Homeಮುಖಪುಟಅಂತರಂಗದ ದನಿ ಇದು: 'ಚಹರೆಗಳೆಂದರೆ ಗಾಯಗಳೂ ಹೌದು' ಪುಸ್ತಕ ಲೋಕಾರ್ಪಣೆ

ಅಂತರಂಗದ ದನಿ ಇದು: ‘ಚಹರೆಗಳೆಂದರೆ ಗಾಯಗಳೂ ಹೌದು’ ಪುಸ್ತಕ ಲೋಕಾರ್ಪಣೆ

ಪುಸ್ತಕದ ಶೀರ್ಷಿಕೆ ಬಹಳ ಅರ್ಥಗರ್ಭಿತವಾಗಿದೆ. ಚಹರೆ ಎಂದರೆ ಗುರುತಿಸುವಿಕೆ, ಅಸ್ತಿತ್ವ, ರೂಪುರೇಷೆ, ಸ್ವರೂಪ ಇತ್ಯಾದಿ ಅರ್ಥಗಳು ಬರುತ್ತವೆ. ಆದರೆ ಪ್ರಭಾಕರ್‌ರವರು ಅದಕ್ಕೆ ಗಾಯಗಳೂ ಹೌದು ಎಂಬ ಹೊಸ ಅರ್ಥವನ್ನು ನೀಡಿದ್ದಾರೆ.

- Advertisement -
- Advertisement -

ಸಮುದಾಯಗಳ ಅಧ್ಯಯನವನ್ನು ಯಾವ ಕ್ರಮದಲ್ಲಿ ನೋಡಬೇಕು, ಅದರ ಹಿನ್ನೆಲೆಯೇನು, ಚರಿತ್ರೆಯೇನು, ಸಾಂಸ್ಕೃತಿಕ ಮಹತ್ವವೇನು, ಅದರ ಅನನ್ಯತೆಯೇನು, ಅದನ್ನು ಉಳಿಸಬೇಕಿರುವ ಬಗೆಯೇನು ಎಂಬುದನ್ನು ಸಾಧ್ಯಂತವಾಗಿ ವಿವರಿಸುವ ಕುರಿತು ಮಹತ್ವ ಪುಸ್ತಕವೊಂದು ಕನ್ನಡ ಲೋಕಕ್ಕೆ ಲಭಿಸಿದೆ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಹಿ ಚಿ ಬೋರಲಿಂಗಯ್ಯ ಅಭಿಪ್ರಾಯಪಟ್ಟರು.

ಗೌರಿ ಮೀಡಿಯಾ ಟ್ರಸ್ಟ್ ಪ್ರಕಟಿಸಿರುವ, ಹಂಪಿ ವಿಶ್ವವಿದ್ಯಾಲಯದ ಪ್ರೊ. ಎ.ಎಸ್ ಪ್ರಭಾಕರ ಅವರ “ಚಹರೆಗಳೆಂದರೆ ಗಾಯಗಳೂ ಹೌದು” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುಡಕಟ್ಟುಗಳ ಕುರಿತು ಸಮಗ್ರ ವಿಚಾರಗಳು ಮತ್ತು ಪರಿಪೂರ್ಣ ದೃಷ್ಟಿಕೋನಕ್ಕಾಗಿ ಈ ಪುಸ್ತಕ ಓದಬೇಕು. ಇದರಿಂದ ಸಾಮಾಜಿಕ ಅಧ್ಯಯನಕ್ಕೆ ಹೊಸ ದಾರಿ ಸಿಗುತ್ತದೆ ಎಂದರು.

ನಮ್ಮ ಗ್ರಾಮೀಣ ಜನಪದ ಸಂಸ್ಕೃತಿ ಮತ್ತು ಅರಣ್ಯ ಬುಡಕಟ್ಟು ಸಂಸ್ಕೃತಿಗಿಂತ ಅಲೆಮಾರಿ ಸಂಸ್ಕೃತಿ ಭಿನ್ನವಾದ ಸಂಸ್ಕ್ರತಿಯಾಗಿದೆ. ಅದು ನಿರಂತರ ಪಯಣದ ಜೊತೆ ಅಪಾರವಾದ ಜ್ಞಾನಭಂಡಾರ ತುಂಬಿಕೊಂಡ ಸಮುದಾಯ. ಭಾಷೆ ಮತ್ತು ಸಂಸ್ಕತಿಯ ನಡುವಿನ ಕೊಂಡಿಯಾಗಿ ಅದು ಕೆಲಸ ಮಾಡುತ್ತಿದೆ. ನಮ್ಮ ದೇಸಿಯ ಚಿಂತನೆ ಪಟ್ಟಭದ್ರ ಚಿಂತನೆಗೆ ಅಂಟಿಕೊಳ್ಳುವ ಕಾಲದಲ್ಲಿ ಸಂಸ್ಕೃತಿ ಅಂದರೆ ಹೀಗಿದೆ ಎಂಬುದನ್ನು ಅದೇ ಸಮುದಾಯದ ಒಳಗಿನಿಂದ ಬಂದ ಪ್ರಭಾಕರ್‌ರವರು ಹೃದಯದಿಂದ ಉಕ್ಕುವ ಸಾಹಿತ್ಯದ ರೀತಿ ಬರೆದಿದ್ದಾರೆ. ವೈಚಾರಿಕತೆ ಮತ್ತು ಪ್ರತಿಭೆಯನ್ನು ಬಸಿದು ಕಥನ ಕಟ್ಟಿದ್ದು, ಇಂದಿನ ವಿಷಮ ರಾಜಕೀಯ ಪರಿಸ್ಥಿತಿಯಲ್ಲಿ ಈ ಬರಹಗಳು ಅಗತ್ಯ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಪ್ರಶಾಂತ್ ನಾಯಕ್ ಪುಸ್ತಕದ ಬಗ್ಗೆ ಮಾತನಾಡಿ “ಈ ಪುಸ್ತಕವು ಕಥನದ ದಾಟಿಯಲ್ಲಿದೆ. ಆದರೆ ವರ್ಣನೆ ಅಲ್ಲ. ವ್ಯಾಖ್ಯಾನವೂ ಅಲ್ಲ. ಇದು ಕೇವಲ ವಿಮರ್ಶೆ ಅಲ್ಲ ಆದರೆ ಎಚ್ಚರ, ಪ್ರಜ್ಞೆಯನ್ನು ಒಳಗೊಂಡಿದೆ. ಕಾವ್ಯ ಅಲ್ಲ, ಕಥನ ಅಲ್ಲ, ಎಲ್ಲವೂ ಹೌದು, ಎಲ್ಲಾ ಲಕ್ಷಣಗಳನ್ನು ಒಳಗೊಂಡಿರುವ ವಿಶಿಷ್ಟ ಕೃತಿ” ಎಂದರು.

ಪುಸ್ತಕದ ಶೀರ್ಷಿಕೆ ಬಹಳ ಅರ್ಥಗರ್ಭಿತವಾಗಿದೆ. ಚಹರೆ ಎಂದರೆ ಗುರುತಿಸುವಿಕೆ, ಅಸ್ತಿತ್ವ, ರೂಪುರೇಷೆ, ಸ್ವರೂಪ ಇತ್ಯಾದಿ ಅರ್ಥಗಳು ಬರುತ್ತವೆ. ಆದರೆ ಪ್ರಭಾಕರ್‌ರವರು ಅದಕ್ಕೆ ಗಾಯಗಳೂ ಹೌದು ಎಂಬ ಹೊಸ ಅರ್ಥವನ್ನು ನೀಡಿದ್ದಾರೆ. ಅಂತರಂಗದ ದನಿ ಇದು. ಅಂದರೆ ಜನಸಮುದಾಯಗಳ ಸಹಜವಾದ ಬದುಕು ಹತ್ತಿಕ್ಕಲ್ಪಟ್ಟಿದೆ. ಹಾಗಾದರೆ ಈ ಗಾಯ ಮಾಡಿದವರು ಯಾರು? ನಾವು, ಅಂದರೆ ‘ನಾಗರಿಕ, ಆಧುನಿಕ ಎಂದು ಕರೆಸಿಕೊಳ್ಳುವವರ ಅದಕ್ಕೆ ಕಾರಣ ಎನ್ನುವ ಎಚ್ಚರದಿಂದ, ಆತ್ಮಾವಲೋಕನ ಈ ಕೃತಿಯಲ್ಲಿದೆ. ಇಲ್ಲಿ ಅವರ ನೆಲಮೂಲದ ಪ್ರಜ್ಞೆ ಇದೆ. ನಿಜದ ಮಣ್ಣಿನ ಮಕ್ಕಳು ಅವರು ಎಂಬ ದೃಡೀಕರಣವಿದೆ. ಇದು ಗಾಯಗಳು ಹೌದು ಎನ್ನುತ್ತಿರುವಾಗ ಅವರು ಅನುಸಂಧಾನ ಮಾಡುತ್ತಿದ್ದಾರೆ ಎಂದರು.

ಸಮುದಾಯದ ಈ ಗಾಯಗಳಿಗೆ ಔಷಧೋಪಚಾರ ಮಾಡಲು ಯಾರೂ ಮುಂದಾಗಿಲ್ಲ. ಅದರ ಪ್ರಯತ್ನವೇ ಈ ಅಧ್ಯಯನ ಪುಸ್ತಕವಾಗಿದೆ. ಇದೊಂದು ಕೇವಲ ಪುಸ್ತಕವಲ್ಲ. ಪುಸ್ತಕ ಬೇರೆ, ಕಲಾಕೃತಿ ಬೇರೆ. ಸಂಸ್ಕ್ರತಿ ಕಥನ ಕೃತಿಯೊಂದು ಕಲಾಕೃತಿಯಾಗುವ ಪರಿ ಲೇಖಕನ ಬದ್ಧತೆಯ ಮೇಲೆ ನಿಂತಿರುತ್ತದೆ. ಅದನ್ನು ಎ.ಎಸ್ ಪ್ರಭಾಕರ್ ಇಲ್ಲಿ ನಿರೂಪಿಸಿದ್ದಾರೆ ಎಂದರು.

ಸಬಾಲ್ಟ್ರನ್ ಸ್ಟಡಿ, ಸಂಸ್ಕ್ರತಿಯ ಅಧ್ಯಯನ ಕೇವಲ ಘೋಷಣೆಗಳಾಗಿರುವ ಸಂದರ್ಭದಲ್ಲಿ ನಮ್ಮ ವಿಶ್ವ ವಿದ್ಯಾಲಯಗಳ ಸಮುದಾಯ ಅಧ್ಯಯನ ವಿಧಾನದಲ್ಲಿಯೇ ಸಮಸ್ಯೆಯಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ ಎ.ಎಸ್ ಪ್ರಭಾಕರ್‌ರವರ ಶ್ರಮ ಮತ್ತು ಬದ್ಧತೆಯಿಂದ ಈ ಪುಸ್ತಕವು ಸಮುದಾಯ ಕಥನಗಳು ಸಾರ್ಥಕತೆಯಾಗುವುದನ್ನು ನಿರೂಪಿಸಿವೆ. ಇಲ್ಲಿ ಸಮುದಾಯಗಳ ಕುರಿತು ನೆಹರು, ಅಂಬೇಡ್ಕರ್, ಮಹಾಶ್ವೇತಾದೇವಿಯವರ ಚಿಂತನೆಗಳಿವೆ ಎಂದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವರಾದ (ಮೌಲ್ಯಮಾಪನ) ಪ್ರೊ. ಜಿ. ರಮೇಶ್ ಮತ್ತು ಜೇನುಕುರುಬರ ಸೋಮಣ್ಣ ಮಾತನಾಡಿದರು. ಗೌರಿ ಮೀಡಿಯಾ ಟ್ರಸ್ಟ್ ಅಧ್ಯಕ್ಷರಾದ ಡಿ ಎಂ ನರಸಿಂಹಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಲೇಖಕರಾದ ಡಾ. ಎ ಎಸ್ ಪ್ರಭಾಕರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜೇನುಕುರುಬರ ಸೋಮಣ್ಣನವರಿಗೆ ಸನ್ಮಾನ ಮಾಡಲಾಯಿತು.

ಪುಸ್ತಕ ಕೊಳ್ಳಲು ಬಯಸುವವರು ಕೆಳಗಿನ ಕೊಂಡಿ ಬಳಸಿ

ಚಹರೆಗಳೆಂದರೆ ಗಾಯಗಳೂ ಹೌದು -ಸಮುದಾಯ ಅಧ್ಯಯನ ಕುರಿತ ಕಥನಗಳು
ಲೇಖಕರು- ಡಾ.ಎ.ಎಸ್.ಪ್ರಭಾಕರ್
ಬೆಲೆ- 250/-
ಗೂಗಲ್ ಪೆ- 9880302817

https://bit.ly/3ltoEKN


ಇದನ್ನೂ ಓದಿ: ಸಭೆ ಸಮಾರಂಭಗಳಲ್ಲಿ ಪುಸ್ತಕ ಉಡುಗೊರೆ ಕೊಡಲು ಆದೇಶ; ಇಲ್ಲಿವೆ ಕೆಲವು ನಿರ್ದಿಷ್ಟ ಸಲಹೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...