HomeದಿಟನಾಗರFact Check: ಇನ್ನು ಮುಂದೆ ವಾರಕ್ಕೆ ಮೂರು ದಿನ ರಜೆ ಎನ್ನುವುದು ನಿಜಾನಾ?

Fact Check: ಇನ್ನು ಮುಂದೆ ವಾರಕ್ಕೆ ಮೂರು ದಿನ ರಜೆ ಎನ್ನುವುದು ನಿಜಾನಾ?

- Advertisement -
- Advertisement -

ಕೇಂದ್ರ ಬಿಜೆಪಿ ಸರ್ಕಾರದ 2024-25ನೇ ಸಾಲಿನ ಮಧ್ಯಂತರ ಬಜೆಟ್‌ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ.1,2024) ಮಂಡಿಸಿದ್ದಾರೆ.

ಬಜೆಟ್‌ ಮಂಡನೆಗೂ ಮುನ್ನ ಮತ್ತು ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ ಒಂದು ವೈರಲ್‌ ಆಗಿದೆ. ಆ ಪೋಸ್ಟರ್ ಪ್ರಕಾರ, ಇನ್ಮುಂದೆ ಕಚೇರಿ ಕೆಲಸ ಮಾಡುವ ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ರಜೆ ಸಿಗಲಿದೆ. ಇಂದು (ಫೆ.1,2024) ಮಂಡನೆಯಾಗುವ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಅಷ್ಟೇ ಅಲ್ಲದೆ, ಕಂಪನಿಗಳು ಉದ್ಯೋಗಿಗಳ ಕೆಲಸದ ಅವಧಿಯನ್ನು 10-12 ಗಂಟೆಗೆ ಏರಿಸಬಹುದು. ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸವಿರಲಿದೆ. ಕೈಗೆ ಬರುವ ದುಡ್ಡು (ವೇತನ) ಕಡಿಮೆಯಾಗಲಿದೆ. ಪಿಎಫ್ ಹೆಚ್ಚಾಗಲಿದೆ. ಮೋದಿ ಸರ್ಕಾರ ಹೊಸ ನಿಯಮಗಳನ್ನು ಒಳಗೊಂಡ ಈ ಕಾರ್ಮಿಕ ಕಾನೂನನ್ನು ಅತೀ ಶೀಘ್ರದಲ್ಲಿ ಜಾರಿಗೊಳಿಸಲಿದೆ ಎಂದು ಬರೆಯಲಾಗಿದೆ.

ಫ್ಯಾಕ್ಟ್‌ಚೆಕ್‌ : ಬಜೆಟ್‌ ಮಂಡನೆಯ ದಿನವಾದ ಇಂದು ( ಫೆ.1,2024) ಈ ಪೋಸ್ಟರ್‌ ಭಾರೀ ವೈರಲ್‌ ಆಗಿರುವ ಹಿನ್ನೆಲೆ, ನಾನುಗೌರಿ.ಕಾಂ ಈ ಕುರಿತು ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ.

ನಾವು ಗೂಗಲ್‌ ಸರ್ಚ್‌ ಮಾಡಿದಾಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಧೀನದ ‘ಪ್ರೆಸ್ ಇನ್ಪಾರ್ಮೇಶನ್ ಬ್ಯೂರೋ ಫ್ಯಾಕ್ಟ್‌ ಚೆಕ್‌’ (PIB Fact Check) ಎಕ್ಸ್‌ ಖಾತೆಯಲ್ಲಿ ಪೋಸ್ಟರ್ ಕಾಣಿಸಿಕೊಂಡಿದೆ. ಜನವರಿ 31,2024ರಂದು ಈ ಪೋಸ್ಟರ್‌ ಪೋಸ್ಟ್‌ ಮಾಡಿರುವ ಪಿಐಬಿ, “ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೂರು ದಿನ ರಜೆಯ ನೀತಿಯನ್ನು ಪ್ರಕಟಿಸಲಿದ್ದಾರೆ ಎಂಬ ಫೋಟೋ ಒಂದು ವೈರಲ್‌ ಆಗ್ತಿದೆ. ಇದು ನಕಲಿಯಾಗಿದೆ. ಅಂತಹ ಯಾವುದೇ ಪ್ರಸ್ತಾವನೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಹೊಂದಿಲ್ಲ” ಎಂದು ತಿಳಿಸಿದೆ.

2023 ಡಿಸೆಂಬರ್ 15ರಂದು ಇದೇ ಪೋಸ್ಟರ್ ಕುರಿತಾಗಿ ‘ಪ್ರಜಾವಾಣಿ ಪತ್ರಿಕೆ’ “ಇನ್ನು ಮುಂದೆ ವಾರಕ್ಕೆ ಮೂರು ದಿನ ರಜೆ ಎಂಬುವುದು ಸುಳ್ಳು” ಎಂಬ ಶೀರ್ಷಿಕೆಯ ಫ್ಯಾಕ್ಟ್‌ ಚೆಕ್‌ ಸುದ್ದಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಪ್ರಜಾವಾಣಿ ಸುದ್ದಿ ಲಿಂಕ್‌

ಜನವರಿ 31, 2024ರಂದು ಎನ್‌ಡಿ ಟಿವಿ ಕೂಡ “Fact Check: Viral Claim On Proposed Changes In Work Week Debunked”ಎಂಬ ಶೀರ್ಷಿಕೆಯಲ್ಲಿ ಈ ಕುರಿತು ಸುದ್ದಿ ಪ್ರಕಟಿಸಿದೆ. ರಜೆಯ ಹೆಸರಿನಲ್ಲಿ ವೈರಲ್‌ ಆಗುತ್ತಿರುವ ಪೋಸ್ಟರ್ ಸುಳ್ಳು ಎಂದಿದೆ.

ಎನ್‌ಡಿ ಟಿವಿ ಸುದ್ದಿ ಲಿಂಕ್ 

ಇಂದು (ಫೆ.1,2024) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ವಾರಕ್ಕೆ ಮೂರು ದಿನ ರಜೆಯ ಬಗ್ಗೆ ಉಲ್ಲೇಖಿಸಿದ ಬಗ್ಗೆ ಯಾವುದೇ ಮಾಹಿತಿ ನಮಗೆ ದೊರೆತಿಲ್ಲ. ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸುವ ಬಗ್ಗೆಯೂ ಅವರು ಘೋಷಣೆ ಮಾಡಿಲ್ಲ. ಹಾಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುವ ಪೋಸ್ಟರ್‌ ಸುಳ್ಳು ಎಂಬುವುದು ಖಚಿತವಾಗಿದೆ.

ಇದನ್ನೂ ಓದಿ: Fact Check: ಭಾರತವನ್ನು ವಿರೋಧಿಸಿದ್ದಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಸಂಸದರು ಥಳಿಸಿದ್ರಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...