Homeಮುಖಪುಟದೆಹಲಿ ಚಲೋ ರೈತರ ಪ್ರತಿಭಟನೆ: ತಲೆಗೆ ಪೆಟ್ಟು ಬಿದ್ದು ಪ್ರತಿಭಟನಾನಿರತ ಯುವ ರೈತ ಸಾವು

ದೆಹಲಿ ಚಲೋ ರೈತರ ಪ್ರತಿಭಟನೆ: ತಲೆಗೆ ಪೆಟ್ಟು ಬಿದ್ದು ಪ್ರತಿಭಟನಾನಿರತ ಯುವ ರೈತ ಸಾವು

- Advertisement -
- Advertisement -

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತ್ರಿ ಕಾನೂನು ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಹಗ್ಗಜಗ್ಗಾಟ ಮುಂದುವರೆದಿದ್ದು, 23 ವರ್ಷದ ಶುಭಕರನ್ ಸಿಂಗ್ ಎಂಬ ಪ್ರತಿಭಟನಾಕಾರ ಖಾನೌರಿ ಗಡಿಯಲ್ಲಿ ಬುಧವಾರ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿರುವ ಸುದ್ದಿ ವರದಿಯಾಗಿದೆ.

‘ಮಧ್ಯಾಹ್ನ 3 ಗಂಟೆಗೆ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದರು. ಅವರ ತಲೆಗೆ ಬುಲೆಟ್ ಗಾಯಗಳಾಗಿವೆ’ ಎಂದು ಪಟಿಯಾಲಾದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ರಾಜೇಂದ್ರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಹರ್ನಾಮ್ ಸಿಂಗ್ ತಿಳಿಸಿದ್ದಾರೆ ಎಂದು ದಿಕ್ವಿಂಟ್‌ ವರದಿ ಮಾಡಿದೆ.

ಹರ್ಯಾಣ ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಸಾವು ಸಂಭವಿಸಿಲ್ಲ ಎಂದು ಹೇಳಿದ್ದಾರೆ. ‘ಇದುವರೆಗೆ ಬಂದಿರುವ ಮಾಹಿತಿಯ ಪ್ರಕಾರ ಇಂದು ರೈತರ ಪ್ರತಿಭಟನೆಯಲ್ಲಿ ಯಾವುದೇ ರೈತ ಸಾವನ್ನಪ್ಪಿಲ್ಲ. ಇದು ಕೇವಲ ವದಂತಿಯಾಗಿದೆ. ಖಾನೌರಿ ಗಡಿಯಲ್ಲಿ ಇಬ್ಬರು ಪೊಲೀಸರು ಮತ್ತು ಒಬ್ಬ ಪ್ರತಿಭಟನಾಕಾರ ಗಾಯಗೊಂಡಿರುವ ಬಗ್ಗೆ ಮಾಹಿತಿ ಇದೆ, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಹರ್ಯಾಣ ಪೊಲೀಸರು ಮತ್ತು ಪ್ರತಿಭಟನಾ ನಿರತ ರೈತರ ನಡುವಿನ ತೀವ್ರ ಮುಖಾಮುಖಿಯ ನಡುವೆ ಬಟಿಂಡಾದ ಬಲೋಹ್ ಗ್ರಾಮದ ನಿವಾಸಿ ಶುಭಕರನ್ ಅವರ ತಲೆಗೆ ಗಾಯವಾಗಿದೆ ಎಂದು ಆರೋಪಿಸಲಾಗಿದೆ.

ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಮಾಲ್ವಾ) ಉಪಾಧ್ಯಕ್ಷ ಗುರ್ವಿಂದರ್ ಸಿಂಗ್ ಬಲೋಹ್ ಘಟನೆಯನ್ನು ದೃಢಪಡಿಸಿದ್ದಾರೆ. ‘ನನ್ನ ಗ್ರಾಮದ ಬಲೋಹ್ ನಿವಾಸಿಯಾಗಿರುವ ಶುಭಕರನ್ ಸಿಂಗ್ ಅವರು ಶಂಭು ಗಡಿಯಲ್ಲಿ ಪೊಲೀಸರ ಗುಂಡಿಗೆ ಗಾಯಗೊಂಡು ಸಾವನ್ನಪ್ಪಿದ್ದಾರೆ. ಈ ದುಃಖದ ಕ್ಷಣದಲ್ಲಿ ನಾವು ಅವರ ಕುಟುಂಬದೊಂದಿಗೆ ಇದ್ದೇವೆ’ ಎಂದು ಅವರು ಹೇಳಿದರು.

ಅಖಿಲ ಭಾರತ ಕಿಸಾನ್ ಮಜ್ದೂರ್ ಸಭಾ ಖಂಡನೆ:

ಖಾನೌರಿಯಲ್ಲಿ ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ರಬ್ಬರ್ ಗುಂಡು ಹಾರಿಸಿರುವುದನ್ನು ಅಖಿಲ ಭಾರತ ಕಿಸಾನ್ ಮಜ್ದೂರ್ ಸಭಾ (AIKMS) ಖಂಡಿಸಿದೆ. 23 ವರ್ಷ ವಯಸ್ಸಿನ ಶುಭಕರನ್ ಸಿಂಗ್ ಎಂಬ ಯುವಕ ರಬ್ಬರ್ ಗುಂಡುಗಳಿಂದ ಕೊಲ್ಲಲ್ಪಟ್ಟಿದ್ದಾರೆ. ಹಲವರಿಗೆ ಗಾಯವಾಗಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

‘ಪ್ರತಿಭಟನಾ ನಿರತ ಯುವಕರು ಮತ್ತು ರೈತರನ್ನು ದೇಶದ ಶತ್ರುಗಳಂತೆ ಪರಿಗಣಿಸುತ್ತಿರುವ ಮೋದಿ ಸರ್ಕಾರವನ್ನು ಎಐಕೆಎಂಎಸ್ ಖಂಡಿಸಿದೆ. ಅವರು ಉತ್ಪಾದಿಸುವ ಮತ್ತು ದೇಶದ ಆರ್ಥಿಕತೆಯ ತಮ್ಮ ಪಾಲನ್ನು ಮಾತ್ರ ಕೇಳುವ ಜನರ ಮೇಲೆ ಅವರು ಸಶಸ್ತ್ರ ದಾಳಿ ನಡೆಸಿದ್ದಾರೆ. ಸರ್ಕಾರ ಮತ್ತು ಅವರ ಆರ್‌ಎಸ್‌ಎಸ್, ಬಿಜೆಪಿ ಭಾರತೀಯ ರೈತರನ್ನು ಶೋಷಿಸಲು ಕಾರ್ಪೊರೇಟ್, ಎಂಎನ್‌ಸಿಗಳು ಮತ್ತು ವಿದೇಶಿ ಶಕ್ತಿಗಳ ಹಿತಾಸಕ್ತಿಗಳನ್ನು ಪೂರೈಸುತ್ತಿವೆ. ಅವರು ತಮ್ಮ “ಕಾರ್ಪೊರೇಟ್ ಅಭಿವೃದ್ಧಿ” ಗುರಿಯೊಂದಿಗೆ ಎಷ್ಟು ಆಳವಾಗಿ ಮದುವೆಯಾಗಿದ್ದಾರೆ ಎಂದರೆ, ಅವರು ಮತ್ತೊಮ್ಮೆ ರೈತರು ಮತ್ತು ಯುವಕರನ್ನು ಕೊಂದಿದ್ದಾರೆ’ ಎಂದು ಆಕ್ರೋಶ ಹೊರಹಾಕಿದೆ.

‘ಇದು ಆರ್‌ಎಸ್‌ಎಸ್ ಮತ್ತು ಮೋದಿಯವರ ಜನವಿರೋಧಿ ಮತ್ತು ರಾಷ್ಟ್ರವಿರೋಧಿ ಗುಣವನ್ನು ಮತ್ತೊಮ್ಮೆ ಬಹಿರಂಗಪಡಿಸುತ್ತದೆ. ಗುಂಡು ಹಾರಿಸಲು ಆದೇಶಿಸಿದ ಪೊಲೀಸ್ ಮುಖ್ಯಸ್ಥ ಮತ್ತು ಅಧಿಕಾರಿಯನ್ನು ತಕ್ಷಣ ಬಂಧಿಸಬೇಕೆಂದು ಎಂದು ಎಐಕೆಎಂಎಸ್ ಒತ್ತಾಯಿಸುತ್ತದೆ. ಹುತಾತ್ಮರಾದ ಶುಭಕರನ್ ಸಿಂಗ್, 23 ವರ್ಷ ವಯಸ್ಸಿನವರು, ಭಟಿಂಡಾ ಜಿಲ್ಲೆಯ ಬಲೂನ್ ಗ್ರಾಮದವರು. ಅವರ ದೇಹವನ್ನು ರಾಜೇಂದ್ರ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕೀರ್ತಿ ಕಿಸಾನ್ ಯೂನಿಯನ್ ಮುಖಂಡರು, ರಮೀಂದರ್ ಪಟಿಯಾಲ ಮತ್ತು ಇತರರು ಆಸ್ಪತ್ರೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಇದ್ದಾರೆ’ ಎಂದು ಸಂಘಟನೆ ವಿವರಿಸಿದೆ.

ಇದಕ್ಕೂ ಮೊದಲು, ಫೆಬ್ರವರಿ 16 ರಂದು ಶಂಭು ಗಡಿಯಲ್ಲಿ 79 ವರ್ಷದ ರೈತ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ; ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ; ಕ್ಯುರೇಟಿವ್ ವಿಚಾರಣೆ ಮುಂದೂಡಿದ ದೆಹಲಿ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...