Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್: ಪ್ರತಾಪ್ 'ಡ್ರೋನ್' ತಯಾರಿಸಿದ್ದು ನಿಜವೇ? ಜಪಾನ್‌ನ ಬುಲೆಟ್ ಟ್ರೈನ್ ಕಥೆಯೇನು?

ಫ್ಯಾಕ್ಟ್‌ಚೆಕ್: ಪ್ರತಾಪ್ ‘ಡ್ರೋನ್’ ತಯಾರಿಸಿದ್ದು ನಿಜವೇ? ಜಪಾನ್‌ನ ಬುಲೆಟ್ ಟ್ರೈನ್ ಕಥೆಯೇನು?

- Advertisement -
- Advertisement -

ಕಳೆದೊಂದು ವಾರದಿಂದ ಇದುವರೆಗೂ ಡ್ರೋನ್ ಬಾಯ್ ಎಂದು ಕರೆಸಿಕೊಳ್ಳುತ್ತಿದ್ದ ಪ್ರತಾಪ್ ಮೇಲೆ ಹಲವಾರು ಆರೋಪಗಳು ಕೇಳಿಬಂದಿದ್ದು ಆತ ಡ್ರೋನ್ ತಯಾರಿಸಿಲ್ಲ. ಹಲವು ಸುಳ್ಳುಗಳನ್ನು ಹೇಳಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಈ ಫ್ಯಾಕ್ಟ್ ಚೆಕ್.

ತಮ್ಮ ಬಗ್ಗೆ ಬಂದ ಪ್ರಶ್ನೆಗಳು ಮತ್ತು ಟ್ರೋಲ್‌ಗಳ ಕುರಿತು ಉತ್ತರಿಸಲು ಜುಲೈ 16, 2020 ರಂದು  ಪ್ರತಾಪ್ ‘ಬಿಟಿವಿ ನ್ಯೂಸ್ ಕನ್ನಡ’ ಚಾನೆಲ್‌ನಲ್ಲಿ ಕಾಣಿಸಿಕೊಂಡರು. ಈ ಕಾರ್ಯಕ್ರಮದಲ್ಲಿ, ಅವರು ತಮ್ಮ ಪ್ರಮಾಣಪತ್ರಗಳನ್ನು ತೋರಿಸಿದರು ಮತ್ತು ಅವು ಅಧಿಕೃತವೆಂದು ಹೇಳಿಕೊಂಡರು. ಅದರ ಸತ್ಯಾಸತ್ಯತೆಯನ್ನು ಸಾಬೀತುಪಡಿಸಲು ಯಾವುದೇ ಹೆಚ್ಚುವರಿ ಪುರಾವೆಗಳನ್ನು ಅವರು ಒದಗಿಸಲಿಲ್ಲ. ಎಲ್ಲಿಯೂ ನಿಮ್ಮ ಡ್ರೋನ್‌ಗಳು ಕಾಣುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರವಾಗಿ ಪ್ರತಾಪ್, ತನ್ನ ಮೊಬೈಲ್‌ನಲ್ಲಿ ಡ್ರೋನ್ ಫೋಟೋವನ್ನು ತೋರಿಸಿ, ಇದನ್ನು ನಾನೇ ನಿರ್ಮಿಸಿದ್ದು ಹೇಳಿಕೊಂಡರು. ಇದೇ ಡ್ರೋನ್‌ಗಾಗಿ ಪ್ರಶಸ್ತಿ ಗೆದ್ದಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಆದರೆ ಅದೇ ಫೋಟೋ ಈಗಾಗಲೇ ಸಾರ್ವಜನಿಕ ವಲಯದಲ್ಲಿದೆ. 2020 ರ ಜನವರಿಯಲ್ಲಿ ಪ್ರತಾಪ್ ಕುರಿತು ‘ದಿ ಬೆಟರ್ ಇಂಡಿಯಾ’ ಪ್ರಕಟಿಸಿದ ಲೇಖನದಲ್ಲಿ ಅದೇ ಫೋಟೋವನ್ನು ಕಾಣಬಹುದು.

ಪ್ರತಾಪ್ ಫೋಟೊದಲ್ಲಿರುವ ಡ್ರೋಣ್‌ ಮೇಲೆ ‘ಬಿಲ್ಜ್ ಐ’ ಎಂದು ಬರೆದಿದೆ. ಆ ಕುರಿತು ಹುಡುಕಿದಾಗ, ‘ಬಿಲ್ಜ್ ಐ’ಜರ್ಮನ್ ಕಂಪನಿಯಾಗಿದ್ದು ಅದು ಮಲ್ಟಿಕಾಪ್ಟರ್ ತಯಾರಿಕೆಯಲ್ಲಿ ಪರಿಣಿತಿ ಪಡೆದಿದೆ.

‘ಬಿಲ್ಜ್ ಐ’ತನ್ನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ತನ್ನ ಡ್ರೋನ್‌ಗಳ ಫೋಟೊಗಳನ್ನು ಅದರಲ್ಲಿ ತೋರಿಸಿದೆ. ವಿಡಿಯೋ ವಿವರಣೆಯಲ್ಲಿ ಫೋಟೊಗಳು ಹ್ಯಾನೋವರ್ (ಜರ್ಮನಿ) ನಲ್ಲಿ ನಡೆದ ‘ಸಿಬಿಟ್’ಕಾರ್ಯಕ್ರಮಕ್ಕೆ ಸಂಬಂಧಿಸಿವೆ ಎಂದು ಬರೆದಿದೆ.  ಅದೇ ಡ್ರೋಣ್ ಫೋಟೊವನ್ನು ಪ್ರತಾಪ್ ಕೂಡ ನಾನೇ ತಯಾರು ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಆ ಡ್ರೋನ್‌ಗಾಗಿಯೇ 2018 ರಲ್ಲಿ ಜರ್ಮನಿಯಲ್ಲಿ ‘ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಮೆಡಲ್’ ಗೆದ್ದಿದ್ದೇನೆ ಎಂದು ಪ್ರತಾಪ್ ಹೇಳಿಕೊಂಡಿದ್ದಾರೆ. ಆದರೆ ‘ಬಿಲ್ಜ್ ಐ’ ಈ ಡ್ರೋನ್‌ಗೆ ಮೆಡಲ್ ಬಂದಿದೆಯೆಂದಾಗಲಿ, ಇದಕ್ಕೂ ಪ್ರತಾಪ್‌ಗೂ ಸಂಬಂಧವಿದೆಯೆಂದಾಗಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಇದೇ ಚಿತ್ರವನ್ನು ಹಲವಾರು ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಅದೇ ಕೆಂಪು ಡ್ರೋನ್‌ನ ಇತರ ಚಿತ್ರಗಳನ್ನು ಮತ್ತು ಪ್ರತಾಪ್ ಫೋಟೋದಲ್ಲಿ ಕಾಣುವ ಮೇಜಿನ ಮೇಲೆ ಇರಿಸಲಾಗಿರುವ ಕೆಲವು ಇತರ ಉಪಕರಣಗಳನ್ನು ‘ಬಿಲ್ಜ್ ಐ’ ವೆಬ್‌ಸೈಟ್‌ನಲ್ಲಿ ಸಹ ಕಾಣಬಹುದು. ಡ್ರೋನ್‌ನ ಹೆಸರನ್ನು ವೆಬ್‌ಸೈಟ್‌ನಲ್ಲಿ ‘ಥರ್ಮೋಗ್ರಾಫಿಕ್ ಕಾಪ್ಟರ್ ಬೆಥ್ -001’ ಎಂದು ಉಲ್ಲೇಖಿಸಲಾಗಿದೆ. ಮೇಜಿನ ಮೇಲಿರುವ ಹೆಡ್‌ಸೆಟ್‌ನಲ್ಲಿ ‘ಫ್ಯಾಟ್ ಶಾರ್ಕ್’ ಹೆಸರು ಇದೆ. ‘ಫ್ಯಾಟ್ ಶಾರ್ಕ್’ಕಂಪನಿಯು ಡ್ರೋನ್ ಪೈಲಟ್‌ಗಳಿಗಾಗಿ ‘ಎಫ್‌ಪಿವಿ’(ಫಸ್ಟ್-ಪರ್ಸನ್ ವ್ಯೂ) ಕನ್ನಡಕಗಳನ್ನು ಉತ್ಪಾದಿಸುತ್ತದೆ ಎಂದು ಕಂಡುಬಂದಿದೆ.

ತಮ್ಮ ವೆಬ್‌ಸೈಟ್ ಮತ್ತು ಫೇಸ್‌ಬುಕ್ ಪುಟದಲ್ಲಿ, ‘ಬಿಲ್ಜ್ ಐ’ ಅವರು ‘ಬಿವಿಸಿಪಿ’ (ಬುಂಡೆಸ್‌ವರ್‌ಬ್ಯಾಂಡ್ ಕಾಪ್ಟರ್ ಪೈಲೊಟೆನ್ ಇ.ವಿ.) ಯ ಅಧಿಕೃತ ಸದಸ್ಯರು ಎಂದು ಉಲ್ಲೇಖಿಸಿದ್ದಾರೆ. ಫೋಟೋದಲ್ಲಿ ಪ್ರತಾಪ್ ಅವರ ಹಿಂದಿನ ಗೋಡೆಯ ಮೇಲೆ ಅದೇ ಹೆಸರು ಮತ್ತು ಲೋಗೊವನ್ನು ಕಾಣಬಹುದು.

ಅದು ‘ಸಿಬಿಐಟಿ 2018’ ನಲ್ಲಿರುವ ‘ಬಿವಿಸಿಪಿ’ ಸ್ಟಾಲ್‌ನಲ್ಲಿದ್ದು, ಅಲ್ಲಿ ‘ಬಿಲ್ಜ್ ಐ’ ಡ್ರೋನ್ ಅನ್ನು ಪ್ರದರ್ಶಿಸಿತು. ‘ಬಿವಿಸಿಪಿ’ ವೆಬ್‌ಸೈಟ್‌ನಲ್ಲಿ, ‘ಸಿಬಿಟ್ 2018 ರ ಅನಿಸಿಕೆಗಳು’ (ಜರ್ಮನ್ ಭಾಷೆಯಿಂದ ಗೂಗಲ್ ಅನುವಾದಿಸಿದೆ) ಶೀರ್ಷಿಕೆಯೊಂದಿಗೆ ಲೇಖನವನ್ನು ಕಾಣಬಹುದು. ಲೇಖನದಲ್ಲಿ ‘ಬಿಲ್ಜ್ ಐ’ಮಾಲೀಕ ಬಿಲ್ ಗುಟ್ಬಿಯರ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಆದರೆ ಪ್ರತಾಪ್ ಅವರ ಹೆಸರನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಆ ಡ್ರೋನ್ ಪ್ರಶಸ್ತಿ ಗೆದ್ದ ಬಗ್ಗೆಯೂ ಯಾವುದೇ ವಿವರಗಳಿಲ್ಲ. ಲೇಖನದಲ್ಲಿ ಪೋಸ್ಟ್ ಮಾಡಿದ ಯಾವುದೇ ಫೋಟೋಗಳಲ್ಲಿ ಪ್ರತಾಪ್ ಕಂಡುಬಂದಿಲ್ಲ.

ಒಂದು ವೇಳೆ ಈ ಡ್ರೋನ್‌ಗಾಗಿ ಪ್ರತಾಪ್ ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಮೆಡಲ್’ಗೆದ್ದಿದ್ದೆ ಆದರೆ (ಇನ್ನ ದೃಢವಾಗಿಲ್ಲ) ಕಂಪನಿ ಕೊಟ್ಟ ಪ್ರಮಾಣ ಪತ್ರದಲ್ಲಿ ಪ್ರತಾಪ್ ಹೆಸರಿರಬೇಕಿತ್ತು. ಆದರೆ ಅಲ್ಲಿ ಕಾಲೇಜಿನ ಹೆಸರನ್ನು ನಮೂದಿಸಲಾಗಿದೆ. ಅಲ್ಲದೇ ಪ್ರಶಸ್ತಿ ಪತ್ರದಲ್ಲಿ ಬಿಲ್ಜ್ ಐ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

 

 

 

ಪ್ರಮಾಣಪತ್ರದ ಮೇಲ್ಭಾಗದಲ್ಲಿ ‘ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಮೆಡಲ್’ಎಂದು ಬರೆಯಲಾಗಿದೆ. ಆದರೆ ಅದೇ ಪ್ರಮಾಣ ಪತ್ರದ ಕೆಳಗೆ ‘ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಅವಾರ್ಡ್’ಎಂದು ಬರೆಯಲಾಗಿದೆ. ಅಲ್ಲದೆ, ಪ್ರಮಾಣಪತ್ರದಲ್ಲಿ, ‘ಡಾಯ್ಚ ಮೆಸ್ಸೆ’ ಕಂಪನಿಯ ಸಿಇಒ ಹೆಸರನ್ನು ‘ವೊಲ್ಫ್ರಾಮ್ ವಾನ್ ಫ್ರಿಟ್ಸ್’ಎಂದು ಬರೆಯಲಾಗಿದೆ. ಆದರೆ, ವೊಲ್ಫ್ರಾಮ್ ವಾನ್ ಫ್ರಿಟ್ಸ್ಚ್ ಅವರು ತಮ್ಮ ಸಿಇಓ ಜವಾಬ್ದಾರಿಯನ್ನು ಡಾ. ಜೋಚೆನ್ ಕೊಕ್ಲರ್ ಅವರಿಗೆ 2017 ರಲ್ಲಿಯೇ ಹಸ್ತಾಂತರಿಸಿದ್ದಾರೆ. ಇನ್ನೂ, 2018 ರಲ್ಲಿ ಪ್ರತಾಪ್ ಅವರಿಗೆ ನೀಡಲಾದ ಪ್ರಮಾಣಪತ್ರವು ಸಿಇಒ ಆಗಿ ವೊಲ್ಫ್ರಾಮ್ ವಾನ್ ಫ್ರಿಟ್ಸ್ ಅವರ ಹೆಸರನ್ನು ಹೊಂದಿದೆ. ಅಲ್ಲದೆ, ‘ದಿ ಬೆಟರ್ ಇಂಡಿಯಾ’ಕ್ಕೆ ಪ್ರತಿಕ್ರಿಯಿಸಿದ ಜರ್ಮನಿಯ ಕಾರ್ಯಕ್ರಮಗಳ ಸಂಘಟಕರು ತಾವು ಅಂತಹ ಯಾವುದೇ ಪ್ರಶಸ್ತಿಯನ್ನು ಆಯೋಜಿಸಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಹಲವಾರು ಮನವಿಗಳು ಬಂದ ನಂತರ ‘ಬಿಲ್ಜ್ ಐ’ಈ ಕುರಿತು ಹೇಳಿಕೆ ನೀಡಿದೆ. ಪ್ರತಾಪ್ ತಾನು ತಯಾರಿಸಿದ್ದೇನೆಂದು ಹೇಳಿಕೊಂಡ ‘ಮಲ್ಟಿಕಾಪ್ಟರ್ ಸಿಸ್ಟಂ’ ತನ್ನ ಆಸ್ತಿಯೆಂದು ಬಿಲ್ಜ್ ಐ ಸ್ಪಷ್ಟಪಡಿಸಿದೆ. ಆ ಡ್ರೋನ್‌ನ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಅಥವಾ ವಿತರಣೆ ಸೇರಿದಂತೆ ಯಾವುದರಲ್ಲಿಯೂ ಪ್ರತಾಪ್‌ಗೆ ಯಾವುದೇ ಸಂಬಂಧವಿಲ್ಲ ‘ಮಿಸ್ಟರ್ ಪ್ರತಾಪ್ ಹ್ಯಾನೋವರ್‌ನಲ್ಲಿರುವ ಸಿಇಬಿಐಟಿ 2018 ನಲ್ಲಿ ಈ ಡ್ರೋನ್‌ನೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ ಅಷ್ಟೇ. ಅದು ಬಿಟ್ಟು ಬೇರೆ ಏನೂ ಹೇಳಿದರೂ ಅದು ಸುಳ್ಳು’ ಎಂದು ಬಿಲ್ಜ್ ಐ ಜರ್ಮನ್ ಭಾಷೆಯಲ್ಲಿ ತಿಳಿಸಿದೆ.

ಆದ್ದರಿಂದ, ತಾನು ತೆಗೆಸಿಕೊಂಡಿದ್ದ ಫೋಟೊವನ್ನು ತೋರಿಸಿ ಅದನ್ನು ತಾನೇ ತಯಾರಿಸಿದ್ದು ಮತ್ತು ಅದಕ್ಕೆ ಪ್ರಶಸ್ತಿ ಬಂದಿದೆ ಎಂದು ಬಿಟಿವಿ ಕನ್ನಡ ವಾಹಿನಿಯಲ್ಲಿ ಪ್ರತಾಪ್  ಹೇಳಿದ್ದು ಸುಳ್ಳು ಎಂದು ಸಾಬೀತಾಗಿದೆ.

ಮಾಧ್ಯಮ ಮತ್ತು ಸೆಲೆಬ್ರೆಟಿಗಳು:

ಪ್ರತಾಪ್‌ಗೆ ಸಂಬಂಧಿಸಿದಂತೆ ಮೇಲಿನ ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಇತರ ವಿಷಯಗಳ ಬಗ್ಗೆ ಹುಡುಕಿದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಅವರ ಸಾಧನೆಗಳಿಗೆ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ತಿಳಿದುಬಂದಿದೆ. ಆದರೆ ಈ ಹಿಂದೆ ಅವರ ಸಾಧನೆಗಳಿಗಾಗಿ ‘ಡಿಡಿ ಚಂದನ’ (ವಿಡಿಯೋ ಈಗ ಲಭ್ಯವಿಲ್ಲ) ಸೇರಿದಂತೆ ವಿವಿಧ ಕನ್ನಡ ಚಾನೆಲ್‌ಗಳು ಪ್ರತಾಪ್‌ರವರ ಸಂದರ್ಶನ ಮಾಡಿದ್ದವು. ಅಲ್ಲದೆ, ‘ದಿಗ್ವಿಜಯ 24X7 ನ್ಯೂಸ್’ಚಾನೆಲ್‌ನ ವಿಡಿಯೋದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೆಚ್. ಡಿ. ಕುಮಾರಸ್ವಾಮಿ (ಆಗ ಕರ್ನಾಟಕದ ಸಿಎಂ) ಮತ್ತು ಇತರ ಗಣ್ಯರು ಪ್ರತಾಪ್ ಅವರ ಸಾಧನೆಗಳ ಬಗ್ಗೆ ಶುಭ ಹಾರೈಸಿದ್ದಾರೆ. ಮಲ್ಟಿ-ಡ್ರೋನ್ ಸಂಶೋಧನೆಯಲ್ಲಿ ಸಾಧನೆ ಮಾಡಿದ್ದಕ್ಕಾಗಿ ಅವರು ‘ಟಿವಿ 9 ಕನ್ನಡ ಚಾನೆಲ್‌ನಿಂದ ಪ್ರಶಸ್ತಿಯನ್ನೂ ಪಡೆದಿದ್ದಾರೆ. ವಿವಿಧ ರಾಜಕೀಯ ಮುಖಂಡರು ಮತ್ತು ಸೆಲೆಬ್ರಿಟಿಗಳೊಂದಿಗಿನ ಪ್ರತಾಪ್ ಇರುವ ಅನೇಕ ಫೋಟೋಗಳನ್ನು ‘droneprathap’ ಹೆಸರಿನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಕಾಣಬಹುದಾಗಿದೆ. (ಪ್ರೊಫೈಲ್ ಮತ್ತು ಫೋಟೋಗಳ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲಿಸಲು ಸಾಧ್ಯವಾಗಿಲ್ಲ.)

ಡ್ರೋನ್‌ಗಳೊಂದಿಗಿನ ಫೋಟೋಗಳು:

ಪ್ರತಾಪ್ 600 ಕ್ಕೂ ಹೆಚ್ಚು ಡ್ರೋನ್‌ಗಳನ್ನು ನಿರ್ಮಿಸಿದ್ದಾರೆ ಎಂಬುದಕ್ಕೆ ಯಾವುದೇ ಚಿತ್ರಗಳು ಅಥವಾ ವಿಡಿಯೋಗಳು ಆನ್‌ಲೈನ್‌ನಲ್ಲಿ ಲಭ್ಯವಿಲ್ಲ. ಕೆಲವು ಡ್ರೋನ್‌ಗಳ ಪಕ್ಕದಲ್ಲಿ ಪ್ರತಾಪ್ ನಿಂತಿರುವ ಕೆಲವು ಫೋಟೋಗಳಿವೆಯಾದರೂ ಅವು ಆತನ ನಿರ್ಮಿಸಿದ್ದಲ್ಲ. ಬದಲಿಗೆ ಅವು ಹೆಸರಾಂತ ಡ್ರೋನ್ ಕಂಪನಿಗಳಿಗೆ ಸೇರಿವೆ. ಪೋಸ್ಟ್‌ನಲ್ಲಿ ಹಾಕಿರುವ ಫೋಟೋದಲ್ಲಿ ಪ್ರತಾಪ್ ‘ಎಸಿಎಸ್ಎಲ್’ (Autonomous Control Systems Laboratory Ltd) ಎಂಬ ಕಂಪನಿಗೆ ಸೇರಿದ ಡ್ರೋನ್ ಪಕ್ಕದಲ್ಲಿ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ. ರೆಡ್ಡಿಟ್ ಬಳಕೆದಾರರು ಆ ಡ್ರೋನ್‌ ಮತ್ತು ಪ್ರತಾಪ್‌ನೊಂದಿಗಿನ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ “ಪ್ರತಾಪ್‌ಗೆ ಕಂಪನಿ ಅಥವಾ ಡ್ರೋನ್‌ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಎಸಿಎಸ್ಎಲ್ ಇಮೇಲ್ ಮೂಲಕ ಸ್ಪಷ್ಟಪಡಿಸಿದೆ.

ಅಲ್ಲದೆ, ಕರ್ನಾಟಕ ಪ್ರವಾಹದ ಸಂದರ್ಭದಲ್ಲಿ ಪ್ರತಾಪ್ ಬಳಸಿದ ಡ್ರೋನ್‌ನ ರಿಮೋಟ್ ‘ಯುನೆಕ್ ಟೈಫೂನ್ ಎಚ್ +’ ಡ್ರೋನ್ ರಿಮೋಟ್‌ಗೆ ಹೋಲುತ್ತದೆ.

ಯುವ ವಿಜ್ಞಾನಿ ಪ್ರಶಸ್ತಿ – ‘ಐರೆಕ್ಸ್ 2017’ – ಜಪಾನ್:

ಟೋಕಿಯೊದಲ್ಲಿ ನಡೆದ ಎಕ್ಸ್‌ಪೋವೊಂದರಲ್ಲಿ ಅವರು ಪ್ರಥಮ ಬಹುಮಾನವನ್ನು ಗೆದ್ದಿದ್ದಾರೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆ ಬಹುಮಾನಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಅನೇಕ ಸುದ್ದಿ ಬ್ಲಾಗ್ ವೆಬ್‌ಸೈಟ್‌ಗಳಲ್ಲಿ ಕಾಣಬಹುದು. ಪ್ರಮಾಣಪತ್ರದಲ್ಲಿ, ‘ಐರೆಕ್ಸ್ 2017’ ಪ್ರದರ್ಶನದಲ್ಲಿ ಪ್ರಶಸ್ತಿ ಗೆದ್ದಿದೆ ಎಂದು ಬರೆಯಲಾಗಿದೆ. ಆದರೆ, ‘ಐರೆಕ್ಸ್ 2017’ ಟ್ರೇಡ್ ಎಕ್ಸ್‌ಪೋ ಆಗಿದ್ದು, ಅಲ್ಲಿ ವಿವಿಧ ಕಂಪನಿಗಳು ತಮ್ಮ ರೋಬೋಟ್‌ಗಳನ್ನು ಪ್ರದರ್ಶಿಸುತ್ತವೆ. ಅಲ್ಲಿ ಯಾವುದೇ ಸ್ಪರ್ಧೆ ನಡೆದ ಮತ್ತು ಪ್ರತಾಪ್ ಬಹುಮಾನ ಗೆದ್ದ ಯಾವುದೇ ವರದಿಗಳು ಲಭ್ಯವಿಲ್ಲ. ಎಕ್ಸ್‌ಪೋ ಸಂಘಟಕರು 2017 ರ ಕಾರ್ಯಕ್ರಮದ ನಂತರ ‘ಪ್ರದರ್ಶನ ನಂತರದ ವರದಿ’ ಬಿಡುಗಡೆ ಮಾಡಿದ್ದಾರೆ. ಆದರೆ ವರದಿಯಲ್ಲಿ ಸ್ಪರ್ಧೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅಲ್ಲದೆ, ಪ್ರತಾಪ್ ಪ್ರಮಾಣಪತ್ರದಲ್ಲಿ ಕಾಣುವ ‘ಏರ್‌ಬಸ್ ಡಿಫೆನ್ಸ್ ಅಂಡ್ ಸ್ಪೇಸ್ ಕಂಪನಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಜಪಾನ್ ಭೇಟಿ ಮತ್ತು ಬುಲೆಟ್ ರೈಲು:

ಪೋಸ್ಟ್‌ನಲ್ಲಿ, ‘ಐರೆಕ್ಸ್ 2017’ ನಲ್ಲಿ ಭಾಗವಹಿಸಲು ಪ್ರತಾಪ್ ಟೋಕಿಯೊಗೆ ಬಹಳ ಕಷ್ಟಪಟ್ಟು ತಲುಪಿದರು ಎಂದು ಬರೆದಿದೆ. ಪ್ರತಾಪ್ ಮೊದಲ ಬಾರಿಗೆ ವಿಮಾನದಲ್ಲಿ ಟೋಕಿಯೊವನ್ನು ತಲುಪಿದರು ಎಂದು ಉಲ್ಲೇಖಿಸಲಾಗಿದೆ. ಪ್ರತಾಪ್ ಅಲ್ಲಿ ಇಳಿಯುವಾಗ ಆತನ ಬಳಿ ಕೇವಲ 1400 ರೂ. ಇತ್ತು. ಬುಲೆಟ್ ರೈಲು ಪ್ರಯಾಣ ತುಂಬಾ ದುಬಾರಿಯಾಗಿದ್ದರಿಂದ ಅವನು ಲೋಕಲ್ ಟ್ರೈನ್‌ಗಳಲ್ಲಿ 16 ವಿವಿಧ ನಿಲ್ದಾಣಗಳನ್ನು ಬದಲಿಸಿ ತನ್ನ ಸಾಮಾನುಗಳೊಂದಿಗೆ ತನ್ನ ಕೊನೆಯ ನಿಲ್ದಾಣವನ್ನು ತಲುಪಿದನು. ಅಲ್ಲದೇ ತನ್ನ ಸಾಮಾನುಗಳನ್ನು ಹೊತ್ತುಕೊಂಡು ಇನ್ನು 8 ಕಿ.ಮೀ ನಡೆದನು ಎಂದು ತಿಳಿಸಲಾಗಿದೆ. ಆದರೆ, ಗೂಗಲ್ ನಕ್ಷೆಯ ಪ್ರಕಾರ, ಪ್ರದರ್ಶನದ ಸ್ಥಳ ಟೋಕಿಯೊ ಬಿಗ್ ಸೈಟ್‌ಗೆ ಹನೆಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 15 ಕಿ.ಮೀ ದೂರವಿದೆ. ಮತ್ತು ನರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 65 ಕಿ.ಮೀ ದೂರವಿದೆ.  ಪ್ರದರ್ಶನದ ಸ್ಥಳ ತಲುಪಲು ಬುಲೆಟ್ ರೈಲು ಹತ್ತಬೇಕಾದ ಅಗತ್ಯವಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಬುಲೆಟ್ ರೈಲು ಇಂಟರ್ಸಿಟಿ (ಬೇರೆ-ಬೇರೆ ನಗರಗಳಿಗೆ) ಸೇವೆಯಾಗಿದೆ. ಅಂದರೆ ಅದು ಟೋಕಿಯೊ ಒಳಗೆ ಚಲಿಸುವುದಿಲ್ಲ. ಟೋಕಿಯೋದಿಂದ ಇತರ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಮೋದಿಯ ಶಿಫಾರಸ್ಸಿನಂತೆ ಈ ಯುವ ವಿಜ್ಞಾನಿಯನ್ನು ಡಿಆರ್‌‌ಡಿಒಗೆ ಸೇರಿಸಲಾಗಿದೆಯೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....