Homeಕರ್ನಾಟಕ"ಈ ಬಂಡೆ ಸಿದ್ದರಾಮಯ್ಯ ಜೊತೆ ಇದೆ": ಬಿಜೆಪಿ-ಜೆಡಿಎಸ್ ವಿರುದ್ಧ ಗುಡುಗಿದ ಡಿಕೆಶಿ

“ಈ ಬಂಡೆ ಸಿದ್ದರಾಮಯ್ಯ ಜೊತೆ ಇದೆ”: ಬಿಜೆಪಿ-ಜೆಡಿಎಸ್ ವಿರುದ್ಧ ಗುಡುಗಿದ ಡಿಕೆಶಿ

- Advertisement -
- Advertisement -

“ಮಾಧ್ಯಮದವರು ನನ್ನನ್ನು ಕನಕಪುರದ ಬಂಡೆ ಎಂದು ಕರೆಯುತ್ತಾರೆ. ಈ ಬಂಡೆ ಸಿದ್ದರಾಮಯ್ಯನವರ ಜೊತೆ ಸದಾ ಇದೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ಮೈಸೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಪಕ್ಷದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು “ಹಿಂದುಳಿದ ಸಮುದಾಯದ ಸಿದ್ದರಾಮಯ್ಯನವರು ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರುವುದು ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಸಹಿಸಲಾಗುತ್ತಿಲ್ಲ. ಅದಕ್ಕೆ ಅವರನ್ನು ಮುಡಾ ಹಗರಣದಲ್ಲಿ ಸಿಕ್ಕಿ ಹಾಕಿಸಿ ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ಮಾಡಿದ್ದಾರೆ. ಈ ಕನಕಪುರದ ಬಂಡೆ ಸಿಎಂ ಜೊತೆ ಸದಾ ಇರಲಿದೆ. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ, ವಿರುದ್ದ ನಿಂತುಕೊಂಡರೆ ನಾಶ” ಎಂದು ಗುಡುಗಿದರು.

“ನಾವು ನುಡಿದಂತೆ ನಡೆದಿದ್ದೇವೆ. ಬಡ ಜನರಿಗಾಗಿ ಶ್ರಮಿಸಿದ್ದೇವೆ. ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇದನ್ನು ಸಹಿಸಲಾಗದೆ ಸಿದ್ದರಾಮಯ್ಯ ಅವರನ್ನು ಮುಡಾ ಪ್ರಕರಣದಲ್ಲಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಮುಡಾ ಸೈಟ್ ಯಾರ ಆಡಳಿತಾವಧಿಯಲ್ಲಿ ನೀಡಲಾಗಿದೆ? ಬಿಜೆಪಿ ಅವಧಿಯಲ್ಲೇ ಆಗಿದೆ. ಆಗ ಎಲ್ಲಿಗೆ ಹೋಗಿತ್ತು ಹಗರಣ ವಿಚಾರ?” ಎಂದು ಡಿಕೆಶಿ ಪ್ರಶ್ನಿಸಿದರು.

ಇದೇ ವೇಳೆ ಬಿಜೆಪಿ -ಜೆಡಿಎಸ್ ನಾಯಕರು ಮೈತ್ರಿ ಮಾಡಿಕೊಳ್ಳುವ ಮುನ್ನ ಪರಸ್ಪರ ವಾಗ್ದಾಳಿ ನಡೆಸಿದ್ದ ವಿಡಿಯೋಗಳನ್ನು ವೇದಿಕೆಯಲ್ಲಿ ಪ್ರಸಾರ ಮಾಡಿಸಿದರು.

“ಕುಮಾರಸ್ವಾಮಿ ನಂಬಿದವರನ್ನು ಮುಗಿಸುತ್ತಾರೆ. ಅವರು ಮಾಡಿರುವ ಹಗರಣಗಳನ್ನು ಬಯಲು ಮಾಡಿದ್ದೇನೆ, ಮುಂದೆ ಮಾಡುತ್ತೇನೆ. ವಿಜಯೇಂದ್ರ ಎಷ್ಟು ಕೊಳ್ಳೆ ಹೊಡೆದಿದ್ದಾರೆ ಎಂಬುವುದು ಹೊರಬರಲಿದೆ. ಕೊರೋನಾ ಸಮಯದಲ್ಲಿ ಬಡವರ ಹಣ ತಿಂದಿದ್ದಾರೆ. ಇಂತಹ ಭ್ರಷ್ಟರನ್ನು ಬಿಜೆಪಿ ಅಧ್ಯಕ್ಷರಾಗಿ ಮುಂದುವರೆಸಬೇಕಾ? ವಿಜಯೇಂದ್ರ ಅಂದ್ರೆ ಭ್ರಷ್ಟಾಚಾರ” ಎಂದರು.

“ರಾಜ್ಯದ ಜನರು, ಸಂವಿಧಾನದ ರಕ್ಷಣೆಗೋಸ್ಕರ, ನಮ್ಮ ಸರ್ಕಾರವನ್ನು ಉರುಳಿಸುವ, ನಾವು ಜನರಿಗೆ ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹುನ್ನಾರ ನಡೆಯುತ್ತಿದೆ. ಅದರಿಂದ ರಕ್ಷಣೆಗೋಸ್ಕರ ಈ ಜನಾಂದೋಲನ ಆಯೋಜಿಸಿದ್ದೇವೆ” ಎಂದು ಹೇಳಿದರು.

“ಮಿಸ್ಟರ್ ಕುಮಾರಸ್ವಾಮಿ..ಮಿಸ್ಟರ್ ಆಶೋಕಾ..ಮಿಸ್ಟರ್ ವಿಜಯೇಂದ್ರ..ನೀವು ಆಪರೇಶನ್ ಮಾಡಿ ಅನೇಕ ಸರ್ಕಾರಗಳನ್ನು ತೆಗೆದು ಹಾಕಿದ್ದೀರಿ. ಕುಮಾರಸ್ವಾಮಿ ನಿಮ್ಮ ಮುಖಂಡತ್ವದಲ್ಲಿ 19 ಸೀಟ್ ಮಾತ್ರ ಗೆಲ್ಲಿತು. ಈ ಡಿ.ಕೆ ಶಿವಕುಮಾರ್ ಮುಖಂಡತ್ವದಲ್ಲಿ 136 ಸೀಟ್ ಗೆದ್ದಿದೆ. ಬ್ರಿಟಿಷರು 200 ವರ್ಷ ಆಳಿದ್ರೂ ಕೂಡ ಕಾಂಗ್ರೆಸ್ ತೆಗೆದು ಹಾಕಲು ಆಗಿಲ್ಲ. ನಿಮ್ಮ 19 ಸೀಟು.. ಈ ಬಡಜನರ ಶಕ್ತಿ, ಈ ಕಾಂಗ್ರೆಸ್ ಶಕ್ತಿಯನ್ನು ಇನ್ನು ಎರಡು ಜನ್ಮ ತಾಳಿದ್ರು ಕೂಡ, ನೀನು ಬಿಜೆಪಿಯವರು ಸೇರಿಕೊಂಡು ಏನೇ ಕುತಂತ್ರ ಮಾಡಿದ್ರೂ ಕೂಡ ಏನು ಮಾಡಲು ಸಾಧ್ಯವಿಲ್ಲ. ನಿನಗೆ ಸಿದ್ದರಾಮಯ್ಯನವರ ರಾಜೀನಾಮೆ ಬೇಕಾ? ಏ ವಿಜಯೇಂದ್ರ, ಅಶೋಕಾ ನಿಮಗೆ ರಾಜೀನಾಮೆ ಬೇಕಾ? ಎಂದು ಖಾರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ : ಹೆಚ್‌.ಡಿ ಕುಮಾರಸ್ವಾಮಿ ಪ್ರಾಸಿಕ್ಯೂಷನ್‌ಗೆ ಎಸ್‌ಐಟಿ ಮನವಿ : 10 ತಿಂಗಳಿನಿಂದ ಪ್ರತಿಕ್ರಿಯಿಸದ ರಾಜ್ಯಪಾಲರು; ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...