Homeಅಂಕಣಗಳುಐದೇ ದಿನದಲ್ಲಿ ಶಾ ಅಧಿಕಾರದ ಡಿಸಿಸಿ ಬ್ಯಾಂಕ್‍ಗಳಲ್ಲಿ 3118 ಕೋಟಿ ರೂ. ಜಮೆ ಇದು ಗುಜರಾತ್...

ಐದೇ ದಿನದಲ್ಲಿ ಶಾ ಅಧಿಕಾರದ ಡಿಸಿಸಿ ಬ್ಯಾಂಕ್‍ಗಳಲ್ಲಿ 3118 ಕೋಟಿ ರೂ. ಜಮೆ ಇದು ಗುಜರಾತ್ ಮಾಡೆಲ್

- Advertisement -
- Advertisement -

2016ರ ನವೆಂಬರ್ 8ರಂದು ಪ್ರಧಾನಿ ಮೋದಿಯವರು ಏಕಾಏಕಿ 500 ರ ಮತ್ತು 1,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು, ಡಿಸೆಂಬರ್ 30ರೊಳಗೆ ದೇಶದ ಪ್ರಜೆಗಳು ತಮ್ಮಲ್ಲಿದ್ದ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ಹುಕುಂ ಹೊರಡಿಸಿದ್ದು ಈಗ ಹಳೆಯ ವಿಷಯ. ಈ ಕ್ರಮದಿಂದ ಕಪ್ಪುಹಣ ಮಾಯವಾಗುತ್ತದೆಂದೂ, ಭಯೋತ್ಪಾದನೆ ನಿಂತುಬಿಡುತ್ತದೆಂದೂ, ಭ್ರಷ್ಟಾಚಾರ ಕಡಿಮೆಯಾಗುವುದೆಂಬ ಪ್ರಚಾರವನ್ನು ನಂಬಿ, ನೋಟು ರದ್ದತಿಯಿಂದ ತಮಗಾದ ಎಲ್ಲ ತೊಂದರೆಗಳನ್ನು ಮರೆಯಲು ಪ್ರಯತ್ನಿಸಿದರು. ನೂರಕ್ಕಿಂತ ಹೆಚ್ಚು ಜನ ಬ್ಯಾಂಕಿನ ಎದುರುಗಡೆ ಕ್ಯೂನಲ್ಲಿ ನಿಂತಲ್ಲೇ ಪ್ರಾಣ ತೆತ್ತಾಗಲೂ ದೇಶದ ಜನ ಹೇಗೋ ಸಹಿಸಿಕೊಂಡರು. ಅದೊಂದು ಕೊಲ್ಯಾಟರಲ್ ಡ್ಯಾಮೇಜ್, ದೇಶಕ್ಕೆ ಇಷ್ಟು ತ್ಯಾಗ ಮಾಡಬೇಕು ಎಂಬ ವಾದಕ್ಕೆ ಬಹುತೇಕರು ತಲೆದೂಗಿದರು.
ದೇಶಕ್ಕಾಗಿ ಸಾಮಾನ್ಯ ಜನರೇ ಇಷ್ಟೆಲ್ಲಾ ಕಷ್ಟ ಪಡುತ್ತಿರುವಾಗ ಬ್ಯಾಂಕಿನ ಅಧಿಕಾರಿಗಳು ಇನ್ನೆಷ್ಟು ಕಷ್ಟ ಪಟ್ಟಿರಬಹುದು? ಬ್ಯಾಂಕ್ ಉದ್ಯೋಗಿಗಳು ಯಾವುದೇ ರಜೆ ಪಡೆಯದೇ ದಿನಕ್ಕೆ 12 ಗಂಟೆಗಳ ಕಾಲ ಎಡೆಬಿಡದೇ ದುಡಿದರು, ಒಬ್ಬ ನೌಕರನಂತೂ ಕೆಲಸದ ಒತ್ತಡದಲ್ಲೇ ಅಸುನೀಗಿದ. ಆದರೆ ಈ ನೋಟು ರದ್ದತಿಯ ಅವಧಿಯಲ್ಲಿ ಗುಜರಾತ್‍ನ ಬ್ಯಾಂಕುಗಳು ಸಲ್ಲಿಸಿದ ಸೇವೆ ಅಮೋಘ. ಅದರಲ್ಲೂ ಅಹ್ಮದಾಬಾದಿನಲ್ಲಿರುವ ಜಿಲ್ಲಾ ಸಹಕಾರೀ ಬ್ಯಾಂಕ್‍ನ ಆಡಳಿತ ವರ್ಗ ಮತ್ತು ಉದ್ಯೋಗಿಗಳಂತೂ ಆ ಮೊದಲ ಐದು ದಿನಗಳಲ್ಲಿ ಮಾಡಿದ ಸಾಧನೆ ಅತ್ಯದ್ಭುತ.
ಮಹಾರಾಷ್ಟ್ರದ ಮುಂಬಯಿಯಲ್ಲಿ ನೆಲೆಸಿರುವ ಮನೋರಂಜನ್ ಎಸ್ ರಾಯ್ ಎನ್ನುವ ಮಾಹಿತಿ ಹಕ್ಕು ಕಾರ್ಯಕರ್ತ ನೋಟು ರದ್ದತಿಯ ನಂತರದಲ್ಲಿ ಸಹಕಾರಿ, ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಿಗೆ ಹಿಂತಿರುಗಿ ಜಮೆಯಾದ ಹಳೆಯ ನೋಟುಗಳೆಷ್ಟು ಎಂದು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಪ್ರóಶ್ನೆ ಕೇಳಿದ್ದರು. ಆ ಅಧಿಕೃತ ದಾಖಲೆಗಳ ಪ್ರಕಾರ ಜಿಲ್ಲಾ ಸಹಕಾರೀ ಬ್ಯಾಂಕುಗಳ ಪಟ್ಟಿಯಲ್ಲಿ ಎಲ್ಲಕ್ಕಿಂತ ಮುಂಚೂಣಿಯಲ್ಲಿದ್ದ ಬ್ಯಾಂಕು ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್. ಕೇವಲ ಐದೇ ದಿನಗಳಲ್ಲಿ ಆ ಬ್ಯಾಂಕಿನಲ್ಲಿ ಜಮೆಯಾದ 500 ಮತ್ತು 1,000 ಮುಖಬೆಲೆಯ ಒಟ್ಟು ಮೊತ್ತ 745.59 ಕೋಟಿ! ಇಡೀ ದೇಶದ ಸಹಕಾರಿ ಬ್ಯಾಂಕುಗಳಲ್ಲೇ ಪ್ರಪ್ರಥಮ! ಅಂದಹಾಗೆ ಈ ಬ್ಯಾಂಕ್‍ನ ಡೈರೆಕ್ಟರ್ ಯಾರೂ ಅಂತ ತಿಳಿದಿದ್ದೀರಿ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸಾಕ್ಷಾತ್ ಅಮಿತ್ ಶಾ.
ಗುಜರಾತ್ ಮಾಡೆಲ್ ಎಂಬುದು ದೇಶಾದ್ಯಂತ ಫೇಮಸ್ ಆಗಿರೋ ಮಾತಲ್ಲವೆ? ಆದ್ದರಿಂದ ಎರಡನೇ ಸ್ಥಾನವನ್ನೂ ಅವರು ಯಾರಿಗೂ ಬಿಟ್ಟುಕೊಟ್ಟಿಲ್ಲ. ರಾಜಕೋಟ್ ಜಿಲ್ಲಾ ಸಹಕಾರಿ ಬ್ಯಾಂಕ್ ಕಾರ್ಯಕ್ಷಮತೆಯಲ್ಲಿ ಎರಡನೇ ಸ್ಥಾನದಲ್ಲಿ ನಿಂತಿದೆ. ಆ ಐದು ದಿನಗಳಲ್ಲಿ ಅಲ್ಲಿ ಜಮೆ ಆದ ಮೊತ್ತ 693.19 ಕೋಟಿ ರೂಪಾಯಿಗಳು. ಅದರ ಹಾಲಿ ಛೇರ್‍ಮನ್ ಆಗಿರುವವರು ಜಯೇಶ್‍ಭಾಯಿ ವಿಟ್ಠಲ್‍ಭಾಯಿ ರಾದಾದಿಯಾ ಎನ್ನುವವರು. ಅವರು ಹಾಲಿ ಗುಜರಾತ್‍ನ ವಿಜಯ್ ರೂಪಾಣಿ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದಾರೆ. ಈ ರಾಜಕೋಟ್ ಬಿಜೆಪಿಯ ಭದ್ರಕೋಟೆ. ನರೇಂದ್ರ ಮೋದಿಯವರು ಪ್ರಥಮ ಬಾರಿಗೆ ರಾಜಕೀಯ ಪ್ರವೇಶಿದ್ದು ಕೂಡ ಇದೇ ರಾಜಕೋಟ್‍ನಿಂದಲೇ. ಹೀಗಿರುವಾಗ ಗುಜರಾತಿನ ಇನ್ನಿತರ ಜಿಲ್ಲಾ ಸಹಕಾರೀ ಬ್ಯಾಂಕುಗಳೂ ಕೂಡ ಹಿಂದೆ ಬಿದ್ದಿಲ್ಲ. ಅಲ್ಲಿಯ ಹನ್ನೊಂದು ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಆ ಐದು ದಿನಗಳಲ್ಲಿ ಜಮಾ ಆದ ಒಟ್ಟು ಮೊತ್ತ 3,118 ಕೋಟಿಗಿಂತಲೂ ಹೆಚ್ಚು. ಈ 11 ಬ್ಯಾಂಕುಗಳ ನಾಯಕತ್ವದಲ್ಲಿ ಸ್ವತಃ ಬಿಜೆಪಿಯ ಮಂತ್ರಿಗಳು, ಸಂಸದರು ಹಾಗೂ ಶಾಸಕರೇ ಇದ್ದಾರೆ. ಆದರೆ ಗುಜರಾತ್‍ನ ಸಹಕಾರಿ ಬ್ಯಾಂಕುಗಳ ಆಡಳಿತ ವರ್ಗ ಮತ್ತು ಉದ್ಯೋಗಿಗಳಿಗೆ ತಮ್ಮ ಕಾರ್ಯದಕ್ಷತೆಯನ್ನು ಮೆರೆಯಲು ಸಿಕ್ಕಿದ್ದು ಐದು ದಿನ ಮಾತ್ರ. ಜಿಲ್ಲಾ ಸಹಕಾರಿ ಬ್ಯಾಂಕುಗಳು ಹಳೆಯ ನೋಟುಗಳನ್ನು ಸ್ವೀಕರಿಸುವುದನ್ನು ನಿರ್ಬಂಧಿಸಿ ನವಂಬರ್ 14ರಂದು ರಿಜರ್ವ್ ಬ್ಯಾಂಕ್ ಆದೇಶ ಹೊರಡಿಸಿಬಿಟ್ಟಿತು. ರಿಜರ್ವ್ ಬ್ಯಾಂಕ್ ಕೊಟ್ಟ ಕಾರಣ ಸಹಕಾರಿ ಬ್ಯಾಂಕುಗಳ ಮೂಲಕ ಕಪ್ಪುಹಣವನ್ನು ಬಿಳಿಯನ್ನಾಗಿ ಪರಿವರ್ತಿಸಲಾಗುತ್ತಿದೆ ಎಂಬುದಾಗಿತ್ತು.
ಗುಜರಾತ್‍ನ ಸಹಕಾರಿ ಬ್ಯಾಂಕುಗಳ ಐದು ದಿನಗಳ ಯಶೋಗಾಥೆಯನ್ನು ಸಹಿಸಲಾಗದ ಕೆಲವರು ಇಷ್ಟೊಂದು ಹಣ ಎಲ್ಲಿಂದ ಬಂತು? ಯಾರಿಗೆ ಸೇರಿದ್ದು ? ಎಂಬುದರ ಕುರಿತು ತನಿಖೆಯಾಗಬೇಕೆಂದು ಆಗ್ರಹಿಸಿದರು. ಜಂಟಿ ಸದನ ಸಮಿತಿ ರಚನೆಯಾಗಲಿ ಎಂದು ಬೊಟ್ಟಿಟ್ಟರು. ಆದರೆ ರಿಜರ್ವ್ ಬ್ಯಾಂಕ್ ಆಗಲಿ, ಭ್ರಷ್ಟಾಚಾರದ ವಿರುದ್ಧ ವೀರಾವೇಶದಿಂದ ಹೋರಾಡುತ್ತಿದ್ದ ಪ್ರಧಾನಿಯವರಾಗಲಿ ಕ್ಯಾರೆ ಅನ್ನಲಿಲ್ಲ.
ಬದಲಿಗೆ, ಈ ಪ್ರಕರಣ ಬೆಳಕಿಗೆ ಬಂದ ಒಂದೇ ದಿನದಲ್ಲಿ ಮಿಂಚಿನ ವೇಗದಲ್ಲಿ ಬಂದ ಓಂಃಂಖಆ (ಓಚಿಣioಟಿಚಿಟ ಃಚಿಟಿಞ ಜಿoಡಿ ಂgಡಿiಛಿuಟಣuಡಿe ಚಿಟಿಜ ಖuಡಿಚಿಟ ಆeveಟoಠಿmeಟಿಣ) ಸದರಿ ಬ್ಯಾಂಕುಗಳ ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡು ಬೆಂಬಲಕ್ಕೆ ಬಂದು ನಿಂತಿದೆ. ನಬಾರ್ಡ ಪ್ರಕಾರ ಇಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ಅದರಲ್ಲೂ ಅಹ್ಮದಾಬಾದ್ ಬ್ಯಾಂಕಿನಲ್ಲಿ 100% ಶುದ್ಧವ್ಯವಹಾರ ನಡೆಸಲಾಗಿದೆಯಂತೆ. ಆದರೆ, ಸತ್ಯ ಏನೆಂದು ಎಲ್ಲರಿಗೂ ಗೊತ್ತು. ಹಾಗಾಗಿ ಹೆಚ್ಚು ಬರೆಯುವ ಅವಶ್ಯಕತೆಯಿಲ್ಲ.

ಮಾದ್ಯಮಗಳ ಅಮಿತ್ ಶಾ ಪ್ರೇಮ !

ಆರ್.ಟಿ.ಐ. ಕಾರ್ಯಕರ್ತ ಮನೋರಂಜನ್ ರಾಯ್ ಈ ಸ್ಫೋಟಕ ಸುದ್ದಿ ಬಹಿರಂಗಪಡಿಸಿದ ನಂತರ ಅನೇಕ ಸುದ್ದಿ ಜಾಲತಾಣಗಳು, ಸುದ್ದಿವಾಹಿನಿಗಳು ಈ ಬಗ್ಗೆ ವರದಿ ಮಾಡಿದ್ದವು. ಸುದ್ದಿ ಪ್ರಕಟಿಸಿದವರಲ್ಲಿ ಫಸ್ರ್ಟಪೋಸ್ಟ್, ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್, ಟೈಮ್ಸ್ ನೌ, ನ್ಯೂಸ್18 ಮುಂತಾದ ಪ್ರಮುಖ ಸುದ್ದಿತಾಣಗಳೂ ಇದ್ದವು. ಆದರೆ ಈ ಸುದ್ದಿ ಪ್ರಕಟವಾಗಿ ಕೆಲವೇ ಗಂಟೆಗಳಲ್ಲಿ ಮೇಲೆ ಹೇಳಿದ ಸುದ್ದಿತಾಣಗಳು ಈ ವರದಿಯನ್ನು ತಮ್ಮ ಪೋರ್ಟಲ್‍ನಿಂದ ತೆಗೆದುಹಾಕಿಬಿಟ್ಟವು.
ಪತ್ರಿಕೋದ್ಯಮದಲ್ಲಿ ಕೆಲವೊಮ್ಮೆ ತಪ್ಪುಗಳು ಆಗುವುದು ಸಹಜ, ಅದು ಸಂಪಾದಕರ ಗಮನಕ್ಕೆ ಬಂದಾಗ ತಿದ್ದುಪಡಿ ನೀಡುವುದು ಮತ್ತು ಕ್ಷಮಾಪಣೆ ಕೇಳುವುದು ನಡೆದುಕೊಂಡು ಬಂದಿರುವ ವಾಡಿಕೆ. ಆದರೆ ಈ ಜಾಲತಾಣಗಳು ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಸಂಬಂಧಿಸಿದ ಈ ಸುದ್ದಿಯನ್ನು ಯಾವುದೇ ಕಾರಣ ನೀಡದೇ ಏಕಾಏಕಿ ತೆಗೆದುಹಾಕಿವೆ. ಇವುಗಳಲ್ಲಿ ನ್ಯೂಸ್18.ಕಾಮ್ ಮತ್ತು ಫಸ್ರ್ಟಪೋಸ್ಟ್ ಜಾಲತಾಣಗಳು ಮುಕೇಶ್ ಅಂಬಾನಿಯ ರಿಲಾಯನ್ಸ್ ನೆಟ್‍ವರ್ಕ್ ಒಡೆತನದ ನೆಟ್‍ವರ್ಕ್18 ಕಂಪನಿಯ ಒಡೆತನದಲ್ಲಿವೆ. ಅಂಬಾನಿಗಳಿಗೂ ಪ್ರಧಾನಿ ಮೋದಿಯವರಿಗೂ ಖಾಸಾ ಖಾಸಾ ದೋಸ್ತಿ ಅಂತ ಬಲ್ಲವರ ಅಂಬೋಣ.
ಹೀಗೆ ಅಮಿತ್ ಶಾ ಮತ್ತು ಬಿಜೆಪಿಗೆ ಸಂಬಂಧಪಟ್ಟ ವಿಮರ್ಶಾತ್ಮಕವಾಗಿ ನೋಡುವ ಸುದ್ದಿಗಳನ್ನು ಈ ರೀತಿ ತೆಗೆದುಹಾಕುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. 2017 ಜುಲೈನಲ್ಲಿ ಅಮಿತ್ ಶಾ ಅವರ ಆಸ್ತಿಯಲ್ಲಿ 300% ಹೆಚ್ಚಳ ಎನ್ನುವ ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ತೆಗೆದುಹಾಕಿತ್ತು. ‘ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆ’ ಯನ್ನು ಟೀಕಿಸುವ ಒಂದು ವರದಿಯನ್ನು ಅದೇ ಟೈಮಸ್ ಆಫ್ ಇಂಡಿಯ ಪತ್ರಿಕೆ 2017ರ ಸೆಪ್ಟೆಂಬರ್ 14ರಂದು ಪ್ರಕಟಿಸಿತ್ತು; ಮತ್ತೆ ಕೆಲವೇ ಗಂಟೆಗಳಲ್ಲಿ ತೆಗೆದುಹಾಕಿತ್ತು. ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿದಿರುವ ವರದಿಯನ್ನು ಇದೇ ಮೇ ತಿಂಗಳಲ್ಲಿ ಟೈಮ್ಸ್ ಆಫ್ ಇಂಡಿಯ ಮತ್ತು ಎಕಾನಾಮಿಕ್ ಟೈಮ್ಸ್ ತೆಗೆದುಹಾಕಿದ್ದವು. ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರ ಸುಪುತ್ರ ಜಯ್ ಶಾ ಅವರ ಬಿಸಿನೆಸ್‍ನಲ್ಲಿ ಸಾವಿರಾರು ಪಟ್ಟು ಹೆಚ್ಚಳವಾದ ಸುದ್ದಿಯನ್ನು ತಡೆಗಟ್ಟಲು ಕೋರ್ಟಿನ ಮೊರೆ ಹೋಗಿದ್ದನ್ನು, ಆನಂತರ ಆ ಸುದ್ದಿ ಕಣ್ಮರೆಯಾಗಿದ್ದನ್ನೂ ಇಲ್ಲಿ ಸ್ಮರಿಸಬಹದು.
ಪ್ರಶ್ನೆ ಇಷ್ಟೆ. ಬಿಜೆಪಿ ಅಧ್ಯಕ್ಷ ಶ್ರೀ ಅಮಿತ್ ಶಾ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಂದೆಂದೂ ಕೇಳರಿಯದ ರೀತಿಯಲ್ಲಿ ದೇಶವನ್ನು ಮುಂದೊಯ್ಯುವ ಘನಕಾರ್ಯ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂಬುದೇನೋ ಸರಿ, ಆದರೆ ಸತ್ಯ ಮುಂದಿಡುವ ಇಂಥಾ ವರದಿಗಳನ್ನು ತಡೆಹಿಡಿಯುವ, ತೆಗೆದುಹಾಕುವಂತಹ ಚಿಲ್ಲರೆ ಕೆಲಸಗಳನ್ನು ಯಾರು ಮಾಡುತ್ತಿದ್ದಾರೆ? ಏಕೆ ಮಾಡುತ್ತಿದ್ದಾರೆ?

– ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...