Homeಕರ್ನಾಟಕಆಪರೇಷನ್ ಕಮಲಕ್ಕೆ ಅವಕಾಶ ಕೊಡಬೇಡಿ, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿ: ರಾಜಕೀಯ ವಿಶ್ಲೇಷಕ ಸುಧೀಂದ್ರ ಕುಲಕರ್ಣಿ...

ಆಪರೇಷನ್ ಕಮಲಕ್ಕೆ ಅವಕಾಶ ಕೊಡಬೇಡಿ, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿ: ರಾಜಕೀಯ ವಿಶ್ಲೇಷಕ ಸುಧೀಂದ್ರ ಕುಲಕರ್ಣಿ ಕರೆ

- Advertisement -
- Advertisement -

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ‘ಆಪರೇಷನ್ ಕಮಲ’ ಮಾಡಲು ಅವಕಾಶ ಮಾಡಿಕೊಡದೇ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಬೇಕು ಎಂದು ರಾಜಕೀಯ ವಿಶ್ಲೇಷಕ ಸುಧೀಂದ್ರ ಕುಲಕರ್ಣಿ ಮನವಿ ಮಾಡಿದ್ದಾರೆ. ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸುಧೀಂದ್ರ ಕುಲಕರ್ಣಿ ಅವರು ಸಲಹೆಗಾರರಾಗಿದ್ದರು.

ವಿಜಯಪುರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ”ರಾಜ್ಯದ ಪ್ರಬುದ್ಧ ಮತದಾರರು ‘ಆಪರೇಷನ್ ಕಮಲ’ದ ಮೂಲಕ ಜನಾದೇಶ ಕದಿಯಲು ಬಿಜೆಪಿಗೆ ಅವಕಾಶ ನೀಡದೇ, ಕಾಂಗ್ರೆಸ್‌ಗೆ ಸ್ಪಷ್ಟ, ಪೂರ್ಣ ಬಹುಮತ ನೀಡಬೇಕು” ಎಂದು ಹೇಳಿದ್ದಾರೆ.

”ಆಪರೇಷನ್ ಕಮಲ ಎನ್ನುವುದು ಪ್ರಜಾತಂತ್ರ ವ್ಯವಸ್ಥಗೆ ಮಾಡುವ ಅಪಚಾರ. ಒಂದರ್ಥದಲ್ಲಿ ಪ್ರಜಾತಂತ್ರ ಹಾಗೂ ಜನಾದೇಶವನ್ನೇ ಅಪಹರಣ ಮಾಡುವ ಅಪಾಯಕಾರಿ ಬೆಳವಣಿಗೆ. ಇಂಥ ದುಸ್ಥಿತಿಗೆ ರಾಜ್ಯ ವಿಧಾನಸಬೆ ಚುನಾವಣೆ ಮೂಲಕವೇ ರಾಷ್ಟ್ರ ಮಟ್ಟದಲ್ಲಿ 2024 ರಲ್ಲಿ ಪ್ರಜಾಪ್ರಭುತ್ವ ರಕ್ಷಣೆಗೆ ನಾಂದಿ ಹಾಡಬೇಕು” ಎಂದು ಕೋರಿದರು.

”ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಮೌಲ್ಯ ಉಳಿಯಬೇಕು ಎಂದಾದರೆ ಬಿಜೆಪಿ ವಿರುದ್ಧ ಮತ ಚಲಾಯಿಸಿ” ಎಂದು ಅವರು ಮತದಾರರಿಗೆ ಕರೆ ನೀಡಿದರು.

”ಒಂದು ವೇಳೆ ಮೇ 13ರಂದು ತ್ರಿಶಂಕು ಸರ್ಕಾರ ಬಂದರೆ ರಾಜ್ಯಕ್ಕೆ ದೊಡ್ಡ ಅಪಾಯ ಎದುರಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ, ಸಿದ್ದರಾಮಯ್ಯ ಸಿಎಂ ಆಗಬೇಕು ಎಂದ ಮತದಾರ: ಎಬಿಪಿ ಸಿ–ವೋಟರ್ ಸಮೀಕ್ಷೆ

”ಶೇ.40 ಲಂಚದ ಆರೋಪಕ್ಕೆ ಪ್ರಧಾನಿ ಹಾಗೂ ಗೃಹ ಸಚಿವ ಅಮಿತ್ ಶಾ ಉತ್ತರ ನೀಡುತ್ತಿಲ್ಲ. ಬದಲಾಗಿ ಗೃಹ ಸಚಿವ ಅಮಿತ್ ಶಾ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದರೆ ದಂಗೆಗಳಾಗುತ್ತವೆ ಎಂದು ರಾಜ್ಯದ ಜನರಿಗೆ ಭಯ ಹಾಕುವ ಹಾಗೂ ರಾಜ್ಯದ ಮತದಾರರನ್ನು ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ” ಎಂದು ಟೀಕಾ ಪ್ರಹಾರ ನಡೆಸಿದರು.

”ಪ್ರಧಾನಿ ಮೋದಿ, ಗೃಹಸಚಿವ ಸೇರಿದಂತೆ ಎಲ್ಲ ಬಿಜೆಪಿ ನಾಯಕರು, ರಾಜ್ಯದ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರ ಬೇಕೇ ಬೇಕು ಎಂದು ಅಬ್ಬರದ ಪ್ರಚಾರ ನಡೆಸಿದ್ದಾರೆ. ಆದರೆ ಇದೀಗ ಕೇಂದ್ರ-ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವೇ ಇದ್ದರೂ ರಾಜ್ಯದಲ್ಲಿ ಬೆಲೆ ಏರಿಕೆ ಏಕೆ ನಿಯಂತ್ರಿಸಲಿಲ್ಲ, ಅಡುಗೆ ಅನಿಲ ದರ 1200 ರೂ. ಗಡಿ ದಾಡಲು ಬಿಟ್ಟಿದ್ದೇಕೆ. ನಾನು ಲಂಚ ತಿನ್ನುವುದಿಲ್ಲ, ಇತರರು ಲಂಚ ತಿನ್ನಲು ಬಿಡುವುದಿಲ್ಲವೆಂದು ದೇಶದ ಜನರಿಗೆ ಭರವಸೆ ನೀಡಿದ್ದ ಪ್ರಧಾನಿ ರಾಜ್ಯದಲ್ಲಿ ಭ್ರಷ್ಟಚಾರ ನಿಗ್ರಹಿಸಲು ಏಕೆ ಆಸಕ್ತಿ ತೋರಲಿಲ್ಲ ಎಂದು ಪ್ರಶ್ನಿಸಿದರು.

”ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದರೆ ದಂಗೆಯಾಗುತ್ತವೆ ಎನ್ನುವ ಗೃಹ ಸಚಿವ ಅಮಿತ್ ಶಾ, ಮಣಿಪುರ ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರ ಇದ್ದರೂ ಹಿಂಸಾಚಾರ ತಡೆಯಲು ಏಕೆ ಸಾಧ್ಯವಾಗಿಲ್ಲ. ಅಲ್ಲಿನ ಡಬಲ್ ಎಂಜಿನ್ ಸರ್ಕಾರ ಏನು ಮಾಡುತ್ತಿದೆ” ಎಂದು ಕುಟುಕಿದರು.

”ಡಬಲ್ ಎಂಜಿನ್ ಸರ್ಕಾರ ಎಂಬುದು ಪೊಳ್ಳು ಭರವಸೆ, ಡಬಲ್ ಎಂಜಿನ್ ಎಂಬುದು ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿಯಾಗಿದೆ. ನಮ್ಮ ದೇಶ ಹಲವು ಪಕ್ಷಗಳಿರುವ ದೇಶವಾಗಿದೆ” ಎಂದರು.

”ಬಿಜೆಪಿಗೆ ಡಬಲ್ ಎಂಜಿನ್ ಸರ್ಕಾರವಷ್ಟೇ ಬೇಕಿಲ್ಲ, ಮೋದಿ ಎಂಬ ಸಿಂಗಲ್ ಡ್ರೈವರ್ ಇರುವ ಡಬಲ್‌ ಎಂಜಿನ್‌ ಸರ್ಕಾರ ಬೇಕಾಗಿದೆ. ದೆಹಲಿಯಲ್ಲೂ ಮೋದಿಯೇ ಡ್ರೈವರ್‌, ಕರ್ನಾಟಕದಲ್ಲೂ ಮೋದಿಯವರೇ ಡ್ರೈವರ್‌ ಎಂಬುದು ಅವರ ಹುನ್ನಾರವಾಗಿದೆ” ಎಂದು ದೂರಿದರು.

”ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದು ಮೋದಿಯ ಪೊಳ್ಳು ಘೋಷಣೆ. ರಾಜ್ಯದ 224 ಕ್ಷೇತ್ರದಲ್ಲಿ ಒಬ್ಬ ಮುಸ್ಲಿಮರಿಗೂ ಟಿಕೆಟ್‌ ನೀಡಿಲ್ಲ. ಇದೇನಾ‌ ಸಬ್ ಕಾ ಸಾಥ್, ಸಬ್ ಕಾ ವಿಕಾಸ್?” ಎಂದು ಪ್ರಶ್ನೆ ಮಾಡಿದರು.

”ರಾಹುಲ್ ಗಾಂಧಿ ಒಳ್ಳೆಯ ಗುಣಗಳಿರುವ ನಾಯಕ, ಅವರು ದೇಶದ ನಾಯಕತ್ವ ವಹಿಸಿಕೊಳ್ಳಬೇಕಾದ ತಮ್ಮ ಸಾಮರ್ಥ್ಯವನ್ನು ಇನ್ನೂ ತೋರಿಸಬೇಕಾದ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...