Homeದಿಟನಾಗರಫ್ಯಾಕ್ಟ್ ಚೆಕ್: ಶ್ರೀನಗರದ ಲಾಲ್ ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸಿರುವುದು ನಿಜವೇ?

ಫ್ಯಾಕ್ಟ್ ಚೆಕ್: ಶ್ರೀನಗರದ ಲಾಲ್ ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸಿರುವುದು ನಿಜವೇ?

ಇವುಗಳಲ್ಲಿ ಶ್ರೀನಗರದ ಲಾಲ್ ಚೌಕ್ ಮೂಲದ, ಗಡಿಯಾರದ ಸ್ಥಂಭದ ಮೇಲೆ ತ್ರಿವರ್ಣ ಧ್ವಜ ಹಾರುತ್ತಿರುವ ಛಾಯಾಚಿತ್ರವನ್ನು ಕಾಣಬಹುದು.

- Advertisement -
- Advertisement -

ಭಾರತವು ತನ್ನ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಂತೆ, ದೇಶದ ವಿವಿಧ ಭಾಗಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿರುವ ಚಿತ್ರಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಇವುಗಳಲ್ಲಿ ಶ್ರೀನಗರದ ಲಾಲ್ ಚೌಕ್ ಮೂಲದ, ಗಡಿಯಾರದ ಸ್ಥಂಭದ ಮೇಲೆ ತ್ರಿವರ್ಣ ಧ್ವಜ ಹಾರುತ್ತಿರುವ ಛಾಯಾಚಿತ್ರವೊಂದು ವಿವಾದ ಹುಟ್ಟಿಸಿದೆ.

ಆಗಸ್ಟ್ 15 ರ ಬೆಳಿಗ್ಗೆಯಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಈ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. ದೆಹಲಿಯ ಬಿಜೆಪಿ  ನಾಯಕ ಕಪಿಲ್ ಮಿಶ್ರಾ ಅವರ ಈ ಟ್ವೀಟ್ ಗೆ 45,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 8,000 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಗಳಿಸಿದೆ.

ಕಳೆದ ವರ್ಷ ಆಗಸ್ಟ್ 5 ರಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತು. ಅಂದಿನಿಂದ, ಇಂಟರ್ನೆಟ್ ನಿಷ್ಕ್ರಿಯವಾಗಿದ್ದರೂ ಸಹ ಈ ಪ್ರದೇಶವು ಸಹಜ ಸ್ಥಿತಿಗೆ ಮರಳಲು ಪ್ರಯತ್ನಿಸುತ್ತಿದೆ.

ಬಿಜೆಪಿ ಸಂಸದ ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ಲಡಾಖ್ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಮತ್ತು ಬಿಜೆಪಿ ಸಂಸದ ಕಿರ್ರಾನ್ ಖೇರ್ ಕೂಡ ಚಿತ್ರವನ್ನು ಹಂಚಿಕೊಂಡಿದ್ದಾರೆ.

ನ್ಯೂಸ್ ನೇಷನ್‌ನ ವರದಿಯಲ್ಲಿ ಈ ಚಿತ್ರಕ್ಕೆ ಸ್ಥಾನ ಸಿಕ್ಕಿದೆ. “ಲಾಲ್ ಚೌಕ್ ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದಿದ್ದರಿಂದ ರಕ್ತಪಾತವನ್ನು ನೋಡಬೇಕಾಗಿತ್ತು. ಈಗ ದೇಶದ ಧ್ವಜ ಹೆಮ್ಮೆಯಿಂದ ಅಲ್ಲಿ ಹಾರಾಡುತ್ತಿದೆ. “ಭಾರತದ 74 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಶ್ರೀನಗರದ ಐತಿಹಾಸಿಕ ಲಾಲ್ ಚೌಕ್‌ನಲ್ಲಿ ತ್ರಿವರ್ಣವನ್ನು ಹಾರಿಸಲಾಗಿದೆ ಎಂದು ವರದಿಯಾಗಿದೆ” ಎಂದು ಇಂಗ್ಲಿಷ್ ಮತ್ತು ಹಿಂದಿ ವರದಿಗಳಲ್ಲಿ ದೈನಿಕ್ ಜಾಗ್ರನ್ ಹೇಳಿದೆ.

ಎಬಿಪಿ ನ್ಯೂಸ್ ಪತ್ರಕರ್ತೆ ಅಸ್ತಾ ಕೌಶಿಕ್ ಕೂಡ ಈ ಛಾಯಾಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಫ್ಯಾಕ್ಟ್ ಚೆಕ್;

ಸರಳವಾದ ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವು ಇದರ ಸತ್ಯವನ್ನು ಬಯಲು ಮಾಡಿದೆ. ನಿರ್ಜನವಾದ ಲಾಲ್ ಚೌಕ್ ನ ಹಳೆಯ ಚಿತ್ರವನ್ನು ರಾಷ್ಟ್ರೀಯ ಧ್ವಜ ಹಾರುತ್ತಿರುವ ಚಿತ್ರವಾಗಿ ಎಡಿಟ್‌ ಮಾಡಿ ಮಾರ್ಪಡಿಸಲಾಗಿದೆ.

2010 ರಲ್ಲಿನ Mubasshir.blogspot.com ಬ್ಲಾಗ್‌ಪೋಸ್ಟ್ ಮೊದಲು ಈ ಚಿತ್ರ ಪ್ರಕಟಿಸಲಾಗಿದೆ. ಎಡಭಾಗದಲ್ಲಿರುವ ಕಾರುಗಳು ಮತ್ತು ಮನುಷ್ಯರ ವಾಕಿಂಗ್ ಅನ್ನು ಎರಡೂ ಚಿತ್ರಗಳಲ್ಲಿ ಕಾಣಬಹುದು. ಹೀಗಾಗಿ ವೈರಲ್ ಆಗಿರುವ ಚಿತ್ರ ಮತ್ತು ಎಡಿಟ್ ಮಾಡಿರುವುದು ಒಂದೇ ಎಂದು ಸೂಚಿಸುತ್ತದೆ.

ಇಂದು ಪತ್ರಕರ್ತ ಅಹ್ಮರ್ ಖಾನ್ ಲಾಲ್ ಚೌಕ್‌ನಲ್ಲಿರುವ ಗಡಿಯಾರ ಗೋಪುರದ ಪೋಟೊ ತೆಗೆದು ಆಲ್ಟ್ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ಅದರೆ ಅಲ್ಲಿ ತ್ರಿವರ್ಣ ಧ್ವಜ ಕಾಣಿಸುತ್ತಿಲ್ಲ.

ನಿರ್ಜನವಾದ ಲಾಲ್ ಚೌಕ್ ಪ್ರದೇಶದ ವೀಡಿಯೊವನ್ನು ಸಹ ಖಾನ್ ಟ್ವೀಟ್ ಮಾಡಿದ್ದರು. ಇದರ ಪ್ರಕಾರ, ಶ್ರೀನಗರದ ಲಾಲ್ ಚೌಕ್‌ನಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ಹಾರಿಸಲಾಗಿಲ್ಲ.

 

ದಿ ಕಾಶ್ಮೀರ ಮಾನಿಟರ್‌ನ ವರದಿಯ ಪ್ರಕಾರ, ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರೀನಗರದ ಎಸ್‌ಕೆ ಕ್ರೀಡಾಂಗಣದಲ್ಲಿ ನಡೆಸಲಾಯಿತು. ಅಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತ್ರಿವರ್ಣ ಬಣ್ಣವನ್ನು ಹಾರಿಸಿದರು. ಆದರೆ ಸಾಮಾಜಿಕ ಮಾದ್ಯಮಗಳಲ್ಲಿ ಲಾಲ್‌ ಚೌಕದಲ್ಲಿ ಧ್ವಜ ಹಾರಾಟ ಎಂಬ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ.

ಹಲವಾರು ಪ್ರಮುಖ ಬಳಕೆದಾರರು ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ ಎಂದು ತಪ್ಪಾಗಿ ಹೇಳಿಕೊಂಡು ಈ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ.

ಅವರಲ್ಲಿ ಬಿಜೆಪಿ ದೆಹಲಿ ಐಟಿ ಸೆಲ್ ಸದಸ್ಯ ಸಂದೀಪ್ ರಾಜ್ಲಿವಾಲ್, ಫ್ರಿಂಜ್ ಗ್ರೂಪ್ ಅಧ್ಯಕ್ಷ ಆಜಾದ್ ಸೇನಾ ಅಭಿಷೇಕ್ ಆಜಾದ್, ಫ್ರೆಂಡ್ಸ್ ಆಫ್ ಆರ್ಎಸ್ಎಸ್, ರಿಪಬ್ಲಿಕ್ ಟಿವಿ ಸಂಸ್ಥಾಪಕ ಅರ್ನಾಬ್ ಗೋಸ್ವಾಮಿ (@ arnew5222) ಮತ್ತು ಗೌರವ್ ಪ್ರಧಾನ್ ಅವರ ಖಾತೆಯೂ ಸೇರಿದೆ.


ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಎಐಎಂಐಎಂ ಸದಸ್ಯರು ಭಾರತದ ಧ್ವಜಗಳನ್ನು ಸುಟ್ಟರೆ? ವಾಸ್ತವವೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...