Homeಮುಖಪುಟಎನ್‌ಪಿಎಸ್‌ ನಿಯಮಗಳಲ್ಲಿ ಬದಲಾವಣೆ: ದಾಖಲೆಗಳ ಡಿಜಿಟಲೀಕರಣಕ್ಕೆ ಒತ್ತು

ಎನ್‌ಪಿಎಸ್‌ ನಿಯಮಗಳಲ್ಲಿ ಬದಲಾವಣೆ: ದಾಖಲೆಗಳ ಡಿಜಿಟಲೀಕರಣಕ್ಕೆ ಒತ್ತು

- Advertisement -
- Advertisement -

ಎನ್‌ಪಿಎಸ್ ಚಂದಾದಾರರಿಗೆ ವರ್ಷಾಸನ/ಅನ್ಯುಯಿಟಿ (ಚಂದಾದಾರರ ಶೇರುಗಳಿಗೆ ಏಜೆಂಟ್‌ಗಳು ಪಾವತಿಸುವ ಮೊತ್ತ) ಆದಾಯವನ್ನು ಸಕಾಲಿಕವಾಗಿ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಲು ‘ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ (ಪಿಎಫ್‌ಆರ್‌ಡಿಎ) ಮಹತ್ವದ ಹೆಜ್ಜೆಯನ್ನು ಇಟ್ಟಿದೆ ಎಂದು ‘ಬಿಸಿನೆಸ್ ಲೈನ್’ ವರದಿ ಮಾಡಿದೆ.

ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಯ (CRA) ಬಳಕೆದಾರರ ಇಂಟರ್ಫೇಸ್‌ನಲ್ಲಿ ನಾಲ್ಕು ನಿರ್ದಿಷ್ಟ ದಾಖಲೆಗಳನ್ನು ಕಡ್ಡಾಯವಾಗಿ ಎನ್‌ಪಿಎಸ್‌ಪಿ ಚಂದಾದಾರರು ಡಿಜಿಟಲ್ ಮೂಲಕ ಅಪ್‌ಲೋಡ್ ಮಾಡಬೇಕಾಗುತ್ತಿದೆ.

ಸಾಮಾನ್ಯವಾಗಿ ನೋಡಲ್ ಕಚೇರಿಗಳಿಗೆ ನೇರವಾಗಿಯೇ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆ ಪ್ರಸ್ತುತ ಚಾಲ್ತಿಯಲ್ಲಿತ್ತು. ಈಗ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲ್‌ಗೆ ಬದಲಿಸಲಾಗುತ್ತಿದೆ.

(ವರ್ಷಾಸನ ಸೇವಾ ಪೂರೈಕೆದಾರರಾಗಿ ಕಾರ್ಯನಿರ್ವಹಿಸುತ್ತಿರುವ) ಜೀವ ವಿಮಾ ಕಂಪನಿಗಳಿಗೆ ವೇಗವಾಗಿ ಪಾವತಿ ಮಾಡಲು ಈ ವ್ಯವಸ್ಥೆಯಿಂದ ಅನುಕೂಲವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಎನ್‌ಪಿಎಸ್ ಚಂದಾದಾರರು ದಾಖಲೆಗಳನ್ನು ತಾವಾಗಿಯೇ ಅಪ್‌ ಲೋಡ್ ಮಾಡಬೇಕಾಗುತ್ತದೆ. ಆಧಾರ್ ಮೂಲಕ ಅವುಗಳನ್ನು ದೃಢೀಕರಿಸಬೇಕಾಗುತ್ತದೆ.

ಎನ್‌ಪಿಎಸ್‌ ನಿರ್ಗಮನ ಅರ್ಜಿ, ವಿಳಾಸದ ಪುರಾವೆ, ಬ್ಯಾಂಕ್ ಖಾತೆಯ ಪುರಾವೆ ಮತ್ತು ಪಿಆರ್‌‌ಎಎನ್‌ (Permanent Retirement Account Number) ಕಾರ್ಡ್‌ನ ಪ್ರತಿ- ಈ ನಾಲ್ಕು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಏಪ್ರಿಲ್ 1, 2023ರಿಂದ ಚಂದಾದಾರರಿಗೆ ಆಯ್ದ ದಾಖಲೆಗಳನ್ನು ಅಪ್‌ಲೋಡ್ ಮಾಡುವುದನ್ನು ಪಿಎಫ್‌ಆರ್‌ಡಿಎ ಕಡ್ಡಾಯಗೊಳಿಸಿದೆ.

ಇದನ್ನೂ ಓದಿರಿ: ಎನ್‌ಪಿಎಸ್‌ ನೌಕರರ ಮೇಲೆ ಸರ್ಕಾರಿ ನೌಕರರ ಸಂಘದಿಂದ ಹಲ್ಲೆ; ಷಡಕ್ಷರಿ ಮೇಲೆ ಗಂಭೀರ ಆರೋಪ

ಎನ್‌ಪಿಎಸ್‌ ಪ್ರಸ್ತುತ ನಿಯಮ

ಪ್ರಸ್ತುತವಾಗಿ ಎನ್‌ಪಿಎಸ್‌ ಚಂದಾದಾರರು ತಮ್ಮ ಪೂರ್ಣಾವಧಿಯ ಬಳಿಕ ಅನ್ಯುಯಿಟಿ ಯೋಜನೆಯನ್ನು ಖರೀದಿಸಬೇಕೆಂದರೆ ಒಟ್ಟು ಸಂಗ್ರಹವಾದ ಕಾರ್ಪಸ್‌ನ (ಅಂದರೆ ನಿರ್ದಿಷ್ಟ ಯೋಜನೆಯಲ್ಲಿ ಹೂಡಿಕೆ ಮಾಡಿದ ಒಟ್ಟು ಹಣದ) ಕನಿಷ್ಠ 40 ಪ್ರತಿಶತವನ್ನು ಬಳಸಬೇಕು. ಉಳಿದ ಶೇಕಡ 60ರಷ್ಟು ಎನ್‌ಪಿಎಸ್‌ ಕಾರ್ಪಸ್ ಅನ್ನು ಒಟ್ಟು ಮೊತ್ತವಾಗಿ ಹಿಂಪಡೆಯಬಹುದು.

ಒಟ್ಟು ಕಾರ್ಪಸ್ 5 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿದ್ದರೆ, ಚಂದಾದಾರರು ಸಂಪೂರ್ಣ ಒಟ್ಟು ಮೊತ್ತವನ್ನು ಹಿಂತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. 60 ವರ್ಷಕ್ಕಿಂತ ಮೊದಲು ಯೋಜನೆಯಿಂದ ಹೊರಗೆ ಬರುವುದಾದರೆ ಜೀವ ವಿಮಾ ಕಂಪನಿಯಿಂದ ಪಿಂಚಣಿ ಯೋಜನೆಯನ್ನು (ವರ್ಷಾಶನ) ಖರೀದಿಸಲು ಎನ್‌ಪಿಎಸ್‌ ಚಂದಾದಾರರು ಒಟ್ಟು ಎನ್‌ಪಿಎಸ್‌ ಕಾರ್ಪಸ್‌ನ ಶೇ. 80 ಪಾಲನ್ನು ನೀಡಬೇಕಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...