Homeಅಂಕಣಗಳು370ನೇ ವಿಧಿ ರದ್ದು ಮಾಡುವುದರಿಂದ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ

370ನೇ ವಿಧಿ ರದ್ದು ಮಾಡುವುದರಿಂದ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ

- Advertisement -
- Advertisement -

| ಎಚ್.ಎಸ್. ದೊರೆಸ್ವಾಮಿ |

2019ರ ಆಗಸ್ಟ್ 5ರಂದು 50000 ಸೈನಿಕರನ್ನು ಹಠಾತ್ತನೆ ಕಾಶ್ಮೀರಕ್ಕೆ ಕಳಿಸಲಾಯಿತು. ಕಫ್ರ್ಯೂ ವಿಧಿಸಲಾಯಿತು. ಅಲ್ಲಿ ಏನು ನಡೆಯುತ್ತಿದೆ ಎಂಬ ಸುದ್ದಿ ಭಾರತದ ಇತರ ಭಾಗದ ಜನರಿಗೆ ಗೊತ್ತಾಗದಂತೆ ಅಲ್ಲಿಯ ಸುದ್ದಿ ಸಂಸ್ಥೆಗಳನ್ನು ಸ್ಥಗಿತಗೊಳಿಸಲಾಯಿತು. ಕಾಶ್ಮೀರದ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ ಮುಂತಾದವರನ್ನು ಗೃಹಬಂಧನದಲ್ಲಿ ಇಡಲಾಯಿತು. ಕಾಶ್ಮೀರದ ಭವಿಷ್ಯವನ್ನು ಇತರ ರಾಜ್ಯಗಳ ಬಿಜೆಪಿ ಲೋಕಸಭಾ ಸದಸ್ಯರು ನಿರ್ಧರಿಸಿಬಿಟ್ಟರು. ಆರ್ಟಿಕಲ್ 370ನ್ನು ಹಿಂಪಡೆಯಲಾಯಿತು. ಪಾರ್ಲಿಮೆಂಟಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರು, ಇನ್ನೂ ಖಚಿತವಾಗಿ ಹೇಳಬೇಕಾದರೆ ಮೋದಿ ಮತ್ತು ಅಮಿತ್ ಶಾರವರು ಕಾಶ್ಮೀರದ ಭವಿಷ್ಯವನ್ನು ನಿರ್ಧರಿಸಿಬಿಟ್ಟರು.

370ನೇ ವಿಧಿಯನ್ನು ತಿದ್ದುಪಡಿ ಮಾಡುವ ಮೊದಲು ಕಾಶ್ಮೀರ ಜನರ ಅಭಿಪ್ರಾಯ ಕೇಳಬೇಕಾಗಿತ್ತು. ಲೋಕಸಭೆಯ ವಿರೋಧ ಪಕ್ಷದವರ ಅಭಿಪ್ರಾಯ ಏನೆಂದು ತಿಳಿಯಬೇಕಿತ್ತು. ಕೇಂದ್ರ ಸರ್ಕಾರ ಈ ರೀತಿ ಹಠತ್ತಾಗಿ ಕಾಶ್ಮೀರದ ಮೇಲೆ ತಮ್ಮ ತೀರ್ಮಾನ ಹೇರುವ ಬದಲು ಮೇಲೆ ಹೇಳಿದ ಎಲ್ಲರ ಒಟ್ಟು ಅಭಿಪ್ರಾಯವನ್ನು ತಿಳಿಯುವ ಅವಶ್ಯಕತೆ ಇತ್ತು.

ಹಿಂದೆ ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಕೂಡಿಸಿ ವಿಶಾಲಾಂಧ್ರ ರಚಿಸಬೇಕೆಂದು ಸರ್ಕಾರ ತೀರ್ಮಾನಿಸಿತು. ಎಲ್ಲಾ ದೃಷ್ಟಿಯಿಂದಲೂ ಹಿಂದುಳಿದಿದ್ದ ತೆಲಂಗಾಣವನ್ನು ಬುದ್ಧಿವಂತರೂ, ಐಶ್ವರ್ಯವಂತರೂ, ಸಾಹಸಿ ಉದ್ಯಮಿಗಳೂ ಆದ ಆಂಧ್ರ ಪ್ರದೇಶದವರ ವಶಕ್ಕೆ ವಸಾಹತು ನೀಡಿದಂತೆ ನೀಡಬೇಕೆಂಬ ರೀತಿಯಲ್ಲಿ ಈ ಘೋಷಣೆ ಮಾಡಿತು. ಹಾಗೆಯೇ ತೆಲಂಗಾಣದವರಿಗೆ ತಮ್ಮ ನದಿಗಳ ಮೇಲಿನ ಹಕ್ಕುಗಳ ಬಗೆಗೂ ಮತ್ತು ನೀರಿನ ಭದ್ರತೆಯ ಬಗೆಗೂ ಕಾಳಜಿ ಇತ್ತು.

ಈ ಕಾರಣಗಳಿಗಾಗಿ ತೆಲಂಗಾಣವನ್ನು ಪ್ರತ್ಯೇಕ ರಾಜ್ಯವೆಂದು ಘೋಷಿಸಬೇಕೆಂದು ತೆಲಂಗಾಣದ ನಾಯಕರು ಅಭಿಪ್ರಾಯಪಟ್ಟರು. ಆದರೂ 1956ರಲ್ಲಿ ತೆಲಂಗಾಣ ಒಳಗೊಂಡ ಆಂಧ್ರಪ್ರದೇಶ ಅಸ್ತಿತ್ವಕ್ಕೆ ಬಂತು. ಈ ಮಧ್ಯೆ ತೆಲಂಗಾಣದ ಹಿಂದುಳಿದಿರುವಿಕೆಯನ್ನು ಸುಧಾರಿಸುವ ಆಶ್ವಾಸನೆಗಳು ಕೇಂದ್ರ ಸರ್ಕಾರದಿಂದ ಪ್ರಕಟವಾದವು. ಆ ಭರವಸೆಗಳು ಭರವಸೆಗಳಾಗಿಯೇ ಉಳಿದವು.

ಕಾಶ್ಮೀರದ 370ನೇ ವಿಧಿ ಹಾಗೂ ಆಂಧ್ರಪ್ರದೇಶದಲ್ಲಿ ತೆಲಂಗಾಣವನ್ನು ವಿಲೀನಗೊಳಿಸುವ ಮಸೂದೆಗಳನ್ನು ಪಾರ್ಲಿಮೆಂಟ್ ಅಧಿವೇಶನದ ಕೊನೆಯ ದಿನಗಳಲ್ಲಿ ಮಂಡಿಸಲಾಯಿತು. ಚರ್ಚೆಗೆ ಅವಕಾಶ ಮಾಡಿಕೊಡಲಿಲ್ಲ. ಜಂಟಿ ಸಮಿತಿಗೆ ಒಪ್ಪಿಸುವುದಕ್ಕೂ ಸರ್ಕಾರ ಒಪ್ಪಲಿಲ್ಲ. ರಾಜ್ಯ ಸರ್ಕಾರಗಳ ಹಾಗೂ ಶಾಸನಸಭೆಯ ಅಭಿಪ್ರಾಯ ತಿಳಿಯಲು ಅವಕಾಶ ಕಲ್ಪಿಸಲಿಲ್ಲ. ಅಂದಹಾಗೆ ಇದಕ್ಕೆ ಮೊದಲೇ ಕಾಶ್ಮೀರ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತವನ್ನು ಕಾಶ್ಮೀರದ ಮೇಲೆ ಹೇರಲಾಗಿತ್ತು.

ಜಮ್ಮು ಕಾಶ್ಮೀರಗಳ ಗಲಭೆಗಳು, ಭಯೋತ್ಪಾದಕ ಕೃತ್ಯಗಳು 370ನೇ ವಿಧಿಯನ್ನು ತೆಗೆದುಹಾಕುವುದರಿಂದ ಕೊನೆಗೊಳ್ಳುವುದು ಎಂದು ಗೃಹ ಸಚಿವರು ಹೇಳಿದ್ದಾರೆ. ಕಾಶ್ಮೀರದಲ್ಲಿ ಒಂದು ಸಶಕ್ತ ಸಮ್ಮಿಶ್ರ ಸರ್ಕಾರ ಇದ್ದರೆ ಮಾತ್ರ ಅಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುವುದು. ಅದಿಲ್ಲವಾದರೆ ಬೂದಿ ಮುಚ್ಚಿದ ಕೆಂಡದಂತಿರುವ ಈ ಪರಿಸ್ಥಿತಿ ಯಾವಾಗ ಬೇಕಾದರೂ ಹದಗೆಡಬಹುದು. ಅಲ್ಲಿಯ ಸರ್ಕಾರಕ್ಕೂ ಕೇಂದ್ರ ಸರ್ಕಾರಕ್ಕೂ ಒಂದು ಮಧುರ ಬಾಂಧವ್ಯ ಇದ್ದರೆ ಮಾತ್ರ ಶಾಶ್ವತ ಶಾಂತಿ ನೆಲೆಸೀತು. ಒಂದು ಬಹುಮುಖ್ಯ ವಿಚಾರವೆಂದರೆ ಮಿಲಿಟರಿಯ ಮೃಗೀಯ ಶಕ್ತಿ ಬಳಸಿಕೊಂಡು ಕಾಶ್ಮೀರದಲ್ಲಿ ಶಾಂತಿಸ್ಥಾಪನೆ ಮಾಡುವುದು ಆಗದ ಮಾತು.

ಶ್ರೀಲಂಕಾದಲ್ಲಿ ತಮಿಳರಿಗೆ ಸ್ವತಂತ್ರವಾಗಿ ಬದುಕಲು ಸಿಂಹಳೀಯರು ಅವಕಾಶ ಮಾಡಿಕೊಡಲು ನಿರಾಕರಿಸಿ ಅವರಿಗೆ ಕಿರುಕುಳ ಕೊಟ್ಟಿದ್ದರಿಂದ ಅಲ್ಲಿ ಎಲ್.ಟಿ.ಟಿ.ಈಗೂ ಸಿಂಹಳ ಸರ್ಕಾರಕ್ಕೂ ಯುದ್ಧವೇ ನಡೆದುಹೋಯಿತು ಎಂಬುದನ್ನು ನಾವು ಮರೆಯಬಾರದು. ಅಂತಹ ಯುದ್ಧದಲ್ಲಿ ಮನುಷ್ಯತ್ವವೇ ಕರಗಿಹೋಗುವ ಮಾರಣಹೋಮಗಳು ನಡೆದವು.

370ನೇ ವಿಧಿಯನ್ನು ಆಗ ರಾಷ್ಟ್ರಾಧ್ಯಕ್ಷರ ಆದೇಶದ ಮೇರೆಗೆ ಜಾರಿಗೆ ತರಲಾಗಿತ್ತು. ಈಗ ರಾಷ್ಟ್ರಾಧ್ಯಕ್ಷರ ಆದೇಶದಿಂದಲೇ ಕಿತ್ತು ಹಾಕುತ್ತೇವೆ ಆದ್ದರಿಂದ ಅದು ರಾಜ್ಯಾಂಗದ ಉಲ್ಲಂಘನೆಯಲ್ಲ ಎಂದು ಅಮಿತ್ ಶಾ ಅವರು ಹೇಳುತ್ತಾರೆ. ಇದು ಅಷ್ಟು ಸರಳ ಸಂಗತಿಯಾಗಿಲ್ಲ. ನಾವು ಪ್ರೀತಿಯಿಂದ ಒಲಿಸಿಕೊಳ್ಳಬೇಕಿದ್ದ, ಒಂದು ಭೂಭಾಗವು ನಮ್ಮೊಡನೆ ಸೇರಲು ಮಾಡಿಕೊಂಡಿದ್ದ ಕರಾರು ಅದು. ದೇಶ ರೂಪುಗೊಳ್ಳಬೇಕಾದ ಸಂದರ್ಭದಲ್ಲಿ ಮಾಡಿಕೊಳ್ಳಲಾಗಿದ್ದ ಅಂತಹ ರಾಜ್ಯಾಂಗ ಬದಲಾವಣೆಗಳನ್ನು ಹೀಗೆ ಅಧಿಕಾರಬಲದಿಂದ ಹಿಂತೆಗೆದುಕೊಳ್ಳುವ ಅಧಿಕಾರ ರಾಷ್ಟ್ರಾಧ್ಯಕ್ಷರಿಗೆ ಇದೆಯೇ ಎಂಬುದು ಚರ್ಚೆಗೆ ಬರುವ ಸಂಭವವಿದೆ. ಕಾಲ ನಿಂತ ನೀರಲ್ಲ. ಬದಲಾವಣೆಗಳು ಬೇಕಾಗಬಹುದು. ಅಂತಹ ಸಂದರ್ಭದಲ್ಲಿ ಮೆಜಾರಿಟಿ ಇದೆ, ಬದಲಿಸಿಕೊಳ್ಳುತ್ತೇವೆ ಎಂಬ ಧೋರಣೆಗಿಂತ, ಯಾರ ಮೇಲೆ ಇದರ ಹೆಚ್ಚಿನ ಪರಿಣಾಮ ಆಗುತ್ತದೋ, ಅವರ ಅಭಿಪ್ರಾಯವನ್ನು ಪರಿಗಣಿಸುವುದಕ್ಕೆ ಹೆಚ್ಚಿನ ಮುತುವರ್ಜಿ ಇರಬೇಕು.

ಸ್ವಾತಂತ್ರ್ಯ ಬಂದಮೇಲೆ ಸಂಸ್ಥಾನಗಳ ರಾಜರುಗಳು, ಇಂಡಿಯನ್ ಯೂನಿಯನ್ ಜೊತೆಗೆ ಕೂಡಿಕೊಂಡಾಗ ಅವರಿಗೆ ರಾಜಧನ ನೀಡಬೇಕೆಂದು ಒಪ್ಪಂದ ಆಗಿತ್ತು. ಮುಂದೆ ರಾಜಧನ ಕೊಡುವುದಿಲ್ಲವೆಂದು ರಾಷ್ಟ್ರಾಧ್ಯಕ್ಷರು ತೀರ್ಮಾನ ತೆಗೆದುಕೊಂಡಾಗ ಮಾಜಿ ರಾಜರು ಸವ್ರ್ಚೊಚ್ಚ ನ್ಯಾಯಾಲಯದ ಮೆಟ್ಟಿಲು ಏರಿದರು. ಒಮ್ಮೆ ಕೊಡಲು ಒಪ್ಪಿಕೊಂಡಿರುವ ರಾಜಧನವನ್ನು ತಡೆಹಿಡಿಯುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು. ಅಂದಿನ ಕಾಶ್ಮೀರ ರಾಜರೊಡನೆ ಮಾಡಿಕೊಂಡಿರುವ ಒಪ್ಪಂದವನ್ನು ಕೇಂದ್ರ ಸರ್ಕಾರ ರದ್ದುಗೊಳಿಸುವುದು ಕಾನೂನಾತ್ಮಕವಾಗಿ ಮತ್ತು ನ್ಯಾಯಯುತವಾಗಿ ಸಾಧುವೇ? ಈ ಪ್ರಶ್ನೆಯನ್ನು ಈ ಸಂದರ್ಭದಲ್ಲಿ ಎತ್ತಲು ಸಾಧ್ಯವೇ ಎಂಬುದನ್ನು ಕಾನೂನುಪಂಡಿತರು ಜನರಿಗೆ ತಿಳಿಸಿ ಹೇಳಬೇಕು.

ಈ ದೇಶದ ಆಡಳಿತದ ಹೊಣೆಗಾರಿಕೆ ಪ್ರಜೆಯದು. ರಾಷ್ಟ್ರಾಧ್ಯಕ್ಷರಾಗಲಿ, ಸರ್ಕಾರವೇ ಆಗಲಿ ತಮ್ಮ ಸಾರ್ವಭೌಮತ್ವವನ್ನು ಪ್ರಜೆಗಳ ಮೇಲೆ ಕಾನೂನುಬಾಹಿರವಾಗಿ ಹೇರುವುದು ಸರಿಯಿಲ್ಲ. ಆರ್ಥಿಕ ಸಂಯೋಜನೆ ಮತ್ತು ಅಭಿವೃದ್ಧಿ ಮಂತ್ರ ಮಾತ್ರ ಸಂಯೋಜನೆಗೆ ಮಾರ್ಗಸೂಚಿ ಅಲ್ಲ. ಜಮ್ಮು ಕಾಶ್ಮೀರದ ಜನತೆಯ ಅನುಮತಿ ಮತ್ತು ಸಹಕಾರವಿಲ್ಲದೆ ಇದ್ದರೆ ಆ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗಲಿ, 370ರ ವಿಧಿಯನ್ನು ರದ್ದು ಮಾಡುವುದಾಗಲೀ ಸುಸೂತ್ರವಾಗಿ ನಡೆಯಲಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...