Homeಮುಖಪುಟಪೊಲೀಸರು ನಮ್ಮ ಕಣ್ಣುಗಳನ್ನೇ ವಂಚಿಸಲು ಯತ್ನಿಸಿದ್ದಾರೆ: ಕೋರ್ಟ್‌ ತರಾಟೆ

ಪೊಲೀಸರು ನಮ್ಮ ಕಣ್ಣುಗಳನ್ನೇ ವಂಚಿಸಲು ಯತ್ನಿಸಿದ್ದಾರೆ: ಕೋರ್ಟ್‌ ತರಾಟೆ

- Advertisement -
- Advertisement -

ದೆಹಲಿ ಪೊಲೀಸರು ನಮ್ಮ ಕಣ್ಣುಗಳನ್ನೇ ವಂಚಿಸಲು ಯತ್ನಿಸುತ್ತಿದ್ದಾರೆ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. 2020ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ವಿನೋದ್ ಯಾದವ್‌, “ಸಾರ್ವಜನಿಕರ ತೆರಿಗೆ ಹಣವನ್ನು ಪೊಲೀಸರು ವ್ಯರ್ಥ ಮಾಡಿದ್ದಾರೆ. ಸರಿಯಾದ ತನಿಖೆಯನ್ನು ನಡೆಸದಿದ್ದರೆ, ದೇಶದ ರಾಜಧಾನಿಯಲ್ಲಿ ದೇಶವಿಭಜನೆಯ ಬಳಿಯ ಇನ್ನೆಂದೂ ನೋಡದಿರದಂತಹ ಹಿಂಸೆಯನ್ನು ಪ್ರಜಾಪ್ರಭುತ್ವ ಕಂಡಿದೆ ಎಂದು ಇತಿಹಾಸ ನೋಡುತ್ತದೆ” ಎಂದು ಹೇಳಿದ್ದಾರೆ.

ಗಲಭೆ ವೇಳೆ ಮಳಿಗೆಯೊಂದನ್ನು ದ್ವಂಸ ಮಾಡಿದ ಆರೋಪ ಎದುರಿಸುತ್ತಿದ್ದ ಎಎಪಿ ಕೌನ್ಸಿಲರ್‌ ತಾಹಿರ್‌ ಹುಸ್ಸೇನ್‌ ಅವರ ಸಹೋದರ ಆಲಾಮ್‌ ಮತ್ತು ಇನ್ನಿಬ್ಬರನ್ನು ಪ್ರಕರಣದಿಂದ ಕೈಬಿಟ್ಟಿರುವ ಕೋರ್ಟ್, ಕಾನ್ ಸ್ಟೇಬಲ್‌ ಒಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದು, ತನಿಖೆಯು ಕ್ರೂರ ಹಾಗೂ ಬೇಜವಾಬ್ದಾರಿತನದಿಂದ ಕೂಡಿದೆ ಎಂದು ಟೀಕಿಸಿದೆ.

ಸಿಟಿಟಿವಿ ಫೂಟೇಜ್‌ ಉಲ್ಲೇಖಿಸಿರುವ ಕೋರ್ಟ್, “ಆರೋಪಿಗಳು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆರೋಪಿಗಳ ಕೃತ್ಯವನ್ನು ಯಾರೂ ನೋಡಿಲ್ಲ. ತಂತ್ರಜ್ಞಾನವನ್ನು ಬಳಸಿಯೂ ಸರಿಯಾದ ತನಿಖೆ ಮಾಡುವಲ್ಲಿ ಸೋತರೆ ಪ್ರಜಾಪ್ರಭುತ್ವ ಹಿಂಸೆಗೆ ಒಳಗಾಗುತ್ತದೆ” ಎಂದಿದೆ. ನಿಜವಾದ ಆರೋಪಿಗಳನ್ನು ಗುರುತಿಸುವಲ್ಲಿ, ಪ್ರತ್ಯಕ್ಷ ಸಾಕ್ಷಿಗಳನ್ನು ತನಿಖೆಗೆ ಒಳಪಡಿಸುವಲ್ಲಿ ವಿಫಲವಾಗಿರುವುದನ್ನೂ ಕೋರ್ಟ್ ಉಲ್ಲೇಖಿಸಿದೆ.

ಇದನ್ನೂ ಓದಿ: ರೈತ ಮಹಿಳೆಗೆ ಪರಿಹಾರ ವಿಳಂಬ: ನ್ಯಾಯಾಂಗ ನಿಂದನೆ ಆರೋಪದಲ್ಲಿ ಆಂಧ್ರದ IAS ಅಧಿಕಾರಿಗಳಿಗೆ ಜೈಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...