Homeಮುಖಪುಟ’ಈ ಚುನಾವಣೆಯಲ್ಲಿ ನಾವು ಯಾರನ್ನೂ ಬೆಂಬಲಿಸುವುದಿಲ್ಲ’: ರಾಕೇಶ್ ಟಿಕಾಯತ್

’ಈ ಚುನಾವಣೆಯಲ್ಲಿ ನಾವು ಯಾರನ್ನೂ ಬೆಂಬಲಿಸುವುದಿಲ್ಲ’: ರಾಕೇಶ್ ಟಿಕಾಯತ್

- Advertisement -
- Advertisement -

’ನಾವು ಈ ಚುನಾವಣೆಯಲ್ಲಿ ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ’ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿಕೆ ನೀಡಿದ್ದು, ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆದ ಐತಿಹಾಸಿಕ ರೈತ ಹೋರಾಟ ಮುಂಬರುವ ಪಂಜಾಬ್ ಮತ್ತು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಮೇಲೆ ಬಾರಿ ಪ್ರಭಾವ ಬೀರಲಿದೆ. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳ ಬೆಂಬಲ ಕೂಡ ಯಾರಿಗೆ ಸಿಗಲಿದೆ ಎಂಭ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದವು. ಇದಕ್ಕೆ ರೈತ ನಾಯಕ ರಾಕೇಶ್ ಟಿಕಾಯತ್ ಸ್ಪಷ್ಟನೆ ನೀಡಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಪರೇಡ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ರೈತರ ಮೂರು ದಿನಗಳ ‘ಚಿಂತನ ಶಿಬಿರ’ದಲ್ಲಿ ಪಾಲ್ಗೊಳ್ಳಲು ಮಾಘಮೇಳಕ್ಕೆ ಆಗಮಿದ್ದ ಟಿಕಾಯತ್, “ಈ ಚುನಾವಣೆಯಲ್ಲಿ ನಾವು ಯಾರನ್ನೂ ಬೆಂಬಲಿಸುವುದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಕ್ಕಳ ಕಾಮಿಡಿ ಶೋನಲ್ಲಿ ಪ್ರಧಾನಿ ಅವಹೇಳನ ಆರೋಪ; I&Bಗೆ ದೂರು ನೀಡಿದ BJP

ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕದಳ-ಸಮಾಜವಾದಿ ಪಕ್ಷದ ಮೈತ್ರಿಗೆ ಬೆಂಬಲ ನೀಡುವಂತೆ ಬಿಕೆಯು ಅಧ್ಯಕ್ಷ ನರೇಶ್ ಟಿಕಾಯತ್ ಮನವಿ ಮಾಡಿದ ಬಳಿಕ ಈ ಹೇಳಿಕೆ ಬಂದಿದೆ. ಆದರೆ, ಸಿಸೌಲಿಯಲ್ಲಿ ಬಿಜೆಪಿಯ ಸಂಜೀವ್ ಬಲ್ಯಾನ್ ಅವರೊಂದಿಗೆ ಸಭೆ ನಡದ ಕೆಲವು ಗಂಟೆಗಳ ನಂತರ, ನರೇಶ್ ಟಿಕಾಯತ್ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡು, ನಾನು ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು.

“ರೈತರು ಮತ್ತು ಸಂಘಟನೆಗೆ ಸಂಬಂಧಿಸಿದ ವಿಷಯಗಳನ್ನು ಮೂರು ದಿನಗಳ ಚಿಂತನ ಮಂಥನದಲ್ಲಿ ಚರ್ಚಿಸಲಾಗಿದೆ” ಎಂದ ರಾಕೇಶ್ ಟಿಕಾಯತ್ ರೈತರ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ.

“ರಾಷ್ಟ್ರವ್ಯಾಪಿ ನಡೆದ ರೈತರ ಆಂದೋಲನದ ಸಂದರ್ಭದಲ್ಲಿ, ಸರ್ಕಾರವು ಸಮಿತಿ ರಚಿಸುವುದಾಗಿ ಭರವಸೆ ನೀಡಿತ್ತು, ಅದನ್ನು ಮಾಡಿಲ್ಲ. ಲಖಿಂಪುರ್‌ ಖೇರಿ ಘಟನೆಯಲ್ಲಿ ನಮ್ಮ ರೈತರನ್ನು ಜೈಲಿಗೆ ಕಳುಹಿಸಲಾಗಿತ್ತು. ಆದರೆ, ಗೃಹ ಸಚಿವ ಅಜಯ್ ಮಿಶ್ರಾ ತೆನಿ ಇನ್ನೂ ತಮ್ಮ ಹುದ್ದೆಯಲ್ಲಿದ್ದಾರೆ. ಧಾನ್ಯಗಳ ಸಂಗ್ರಹಣೆಯಲ್ಲಿ ಸಮಸ್ಯೆಗಳಿವೆ. ಈ ವಿಷಯಗಳ ಕುರಿತು ಚಿಂತನ ಮಂಥನದಲ್ಲಿ ಚರ್ಚಿಸಲಾಯಿತು” ಎಂದು ಟಿಕಾಯತ್ ಹೇಳಿದ್ದಾರೆ.


ಇದನ್ನೂ ಓದಿ: ಯುಪಿ: ಹಿಂದುತ್ವದ ಐಕಾನ್‌ ಆಗಿದ್ದ ಯೋಗಿ ತಮ್ಮ ಚರಿಷ್ಮಾ ಕಳೆದುಕೊಂಡಿದ್ದಾರಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...