Homeಮುಖಪುಟಕೊರೋನಾ ವೈರಸ್ ಬಗ್ಗೆ ಹರಡುತ್ತಿರುವ ನಕಲಿ ಸುದ್ದಿಗಳ ವಿರುದ್ಧ ಸೈಬರ್ ವಾರಿಯರ್ಸ್ ಅಸ್ತಿತ್ವಕ್ಕೆ

ಕೊರೋನಾ ವೈರಸ್ ಬಗ್ಗೆ ಹರಡುತ್ತಿರುವ ನಕಲಿ ಸುದ್ದಿಗಳ ವಿರುದ್ಧ ಸೈಬರ್ ವಾರಿಯರ್ಸ್ ಅಸ್ತಿತ್ವಕ್ಕೆ

- Advertisement -
- Advertisement -

ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ವಿರುದ್ದ ಹರಡುತ್ತಿರುವ ಸುಳ್ಳು ಸುದ್ದಿಗಳ ವಿರುದ್ದ ಹೋರಾಡಲು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೈಬರ್ ಯೋಧರನ್ನು ನೇಮಿಸಿದೆ.

ಕೊರೊನಾ ಸಾಂಕ್ರಾಮಿಕದ ಬಗ್ಗೆ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಹರಡುತ್ತಿರುವ ಬಹಳಷ್ಟು ಸುಳ್ಳುಗಳ ವಿರುದ್ದ ಈ ಸೈಬರ್ ವಿಂಗ್ ಹೋರಾಡುತ್ತಿದೆ. ವೈದ್ಯರು, ದಾದಿಯರು ಹಾಗೂ ಇತರ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗಿಂತ ಭಿನ್ನವಾಗಿ ಕೊರೊನಾ ವೈರಸ್ ವಿರುದ್ದ ಈ ‘ಸೈಬರ್’ ಯೋಧರು ಆನ್‌ಲೈನ್‌ನಲ್ಲಿ ಹರಡುತ್ತಿರುವ ನಕಲಿ ಮಾಹಿತಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇವರು ದೃಢೀಕೃತ ಮಾಹಿತಿಯನ್ನು ನೀಡುತ್ತಿದ್ದಾರೆ.

ಕರ್ನಾಟಕದ ಎಂಟು ”ಕರೋನಾ ವಾರಿಯರ್ ಮಾಸ್ಟರ್” ಸ್ವಯಂಸೇವಕರಲ್ಲಿ ಒಬ್ಬರಾದ ಸುಳ್ಯದ ಸಹನಾ ಎ. ತನ್ನ ಸ್ವಂತ ಜಿಲ್ಲೆಯಾದ ದಕ್ಷಿಣ ಕನ್ನಡ ಮತ್ತು ಪಕ್ಕದ ಉಡುಪಿಯಲ್ಲಿ ಕೊರೊನಾ ಹೆಸರಲ್ಲಿ ಹರಡುವ ಸೈಬರ್ ವಿಷವನ್ನು ಎದುರಿಸುವ ಉಸ್ತುವಾರಿ ವಹಿಸಿದ್ದಾರೆ. ”ಮಾಸ್ಟರ್” ಸ್ವಯಂಸೇವಕಳಾಗಿ ಅವರ ಜವಾಬ್ದಾರಿಗಳು ರಾಜ್ಯದಾದ್ಯಂತ ನಾಡಿಮಿಡಿತವನ್ನು ಪಡೆಯಲು ಸಹಾಯ ಮಾಡುತ್ತದೆ ಎನ್ನುತ್ತಾರೆ. ಇದು ಬಹುಮುಖಿ ಕಾರ್ಯಾಚರಣೆಯಾಗಿದ್ದು, DIPR ಕಾರ್ಯದರ್ಶಿ ಪಿ ಮಣಿವಣ್ಣನ್ ಅವರು ಪ್ರಾರಂಭಿಸಿದ ಪರಿಕಲ್ಪನೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಕರೋನಾ ವಾರಿಯರ್ಸ್‌ ಎದುರಿಸಿದ ದೊಡ್ಡ ಸವಾಲು ಎಂದರೆ ತಬ್ಲಿಘಿ ಜಮಾಅತ್ ಪ್ರತಿನಿಧಿಗಳ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುವುದಾಗಿದೆ. ಸಹನಾ “ಪ್ರತಿ ಜಿಲ್ಲೆ ಮತ್ತು ವಿಭಾಗೀಯ ಗುಂಪುಗಳಲ್ಲಿ ಎಲ್ಲಾ ಧರ್ಮಗಳ ಕರೋನಾ ವಾರಿಯರ್ಸ್ ಅನ್ನು ಹೊಂದಿದ್ದು, ಇದು ಸುಳ್ಳುಗಳನ್ನು ಬಿಚ್ಚಿಡಲು ಹಾಗೂ ವಾಸ್ತವಿಕ ಮಾಹಿತಿಯನ್ನು ಸಾರ್ವಜನಿಕ ವಲಯದಲ್ಲಿ ಹರಡಲು ಒಂದು ಅತ್ಯುತ್ತಮ ಕಾರ್ಯವಾಗಿದೆ” ಎಂದು ಹೇಳುತ್ತಾರೆ.

ಈಗಾಗಲೇ ಎಲ್ಲಾ ರಾಜ್ಯಗಳಲ್ಲಿಯೂ ಅಲ್ಲಿನ ಪೊಲೀಸರೇ ಈ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ. ಉತ್ತರಪ್ರದೇಶದಲ್ಲಿ ಮುಖ್ಯವಾಹಿನಿ ಮಾಧ್ಯಮಗಳಿಂದಲೇ ಅತಿ ಹೆಚ್ಚಿನ ಸುದ್ದಿಗಳ ಪ್ರಸಾರವಾದ ಅಲ್ಲಿನ ಪೊಲೀಸರು ನಿಜ ತಿಳಿಸಿದ್ದಾರೆ. ಕೆಲ ಉದಾಹರಣೆಗಳು ಇಲ್ಲಿವೆ ನೋಡಿ.

ದಕ್ಷಿಣ ಕನ್ನಡದ ತಂಡದ ಪ್ರಮುಖ ಸದಸ್ಯ ನರೇನ್ ಕೊಡುವಾಟ್ಟಟ್ ಯಾವಾಗಲೂ ಆನ್‌ಲೈನ್‌ನಲ್ಲಿ ವಾಟ್ಸಾಪ್‌ನ್ನು ನೋಡುತ್ತಾರೆ. ಅಧೀಕೃತವಲ್ಲದ ನಕಲಿ ಸುದ್ದಿಗಳನ್ನು ಕರೋನಾ ವಾರಿಯರ್ಸ್ ಬಸ್ಟ್ ಮಾಡಿದ್ದಾರೆ ಎಂದು ಪೋಸ್ಟ್ ಮಾಡುವಲ್ಲಿ ಅವರು ನಿರತರಾಗಿರುತ್ತಾರೆ. “ಈ ಸಮಯದಲ್ಲಿ ಜನರು ಅಧಿಕೃತ ಮಾಹಿತಿಯನ್ನು ಪಡೆಯುವುದು ಬಹಳ ಮುಖ್ಯ, ಅವುಗಳಲ್ಲಿ ಕೆಲವು ಸಂಪೂರ್ಣವಾಗಿ ಕೋಮುವಾದಮಯವಾಗಿದೆ” ಎಂದು ಅವರು ಹೇಳುತ್ತಾರೆ. ಲಾಕ್ ಡೌನ್ ಮಧ್ಯೆ ಜನರ ಮನಸ್ಸಿನಲ್ಲಿನ ಗೊಂದಲಗಳನ್ನು ನಿವಾರಿಸಲು ಸರ್ಕಾರದ ವಿವಿಧ ಬುಲೆಟಿನ್‌ಗಳನ್ನು, ಆದೇಶಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದು ಅವರು ಹೇಳುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...