Homeನಿಜವೋ ಸುಳ್ಳೋFact check: ಕೊರೊನಾದಿಂದಾದ ಹಾನಿ ಭರಿಸುವಂತೆ ಚೀನಾಕ್ಕೆ ಜರ್ಮನಿ ತಾಕೀತು?

Fact check: ಕೊರೊನಾದಿಂದಾದ ಹಾನಿ ಭರಿಸುವಂತೆ ಚೀನಾಕ್ಕೆ ಜರ್ಮನಿ ತಾಕೀತು?

- Advertisement -
- Advertisement -

ಲಂಡನ್ ಮೂಲದ ಎಕ್ಸ್‌ಪ್ರೆಸ್.ಕೊ.ಯುಕೆ ಎಂಬ ಪತ್ರಿಕೆ ಏಪ್ರಿಲ್ 20 ರಂದು ವಿವಾದಾತ್ಮಕ ಶೀರ್ಷಿಕೆಯೊಂದಿಗೆ ವರದಿಯೊಂದನ್ನು ಪ್ರಕಟಿಸಿತ್ತು. ಅದರಲ್ಲಿ ಕೊರೊನಾ ಹಾನಿಗೆ ಪರಿಹಾರವಾಗಿ ಚೀನಾ ದೇಶವು ಜರ್ಮನಿಗೆ 130 ಬಿಲಿಯನ್ ಪೌಂಡ್ ಬಿಲ್ ಅನ್ನು ಕಟ್ಟಬೇಕೆಂದು ಜರ್ಮನಿಯು ಬಿಲ್‌ ಕಳಿಸಿದೆ ಎಂದು ಬರೆಯಲಾಗಿತ್ತು.ಅದಲ್ಲದೆ ಇದರ ನಂತರ ಹಲವಾರು ಮಾಧ್ಯಮಗಳು ಇದೇ ರೀತಿಯ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಿದ್ದವು. ಇಂಡಿಯಾ ಟಿವಿ ನ್ಯೂಸ್, ದಿ ಔಟ್‌ಲುಕ್, ಒರಿಸ್ಸಾ ಪೋಸ್ಟ್, ಅಮರ್ ಉಜಲಾ, ಪಂಜಾಬ್ ಕೇಸರಿ ಮತ್ತು ದಿ ಎಕನಾಮಿಕ್ ಟೈಮ್ಸ್ ವರದಿಯನ್ನು ಪ್ರಕಟಿಸಿದ ಪ್ರಮುಖ ಪತ್ರಿಕೆಗಳಾಗಿವೆ. ಆದರೆ ದಿ ಔಟ್‌ಲುಕ್ ಮತ್ತು ದಿ ಎಕನಾಮಿಕ್ ಟೈಮ್ಸ್ ವರದಿಗಳು ಮಾತ್ರ ವರದಿ ಮೂಲವನ್ನು ಐಎಎನ್‌ಎಸ್ ಎಂದು ಉಲ್ಲೇಖಿಸಿದೆ.

ಬಲಪಂಥೀಯ ಪ್ರಚಾರ ವೆಬ್‌ಸೈಟ್ ಒಪಿ ಇಂಡಿಯಾಕ್ಕಾಗಿ ಬರೆಯುವ ಅಶುತೋಷ್ ಮುಗ್ಲಿಕರ್ (ಆರ್ಕೈವ್ ಲಿಂಕ್) ಮತ್ತು ಡೆಮಾಕ್ರಸಿ ನ್ಯೂಸ್ ಲೈವ್‌ನಲ್ಲಿ ಮುಖ್ಯ ಸಂಪಾದಕ ರೋಹಿತ್ ಗಾಂಧಿ (ಆರ್ಕೈವ್ ಲಿಂಕ್) ಅವರು ಏಪ್ರಿಲ್ 20 ರಂದು ದಿ ಎಕ್ಸ್‌ಪ್ರೆಸ್ ವರದಿಯಲ್ಲಿನ ಇದೇ ವಿಷಯವನ್ನು ಹಂಚಿಕೊಂಡಿದ್ದಾರೆ. ಮುಗ್ಲಿಕರ್ ಅವರ ಟ್ವೀಟ್ ಅನ್ನು ಇದುವರೆಗೆ 850 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ.ಫ್ಯಾಕ್ಟ್-ಚೆಕ್

ದಿ ಎಕ್ಸ್‌ಪ್ರೆಸ್‌ನ ಶೀರ್ಷಿಕೆಯೂ ಓದುಗರನ್ನು ತಪ್ಪುದಾರಿಗೆಳೆಯುವಂತಿದೆ. ಲೇಖನದ ಮೊದಲ ಸಾಲು ಹೀಗಿದೆ, “ಕೊರೊನಾ ಸಾಂಕ್ರಾಮಿಕದಿಂದಾಗಿ ಚೀನಾದ ವಿರುದ್ಧ ಜರ್ಮನಿ ಸಿಟ್ಟಿಗೆದ್ದಿದೆ. ಹಾನಿಯ ನಷ್ಟ ಪರಿಹಾರವಾಗಿ 130 ಬಿಲಿಯನ್ ಪೌಂಡ್ ಬಿಲ್ ಅನ್ನು ಕಟ್ಟಬೇಕೆಂದು ಜರ್ಮನಿಯು ಬಿಲ್‌ ಕಳಿಸಿದೆ ಎಂದು ಟ್ಯಾಬ್ಲಾಡ್‌ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಅಂತಹ ಬಿಲ್‌ ಅನ್ನು ಜರ್ಮನಿ ಕಳಿಸಿಲ್ಲ ಎಂದು ಕೊನೆಯಲ್ಲಿ ಬರೆದಿದೆ.

25 ಗಂಟೆಗಳ ನಂತರ ದಿ ಎಕ್ಸ್‌ಪ್ರೆಸ್ ತಪ್ಪಾದ ಶೀರ್ಷಿಕೆಯನ್ನು ಬದಲಾಯಿಸಿತು. ವೆಬ್‌ಸೈಟ್‌ನ ಪ್ರಕಾರ, ಈ ಲೇಖನವು ‘ವಿಶ್ವ’ ವಿಭಾಗದಲ್ಲಿ ಹೆಚ್ಚು ಓದಿದ ಲೇಖನವಾಗಿತ್ತು ಎಂಬುದನ್ನು ಗಮನಿಸಬೇಕು.

ಈ ವಿಷಯದ ಕುರಿತು ಫ್ಯಾಕ್‌ ಚೆಕೆ ನಡೆಸಿದಾಗ ಥಾಯ್ಬಾವೊ ಎಂಬ ವಿಯೆಟ್ನಾಮಿ ಬ್ಲಾಗ್ ಒಂದು ಲೇಖನವನ್ನು ಪ್ರಕಟಿಸಿರುವುದನ್ನು ಕಂಡುಬಂದಿದೆ. ಇದು ಚೀನಾಕ್ಕೆ ರಶೀತಿಯನ್ನು ಮಾಡಿರುವ ‘ಬಿಲ್ಡ್’ ಪತ್ರಿಕೆಯ ವರದಿಯ ಸ್ಕ್ರೀನ್‌ಶಾಟ್ (ಕೆಳಗೆ ಚಿತ್ರವಿದೆ) ಒಳಗೊಂಡಿತ್ತು. ಏಪ್ರಿಲ್ 15 ರಂದು ಬಿಲ್ಡ್ ಕೆಳಗಿನ ಸ್ಕ್ರೀನ್‌ಶಾಟ್‌ನಲ್ಲಿ ಕಂಡುಬರುವ ಅದೇ ಶೀರ್ಷಿಕೆಯೊಂದಿಗೆ ಒಂದು ಲೇಖನವನ್ನು ಪ್ರಕಟಿಸಿತ್ತು, ಅದರಲ್ಲಿ ‘ಚೀನಾ ಈಗಾಗಲೇ ನಮಗೆ ನೀಡಬೇಕಾಗಿರುವುದು’ ಎಂದು ಬರೆದಿತ್ತು.

ಏಪ್ರಿಲ್ 18 ರಂದು, ಜರ್ಮನಿ ಮೂಲದ ನ್ಯೂಸ್ ಚಾನೆಲ್ ಡಿಡಬ್ಲ್ಯೂ, ಬಿಲ್ಡ್ ವರದಿಯ ರಶೀತಿಯನ್ನು ಪ್ರದರ್ಶಿಸುವ ಯೂಟ್ಯೂಬ್ ವರದಿಯನ್ನು ಪ್ರಕಟಿಸಿತು. ವರದಿಯ ಪ್ರಕಾರ ಲೇಖನವನ್ನು ಏಪ್ರಿಲ್ 15 ರಂದು (ಬುಧವಾರ) ಪ್ರಕಟಿಸಲಾಗಿದೆ.

ರಶೀತಿಯಲ್ಲಿನ ಕೆಲವು ವಿಷಯಗಳನ್ನು ಡಿಡಬ್ಲ್ಯೂ ವರದಿ ಮಾಡಿದೆ – ಪ್ರವಾಸೋದ್ಯಮದಲ್ಲಿ 24 ಬಿಲಿಯನ್ ಪೌಂಡ್ ಆದಾಯ ನಷ್ಟ, ಚಲನಚಿತ್ರೋದ್ಯಮಕ್ಕೆ 27.2 ಬಿಲಿಯನ್ ಪೌಂಡ್ ಆದಾಯ ನಷ್ಟ, ಜರ್ಮನ್ ವಿಮಾನಯಾನ ಲುಫ್ಥಾನ್ಸ ಗಂಟೆಗೆ 1 ಮಿಲಿಯನ್ ಪೌಂಡ್ ನಷ್ಟ ಮತ್ತು ಸಣ್ಣ ಉದ್ಯಮಗಳಿಗೆ 50 ಬಿಲಿಯನ್ ಪೌಂಡ್ ನಷ್ಟ ಎಂದು ಸೂಚಿಸಿದೆ.

ಇದಲ್ಲದೆ, ಯುಕೆ ಮೂಲದ ಫ್ಯಾಕ್ಟ್-ಚೆಕಿಂಗ್ ವೆಬ್‌ಸೈಟ್ ಫುಲ್ ಫ್ಯಾಕ್ಟ್ ಏಪ್ರಿಲ್ 20 ರಂದು ಜರ್ಮನಿಯ ವಿದೇಶಾಂಗ ಸಚಿವ ಹೆಕೊ ಮಾಸ್ ಸಂದರ್ಶನದಲ್ಲಿ ಬಿಲ್ಡ್ ಚೀನಾದಿಂದ ಹಣಕ್ಕೆ ಬೇಡಿಕೆಯೂ ಭ್ರಮೆ ಎಂದಿದ್ದಾರೆ ಎಂದು ವರದಿ ಮಾಡಿದೆ.

ಏಪ್ರಿಲ್ 15 ರಂದು, ಬರ್ಲಿನ್‌ನ ಚೀನೀ ರಾಯಭಾರ ಕಚೇರಿಯು ಮಾಧ್ಯಮಗಳ ಆರೋಪಗಳಿಗೆ ಬಿಲ್ಡ್‌ನ ಸಂಪಾದಕ ಮುಖ್ಯಸ್ಥ ಜೂಲಿಯನ್ ರೀಚೆಲ್ಟ್‌ಗೆ ಬಹಿರಂಗ ಪತ್ರ ಬರೆದು ಪ್ರತಿಕ್ರಿಯಿಸಿತು. ಚೀನಾದ ರಾಯಭಾರ ಕಚೇರಿಯ ವಕ್ತಾರ ಟಾವೊ ಲಿಲಿ ಮಾತನಾಡಿ ಚೀನಾದ ನಾಯಕತ್ವವು ಪ್ರಮುಖ ಮಾಹಿತಿಯನ್ನು ವಾರಗಳವರೆಗೆ ಮುಚ್ಚಿಟ್ಟಿತ್ತು ಎಂಬ ಆರೋಪವನ್ನು ಅಲ್ಲಗೆಲೆದಿದ್ದಾರೆ.

ಚೀನಾ ಮಾಹಿತಿಯನ್ನು ಮರೆಮಾಡಲಿಲ್ಲ ಎಂದು ಪ್ರತಿಪಾದಿಸಲು ಲಿಲಿ ವಿಶ್ವ ಆರೋಗ್ಯ ಸಂಸ್ಥೆಯ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ, ಇದು ಕೊರೊನಾ ವೈರಸ್‌ಗೆ ಸಂಬಂಧಿಸಿದ ಪ್ರಮುಖ ಘಟನೆಗಳ ಸಮಯವನ್ನು ತೋರಿಸುತ್ತದೆ. ಈ ಬಗ್ಗೆ ಲಿಲಿ ಬಿಲ್ಡ್ ಪತ್ರಿಕೋದ್ಯಮದ ಬದ್ದತೆಯನ್ನು ಪ್ರಶ್ನಿಸಿ, ಅದು ರಾಷ್ಟ್ರೀಯತೆ, ಪೂರ್ವಾಗ್ರಹ ಮತ್ತು ಸೆನೋಫೋಬಿಯಾವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದ್ದರು.

ಎರಡು ದಿನಗಳ ನಂತರ ಬಿಲ್ಡ್ ಸಂಪಾದಕ ರೀಚೆಲ್ಟ್ ಅವರು ಲಿಲಿಯ ಬರೆದ ಬಹಿರಂಗ ಪತ್ರಕ್ಕೆ ಮೌಖಿಕವಾಗಿ 3 ನಿಮಿಷಗಳ ವೀಡಿಯೊದಲ್ಲಿ ಪ್ರತಿಕ್ರಿಯಿಸಿ, ವೀಡಿಯೊದಲ್ಲಿ, ಅವರು ಚೀನಾದ ಆಂತರಿಕ ನೀತಿಗಳಾದ ಕಣ್ಗಾವಲು ಮತ್ತು ಸೆನ್ಸಾರ್ಶಿಪ್ ಅನ್ನು ಪ್ರಶ್ನಿಸಿದ್ದಾರೆ. ಮುಖ್ಯವಾಗಿ “ನಿಮ್ಮ ನಿಯಮವನ್ನು ಟೀಕಿಸುವ ಪ್ರತಿಯೊಂದು ಪತ್ರಿಕೆ ಮತ್ತು ವೆಬ್‌ಸೈಟ್‌ಗಳನ್ನು ನೀವು ಮುಚ್ಚುತ್ತೀರಿ, ಆದರೆ ಬಾವಲಿ ಸೂಪ್ ಮಾರಾಟವಾಗುವ ಸ್ಟಾಲ್‌ಗಳನ್ನಲ್ಲ. ನಿಮ್ಮ ಜನರನ್ನು ನೀವು ಮೇಲ್ವಿಚಾರಣೆ ಮಾಡುತ್ತಿಲ್ಲ, ಆದರೆ ಅವರಿಗೆ ನೀವು ಅಪಾಯವನ್ನುಂಟುಮಾಡುತ್ತಿರುವಿರಿ ಜೊತೆಗೆ ಪ್ರಪಂಚದ ಉಳಿದ ಭಾಗಗಳಿಗೂ” ಎಂದಿದ್ದಾರೆ.

China‘s embassy in Berlin wrote me an open letter because they weren‘t too happy with our Corona coverage. I responded.

Posted by Julian Reichelt on Saturday, April 18, 2020

ಆದ್ದರಿಂದ, ಲಂಡನ್ ಮೂಲದ ದಿ ಎಕ್ಸ್‌ಪ್ರೆಸ್ ವರದಿಯ ನಂತರ ಹಲವಾರು ಭಾರತೀಯ ಮಾಧ್ಯಮಗಳು ಜನರನ್ನು ದಾರಿತಪ್ಪಿಸುವ ವರದಿಯನ್ನು ಮಾಡಿವೆ. ಇದು ಕೊರೊನಾದಿಂದಾಗಿ ಜರ್ಮನಿಯೂ ಚೀನಾದಿಂದ ಪರಿಹಾರವನ್ನು ಬಯಸುತ್ತಿದೆ ಎಂದು ಸೂಚಿಸುತ್ತದೆ. ಸತ್ಯವೇನೆಂದರೆ, ಜರ್ಮನ್ ಟ್ಯಾಬ್ಲಾಯ್ಡ್ ಪತ್ರಿಕೆ ಬಿಲ್ಡ್ ಒಂದು ತನ್ನ ಅಭಿಪ್ರಾಯದ ತುಣುಕನ್ನು ಪ್ರಕಟಿಸಿ, ಕೊರೊನಾ ವೈರಸ್‌ನಿಂದ ಉಂಟಾದ ಹಾನಿಗಳಿಗೆ ಚೀನಾವನ್ನು ಹೊಣೆಗಾರನ್ನಾಗಿಸುವ ಒಂದು ವಿಚಾರವನ್ನು ಒಳಗೊಂಡಿದೆ. ಅದು ಸುಳ್ಳಾಗಿದ್ದು ಅಂತಹ ಸಾಕ್ಷ್ಯಗಳು ಸಿಕ್ಕಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...