Homeಅಂತರಾಷ್ಟ್ರೀಯದುಬೈ: ಮಾಜಿ ಪತ್ನಿಗೆ 5,509 ಕೋಟಿ ರೂ. ವಿಚ್ಛೇದನ ಪರಿಹಾರ ನೀಡುವಂತೆ ಪ್ರಧಾನಿಗೆ ಕೋರ್ಟ್‌ ಆದೇಶ!

ದುಬೈ: ಮಾಜಿ ಪತ್ನಿಗೆ 5,509 ಕೋಟಿ ರೂ. ವಿಚ್ಛೇದನ ಪರಿಹಾರ ನೀಡುವಂತೆ ಪ್ರಧಾನಿಗೆ ಕೋರ್ಟ್‌ ಆದೇಶ!

- Advertisement -
- Advertisement -

ಮಾಜಿ ಪತ್ನಿಗೆ ವಿಚ್ಚೇದನ ಪರಿಹಾರ ಮತ್ತು ಮಕ್ಕಳ ಭದ್ರತೆಗಾಗಿ ಅವರಿಗೆ 550 ಮಿಲಿಯನ್ ಪೌಂಡ್‌ಗಳ (5,509 ಕೋಟಿ ರೂ.) ಪರಿಹಾರ ನೀಡುವಂತೆ ಯುಎಇ (ಸಂಯ್ತುಕ ಅರಬ್ ಸಂಸ್ಥಾನ)ನ ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೌಮ್ ಅವರಿಗೆ ಲಂಡನ್‌ ಹೈಕೋರ್ಟ್‌ ಆದೇಶಿಸಿದೆ.

ಪ್ರಧಾನಿ ಮಕ್ತೌಮ್ ಅವರ ಮಾಜಿ ಪತ್ನಿಯಾದ ಯುಕೆ ಮೂಲದ ರಾಜಕುಮಾರಿ ಹಯಾ ಬಿಂತ್‌‌ ಅಲ್-ಹುಸೇನ್‌ ಅವರಿಗೆ ವಿಚ್ಚೇದನದ ಪರಿಹಾರವಾಗಿ 251.5 ಮಿಲಿಯನ್ ಪೌಂಡ್‌ಗಳು ಮತ್ತು ಅವರ ಮಕ್ಕಳಾದ ಮಕ್ಕಳಾದ ಜಲೀಲಾ ಮತ್ತು ಜಾಯೆದ್ ಅವರ ಭದ್ರತೆಗಾಗಿ ಹಾಗೂ ಅವರಿಗೆ ಅಗತ್ಯವಿರುವ ಐದು ಮನೆಗೆಲಸದವರನ್ನು ನೇಮಿಸಿಕೊಳ್ಳುವುಕ್ಕಾಗಿ 290 ಮಿಲಿಯನ್ ಪೌಂಡ್‌ಗಳನ್ನು ಪಾವತಿಸಬೇಕು ಎಂದು ಬ್ರಿಟನ್‌ ಕೋರ್ಟ್‌ ಆದೇಶ ನೀಡಿದೆ.

ಇದನ್ನೂ ಓದಿ:‘ಡೀಪ್ ಡೈವ್ ದುಬೈ’ – ವಿಶ್ವದ ಅತ್ಯಂತ ಆಳವಾದ ಈಜುಕೊಳದ ವಿಡಿಯೊಗೆ ಹರ್ಷಗೊಂಡ ನೆಟ್ಟಿಗರು!

ಮಕ್ಕಳು ಅಪ್ರಾಪ್ತರಾಗಿರುವ ಕಾರಣ, ಅವರು ಅರ್ಹ ವಯಸ್ಸಿಗೆ ತಲುಪಿದ ನಂತರ ಅವರಿಗೆ ಹಣವನ್ನು ಪಾವತಿಸಲಾಗುವುದು. ಆದಾಗ್ಯೂ, ಅವರು ತಮ್ಮ ತಂದೆಯೊಂದಿಗೆ ಮಾತುಕತೆ ನಡೆಸುತ್ತಾರೆಯೇ ಎಂಬ ಅಂಶಗಳ ಆಧಾರದ ಮೇಲೆ ಅವರ ಮಕ್ಕಳು ಪಡೆಯುವ ಅಂತಿಮ ಮೊತ್ತವನ್ನು ಬದಲಾಯಿಸಬಹುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.

ವಿಚ್ಚೇದನ ಪರಿಹಾರದ ಮೊತ್ತವು ಬ್ರಿಟಿಷ್ ಇತಿಹಾಸದಲ್ಲಿ ಅತ್ಯಂತ ದುಬಾರಿ ವಿಚ್ಛೇದನದ ಪರಿಹಾರವಾಗಿದೆ ಎಂದು ಹೇಳಲಾಗಿದೆ.

ನ್ಯಾಯಾಲಯದ ತೀರ್ಪಿನ ಪ್ರಕಾರ, ದುಬೈ ಪ್ರಧಾನಿ ಅವರು ತಮ್ಮ ಮಾಜಿ ಪತ್ನಿ ಹಯಾ ಮತ್ತು ಮಕ್ಕಳ ಭದ್ರತಾ ವೆಚ್ಚವಾಗಿ ವರ್ಷಕ್ಕೆ 11 ಮಿಲಿಯನ್ ಪೌಂಡ್‌ಗಳ ಪರಿಹಾರ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ:ನಿಷೇಧ ತೆರವು; ಶನಿವಾರದಿಂದ ದುಬೈಗೆ ಏರ್ ಇಂಡಿಯಾ ಸೇವೆ ಪ್ರಾರಂಭ

ವಿಶೇಷವೇನೆಂದರೆ, ರಾಜಕುಮಾರಿ ಹಯಾ ಅವರು ಜೋರ್ಡಾನ್‌‌ನ ದಿವಂಗತ ರಾಜ ಹುಸೇನ್ ಅವರ ಮಗಳು. ಹಯಾ 2004 ರಲ್ಲಿ ದುಬೈ ಪ್ರಧಾನಿಯಾಗಿರುವ ಮಕ್ತೌಮ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಮತ್ತು 2019 ರವರೆಗೆ ಒಟ್ಟಿಗೆ ವಾಸಿಸುತ್ತಿದ್ದರು. ಅದೇ ವರ್ಷ ಹಯಾ ಅವರು ಮಕ್ತೌಮ್ ಅವರನ್ನು ತೊರೆದು ಯುಕೆಗೆ ವಾಪಸ್ಸಾದರು.

ತರುವಾಯ, ಹಯಾ ಅವರು ತನ್ನ ಮತ್ತು ತನ್ನ ಇಬ್ಬರು ಮಕ್ಕಳ ಪಾಲನೆಗಾಗಿ ಪರಿಹಾರ ನೀಡುವಂತೆ ಮೊಕದ್ದಮೆ ಹೂಡಿದ್ದರು.

ಶೇಖ್ ಮೊಹಮ್ಮದ್ ತನ್ನ ಹೆಂಡತಿಯ ಮೇಲೆ ಕಣ್ಣಿಡಲು ಪೆಗಾಸಸ್ ಬಳಸಿದ್ದಾನೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ನಂತರ, ಹಯಾ ಮತ್ತು ಅವರ ವಕೀಲರ ಫೋನ್‌ ಅನ್ನು ದುಬೈ ಪ್ರಧಾನಿ ಹ್ಯಾಕ್‌ ಮಾಡಿದ್ದಾರೆ. ಅದಕ್ಕಾಗಿ, ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ನಿರ್ಮಿಸಿದ ಪೆಗಾಸಸ್ ಸ್ಪೈವೇರ್ ಬಳಸಿದ್ದಾರೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ ಎಂದು ನ್ಯಾಯಾಲಯ ತಿಳಿಸಿದೆ.

ಇದನ್ನೂ ಓದಿ:ದುಬೈನಿಂದ ಬಂದ ಮುಸ್ಲಿಂ ಹುಡುಗರು ಕೊರೊನಾ ಟೆಸ್ಟ್‌ ಮಾಡಿಸಿಲ್ಲ ಎಂದು ಸುಳ್ಳು ಹರಡಿದ ಪಬ್ಲಿಕ್‌ ಟಿವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...