Homeಮುಖಪುಟದಾಳಿಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ; ಬಿಜೆಪಿಯ ಪಾಳೆಗಾರಿಕೆಯನ್ನು ಕೊನೆಗಾಣಿಸುತ್ತೇವೆ: ಅಭಿಷೇಕ್ ಬ್ಯಾನರ್ಜಿ

ದಾಳಿಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ; ಬಿಜೆಪಿಯ ಪಾಳೆಗಾರಿಕೆಯನ್ನು ಕೊನೆಗಾಣಿಸುತ್ತೇವೆ: ಅಭಿಷೇಕ್ ಬ್ಯಾನರ್ಜಿ

- Advertisement -
- Advertisement -

ಪಶ್ಚಿಮ ಬಂಗಾಳಕ್ಕೆ ಕೇಂದ್ರದಿಂದ ಬರಬೇಕಾದ ಹಣಕಾಸಿನ ಬಾಕಿ ಬಿಡುಗಡೆಗಾಗಿ ಹೋರಾಟವನ್ನು ಮುಂದುವರಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿರುವ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, ‘ನಮ್ಮ ಹಣಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಕೇಂದ್ರೀಯ ಸಂಸ್ಥೆಗಳಿಂದ ಬೆದರಿಸುವುದರಿಂದ ಟಿಎಂಸಿಯನ್ನು ಹತ್ತಿಕ್ಕುವುದಕ್ಕೆ ಸಾಧ್ಯವಿಲ್ಲ’ ಎಂದಿದ್ದಾರೆ.

‘ಬಾಕಿ ತಡೆಹಿಡಿಯುವ ಕೇಂದ್ರದ ನಿರ್ಧಾರದ ವಿರುದ್ಧ ಪಕ್ಷವು ತನ್ನ ಅಭಿಯಾನವನ್ನು ಮುಂದುವರಿಸಲಿದೆ’ ಎಂದು ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬ್ಯಾನರ್ಜಿ ಹೇಳಿದ್ದಾರೆ.

ಬಿಜೆಪಿಯ ಪಾಳೆಗಾರಿಕೆ ಸಂಸ್ಕೃತಿಯನ್ನು ನಾವು ಕೊನೆಗಾಣಿಸುತ್ತೇವೆ. ಅವರು ಕೇಂದ್ರ ತಂಡಗಳನ್ನು ಕಳುಹಿಸುತ್ತಾರೆ ಮತ್ತು ದಾಳಿಗಳನ್ನು ನಡೆಸುತ್ತಾರೆ. ದಾಳಿಗಳ ಬಗ್ಗೆ ನಮಗೆ ಚಿಂತೆ ಇಲ್ಲ; ಆದರೆ ಅವರು ಜನರ ನ್ಯಾಯಯುತ ಹಣವನ್ನು ಬಿಡುಗಡೆ ಮಾಡಬೇಕಾಗಿದೆ. ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯನೂ ಆಗಿರುವ ಅಭಿಷೇಕ್, ವಿವಿಧ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಕೇಂದ್ರೀಯ ಏಜೆನ್ಸಿಗಳಿಂದ ಹಲವು ಬಾರಿ ಸಮನ್ಸ್ ಪಡೆದಿದ್ದಾರೆ. ಕೇಂದ್ರೀಯ ಸಂಸ್ಥೆಗಳು ಪ್ರತಿದಿನ 10ಕ್ಕೂ ಹೆಚ್ಚು ದಾಳಿ ನಡೆಸಬಹುದು, ಆದರೆ ಜನರ ಹಣವನ್ನು ಬಿಡುಗಡೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಈ ವಿಚಾರವಾಗಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪದೇ ಪದೇ ಟೀಕಿಸಿದ್ದಾರೆ. ಇದು ರಾಜ್ಯದ ಒಟ್ಟು ₹ 1.18 ಲಕ್ಷ ಕೋಟಿ ಬಾಕಿಯನ್ನು ತಡೆಹಿಡಿಯುವ ಮೂಲಕ ‘ಆರ್ಥಿಕ ದಿಗ್ಬಂಧನ’ ಜಾರಿಗೆ ತಂದಿದೆ ಎಂದು ಅವರು ಆರೋಪಿಸಿದ್ದಾರೆ.

‘ಮುಂಬರುವ ಚುನಾವಣೆಗಳು ಜನರ ಹಕ್ಕುಗಳನ್ನು ಆಧರಿಸಿವೆ, ಜನರು ತಮ್ಮ ಹಕ್ಕುಗಳ ಆಧಾರದ ಮೇಲೆ ಮತ ಚಲಾಯಿಸಿದರೆ, ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಅಧಿಕಾರ ಯಾವುದೇ ಪ್ರಧಾನಿ, ಮುಖ್ಯಮಂತ್ರಿ, ರಾಷ್ಟ್ರಪತಿ, ರಾಜ್ಯಪಾಲರು ಅಥವಾ ಮಂತ್ರಿಗಳಿಗೆ ಇಲ್ಲ. ಇದುವೆ ಪ್ರಜಾಪ್ರಭುತ್ವದ ಮೂಲತತ್ವ ಮತ್ತು ಪರಂಪರೆ’ ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದ ಎಂಜಿಎನ್‌ಆರ್‌ಇಜಿಎ ಕಾರ್ಯಕರ್ತರು ಮತ್ತು ಆವಾಸ್ ಯೋಜನೆ ಸ್ವೀಕರಿಸುವವರ ಮೇಲೆ ಪರಿಣಾಮ ಬೀರುವ ಕೇಂದ್ರದ ಬಾಕಿಗಳನ್ನು ಪಾವತಿಸಲು ಸಿಎಂ ಇತ್ತೀಚೆಗೆ ಘೋಷಿಸಿದ್ದರು.

‘ಫೆಬ್ರವರಿ 21 ರೊಳಗೆ 21 ಲಕ್ಷ ಎಂಜಿಎನ್‌ಆರ್‌ಇಜಿಎ ಕಾರ್ಮಿಕರಿಗೆ ಹಣವನ್ನು ಬಿಡುಗಡೆ ಮಾಡಲು ನಾನು ಹಿಂದೆ ಬದ್ಧನಾಗಿದ್ದೆ. ಆದರೆ ಇದು ಕೆಲವು ದಿನಗಳು ವಿಳಂಬವಾಗಲಿದೆ. ಪ್ರಸ್ತುತ ಕಾರ್ಮಿಕರ ಸಂಖ್ಯೆ 24.5 ಲಕ್ಷಕ್ಕೆ ಏರಿದೆ. ಆದ್ದರಿಂದ, ರಾಜ್ಯ ಆಡಳಿತವು ಮಾರ್ಚ್‌ನಿಂದ ಪಾವತಿಗಳನ್ನು ನೀಡಲು ಪ್ರಾರಂಭಿಸುತ್ತದೆ’ ಎಂದರು.

ಹೆಚ್ಚುವರಿಯಾಗಿ, ಏಪ್ರಿಲ್‌ನಲ್ಲಿ 11 ಲಕ್ಷ ಆವಾಸ್ ಯೋಜನೆ ಫಲಾನುಭವಿಗಳಿಗೆ ಹಣವನ್ನು ವಿತರಿಸಲು ಕೇಂದ್ರ ಸರ್ಕಾರ ವಿಫಲವಾದರೆ, ‘ರಾಜ್ಯವು ಮೇ 1 ರಿಂದ ಹಣವನ್ನು ವಿತರಿಸಲು ಪ್ರಾರಂಭಿಸುತ್ತದೆ’ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ; ಸಂಸ್ಥಾಪಕರಿಂದಲೆ ಪಕ್ಷ ಕಿತ್ತುಕೊಂಡ ರೀತಿ ತಪ್ಪು: ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...