HomeದಿಟನಾಗರFACT CHECK : ಪಪ್ಪಾಯಿ ಎಲೆಯ ರಸವು ಡೆಂಗ್ಯೂ ಖಾಯಿಲೆ ಗುಣಪಡಿಸುತ್ತದೆ ಎಂಬುವುದು ಸುಳ್ಳು

FACT CHECK : ಪಪ್ಪಾಯಿ ಎಲೆಯ ರಸವು ಡೆಂಗ್ಯೂ ಖಾಯಿಲೆ ಗುಣಪಡಿಸುತ್ತದೆ ಎಂಬುವುದು ಸುಳ್ಳು

- Advertisement -
- Advertisement -

“ತುರ್ತು ಮಾಹಿತಿ.. ಪಪ್ಪಾಯಿ ಎಲೆಯ ರಸವು ಜೇನು ತುಪ್ಪದೊಂದಿಗೆ ಪವಾಡದಂತೆ ಕೆಲಸ ಮಾಡುತ್ತದೆ. ಪ್ಲೆಟ್ಲೆಟ್‌ ಎಣಿಕೆ 12 ಗಂಟೆಗಳಲ್ಲಿ 68,000 ದಿಂದ 200,000 ದವರೆಗೆ ಏರುತ್ತದೆ. ಮಾನವೀಯತೆಯ ಸೇವೆ ಮಾಡಲು ಈ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳಿ.. ಭಾರತದಾದ್ಯಂತ ಡೆಂಗ್ಯೂ ಜ್ವರ ವಿಪರೀತವಾಗಿ ಹರಡುತ್ತಿದೆ. ದಯವಿಟ್ಟು ಈ ವಿಷಯವನ್ನು ಹಂಚಿಕೊಳ್ಳುವ ಮೂಲಕ, ಹಲವಾರು ಜೀವಗಳನ್ನು ಉಳಿಸಿದ ಪುಣ್ಯ ನಿಮಗೆ ಸಿಗುತ್ತದೆ ” ಎಂದು ಬರೆದಿರುವ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಈ ಪೋಸ್ಟರ್‌ ಮಾತ್ರವಲ್ಲದೆ ಅನೇಕ ಜನರಲ್ಲಿ ಪಪ್ಪಾಯಿ ಎಲೆಯ ರಸವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯಿದೆ. ಡೆಂಗ್ಯೂ ರೋಗ ಭಾದಿತರು ಪಪ್ಪಾಯಿ ಎಲೆಯ ರಸ ಕುಡಿಯುತ್ತಲೂ ಇದ್ದಾರೆ. ಪ್ರತಿ ಬಾರಿಯೂ ಡೆಂಗ್ಯೂ ಖಾಯಿಲೆ ಹೆಚ್ಚಾದಾಗ ಪಪ್ಪಾಯಿ ಎಲೆಯ ಕುರಿತ ಸಂದೇಶ ಹರಿದಾಡುತ್ತದೆ.

ಮೇಲಿನ ಪೋಸ್ಟರ್‌ ಅನ್ನು ಹಲವರು ಇದು ಆರ್ಯುವೇದ ಔಷಧಿ ಪದ್ಧತಿ ಇರಬಹುದು ಎಂದು ವ್ಯಾಪಕವಾಗಿ ಶೇರ್‌ ಮಾಡುತ್ತಿದ್ದಾರೆ. ಇನ್ನು ಕೆಲವರು ತಮಗೆ ಪಪ್ಪಾಯಿ ಎಲೆಯಿಂದ ಉಪಯೋಗ ಆಗಿದೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಹಾಗಾಗಿ, ಈ ವೈರಲ್‌ ವಿಷಯದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ.

ಫ್ಯಾಕ್ಟ್‌ ಚೆಕ್ : ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಸುದ್ದಿಯ ಕುರಿತು ಪರಿಶೀಲನೆ ನಡೆಸಲು ಗೂಗಲ್‌ನಲ್ಲಿ ನಾವು ಸಂಬಂಧಿತ ಮಾಹಿತಿ ಹುಡುಕಿದ್ದೇವೆ. ಈ ವೇಳೆ 29 ಸೆಪ್ಟೆಂಬರ್‌ 2023 ರಂದು ಅನ್‌ಲೈನ್‌ ಸುದ್ದಿತಾಣ ಬೂಮ್‌ ಪ್ರಕಟಿಸಿದ “Dragonfruit To Papaya Leaves: Common Dengue Myths Debunked“ಎಂಬ ವರದಿಯೊಂದು ಕಂಡು ಬಂದಿದೆ. ಈ ವರದಿಯಲ್ಲಿ ಡ್ರ್ಯಾಗನ್‌ಪ್ರೂಟ್‌, ಪಪ್ಪಾಯಿ ಎಲೆ, ಹೆಚ್ಚು ನೀರು ಕುಡಿಯುವುದರಿಂದ ಡೆಂಗ್ಯೂ ನಿವಾರಣೆ ಆಗುತ್ತದೆ ಎಂಬ ಸುದ್ದಿಗಳು ಸುಳ್ಳು ಎನ್ನಲಾಗಿದ್ದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಪಪ್ಪಾಯಿ ಎಲೆಯ ಜ್ಯೂಸ್‌ನಿಂದ ಡೆಂಗ್ಯೂ ನಿವಾರಣೆಯಾಗುತ್ತದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ 28 ನವೆಂಬರ್ 2019 ರಂದು ದಿ ನ್ಯೂಸ್‌ ಮಿನಿಟ್‌ ಆನ್‌ಲೈನ್‌ ಸುದ್ದಿ ತಾಣ ಕೂಡ ವರದಿ ಪ್ರಕಟಿಸಿತ್ತು. ವರದಿಯಲ್ಲಿ ಡಾಕ್ಟರ್ಸ್ ಅಸೋಸಿಯೇಷನ್ ಫಾರ್ ಸೋಶಿಯಲ್ ಇಕ್ವಾಲಿಟಿ ಕಾರ್ಯದರ್ಶಿ ಡಾ. ಶಾಂತಿ ರವೀಂದ್ರನಾಥ್‌ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದ ಬಗ್ಗೆ ಉಲ್ಲೇಖಿಸಲಾಗಿತ್ತು.

ಡಾ. ಶಾಂತಿ ರವೀಂದ್ರನಾಥ್‌ ಅವರು, “ಡೆಂಗ್ಯೂ ರೋಗಕ್ಕೆ ವೈಜ್ಞಾನಿಕ ತಳಹದಿಯ ಆಧಾರಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಹೊಸ ಹೊಸ ಸಂಶೋಧನೆಗಳು ಸಹ ನಡೆಯುತ್ತಿರುತ್ತವೆ. ಆದರೆ, ಪಪ್ಪಾಯಿ ಎಲೆಯ ರಸವು ಡೆಂಗ್ಯೂವನ್ನು ಗುಣಪಡಿಸುತ್ತದೆ ಎಂಬ ಸಮರ್ಥನೆಯನ್ನು ಬೆಂಬಲಿಸಲು ಯಾವುದೇ ವೈದ್ಯಕೀಯ ಆಧಾರವಿಲ್ಲ. ಸಿದ್ಧ ವೈದ್ಯರು ಕೂಡ ಡೆಂಗ್ಯೂಗೆ ಪಪ್ಪಾಯಿ ಎಲೆಯ ರಸವನ್ನು ಶಿಫಾರಸು ಮಾಡಿಲ್ಲ” ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಪಪ್ಪಾಯಿ ಎಲೆಯ ರಸದಿಂದ ರೋಗ ನಿರೋಧಕ ಹೆಚ್ಚಾಗಿ ಡೆಂಗ್ಯೂ ಬಾರದಂತೆ ತಡೆಯುತ್ತದೆ ಎಂಬುವುದರ ಬಗ್ಗೆ ಆರೋಗ್ಯ ಇಲಾಖೆ ಕೂಡ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಒಂದು ವೇಳೆ ಪಪ್ಪಾಯಿ ಎಲೆ ಸಂಪೂರ್ಣವಾಗಿ ಡೆಂಗ್ಯೂ ಖಾಯಿಲೆಯನ್ನು ನಿರ್ನಾಮ ಮಾಡುತ್ತದೆ ಎಂದರೆ ಈ ಕುರಿತು ಅಧಿಕತ ಸಲಹೆ ಸೂಚನೆಗಳಾದರೂ ಆರೋಗ್ಯ ಇಲಾಖೆಯಿಂದ ಬರುತ್ತಿದ್ದವು. ಹಾಗಾಗಿ, ಪಪ್ಪಾಯಿ ಎಲೆಯ ರಸದಿಂದ ಡೆಂಗ್ಯೂ ಗುಣಪಡಿಸಬಹುದು ಅಥವಾ ಬರದಂತೆ ತಡೆಯಬಹುದು ಎಂಬುವುದು ಜನರಲ್ಲಿರುವ ಒಂದು ಕಲ್ಪನೆ ಮಾತ್ರ ಎನ್ನಬಹುದು.

ಇದನ್ನೂ ಓದಿ : FACT CHECK : ಪೆಟ್ರೋಲ್, ಡೀಸೆಲ್ ಮೇಲೆ ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸುತ್ತಿದೆ ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...