Homeಮುಖಪುಟ'ಅಮ್ಫಾನ್' ಚಂಡಮಾರುತ ಸೂಪರ್ ಸೈಕ್ಲೋನ್ ಆಗಲಿದೆ: ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ

‘ಅಮ್ಫಾನ್’ ಚಂಡಮಾರುತ ಸೂಪರ್ ಸೈಕ್ಲೋನ್ ಆಗಲಿದೆ: ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ

- Advertisement -
- Advertisement -

ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ‘ಅಮ್ಫಾನ್’ ಚಂಡಮಾರುತವು ಇಂದು ತೀವ್ರತರವಾದ ಚಂಡಮಾರುತವಾಗಿ ಬದಲಾಗಿದ್ದು, ಒಡಿಶಾದ ಕರಾವಳಿಯಲ್ಲಿ ಹೆಚ್ಚಿನ ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಂಭವವಿದ್ದು 11 ಲಕ್ಷ ಜನರನ್ನು ಸ್ಥಳಾಂತರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

“ಬಂಗಾಳಕೊಲ್ಲಿಯಲ್ಲಿ ಸಂಭವಿಸಿರುವ ಅಮ್ಫಾನ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿ ತೀರವನ್ನು ಅಪ್ಪಳಿಸಲಿದೆ. ಮೇ 19 ಮತ್ತು 20ರಂದು ಅಮ್ಫಾನ್ ಚಂಡಮಾರುತ ತೀವ್ರಸ್ವರೂಪ ಪಡೆಯಲಿದ್ದು ಸೂಪರ್ ಚಂಡಮಾರುತವಾಗಿ ಪರಿಣಮಿಸಲಿದೆ” ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇಂದು ಮಧ್ಯಾಹ್ನ 2.30ಕ್ಕೆ ಭಾರತ ಉತ್ತರ ಮತ್ತು ಈಶಾನ್ಯ ಭಾಗದ ಕರಾವಳಿ ತೀರಕ್ಕೆ ಚಂಡಮಾರುತ ಅಪ್ಪಳಿಸಲಿದ್ದು ಸಾಕಷ್ಟ ಹಾನಿ ಉಂಟುಮಾಡಲಿದೆ. ಚಂಡಮಾರುತ ಪರಿಣಾಮದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸಂಜೆ 4 ಗಂಟೆಗೆ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.

ಪಶ್ಚಿಮಬಂಗಾಳದ ದಿಗಾ ಮತ್ತು ಹತಿಯಾ ಪ್ರದೇಶಗಳಿಗೆ ತೀವ್ರಸ್ವರೂಪದ ಚಂಡಮಾರುತ ಅಪ್ಪಳಿಸಲಿದೆ. ಇದು ಒಡಿಶಾದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಡಿಶಾದ ಜಗತ್ ಸಿಂಗ್ ಪುರ, ಕೇಂದ್ರಾಪರ, ಭದ್ರಕ್, ಬಾಲಸೋರ್ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಮಳೆ ಬೀಳಲಿದೆ. ಬಿರುಗಾಳಿಸಹಿತ ಭಾರೀ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕೆ ವಹಿಸಬೇಕೆಂದು ಸ್ಥಳೀಯ ಹವಾಮಾನ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಮೇ 21 ರಂದು ಒಡಿಶಾ, ಪಶ್ಚಿಮಬಂಗಾಳ, ಹಿಮಾಲಯ ಪರ್ವತದ ತಪ್ಪಲಿನಲ್ಲಿರುವ ಸಿಕ್ಕಿಂ, ಅಸ್ಸಾಂ, ಮತ್ತು ಮೇಘಾಲಯದಲ್ಲಿ ತೀವ್ರಸ್ವರೂಪದ ಬಿರುಗಾಳಿ ಸಹಿತ ಮಳೆಯಾಗಲಿದೆ. ಚಂಡಮಾರುತವೂ ಬೀಸಲಿದ್ದು ಹಾನಿ ತಡೆಗೆ ಕ್ರಮಗಳನ್ನು ಕೈಗೊಳ್ಳಲು ಸಿದ್ದತೆ ನಡೆಸಲಾಗಿದೆ.

ಭಾರಿ ವೇಗದ ಗಾಳಿಯು ಮಣ್ಣಿನ ಮನೆಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡುತ್ತದೆ ಮತ್ತು ‘ಕಚ್ಚಾ’ ರಚನೆಗಳಿಗೆ ಭಾಗಶಃ ಹಾನಿಯನ್ನುಂಟುಮಾಡುತ್ತದೆ ಎಂದು ಅದು ಹೇಳಿದೆ.


ಓದಿ: ಕೊರೋನಾ ವೈರಾಣುವಿನಿಂದಾಗಿ ಹೆಚ್ಚು ನ್ಯಾಯಯುತ ಸಮಾಜ ಸಾಧ್ಯವಾಗಬಹುದೆ?!


ವಿಡಿಯೋ ನೋಡಿ: 20ಲಕ್ಷ ಕೋಟಿ ಸುಳ್ಳಿನ ಪ್ಯಾಕೇಜ್: ಎಂಎಸ್ಎಂಇಗಳಿಗೆ ಸಿಕ್ಕಿದ್ದೇನು?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...