HomeಅಂಕಣಗಳುSIRಗ್ಯಾನೇಶ್‌ ವಿರುದ್ಧ ಪ್ರತಿಭಟನೆಗೆ ಅವಕಾಶ ನಿರಾಕರಣೆ; 'ನಮಗೆ ಅನುಮತಿ ನೀಡಲು ದೆಹಲಿ ಪೊಲೀಸ್ ಯಾರು' ಎಂದ...

ಗ್ಯಾನೇಶ್‌ ವಿರುದ್ಧ ಪ್ರತಿಭಟನೆಗೆ ಅವಕಾಶ ನಿರಾಕರಣೆ; ‘ನಮಗೆ ಅನುಮತಿ ನೀಡಲು ದೆಹಲಿ ಪೊಲೀಸ್ ಯಾರು’ ಎಂದ ಸಿಜೆಪಿ

"ಹೋರಾಟ ಸುಲಭವಲ್ಲ, ದೀರ್ಘಕಾಲದ ಚಳುವಳಿಗೆ ಸಿದ್ಧರಾಗಿ"

- Advertisement -
- Advertisement -

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಹಾಗೂ ವಕ್ತಾರ ಸೌರವ್ ದಾಸ್ ಬುಧವಾರ (ಅಕ್ಟೋಬರ್ 7ರಂದು) ದೆಹಲಿ ಪೊಲೀಸರಿಗೆ ಮಾಹಿತಿ ಪತ್ರವನ್ನು ಸಲ್ಲಿಸಿದ್ದಾರೆ.

ಮುಂದಿನ ದಿನಗಳಲ್ಲಿ ಪೊಲೀಸರೊಂದಿಗೆ ಯಾವುದೇ ವಿವಾದ ಆಗಬಾರದು ಎಂಬ ಕಾರಣಕ್ಕೆ ನಾವು ಸಂಸತ್ ರಸ್ತೆಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಈ ನೋಟೀಸ್ ನೀಡಿರುವುದಾಗಿ ಸೌರವ್ ದಾಸ್ ತಿಳಿಸಿದ್ದಾರೆ.

ಪೊಲೀಸ್ ಠಾಣೆಗೆ ಭೇಟಿ ನೀಡಿ ತಿಳಿಸಿದ ಹೊರತಾಗಿಯೂ, ಅಕ್ಟೋಬರ್ 10ರ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಒಂದು ವೇಳೆ ಸಿಜೆಪಿಗೆ ಅನುಮತಿ ಸಿಗದಿದ್ದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ದಾಸ್, “ಅನುಮತಿ ಎಂಬ ಪರಿಕಲ್ಪನೆಯೇ ಇಲ್ಲ” ಎಂದಿದ್ದಾರೆ. ಇದು ಬ್ರಿಟಿಷರ ಆಡಳಿತದ ಕಾಲದಿಂದ ಬಂದಿದ್ದು, ಸರ್ಕಾರದ ವಿರುದ್ಧ ಪ್ರತಿಭಟಿಸಲು ಅನುಮತಿ ಬೇಕು ಎಂದು ಭಾರತೀಯರ ತಲೆಗೆ ಹುಳ ಬಿಟ್ಟವರೇ ಬ್ರಿಟಿಷರು ಎಂದು ಅವರು ಹೇಳಿದರು.

“ಸರ್ಕಾರದ ವಿರುದ್ಧ ವಿರೋಧ ವ್ಯಕ್ತಪಡಿಸಬೇಕಾದರೆ ಮೊದಲು ಸರ್ಕಾರದಿಂದಲೇ ಅನುಮತಿ ಪಡೆಯಿರಿ ಎಂದು ಪದೇ ಪದೇ ಹೇಳುವುದು ಎಷ್ಟು ಅಸಂಬದ್ಧ ಮತ್ತು ವಿಚಿತ್ರ ಪರಿಕಲ್ಪನೆ ಎಂಬುದನ್ನು ಯೋಚಿಸಿ” ಎಂದು ಅವರು ತಿಳಿಸಿದ್ದಾರೆ.

ನಮಗೆ ಅನುಮತಿ ನೀಡಲು ದೆಹಲಿ ಪೊಲೀಸ್ ಯಾರು?

“ನಮಗೆ ಅನುಮತಿ ನೀಡಲು ದೆಹಲಿ ಪೊಲೀಸರು ಯಾರು?” ಎಂದು ಪ್ರಶ್ನಿಸಿದ ಸೌರವ್ ದಾಸ್, ಸುರಕ್ಷತೆಯನ್ನು ಖಚಿತಪಡಿಸುವುದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಹಾಗೂ ಟ್ರಾಫಿಕ್ ವ್ಯವಸ್ಥೆ ಮಾಡುವುದು ದೆಹಲಿ ಪೊಲೀಸರ ಕೆಲಸವಾಗಿದ್ದು, ಈ ಎಲ್ಲ ವಿಚಾರಗಳಲ್ಲೂ ನಾವು ಅವರಿಗೆ ಸಹಕರಿಸುತ್ತೇವೆ ಎಂದರು.

ಸರ್ಕಾರದ ವಿರುದ್ಧ ಪ್ರತಿಭಟಿಸಲು ನಮಗೆ ಸರ್ಕಾರದಿಂದಲೇ ಅನುಮತಿ ಬೇಕು ಎಂಬಂತೆ ನಮ್ಮ ಮಿದುಳುಗಳನ್ನು ತೊಳೆಯಲಾಗಿದೆ ಎಂದ ಸೌರವ್, “ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ನಾವು ಇಂದಿಗೂ ಅನುಮತಿ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದಿದ್ದಾರೆ.

“ಹೋರಾಟ ಸುಲಭವಲ್ಲ, ದೀರ್ಘಕಾಲದ ಚಳುವಳಿಗೆ ಸಿದ್ಧರಾಗಿ”

ಚುನಾವಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿಪಡಿಸುವವರೆಗೂ ಈ ಚಳುವಳಿ ಮುಂದುವರಿಯುತ್ತದೆ ಎಂದು ಹೇಳಿರುವ ಸಿಜೆಪಿ ಮತ್ತು ವಿದ್ಯಾರ್ಥಿ ಸಂಘಟನೆಗಳು, ಅಕ್ಟೋಬರ್ 10ರ ಪ್ರತಿಭಟನೆಯ ಮುನ್ನ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಬುಧವಾರ ಕರೆ ನೀಡಿವೆ.

ಬುಧವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಂಪುಗಳು, ಚುನಾವಣಾ ಆಯೋಗದ (ಇಸಿ) ವಿರುದ್ಧದ ತಮ್ಮ ಅಭಿಯಾನವನ್ನು ವಿಶಾಲ ರಾಜಕೀಯ ನೆಲೆಗೆ ಕೊಂಡೊಯ್ಯಲು ಪ್ರಯತ್ನಿಸಿವೆ. ಅಲ್ಲದೆ, ವಿರೋಧ ಪಕ್ಷದ ಇಂಡಿಯಾ ಬ್ಲಾಕ್ ಸಂಸದರ ಅಕ್ಟೋಬರ್ 6ರ ಪ್ರತಿಭಟನಾ ಮೆರವಣಿಗೆಗೆ ಬೆಂಬಲ ಸೂಚಿಸಿದೆ.

ಬುಧವಾರದ ಸುದ್ದಿಗೋಷ್ಠಿಯಲ್ಲಿ ಸಿಜೆಪಿ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ), ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ (ಎಐಎಸ್‌ಎಫ್‌) ಮತ್ತು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಭಾಗವಹಿಸಿದ್ದವು. ಜತೆಗೆ ಆಮ್ ಆದ್ಮಿ ಪಕ್ಷದ ವಿದ್ಯಾರ್ಥಿ ಘಟಕವಾದ ಅಸೋಸಿಯೇಷನ್ ಆಫ್ ಸ್ಟೂಡೆಂಟ್ಸ್ ಫೆಡರೇಶನ್ ಫಾರ್ ಆಲ್ಟರ್ನೇಟಿವ್ ಪಾಲಿಟಿಕ್ಸ್ (ಎಎಸ್‌ಎಪಿ) ಕೂಡ ಇದರಲ್ಲಿ ಪಾಲ್ಗೊಂಡಿತ್ತು.

“ಈ ಹೋರಾಟ ಸುಲಭವಲ್ಲ. ರೈಲು ಹಾಗೂ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿಕೊಂಡು ನಮ್ಮೊಂದಿಗೆ ಸೇರಿಕೊಳ್ಳುವಂತೆ ದೇಶದಾದ್ಯಂತ ಇರುವ ಎಲ್ಲರಿಗೂ ನಾನು ಮನವಿ ಮಾಡುತ್ತೇನೆ” ಎಂದು ದಾಸ್ ಹೇಳಿದರು.

ಗ್ಯಾನೇಶ್‌ ಕುಮಾರ್ ರಾಜೀನಾಮೆ ನೀಡಿದರೂ ಸಹ ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಿಸಬೇಕಾಗಿರುವುದರಿಂದ ಪ್ರತಿಭಟನಾಕಾರರು ಹಿಂದೆ ಸರಿಯುವುದಿಲ್ಲ ಎಂದು ಹೇಳಿದ ಸೌರವ್ ದಾಸ್, ಬಿಜೆಪಿಯ ವಿರೋಧವು ಅವರ “ಶಾಶ್ವತ ಅಧಿಕಾರದ ದಾಹ”ವನ್ನು ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದರು.

ಸೌರವ್ ದಾಸ್ ಅವರು ಮುಂದಿಟ್ಟಿರುವ ಬೇಡಿಕೆಗಳಲ್ಲಿ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆ ಮತ್ತು ಅವರ ವಿರುದ್ಧ ಕ್ರಮಿನಲ್ ಮೊಕದ್ದಮೆ ಹೂಡುವುದು; ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಸ್ಥಗಿತಗೊಳಿಸುವುದು, ಮುಂಬರುವ ಚುನಾವಣೆಗಳನ್ನು ನಿಲ್ಲಿಸುವುದು, ಜನವರಿ 2025ರ ಮತದಾರರ ಪಟ್ಟಿಯನ್ನು ಮರುಸ್ಥಾಪಿಸುವುದು ಮತ್ತು ಸ್ವತಂತ್ರ ತನಿಖೆಗೆ ಆದೇಶಿಸುವುದು; ಸ್ವತಂತ್ರ ಮತ್ತು ವಿಶ್ವಾಸಾರ್ಹ ಆಯ್ಕೆ ಪ್ರಕ್ರಿಯೆಯನ್ನು ಸ್ಥಾಪಿಸಲು ಚುನಾವಣಾ ಆಯೋಗದ ನೇಮಕಾತಿಗಳನ್ನು ನಿಯಂತ್ರಿಸುವ 2023ರ ಕಾನೂನನ್ನು ರದ್ದುಗೊಳಿಸುವುದು ಸೇರಿವೆ.

ವಿದ್ಯಾರ್ಥಿಗಳ ನೇತೃತ್ವದ ಚಳುವಳಿ ಹಾಗೂ ವಿರೋಧ ಪಕ್ಷಗಳ ಪ್ರತಿಭಟನೆಗಳ ನಡುವೆ ಯಾವುದೇ ಭಿನ್ನತೆಯಿಲ್ಲ ಎಂದು ಎಐಎಸ್‌ಎ ಅಧ್ಯಕ್ಷೆ ನೇಹಾ ಬೋರಾ ತಿಳಿಸಿದ್ದಾರೆ.

ಸಾಮಾನ್ಯ ಜನರು, ನಾಗರಿಕ ಸಮಾಜ, ವಿರೋಧ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಒಂದು ಕಡೆಯಿದ್ದರೆ, ಚುನಾವಣಾ ಆಯೋಗ ಹಾಗೂ ಬಿಜೆಪಿ ಮತ್ತೊಂದು ಕಡೆ ನಿಂತಿವೆ ಎಂದು ಅವರು ಹೇಳಿದರು.

“ಯಾವ ಭಿನ್ನತೆಯೂ ಇಲ್ಲ. ಭಾರತದ ಜನತೆಯಾದ ನಾವು ಒಂದು ಕಡೆಯಾದರೆ, ಬಿಜೆಪಿ ಮತ್ತೊಂದು ಕಡೆ. ನಾವು ಈ ಹೋರಾಟವನ್ನು ಒಗ್ಗಟ್ಟಾಗಿ ಮುನ್ನಡೆಸಿದರೆ, ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತೇವೆ” ಎಂದು ಬೋರಾ ತಿಳಿಸಿದರು.

ಯುವಜನರು ಮತ್ತೊಮ್ಮೆ ಬೀದಿಗಿಳಿಯಲಿದ್ದಾರೆ

“ಕಾಕ್ರೋಚ್ ಜನತಾ ಪಾರ್ಟಿ ಹಾಗೂ ಇಡೀ ದೇಶದ ಯುವಜನರು ಅಕ್ಟೋಬರ್ 10ರಂದು ಜಂತರ್ ಮಂತರ್ ತಲುಪಲಿದ್ದಾರೆ. ಹೀಗಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿ, ನಮಗೆ ಸಹಕರಿಸಿ ಮತ್ತು ಅದಕ್ಕೆ ತಕ್ಕಂತೆ ಸಂಚಾರ ವ್ಯವಸ್ಥೆಗಳನ್ನು ಯೋಜಿಸಿ” ಎಂದು ನೋಟೀಸ್‌ನಲ್ಲಿ ತಿಳಿಸಿರುವುದಾಗಿ ಸೌರವ್ ದಾಸ್ ಹಂಚಿಕೊಂಡಿದ್ದಾರೆ.

ದೆಹಲಿ ಪೊಲೀಸರು ಪತ್ರದ ಸ್ವೀಕೃತಿ ಪ್ರತಿಯನ್ನು ಹೊಂದಿದ್ದಾರೆ ಎಂದು ಹೇಳಿದ ಅವರು, ಸಿಜೆಪಿ ತಮ್ಮ ಔಪಚಾರಿಕತೆಯನ್ನು ಮುಗಿಸಿದೆ ಎಂದು ತಿಳಿಸಿದರು. “ದೆಹಲಿ ಪೊಲೀಸರು ಸಹಕರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ದೇಶದ ಯುವಕರು ಒಂದು ದೊಡ್ಡ ಸಮಸ್ಯೆಯ ಬಗ್ಗೆ ಕಳವಳ ಹೊಂದಿದ್ದಾರೆ. ಇದು ಅವರ ಭವಿಷ್ಯ ಮತ್ತು ದೇಶದ ಮೇಲೆ ಪರಿಣಾಮ ಬೀರುವಂಥದ್ದು. ಮತಗಳು ಕಳುವಾಗುತ್ತಿದ್ದರೆ, ಚುನಾವಣೆಗಳಲ್ಲಿ ರಿಗ್ಗಿಂಗ್ ನಡೆಯುತ್ತಿದ್ದರೆ ಅಥವಾ ಭಾರತೀಯ ಚುನಾವಣಾ ಆಯೋಗವು ಜೆನ್-ಜಿ ಯುವಜನರನ್ನು ಮತದಾರರ ಪಟ್ಟಿಗೆ ಸೇರಿಸಲು ವಿಫಲವಾಗುತ್ತಿದ್ದರೆ, ಇವು ಅತ್ಯಂತ ನಿರ್ಣಾಯಕ ವಿಷಯಗಳಾಗಿವೆ” ಎಂದು ಅವರು ದೆಹಲಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

“ಯುವಜನರು ಬೀದಿಗಿಳಿಯುತ್ತಿದ್ದಾರೆ; ಈ ಬಾರಿ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಅವರು ಹಿಂದೆ ಸರಿಯುವುದಿಲ್ಲ. ಇದು ಕೇವಲ ಕಾಕ್ರೋಚ್ ಜನತಾ ಪಾರ್ಟಿಯ ಚಳುವಳಿಯಲ್ಲ; ಇದು ಜೆನ್ ಜಿ ಯುವಕರ ಪ್ರತಿಭಟನೆ” ಎಂದು ಸೌರವ್ ಹೇಳಿದರು.

ಅಕ್ಟೋಬರ್ 10ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿಯೊಂದಿಗೆ ಕೈಜೋಡಿಸುವಂತೆ ಅವರು ಯುವಕರಿಗೆ ಮನವಿ ಮಾಡಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುಳ್ಳು ಹೇಳಿ 1054 ಮುಸ್ಲಿಮರ ವೋಟ್ ಡಿಲೀಟ್‌ಗೆ ಯತ್ನಿಸಿದ ಶಾಸಕ ಯತ್ನಾಳ್ : ನಕಲಿ ದಾಖಲೆ ಸಲ್ಲಿಕೆ, ಅಧಿಕಾರಿಗಳೂ ಭಾಗಿಯಾಗಿರುವ ಆರೋಪ!

ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಕಲಿ ದಾಖಲೆ ಸೃಷ್ಟಿಸಿ 1054 ಮಂದಿ ಜೀವಂತವಿರುವ ಮುಸ್ಲಿಂ ಮತದಾರರ ಹೆಸರುಗಳನ್ನು 'ಮರಣ' ಹೊಂದಿದ್ದಾರೆ ಎಂದು ಸುಳ್ಳು...

ಗುಜರಾತ್: ವಿವಾಹೇತರ ಸಂಬಂಧ ಆರೋಪ: ‘ಶುದ್ಧೀಕರಣ’ದ ಹೆಸರಿನಲ್ಲಿ ಮಹಿಳೆ ಮೇಲೆ ಹಲ್ಲೆ, ಸಾಮೂಹಿಕ ಅತ್ಯಾಚಾರ; ಇಬ್ಬರು ಮಹಿಳೆಯರು ಸೇರಿ 9 ಜನರ ಬಂಧನ

ಅಹಮದಾಬಾದ್: ಗುಜರಾತ್‌ನಲ್ಲಿ ಮಹಿಳೆಯೊಬ್ಬರ ಮೇಲೆ ‘ಶುದ್ಧೀಕರಣ’ದ ಹೆಸರಿನಲ್ಲಿ ನಡೆದಿರುವ ಭೀಕರ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಹೊರಿಸಿ ಮಹಿಳೆಯನ್ನು ಅವಮಾನಿಸಿ, ಕಟ್ಟಿಹಾಕಿ ಲೈಂಗಿಕ ದೌರ್ಜನ್ಯಕ್ಕೆ...

ಚುನಾವಣಾ ಆಯುಕ್ತರ ಆಯ್ಕೆ ವಿವಾದ: ಪರಿಶೀಲಿಸುವುದಾಗಿ ತಿಳಿಸಿದ ಸಿಜೆಐ ಸೂರ್ಯಕಾಂತ್

ಮುಖ್ಯ ಚುನಾವಣಾ ಆಯುಕ್ತ (CEC) ಹಾಗೂ ಚುನಾವಣಾ ಆಯುಕ್ತರ (EC) ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಂದಿರುವ 2023ರ ವಿವಾದಾತ್ಮಕ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣವನ್ನು ವಿಸ್ತೃತ...

ಯುಪಿ ಎಸ್‌ಐಆರ್: 16.18 ಲಕ್ಷ ಹೊಸ ಮತದಾರರ ವಿವರಗಳು ನಿಗೂಢ

ಉತ್ತರ ಪ್ರದೇಶದ ಪರಿಷ್ಕೃತ ಮತದಾರರ ಪಟ್ಟಿಯ ಸ್ವತಂತ್ರ ವಿಶ್ಲೇಷಣೆಯಲ್ಲಿ ಮಹತ್ವದ ಪಾರದರ್ಶಕತೆ ಕೊರತೆ ಬೆಳಕಿಗೆ ಬಂದಿದೆ. ರಾಜ್ಯದ ಸಾರ್ವಜನಿಕ ಚುನಾವಣಾ ಪೋರ್ಟಲ್‌ನಲ್ಲಿ 16.18 ಲಕ್ಷ ಮತದಾರರ ಅರ್ಜಿ ವಿವರಗಳು ಲಭ್ಯವಿಲ್ಲ ಎಂದು 'ದಿ...

“ನೀವು ಜನರ ಜೀವನದ ಜೊತೆ ಆಟವಾಡುತ್ತಿದ್ದೀರಿ”: ಬಂಧಿತ ನಾಲ್ವರು ಬಂಗಾಳಿ ಮುಸ್ಲಿಮರ ವಿರುದ್ಧದ ಪೌರತ್ವ ಪ್ರಕ್ರಿಯೆಯನ್ನು ಪ್ರಶ್ನಿಸಿದ ಕಲ್ಕತ್ತಾ ಹೈಕೋರ್ಟ್

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ನಾಲ್ವರು ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿರುವುದರ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿಗಳು ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೇಲ್ಮನವಿ ನ್ಯಾಯಾಧೀಕರಣದ ಮುಂದೆ ಬಾಕಿ ಇರುವಾಗಲೇ, ಅವರ ಪೌರತ್ವವನ್ನು...

ಎಸ್‌ಐಆರ್ ವಿರುದ್ಧ ಇಂಡಿಯಾ ಒಕ್ಕೂಟ ಪ್ರತಿಭಟನೆ: ಆಕಾಶವಾಣಿ ಭವನ ಪ್ರವೇಶಿಸಿದ ಆರೋಪದಲ್ಲಿ ಪ್ರಿಯಾಂಕ- ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್

ನವದೆಹಲಿ: ಚುನಾವಣಾ ಆಯೋಗದ ಎಸ್‌ಐಆರ್‌ (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆ ಮತ್ತು ಮತದಾರರ ಹಕ್ಕುಗಳ ಕುರಿತಾಗಿ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ನಡೆಸುತ್ತಿರುವ...

SIR ನಿಂದ ಬಾಧಿತರಾದ 13.3 ಕೋಟಿ ಮತದಾರರ ಮರುನೋಂದಣಿಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ಪಡೆ

ರಾಜ್ಯ ಮತ್ತು ದೇಶಾದ್ಯಂತ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ಲಕ್ಷಾಂತರ ಶೋಷಿತ ಹಾಗೂ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಾನೂನುಬಾಹಿರವಾಗಿ ಕೈಬಿಡಲಾಗಿದೆ ಎಂಬ ಗಂಭೀರ ಆರೋಪಗಳ ನಡುವೆಯೇ, ಕಾಂಗ್ರೆಸ್...

ಉತ್ತರ ಪ್ರದೇಶ: ಅತ್ಯಾಚಾರ ಪ್ರಕರಣ ದಾಖಲಿಸಿದ ಕೆಲವೇ ದಿನಗಳಲ್ಲಿ ದಲಿತ ಮಹಿಳೆ – ಆಕೆಯ ಪತಿ ಮೇಲೆ ಹಲ್ಲೆ

ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ದಲಿತ ಮಹಿಳೆ ಮತ್ತು ಆಕೆಯ ಪತಿ ಮೇಲೆ ದುಷ್ಕರ್ಮಿಗಳು ಲಾಠಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ಸ್ಥಳೀಯ ವ್ಯಕ್ತಿಯೊಬ್ಬರ ವಿರುದ್ಧ ಅತ್ಯಾಚಾರ ಪ್ರಕರಣ...

ಗ್ಯಾನೇಶ್ ಕುಮಾರ್‌ಗೆ ಸಂಕಷ್ಟ ತಂದಿಟ್ಟ 2006ರ ಲಂಚದ ಕೇಸ್: ಏನಿದು ಪ್ರಕರಣ?

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಲ್ಲಿ ಬೃಹತ್ ಅಕ್ರಮ ಎಸಗಲಾಗುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೇಸ್ ನಾಯಕರು ದೆಹಲಿಯಲ್ಲಿ ಬೀದಿಗಿಳಿದು ಪ್ರತಿಭಟಿಸಿ,...

ಫ್ರೀಡಂ ಪಾರ್ಕ್‌ಗೆ ಬರುತ್ತಿದೆ ಸಿಜೆಪಿ ದಂಡು; ಜನತಾ ನ್ಯಾಯಾಲಯದ ಮುಂದೆ ಎಸ್‌ಐಆರ್ ಅನ್ಯಾಯಗಳ ಅನಾವರಣ

ಇದೇ ತಿಂಗಳ 8 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವ 'ಜನತಾ ನ್ಯಾಯಾಲಯ' ವಿನೂತನ ಹೋರಾಟಕ್ಕೆ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಯ ದಂಡು ಬರುತ್ತಿದೆ. ರಾಜ್ಯದಲ್ಲಿ ಎಸ್‌ಐಆರ್‌ನಿಂದ ಆಗಿರುವ ಅನ್ಯಾಯಗಳ ಈ...