Homeಚಳವಳಿಪ್ರಜಾಪ್ರಭುತ್ವ v/s ಜಾತಿಪ್ರಭುತ್ವ Democracy v/s Castocracy : ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಪ್ರಜಾಪ್ರಭುತ್ವ v/s ಜಾತಿಪ್ರಭುತ್ವ Democracy v/s Castocracy : ಡಾ. ಮೂಡ್ನಾಕೂಡು ಚಿನ್ನಸ್ವಾಮಿ

- Advertisement -
- Advertisement -

ರಂಗಾಯಣಕ್ಕಾಗಿ ಬಹುರೂಪಿ ಎಂಬ ನಾಟಕವನ್ನು ಬರೆದು ನಿರ್ದೇಶಿಸಿದ ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು ಚಿನ್ನಸ್ವಾಮಿಯವರು ನಿಜಕ್ಕೂ ಬಹುರೂಪಿಯೇ. ಕವಿ, ನಾಟಕಕಾರ, ನಟ, ರಂಗನಿರ್ದೇಶಕ, ಚಿಂತಕ ಹೀಗೆ ಬಹುಆಯಾಮವುಳ್ಳ ಲೇಖಕರಾದ ಅವರು ಕೆಎಸ್‍ಆರ್‌ಟಿಸಿಯಲ್ಲಿ ಆರ್ಥಿಕ ಸಲಹೆಗಾರರಾಗಿ ಗೊತ್ತಿದ್ದರೆ, ಸಾಹಿತ್ಯದ ಓದುಗರಲ್ಲದ ಲಕ್ಷಾಂತರ ಜನರಿಗೆ ‘ನಾನೊಂದು ಮರವಾಗಿದ್ದರೆ’ ಹಾಡಿನ ಕರ್ತೃವಾಗಿ ಗೊತ್ತು. ಭಾರತದ ಐದು ಭಾಷೆಗಳಲ್ಲದೇ ಹೀಬ್ರೂ, ಸ್ಪ್ಯಾನಿಷ್, ಇಂಗ್ಲಿಷ್ ಭಾಷೆಗಳಿಗೂ ಅವರ ಕೃತಿಗಳು ಅನುವಾದವಾಗಿದ್ದು, ವಿವಿಧ ಪ್ರಕಾರಗಳ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರು.

ಭಾರತದ ಪ್ರಜಾಪ್ರಭುತ್ವವು ಜಾತಿಯ ಕಿಲುಬು ಹಿಡಿದ ಒಂದು ಪಾತ್ರೆ. ಅಲ್ಲಿಗೆ ಪಾಯಸ ಹಾಕಿದರೂ ಅಷ್ಟೆ, ನೀರು ಹಾಕಿದರೂ ಅಷ್ಟೆ; ವಿಷವಾಗಿ ಪರಿವರ್ತನೆಯಾಗುತ್ತದೆ. ಪ್ರಜಾಪ್ರಭುತ್ವದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಕಿಲುಬು ಹಿಡಿದ ಪಾತ್ರೆಗಳೇ ಆಗಿವೆ. ನಾಲ್ಕನೆಯ ಅಂಗವೆಂದು ನಂಬಿಕೊಂಡು ಬಂದಿರುವ ಮಾಧ್ಯಮ ಕ್ಷೇತ್ರವು ಹೆಚ್ಚು ಕಲುಷಿತವಾಗಿರುವುದು ತಿಳಿದಿರುವ ಸಂಗತಿ. ಆತ್ಮಪ್ರತ್ಯಯವುಳ್ಳ ಹಿಂದೂ ಒಬ್ಬ ನಾನು ಜಾತ್ಯತೀತ ಎಂದು ಕರೆದುಕೊಳ್ಳಲು ಸಾಧ್ಯವಿಲ್ಲ. ಜಾತಿ ಭ್ರಷ್ಟಾಚಾರ, ಸ್ವಜನಪಕ್ಷಪಾತವಷ್ಟೇ ಅಲ್ಲ, ಎಲ್ಲ ಅನೈತಿಕತೆಯ ಗಂಗೋತ್ರಿ. ಜಾತಿ ಎಂಬುದು ವಿಷ, ಜಾತಿ ಎಂಬುದು ವಿನಾಶಕಾರಿ ಎಂದು ಹೇಳುತ್ತೇವೆ. ಆದರೆ ನಮ್ಮ ಶ್ರಮವೆಲ್ಲವೂ ಜಾತಿಯನ್ನು ಉಳಿಸಿಕೊಳ್ಳುವುದರಲ್ಲೇ ವ್ಯಯವಾಗುತ್ತಿದೆ. ಈ ದೇಶದ ಎಲ್ಲ ರೋಗಗಳ, ಅನಿಷ್ಟಗಳ ಮೂಲ ಜಾತಿ ಎಂಬುದು ಇನ್ನೂ ನಮ್ಮ ಅರಿವಿಗೆ ಬಂದಿಲ್ಲ. ನಮ್ಮ ದೇಶದ ಆರ್ಥಿಕತೆ ಪ್ರಪಂಚದ ಆರ್ಥಿಕತೆಯಲ್ಲಿ ಐದನೆಯದೋ, ಆರನೆಯದೋ ಎಂದು ಹೇಳಿಕೊಳ್ಳಲು ನನಗೆ ನಾಚಿಕೆಯೆನಿಸುತ್ತದೆ. ಯಾಕೆಂದರೆ ಅದರ ಎಂಬತ್ತು ಭಾಗ ಶೇ.ಒಂದರಷ್ಟು ಮೇಲ್ಜಾತಿ ಜನರ ಬಳಿ ಅಥವಾ 56 ಕುಟುಂಬಗಳ ಒಳಗೆ ಅಡಕವಾಗಿದ್ದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ. ಆದ್ದರಿಂದ ಈ ದೇಶದಲ್ಲಿ ಒಬ್ಬ ಒಳ್ಳೆಯ ಆಡಳಿತಗಾರ ಅಡ್ರೆಸ್ ಮಾಡಬೇಕಾಗಿರುವುದು ಜಾತಿಯನ್ನು, ಅಸಮಾನತೆಯನ್ನು. ಜಾತಿಯ ಕಾರಣದಿಂದಾಗಿ ಈ ದೇಶದ ಪ್ರತಿಭೆಯ ವ್ಯಾಪ್ತಿಯು ಕುಗ್ಗಿಹೋಗಿದೆ, ಅವಕಾಶಗಳ ವ್ಯೋಮವು ಕಿರಿದಾಗಿದೆ ಎಂಬುದು ಎಲ್ಲಿಯವರೆಗೆ ನಮ್ಮ ತಿಳಿವಳಿಕೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ದೇಶದ ಸರ್ವಾಂಗೀಣ ಏಳಿಗೆ ಎಂಬುದಿಲ್ಲ.

ಸಂವಿಧಾನವನ್ನು ಅಂಬೇಡ್ಕರ್ ರಚಿಸಿಟ್ಟು ಹೋದರು. ಆದರೆ ಜಾತಿವಾದಿಗಳ ಕೈಯಲ್ಲಿ ಸಿಕ್ಕಿ ಅದರ ಆಶಯಗಳು ನಗಣ್ಯವಾಗಿವೆ. ಜಾತಿವಾದವೇ ಹೂರಣವಾಗಿ ಸಂವಿಧಾನ ಅದರ ಕವಚವಾಗಿದೆ. ಇಂಡಿಯಾದ ಹಿಂದೂ ಜಾತಿಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಬಹುದು.
1. ಅಲ್ಪಸಂಖ್ಯಾತ ಬ್ರಾಹ್ಮಣೀಯ ಜಾತಿಗಳು
2. ಬಲಾಢ್ಯ ಊಳಿಗಮಾನ್ಯ ಜಾತಿಗಳು
3. ಬಹುಜನ ಹಿಂದುಳಿದ ಜಾತಿಗಳು ಮತ್ತು
4. ಬಹುಜನ ದಲಿತ ಜಾತಿಗಳು.

ಜಾತಿ ಪ್ರಗತಿ ವಿರೋಧಿ, ವಿನಾಶಕಾರಕ ಎಂದು ಒಬ್ಬ ಬ್ರಾಹ್ಮಣೀಯ ಮೇಲ್ಜಾತೀ ರಾಜಕಾರಣಿಗೆ ತಿಳಿಯುವುದಿಲ್ಲವೆಂದಲ್ಲ. ಅವನು ಜಾತಿವಿನಾಶದತ್ತ ಕಾರ್ಯೋನ್ಮುಖನಾದರೆ ತನ್ನ ಬುಡಕ್ಕೇ ಕೊಡಲಿ ಬೀಳುತ್ತದೆ ಎಂದು ಅವನಿಗೆ ತಿಳಿದಿದೆ. ಜಾತಿ ಪೋಷಣೆಯೇ ತನ್ನ ಅಸ್ತಿತ್ವಕ್ಕೆ ಆಧಾರ ಎಂದು ತಿಳಿದಿರುವುದರಿಂದಲೇ ಜಾತಿ ವಿಷಯ ಬಂದಾಗ ಅವನು ಜಾಣಗುರುಡು ಪ್ರದರ್ಶಿಸುತ್ತಾನೆ. ಬಲಾಢ್ಯ ಊಳಿಗಮಾನ್ಯ ಜಾತಿಗಳ ಪ್ರತಿನಿಧಿಗಳು ಆರಿಸಿ ಬರಲು ತಮ್ಮ ಜಾತಿಗಳನ್ನೆ ನೆಚ್ಚಿಕೊಂಡಿರುವುದರಿಂದ ಜಾತಿವಿನಾಶ ಅವರಿಗೆ ಬೇಕಾಗಿರುವುದಿಲ್ಲ. ಮೆದುಳನ್ನೇ ಬಂಡವಾಳ ಮಾಡಿಕೊಂಡಿರುವ ಬ್ರಾಹ್ಮಣೀಯ ಜಾತಿಜನ ಅಸಮಾನತೆ, ಭ್ರಷ್ಟಾಚಾರ ಎಲ್ಲ ಸಮಾಜಗಳಲ್ಲಿಯೂ ಇರುವಂಥದ್ದೆ ಎಂದೂ, ಜಾತಿಯಿಂದ ನಷ್ಟವೇನೂ ಇಲ್ಲ ಎಂದೂ ಪ್ರಚಾರ ಮಾಡಿಕೊಂಡು ಬರುತ್ತಿದ್ದಾರೆ. ಬಲಾಢ್ಯ ಊಳಿಗಮಾನ್ಯ ಜಾತಿಗಳು ತಮ್ಮ ಭುಜಬಲ ಮತ್ತು ಧನಬಲದಿಂದ ಬಹುಜನರನ್ನು ಹತ್ತಿಕ್ಕುತ್ತ ಜಾತಿವಾದವನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ವಾಸ್ತವವಾಗಿ ಇವೆರಡು ವರ್ಗಗಳು ಜಾತಿವ್ಯವಸ್ಥೆಯ ಪರಮ ಫಲಾನುಭವಿಗಳಾಗಿರುವುದರಿಂದ ಜಾತಿವಿನಾಶಕ್ಕೆ ಅವರು ವಿಮುಖರಾಗಿರುವುದು ಸಹಜವೇ ಆಗಿದೆ. ನಮ್ಮ ಜಾತಿಯ ವಕೀಲ, ನಮ್ಮ ಜಾತಿಯ ನ್ಯಾಯಾಧೀಶ, ನಮ್ಮವನೇ ಆದ ಮಹಾಲೇಖಪಾಲ ಮತ್ತು ನಮ್ಮ ಕೈಬೆರಳ ತುದಿಯಲ್ಲಿ ಆಡಿಸಬಹುದಾದ ಪೊಲೀಸ್ ಮುಖ್ಯಸ್ಥ ಇರುವವರೆಗೆ ಅವರಿಗೆ ಜಾತಿ ನಕಾರಾತ್ಮಕ ಎನಿಸುವುದಿಲ್ಲ. ಇನ್ನು, ಬಹುಜನ ಹಿಂದುಳಿದ ಜಾತಿಗಳು ಮತ್ತು ಬಹುಜನ ದಲಿತ ಜಾತಿಗಳು ಮಾತ್ರ ಜಾತಿವಿರೋಧಿ ಚಳವಳಿಗಳ ಭಾಗವಾಗಿದ್ದಾರೆ. ಇದು ಕಾಳ್ಗಿಚ್ಚಿನ ಎದುರು ಆಗಾಗ ಬಂದುಹೋಗುವ ತುಂತುರು ಮಳೆಯಷ್ಟೆ ಅಪ್ರಯೋಜಕವಾಗಿದೆ.

ನಮ್ಮನ್ನು ಆಳುವ ರಾಜಕಾರಣಿಗಳಿಗೆ ಆಳ್ವಿಕೆಯ ಮೂಲಪಾಠಗಳೇ ತಿಳಿದಿರುವುದಿಲ್ಲ. ಅನ್ನ, ಬಟ್ಟೆ, ವಸತಿ ಅಥವಾ ಆರೋಗ್ಯ, ವಿದ್ಯೆ, ವಿಮೆ ಇಂಥವು ಇವರ ಮೊದಲ ಆಯ್ಕೆಯಾಗಿರುವುದಿಲ್ಲ. ಪಂಚಾಯಿತಿ ಸದಸ್ಯರಿಂದ ಹಿಡಿದು ಸಂಸತ್ ಸದಸ್ಯರವರೆಗೆ ಅವರು ರಾಜಕಾರಣಕ್ಕೆ ಬರುವುದು ವಾಮಮಾರ್ಗದಲ್ಲಿ ಹಣ ಗಳಿಸಲು ಮತ್ತು ಅದನ್ನು ಬಳಸಿ ಮುಂದಿನ ಚುನಾವಣೆಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎಂಬುದು ಖಚಿತವಾಗಿದೆ. ನಮ್ಮ ಶಾಸಕರು, ಸಂಸದರು ತಮ್ಮ ಅನುದಾನವನ್ನು ಬಳಸುವ ಪರಿಯನ್ನು ನೋಡಿದರೆ ಇದು ತಿಳಿಯುತ್ತದೆ. ಅವರು ಶಾಲೆಗಳನ್ನು ಉತ್ತಮಪಡಿಸುವುದಕ್ಕಿಂತಲೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹೆಚ್ಚು ಖರ್ಚು ಮಾಡಿರುತ್ತಾರೆ! ರೈತರ ಹೊಲ, ಮನೆ ನೋಡುವುದಿಲ್ಲ, ಮಳೆಬೆಳೆ ವಿಚಾರಿಸುವುದಿಲ್ಲ. ತಮ್ಮ ಕ್ಷೇತ್ರದ ಯಾವುದೇ ಕುಟುಂಬದ ಮದುವೆ, ಮುಂಜಿ ಶುಭಕಾರ್ಯದಲ್ಲಿ ಅಥವಾ ಸಾವು ಸಂಭವಿಸಿದಲ್ಲಿ ಹಾಜರಿರುತ್ತಾರೆ. ಓಟು ಕೀಳುವುದಕ್ಕೆ ಭಾವನಾತ್ಮಕ ನಂಟು ಬೆಳೆಸಿಕೊಳ್ಳುವುದು (ಓಟುಗಳನ್ನು ಹಣ ಕೊಟ್ಟು ಖರೀದಿಸಬೇಕೆಂದು ತಿಳಿದೂ) ಅವರಿಗೆ ಅನಿವಾರ್ಯವಾಗಿರುತ್ತದೆ.

ಇನ್ನು ಮೇಲುಸ್ತರದ ರಾಜಕಾರಣಿಗಳು ಬೇರೊಂದು ರೀತಿಯಲ್ಲಿ ತಮ್ಮ ವ್ಯಾಪಾರದಲ್ಲಿ ತೊಡಗಿರುತ್ತಾರೆ. ಇವರು ಹೆಚ್ಚಾಗಿ ಸರ್ಕಾರದ ನೀತಿ ನಿರೂಪಕರು. ಅಪಾರ ಹಣ ಇವರ ಬೆನ್ನಿಗಿರುತ್ತದೆ. ಪಕ್ಷ ಕಟ್ಟುವುದೇ ಇವರ ಕೆಲಸ. ಸರ್ಕಾರದ ಕೆಲಸಕ್ಕಿಂತಲೂ ಅದು ಮುಖ್ಯ ಎಂದು ತಿಳಿದವರು, ಅದಕ್ಕಾಗಿ ಭ್ರಷ್ಟಾಚಾರ ಅನಿವಾರ್ಯ ಎಂದು ನಂಬಿರುವವರು ಇವರು. ಅದರ ಜೊತೆಗೇ ತಮ್ಮ ಜಾತಿಯನ್ನು, ಮಠಗಳನ್ನೂ ಬೆಳೆಸುತ್ತಾರೆ. ತಮ್ಮ ಓಟುಗಳನ್ನು ಖಚಿತಪಡಿಸಿಕೊಳ್ಳುತ್ತಾರೆ. ಎಪ್ಪತ್ತು ವರ್ಷಗಳು ಇಂಥ ರಾಜಕಾರಣಿಗಳಿಂದ ನಾವು ಆಳಿಸಿಕೊಂಡಿದ್ದೇವೆ.

ಈ ದೇಶದಲ್ಲಿ ರಾಜ್ಯಾಧಿಕಾರ ಎನ್ನುವುದು ಕೆಟ್ಟರಕ್ತವಾಗಿದೆ. ಆ ರಕ್ತದ ರುಚಿ ಮಾನ, ಪ್ರಾಣದ ರುಚಿಗಿಂತಲು ಮಿಗಿಲು. ಒಬ್ಬ ಹಿರಿಯ ಮಂತ್ರಿ ಭ್ರಷ್ಟಾಚಾರದ ಹಗರಣದಲ್ಲಿ ಜೈಲಿಗೆ ಹೋದವನು ಹಿಂದಿರುಗಿ ಬರುವಾಗ ತನ್ನ ಕೈ ಮೇಲೆತ್ತಿ ಎರಡು ಬೆರಳುಗಳನ್ನು ಆಡಿಸುತ್ತಾ ವಿಜಯಶಾಲಿಯಾದಂತೆ ಹೊರಬರುತ್ತಾನೆ. ಭ್ರಷ್ಟಾಚಾರ ಕಣ್ಣಿಗೆ ರಾಚುವಂತೆ ಕಾಣುತ್ತಿದ್ದರೂ ಅವನ ಜಾತಿಯ ಮಠಾಧೀಶರು ಬೆಂಬಲ ಸೂಚಿಸಲು ಬೀದಿಗಿಳಿಯುತ್ತಾರೆ. ಮತ್ತೊಬ್ಬ ಭ್ರಷ್ಟ ಮಂತ್ರಿ ಜೈಲು ಪಾಲಾದರು ಎಂದು ಅವನ ಜಾತಿಜನ ಮಂತ್ರಿ ಶಾಸಕರ ಮುಂದಾಳತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಭ್ರಷ್ಟರನ್ನು ಯಾಕೆ ಬೆಂಬಲಿಸುತ್ತೀರಿ ಎಂದು ಕೇಳಿನೋಡಿ. ಅವರ ಉತ್ತರ- ಬೇರೆ ಜಾತಿಯಲ್ಲಿ ಭ್ರಷ್ಟರಿಲ್ಲವೆ? ಎಂಬುದಾಗಿರುತ್ತದೆ. ಅವರ ನಾಯಕರು ಸಜ್ಜನರಲ್ಲವೆಂದು ಬೆಂಬಲಿಸುವ ಮಠಾಧೀಶರಿಗೂ, ರೈತರಿಗೂ, ಶ್ರಮಿಕರಿಗೂ, ಕೂಲಿಕಾರರಿಗೂ ಗೊತ್ತಿರುತ್ತದೆ. ಈ ನಾಯಕನಿಗೂ ತನ್ನ ಕುಕೃತ್ಯಗಳಿಂದಲೇ ಅವರನ್ನು ಸಂಪ್ರೀತಗೊಳಿಸಬೇಕೆಂದು ತಿಳಿದಿರುತ್ತದೆ. ಕೆಲವು ಅಪವಾದಗಳನ್ನು ಹೊರತುಪಡಿಸಿ ಈ ಮಾತುಗಳನ್ನು ಹೇಳುತ್ತಿದ್ದೇನೆ.

ಇತ್ತೀಚೆಗೆ ಮಥುರಾದಲ್ಲಿ ಭಾಷಣ ಮಾಡುವಾಗ ಮಾನ್ಯ ಪ್ರಧಾನ ಮಂತ್ರಿಗಳು “ಕೆಲವರಿಗೆ ಓಂ ಮತ್ತು ಗೋವು ಶಬ್ದಗಳು ಹಿಡಿಸುವುದಿಲ್ಲ” ಎಂದು ಹೇಳಿದ್ದಾರೆ. ಇದು ಯೋಚಿಸಬೇಕಾದ ವಿಷಯವೆ? ಸದಾ ಬಾಯಲ್ಲಿ ಅಭಿವೃದ್ಧಿ ಮಂತ್ರ ಪಠಿಸುವ ಇವರ ಪ್ರಥಮ ಕಾಳಜಿ ಏನು ಎಂಬುದನ್ನು ಹೊರಹಾಕಿದ್ದಾರೆ. ಒಂದು ವರ್ಗದ ಆದ್ಯತೆಗಳನ್ನೆ ಒತ್ತಿ ಹೇಳುವ ಇವರು ಕಿಂಚಿತ್ ಅಳುಕು ಇಲ್ಲದೆ ನಾನು ಜಾತ್ಯತೀತನಲ್ಲ ಎಂಬುದನ್ನು ಸಾರಿ ಹೇಳಿದ್ದಾರೆ. ಹಾಗೆ ಹೇಳುವುದರ ಮೂಲಕ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ. ಸಂವಿಧಾನವನ್ನು ರಕ್ಷಿಸಬೇಕಾದವರು ಭಕ್ಷಣೆಗೆ ಇಳಿದಿದ್ದಾರೆ ಎಂದು ನಿರ್ವಾಹವಿಲ್ಲದೆ ಹೇಳಬೇಕಾಗಿದೆ. ನಮ್ಮ ನಾಯಕ ಹೀಗೆ ಹೇಳುತ್ತಾರೆಂದು ಅರಿತ ಅವರ ಹಿಂಬಾಲಕರು ಅನ್ಯಧರ್ಮೀಯರನ್ನು ಹೊಡೆದು, ಬಡಿದು ‘ಜೈಶ್ರೀರಾಮ್’ ಎಂದು ಹೇಳಿಸುತ್ತಾರೆ. ಮನುಷ್ಯನನ್ನು ಕೊಂದು (ಲಿಂಚಿಸಿ) ಗೋವನ್ನು ರಕ್ಷಿಸುತ್ತಾರೆ. ಇಂತಹ ದೌರ್ಜನ್ಯಗಳ ವಿರುದ್ಧ ದನಿ ಎತ್ತಿದ ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅಂಥವರನ್ನು ಬೇಟೆಯಾಡುತ್ತಾರೆ. ಆದ್ದರಿಂದ ಜಾತ್ಯತೀತವಾದಿ ಆಗಿರುವುದಕ್ಕಿಂತಲೂ ಸಂವಿಧಾನವಾದಿ ಆಗಿರುವುದು ಇಂದಿನ ತುರ್ತು ಎಂದು ಹೇಳಲೇಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...