರೇಲ್‌ನ ಮಾರ್ಗಲಿಯೋಟ್‌ನ ಹಣ್ಣಿನ ತೋಟದ ಬಳಿ ಕ್ಷಿಪಣಿ ದಾಳಿಯಲ್ಲಿ ಪ್ಯಾಟ್ ನಿಬಿನ್ ಮ್ಯಾಕ್ಸ್‌ವೆಲ್ ಕೊಲ್ಲಲ್ಪಟ್ಟಿದ್ದು, ದಾಳಿಯಲ್ಲಿ ಕೇರಳ ಮೂಲದ ಇನ್ನಿಬ್ಬರು ಗಾಯಗೊಂಡಿದ್ದಾರೆ. ಇಡುಕ್ಕಿ ಮೂಲದ ಪಾಲ್ ಮೆಲ್ವಿನ್ ಮತ್ತು ಬುಷ್ ಜೋಸೆಫ್ ಜಾರ್ಜ್ ಇಸ್ರೇಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿಯು ಈ ಬಗ್ಗೆ ಮಾಹಿತಿ ನೀಡಿ ಹಣ್ಣಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಶಾಂತಿಯುತ ಕೃಷಿ ಕಾರ್ಮಿಕರ ಮೇಲೆ ನಡೆದ ಹೇಡಿತನದ ಭಯೋತ್ಪಾದಕ ದಾಳಿಯನ್ನು ಖಂಡಿಸಿದೆ. ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಅವರು ಮ್ಯಾಕ್ಸ್‌ವೆಲ್ ಅವರ ಸಹೋದರನೊಂದಿಗೆ ಮಾತನಾಡಿದ್ದಾರೆ ಮತ್ತು ಅವರಿಗೆ ಎಲ್ಲಾ ಸಹಾಯದ ಭರವಸೆ ನೀಡಿದ್ದಾರೆ.

ನಿಬಿನ್ ಅವರ ತಂದೆ ಪಾಥ್ರೋಸ್ ಅವರು 31 ವರ್ಷ ವಯಸ್ಸಿನ ಮಗ ತನ್ನ ಹಿರಿಯ ಸಹೋದರನನ್ನು ಜೊತೆ ಇಸ್ರೇಲಿಗೆ ತೆರಳಿದ್ದರು ಎಂದು ಹೇಳಿದರು. ‘ಅವರು ಮಸ್ಕತ್ ಮತ್ತು ದುಬೈನಲ್ಲಿದ್ದರು; ನಂತರ ಮನೆಗೆ ಮರಳಿದರು. ನಂತರ ಅವರು ಇಸ್ರೇಲಿಗೆ ಹೋದರು. ಮೊದಲು ನನ್ನ ಹಿರಿಯ ಮಗ ಅಲ್ಲಿಗೆ ಹೋದನು; ಒಂದು ವಾರದ ನಂತರ ನನ್ನ ಕಿರಿಯ ಮಗ ಅವನನ್ನು ಹಿಂಬಾಲಿಸಿದನು’ ಎಂದು ಅವರು ಹೇಳಿದರು.

ಪಾಥ್ರೋಸ್ ಮ್ಯಾಕ್ಸ್‌ವೆಲ್ ಅವರು ತಮ್ಮ ಸೊಸೆಯಿಂದ ಮಗನ ಸುದ್ದಿ ತಿಳಿದುಕೊಂಡಿದ್ದಾರೆ. ‘ಸೋಮವಾರ ಸಂಜೆ 4.30 ರ ಸುಮಾರಿಗೆ ನನಗೆ ಕರೆ ಮಾಡಿ ನಿಬಿನ್ ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿಸಿದಳು. ನಂತರ ಮಧ್ಯರಾತ್ರಿ 12.45 ರ ಸುಮಾರಿಗೆ ಅವರು ಸಾವನ್ನಪ್ಪಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿತು’ ಎಂದು ನೋವು ತೋಡಿಕೊಂಡಿದ್ದಾರೆ.

ಮಗನ ಸಾವಿನಿಂದ ಆಘಾತಕ್ಕೊಳಗಾದ ತಂದೆ ನಿಬಿನ್, ‘ನನ್ನ ಮಗ ನಾಲ್ಕೂವರೆ ವರ್ಷದ ಮಗಳನ್ನು ಅಗಲಿದ್ದಾನೆ; ಅತನ ಪತ್ನಿ ತಮ್ಮ ಎರಡನೇ ಮಗುವಿಗೆ ಏಳು ತಿಂಗಳ ಗರ್ಭಿಣಿಯಾಗಿದ್ದಾರೆ’ ಎಂದು ಹೇಳಿದರು.

ದಾಖಲೆ ಪತ್ರಗಳು ಮತ್ತು ವಿಧಿವಿಧಾನಗಳ ನಂತರ ನಿಬಿನ್ ಮೃತದೇಹವನ್ನು ನಾಲ್ಕು ದಿನಗಳಲ್ಲಿ ಕೇರಳಕ್ಕೆ ತರಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಇಸ್ರೇಲ್-ಹಮಾಸ್ ಯುದ್ಧದಲ್ಲಿ ಮೊದಲ ಭಾರತೀಯ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ, ಇಸ್ರೇಲ್‌ನಲ್ಲಿ ವಾಸಿಸುವ ಭಾರತೀಯರಿಗೆ ಕೇಂದ್ರ ಸರ್ಕಾರ ಹಲವು ಸಲಹೆಯನ್ನು ನೀಡಿದೆ.

‘ಪ್ರಚಲಿತ ಭದ್ರತಾ ಪರಿಸ್ಥಿತಿ ಮತ್ತು ಸ್ಥಳೀಯ ಸುರಕ್ಷತಾ ಸಲಹೆಗಳ ದೃಷ್ಟಿಯಿಂದ, ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯರು, ವಿಶೇಷವಾಗಿ ಉತ್ತರ ಮತ್ತು ದಕ್ಷಿಣದ ಗಡಿ ಪ್ರದೇಶಗಳಲ್ಲಿ ಕೆಲಸ ಮಾಡುವ ಅಥವಾ ಭೇಟಿ ನೀಡುವವರು, ಇಸ್ರೇಲ್‌ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ರಾಯಭಾರ ಕಚೇರಿಯು ಕಾರ್ಮಿಕರ ಸಂಪರ್ಕದಲ್ಲಿದೆ. ಇಸ್ರೇಲಿ ಅಧಿಕಾರಿಗಳು ನಮ್ಮ ಎಲ್ಲಾ ಪ್ರಜೆಗಳ ಸುರಕ್ಷತೆಯನ್ನು ಖಾತ್ರಿಪಡಿಸಬೇಕು’ ಎಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.

ಉತ್ತರ ಇಸ್ರೇಲ್‌ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಹಮಾಸ್‌ಗೆ ಬೆಂಬಲವಾಗಿ ಹೆಜ್ಬೊಲ್ಲಾದ ಶಿಯಾ ಬಣವು ರಾಕೆಟ್ ದಾಳಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದೆ.

ಇಸ್ರೇಲಿ ನಗರಗಳ ಮೇಲೆ ಅಕ್ಟೋಬರ್ 7 ರ ದಾಳಿಯ ನಂತರ ಸುಮಾರು ಐದು ತಿಂಗಳ ಕಾಲ ಇಸ್ರೇಲ್-ಹಮಾಸ್ ಯುದ್ಧವು ಉಲ್ಬಣಗೊಂಡಿದೆ. ಟೆಲ್ ಅವಿವ್‌ನ ಕ್ರೂರ ಪ್ರತಿದಾಳಿಯು ಗಾಜಾ ಪಟ್ಟಿಯಲ್ಲಿ ಸಾವಿರಾರು ಸಾವುಗಳಿಗೆ ಕಾರಣವಾಗಿದೆ. ಸಂಘರ್ಷ ಮತ್ತು ಅದು ಕಾರಣವಾದ ಮಾನವೀಯ ಬಿಕ್ಕಟ್ಟಿನಿಂದ ತಾನು ತೀವ್ರವಾಗಿ ತೊಂದರೆಗೀಡಾಗಿದೆ ಎಂದು ಭಾರತ ಸರ್ಕಾರ ಹೇಳಿದೆ.

ಇದನ್ನೂ ಓದಿ; ಇಸ್ರೇಲ್-ಹಮಾಸ್ ಯುದ್ಧ: ‘ಹೆಜ್ಬುಲ್ಲಾ’ ಕ್ಷಿಪಣಿ ದಾಳಿಗೆ ಕೇರಳದ ವ್ಯಕ್ತಿ ಬಲಿ; ಮತ್ತಿಬ್ಬರಿಗೆ ಗಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕದನ ವಿರಾಮ ಒಪ್ಪಿಗೆ ನಡುವೆಯೇ ರಫಾ ಮೇಲೆ ದಾಳಿ ನಡೆಸಿದ ಇಸ್ರೇಲ್: 12 ಪ್ಯಾಲೆಸ್ತೀನಿಯರು...

0
ಒತ್ತೆಯಾಳುಗಳ ಬಿಡುಗಡೆ ಮೂಲಕ ಕದನ ವಿರಾಮಕ್ಕೆ ಹಮಾಸ್ ಒಪ್ಪಿಗೆ ಸೂಚಿಸಿದ ನಡುವೆಯೇ ಇಸ್ರೇಲ್ ತನ್ನ ಆಕ್ರಮಣವನ್ನು ಮುಂದುವರೆಸಿದೆ. ಗಾಝಾದ ದಕ್ಷಿಣ ನಗರವಾದ ರಫಾದ ಮೇಲೆ ಸೋಮವಾರ (ಮೇ 6) ರಾತ್ರಿ ವಾಯುದಾಳಿ ನಡೆಸುವ...