Homeಕರ್ನಾಟಕಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೆ ಮಾತ್ರ ಅನುದಾನ, ಉಳಿದ ಕ್ಷೇತ್ರಗಳಿಗೆ ಪಂಗನಾಮ: ಯಡ್ಡಿಯ ಕೀಳು ರಾಜಕೀಯ

ಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೆ ಮಾತ್ರ ಅನುದಾನ, ಉಳಿದ ಕ್ಷೇತ್ರಗಳಿಗೆ ಪಂಗನಾಮ: ಯಡ್ಡಿಯ ಕೀಳು ರಾಜಕೀಯ

ಹೈದರಾಬಾದ್ ಕರ್ನಾಟಕದಲ್ಲಿ ಕೀಳು ರಾಜಕೀಯ ಮಾಡುತ್ತಿರುವ ಸಿಎಂ ಯಡಿಯೂರಪ್ಪ ಅನರ್ಹರಿಗೆ ವಿವೇಚನಾಹೀನ ನಿಧಿ ನೀಡಿದ್ದು ಬಿಜೆಪಿಯೇತರ ಶಾಸಕರಿಗೆ ದುರ್ವಿಧಿ ಘೋಷಿಸಿದ್ದಾರೆ.

- Advertisement -
- Advertisement -

ಪ್ರವಾಹಪೀಡಿತ ಪ್ರದೇಶಗಳಿಗೆ ಅನುದಾನ ಕೊಡುವುದಿರಲಿ, 10 ಸಾವಿರ ಕೊಟ್ಟದ್ದೇ ಹೆಚ್ಚು ಎಂದು ಸಂತ್ರಸ್ತ ಕುಟುಂಬಗಳನ್ನು ಸಚಿವ ಕೆ.ಎಸ್. ಈಶ್ವರಪ್ಪ ಅವಮಾನಿಸಿ ಹೋಗಿದ್ದಾರೆ. ಇತ್ತ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಶಿಕಾರಿಪುರ ತಾಲೂಕಿಗೆ ಏಕಾಏಕಿ 1,100 ಕೋಟಿ ನೀಡಿದ್ದಾರೆ. ಹೈದರಾಬಾದ್ ಕರ್ನಾಟಕ ಪ್ರದೇಶದ ಇಬ್ಬರು ಅನರ್ಹ ಶಾಸಕರ ಕ್ಷೇತ್ರಗಳಿಗೆ ತಲಾ 11 ಕೋಟಿ, ಉಳಿದ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ತಲಾ 3 ಕೋಟಿ ಅನುದಾನವನ್ನು ನೀಡಿರುವ ಯಡಿಯೂರಪ್ಪ, 23 ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನಯಾಪೈಸೆಯನ್ನೂ ನೀಡಿಲ್ಲ. ಅಸಹ್ಯ ಆಡಳಿತ ಮತ್ತು ಸ್ವಾರ್ಥ ರಾಜಕಾರಣಕ್ಕೆ ಇದಕ್ಕಿಂತ ಉದಾಹರಣೆ ಬೇಕೇ?

ನೆರೆಪೀಡಿತ ಪ್ರದೇಶಗಳಿಗೂ ಚಿಕ್ಕಾಸೂ ಬಿಡುಗಡೆ ಮಾಡಲು ಒಲ್ಲದ ದೇಶದ ಪ್ರಧಾನಿ ಚಂದಮಾಮಾನನ್ನು ತೋರಿಸಲು ಬೆಂಗಳೂರಿಗೆ ಬಂದು ಕರ್ನಾಟಕದ ಸಂಕಟಗಳಿಗೆ ಬೆನ್ನು ಮಾಡಿ ಹೋಗುತ್ತಾರೆ. ಇತ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಈಶ್ವರಪ್ಪ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಯಡೂರಿನಲ್ಲಿ ‘ನಿಮ್ಗೆಲ್ಲ 10 ಸಾವಿರ ಪರಿಹಾರ ಕೊಟ್ಟಿದ್ದೇ ಜಾಸ್ತಿ ಹೋಗ್ರಿ’ ಎಂದು ಉದ್ಧಟತನದ ಮಾತಾಡಿ ಜನರ ಆಕ್ರೋಶಕ್ಕೆ ಗುರುಯಾಗಿದ್ದಾರೆ. ಅವರ ಕಾರಿಗೆ ಮುತ್ತಿಗೆ ಹಾಕಿದ ಜನ ಕಾರನ್ನು ಗುದ್ದಿ ಗುದ್ದಿ ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ.

ಅದಕ್ಕಿಂತ ಹೀನ ಕೆಲಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾಡುವ ಮೂಲಕ ಹೈದರಾಬಾದ್-ಕರ್ನಾಟಕದ ಜನರ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ. ಪ್ರವಾಹ, ನೆರೆ ಮತ್ತು ಬರ ಇದ್ಯಾವುದರ ಬಗ್ಗೆಯೂ ನಮಗೆ ಚಿಂತೆಯಿಲ್ಲ, ನಮಗೀಗ ಉಪ ಚುನಾವಣೆಗಳನ್ನು ಗೆಲ್ಲಬೇಕು ಮತ್ತು ಹೈಮಾಂಡ್ ಹೇಳಿದ್ದನ್ನು ಎಲ್ಲ ಮುಚ್ಚಿಕೊಂಡು ಪಾಲಿಸಬೇಕು ಎಂಬ ಸಂದೇಶವನ್ನು ಸಿಎಂ ಯಡಿಯೂರಪ್ಪ ತಮ್ಮ ಅಪ್ರಬುದ್ಧ, ಅಸಂಬದ್ಧ ಆದೇಶಗಳ ಮೂಲಕ ಜಗಜ್ಜಾಹೀರು ಮಾಡಿದ್ದಾರೆ.

ನೆರೆಪೀಡಿತರಿಗೆ ನಕೋ, ಅನರ್ಹರಿಗೆ ಪೀಕೋ ಪೀಕು
ಒಂದು ಕಡೆ ನೆರೆಪ್ರವಾಹದಿಂದ, ಇನ್ನೊಂದು ಕಡೆ ಪ್ರವಾಹದಿಂದ ಉತ್ತರ ಕರ್ನಾಟಕದ ಬಹುಭಾಗ ಮತ್ತು ದಕ್ಷಿಣ ಕರ್ನಾಟಕದ ಕೆಲ ಭಾಗಗಳಲ್ಲಿ ಜೀವನ ಅಸ್ತವ್ಯಸ್ತವಾಗಿದೆ, ಬೆಳೆಗಳು (ಪೀಕು) ನಾಶವಾಗಿವೆ. ಆದರೆ, ಅನರ್ಹ ಶಾಸಕರಿಗೆ ಮಾತ್ರ ಪೀಕೋ ಪೀಕು. ಸರ್ಕಾರ ಉರುಳಿಸಲು ಸಾಕಷ್ಟು ‘ಪೀಕಿದ’ ಈ ಅನರ್ಹರಿಗೆ ಈ ಸಚಿವ ಸ್ಥಾನ ಕೊಡಲಂತೂ ಆಗುವುದಿಲ್ಲ. ಆದರೆ, ಐದು ತಿಂಗಳಿಗೇ ಬರಲಿರುವ 17 ಉಪ ಚುನಾವಣೆಗಳಲ್ಲಿ ಕನಿಷ್ಠ 10ರಲ್ಲಾದರೂ ಗೆಲ್ಲಲೇಬೇಕು.

ಹೀಗಾಗಿ ಯಡಿಯೂರಪ್ಪ ಸರ್ಕಾರ ಈಗ ಅನರ್ಹ ಶಾಸಕರ ಕ್ಷೇತ್ರಗಳಿಗೆ ಸಿಕ್ಕಾಪಟ್ಟೆ ಅನುದಾನ ಕೊಡಲು ಪ್ಲಾನು ಮಾಡಿದೆ. ಅದರ ಮೊದಲ ಭಾಗವಾಗಿ ಈಗ ಹೈದರಾಬಾದ್-ಕರ್ನಾಟಕದ ಇಬ್ಬರು ಅನರ್ಹ ಶಾಸಕರ ಕ್ಷೇತ್ರಗಳಿಗೆ ತಲಾ 11 ಕೋಟಿ ರೂ.ಗಳ ವಿಶೇಷ ಅನುದಾನ ನೀಡಿದ್ದಾರೆ ಯಡಿಯೂರಪ್ಪ. ವಿಜಯನಗರ-ಹೊಸಪೇಟೆ (ಆನಂದಸಿಂಗ್-ಅನರ್ಹ) ಮತ್ತು ಮಸ್ಕಿ (ಪ್ರತಾಪಗೌಡ- ಅನರ್ಹ) ಈ ಇಬ್ಬರಿಗೂ ಬೋನಸ್ ನೀಡುವ ಮೂಲಕ ಬರಲಿರುವ ಉಪಚುನಾವಣೆಗಳ ಮೇಲೆ ಯಡಿಯೂರಪ್ಪ ಕಣ್ಣು ಹಾಕಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಝೀರೊ!
ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಈ ಬಜೆಟ್ಟಿನಲ್ಲಿ (ಕುಮಾರಸ್ವಾಮಿ ಮಂಡಿಸಿದ್ದು) 1,500 ಕೋಟಿ ಕ್ರಿಯಾಯೋಜನೆ ರೂಪಿಸಲಾಗಿದೆ. ಇದರಲ್ಲಿ ಶೇ. 5ರಷ್ಟು ಮುಖ್ಯಮಂತ್ರಿಗಳ ವಿವೇಚನಾ ನಿಧಿ ಇರುತ್ತದೆ. ಜುಲೈನಲ್ಲಿ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಶೇ.5 ಅಂದರೆ 75 ಕೋಟಿ ರೂಪಾಯಿಗಳನ್ನು ಆದಷ್ಟು ತಾರತಮ್ಯವಿಲ್ಲದೇ ಹಂಚಿದ್ದರು. ಆದರೆ, ಮೊನ್ನೆ ಈ ಆದೇಶ ರದ್ದು ಮಾಡಿದ ಯಡಿಯೂರಪ್ಪನವರು, ಇಬ್ಬರು ಅನರ್ಹ ಶಾಸಕರ ( ಆನಂದ್‍ಸಿಂಗ್, ಪ್ರತಾಪಗೌಡ) ಕ್ಷೇತ್ರಗಳಿಗೆ ತಲಾ 11 ಕೋಟಿ ಬಿಡುಗಡೆ ಮಾಡಿದ್ದಾರೆ. ಹೈದರಾಬಾದದ-ಕರ್ನಾಟಕದ 42 ಕ್ಷೇತ್ರಗಳಲ್ಲಿ ಬಿಜೆಪಿ 17 ಕ್ಷೇತ್ರ ಗೆದ್ದಿದೆ. ಅದರಲ್ಲಿ 16 ಕ್ಷೇತ್ರಗಳಿಗೆ ತಲಾ 3 ಕೋಟಿಗಳನ್ನು ಮತ್ತು ಇನ್ನೊಂದು ಬಿಜೆಪಿ ಗೆದ್ದಿರುವ ಕ್ಷೇತ್ರವಾದ ರಾಯಚೂರು ನಗರಕ್ಕೆ 4 ಕೋಟಿ ಬಿಡುಗಡೆ ಮಾಡಿದ್ದಾರೆ. ಅಂದರೆ, ಬಿಜೆಪಿಯ 17 ಮತ್ತು ಇಬ್ಬರು ಅನರ್ಹ ಶಾಸಕರ ಕ್ಷೇತ್ರಗಳನ್ನು ಬಿಟ್ಟು ಎಲ್ಲ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಮಾಡದೇ ತಾವೆಷ್ಟು ಪಕ್ಷಪಾತಿ ಸಿಎಂ ಎಂದು ಸಾಬೀತು ಮಾಡಿದ್ದಾರೆ ಯಡಿಯೂರಪ್ಪ…

ಈಗಾಗಲೇ ಕುಮಾರಸ್ವಾಮಿ ಈ ಕುರಿತು ಅಪಸ್ವರ ಎತ್ತಿದ್ದಾರೆ. ಜೆಡಿಎಸ್ ಶಾಸಕ ನಾಗನಗೌಡ ಇರುವ ಗುರುಮಿಠಕಲ್ ಕ್ಷೇತ್ರಕ್ಕೆ ಕುಮಾರಸ್ವಾಮಿ ಬಿಡುಗಡೆ ಮಾಡಲು ಉದ್ದೇಶಿಸಿದ್ದ 4.5 ಕೋಟಿ ಅನುದಾನವನ್ನು ಯಡಿಯೂರಪ್ಪ ರದ್ದು ಮಾಡಿದ್ದಾರೆ. (ಈ ಕ್ಷೇತ್ರದ ಶಾಸಕರ ಮಗ ಶರಣೇಗೌಡನೇ ದೇವದುರ್ಗದ ಐಬಿಯಲ್ಲಿ ಯಡಿಯೂರಪ್ಪರನ್ನು ಆಪರೇಷನ್ ಕಮಲದ ಆಡಿಯೋ ಖೆಡ್ಡಾಕ್ಕೆ ಕೆಡವಿದ್ದು!)
ನೆರೆಪೀಡಿತ ಲಿಂಗಸಗೂರು ತಾಲೂಕಿಗೂ ನಯಾಪೈಸೆಯಿಲ್ಲ, ಪ್ರವಾಹಬಾಧಿತ ರಾಯಚೂರು ಗ್ರಾಮೀಣಕ್ಕೂ ಬಿಡಿಗಾಸಿಲ್ಲ! ಆದರೆ, ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಪ್ರತಿನಿಧಿಸುವ ರಾಯಚೂರು ನಗರಕ್ಕೆ 4 ಕೋಟಿ! ಶಾಸಕರೇ ಇಲ್ಲದ (ಅನರ್ಹರ) ಕ್ಷೇತ್ರಗಳಿಗೆ ತಮ್ಮ ವಿವೇಚನಾ ನಿಧಿ 75 ಕೋಟಿಯಲ್ಲಿ 22 ಕೋಟಿ ರೂಪಾಯಿ!

ವಿವೇಚನಾಶೂನ್ಯ ಸಿಎಂ: ರಾಘವೇಂದ್ರ ಕುಷ್ಟಗಿ
ವಿವೇಚನಾ ನಿಧಿಯನ್ನು ಇಷ್ಟು ಕ್ಷುಲ್ಲಕ ಶೈಲಿಯಲ್ಲಿ ಹಂಚಿದ ಮುಖ್ಯಮಂತ್ರಿಯನ್ನು ನಾನು ನೋಡೇ ಇಲ್ಲ. ಹೀಗೆಲ್ಲ ಅಸಮಾನ ಹಂಚಿಕೆ ಮಾಡುವ ಇವರೆಲ್ಲ ಸಮಾನತೆ ಕನಸಿನ ಕಲ್ಯಾಣ ಎಂಬ ಪದವನ್ನೇ ಅವಮಾನ ಮಾಡಿದ್ದಾರೆ. ಈ ನಡುವೆ ಒಂದೇ ಒಂದು ಸಾರಿಯೂ ಹೈ-ಕ ಅಭಿವೃದ್ಧಿ ಮಂಡಳಿ ಸಭೆಗೆ ಹಾಜರಾಗದೇ ನಿರ್ಗಮಿಸುತ್ತಿರುವ ರಾಜ್ಯಪಾಲ ವಜುಭಾಯಿಯವರ ಧೋರಣೆಯನ್ನೂ ಗಮನಿಸಿ ಹೇಳುವುದಾದರೆ ಹೈ-ಕದ ಮೊದಲ ಶತ್ರು ಬಿಜೆಪಿಯೇ ಆಗಿದೆ… ವಿವೇಚನಾಶೂನ್ಯ ಸಿಎಂಗೆ ಇಲ್ಲಿನ ಜನ ಪಾಠ ಕಲಿಸಲೇಬೇಕು ಎಂದು ಜನ ಸಂಗ್ರಾಮ ಪರಿಷತ್‍ನ ರಾಘವೇಂದ್ರ ಕುಷ್ಟಗಿ ಹೇಳುತ್ತಾರೆ.

ಟೋಟಲಿ ನಾನ್‍ಸೆನ್ಸ್ ನಿರ್ಧಾರ: ರಜಾಕ್ ಉಸ್ತಾದ್
ಯಡಿಯೂರಪ್ಪನವರ ಈ ನಿರ್ಧಾರ ಟೋಟಲಿ ನಾನ್‍ಸೆನ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದ ಹೈ-ಕ ಅಭಿವೃದ್ಧಿ ಹೋರಾಟ ಸಮಿತಿಯ ರಜಾಕ್ ಉಸ್ತಾದ್, ‘ಹೈ-ಕ ಭಾಗದ ಎಲ್ಲ ಐದೂ ಸಂಸದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಜನ ಗೆಲ್ಲಿಸಿದ್ದಾರೆ. ಈ ಎಂಪಿಗಳ ಕ್ಷೇತ್ರಕ್ಕೆ ಬರುವ 25ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಒಂದು ರೂಪಾಯಿಯ ಅನುದಾನವನ್ನೂ ನೀಡಿಲ್ಲ. ನಾಚಿಕೆಯಾಗಬೇಕು ಈ ಐದೂ ಎಂಪಿಗಳಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....