HomeದಿಟನಾಗರFact Check: ಹಿಂದೂ ಧರ್ಮ ಬೋಧಿಸದಂತೆ ಕಾಂಗ್ರೆಸ್ ತಡೆ ಹಿಡಿದಿದೆ ಎಂಬುವುದು ಸುಳ್ಳು

Fact Check: ಹಿಂದೂ ಧರ್ಮ ಬೋಧಿಸದಂತೆ ಕಾಂಗ್ರೆಸ್ ತಡೆ ಹಿಡಿದಿದೆ ಎಂಬುವುದು ಸುಳ್ಳು

- Advertisement -
- Advertisement -

“ಸಂವಿಧಾನದ ಮೂಲಕ ಕಾಂಗ್ರೆಸ್ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಿತ್ತು. ಆದರೆ, ಅದನ್ನು ಘೋಷಿಸಲು ಆಗಿಲ್ಲ. ಕಾಂಗ್ರೆಸ್‌ನವರು ಆರ್ಟಿಕಲ್ 25ರ ಮೂಲಕ ಮತಾಂತರವನ್ನು ಕಾನೂನು ಬದ್ದಗೊಳಿಸಿದರು. ಆರ್ಟಿಕಲ್ 28ರ ಮೂಲಕ ಹಿಂದೂಗಳು ಧಾರ್ಮಿಕ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದರು. ಆರ್ಟಿಕಲ್ 28ರ ಪ್ರಕಾರ ಹಿಂದೂ ಧರ್ಮವನ್ನು ಬೋಧಿಸುವಂತಿಲ್ಲ. ಆದರೆ, ಆರ್ಟಿಕಲ್ 30ರ ಮೂಲಕ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ತಮ್ಮ ಧಾರ್ಮಿಕ ಶಿಕ್ಷಣ ಪಡೆಯಲು ಅನುಮತಿಸಲಾಗಿದೆ” ಎಂದು ಪ್ರತಿಪಾದಿಸಲಾದ ಸಂದೇಶವೊಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್ : ವೈರಲ್ ವಾಟ್ಸಾಪ್ ಸಂದೇಶದಲ್ಲಿ ಹೇಳಿರುವುದು ನಿಜಾನಾ? ಎಂದು ನಾನುಗೌರಿ.ಕಾಂ ಸತ್ಯಾ ಸತ್ಯತೆ ಪರಿಶೀಲನೆ ನಡೆಸಿದೆ.

ಇದಕ್ಕಾಗಿ ನಾವು ಸಂದೇಶದಲ್ಲಿ ಹೇಳಿರುವ ಸಂವಿಧಾನ ಆರ್ಟಿಕಲ್‌ಗಳು ಏನು ಹೇಳಿವೆ ಎಂದು ಪರಿಶೀಲಿಸಿದ್ದೇವೆ.

ಸಂವಿಧಾನದ 25ನೇ ವಿಧಿಯು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಹೇಳುತ್ತದೆ. ಇದು ಭಾರತದ ಎಲ್ಲಾ ವ್ಯಕ್ತಿಗಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ ಮತ್ತು ಭಾರತದ ಎಲ್ಲಾ ವ್ಯಕ್ತಿಗಳು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಮತ್ತು ಇತರ ನಿಬಂಧನೆಗಳಿಗೆ ಒಳಪಟ್ಟಿರುತ್ತಾರೆ ಎಂದು ಹೇಳುತ್ತದೆ. ಭಾರತದ ನಾಗರಿಕರು ಆತ್ಮಸಾಕ್ಷಿಯ ಸ್ವಾತಂತ್ರ್ಯಕ್ಕೆ ಸಮಾನವಾಗಿ ಅರ್ಹರಾಗಿರುತ್ತಾರೆ. ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸುವ, ಅಭ್ಯಾಸ ಮಾಡುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಈ ವಿಧಿ ನೀಡಿದೆ.

ಆರ್ಟಿಕಲ್ 25 ಭಾರತೀಯರಿಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆಯೇ ಹೊರತು, ಇದು ಮತಾಂತರವನ್ನು ಕಾನೂನು ಬದ್ದಗೊಳಿಸಿದ ವಿಧಿಯಲ್ಲ. ಧಾರ್ಮಿಕ ಸ್ವಾತಂತ್ರ್ಯ ಎನ್ನುವುದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಹಕ್ಕಾಗಿದೆ.

ಸಂವಿಧಾನದ 28ನೇ ವಿಧಿಯು ಸರ್ಕಾರದ ಅನುದಾನದಲ್ಲಿ ನಿರ್ವಹಿಸಲ್ಪಡುವ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಸೂಚನೆಗಳನ್ನು ನೀಡಲಾಗುವುದಿಲ್ಲ. ಇದು ಸರ್ಕಾರದಿಂದ ಧನಸಹಾಯ ಪಡೆದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಜಾತ್ಯತೀತವಾಗಿ ಉಳಿಯುತ್ತದೆ ಮತ್ತು ಧಾರ್ಮಿಕ ಬೋಧನೆಗಳನ್ನು ನೀಡುವುದಿಲ್ಲ ಎಂದು ಖಚಿತಪಡಿಸುತ್ತದೆ.

ಇನ್ನು ಸರ್ಕಾರದ ಅನುದಾನದಲ್ಲಿ ನಿರ್ವಹಿಸಲ್ಪಡೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಅನುಮತಿಸಲಾಗಿದೆ. ಆದರೆ, ಇಲ್ಲಿ ವಿದ್ಯಾರ್ಥಿಗಳು ಅಪ್ರಾಪ್ತರಾಗದ್ದರೆ ಅವರ ಪೋಷಕರ ಒಪ್ಪಿಗೆ ಅಗತ್ಯವಿದೆ. ಈ ಸಂಸ್ಥೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಧಾರ್ಮಿಕ ಬೋಧನೆಯನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿರುತ್ತಾರೆ.
ರಾಜ್ಯದ ನಿಧಿಯಿಂದ ಸಂಪೂರ್ಣವಾಗಿ ನಿರ್ವಹಿಸಲ್ಪಡದ ಶಿಕ್ಷಣ ಸಂಸ್ಥೆಗಳಲ್ಲಿ, ನಿರ್ದಿಷ್ಟ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳು ಸಂಸ್ಥೆಯು ನಡೆಸುವ ಧಾರ್ಮಿಕ ಪೂಜೆ ಅಥವಾ ಧಾರ್ಮಿಕ ಸೂಚನೆಗೆ ಹಾಜರಾಗುವ ಹಕ್ಕನ್ನು ಹೊಂದಿರುತ್ತಾರೆ.

ಸಂವಿಧಾನದ 30ನೇ ವಿಧಿಯು ಅಲ್ಪಸಂಖ್ಯಾತರಿಗೆ ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸುವ ಹಕ್ಕನ್ನು ನೀಡುತ್ತದೆ. ಈ ಹಕ್ಕನ್ನು ಧರ್ಮ ಅಥವಾ ಭಾಷೆಯ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ನೀಡಲಾಗಿದೆ ಮತ್ತು ಅವರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಿತಾಸಕ್ತಿಗಳನ್ನು ರಕ್ಷಿಸಲು ಉದ್ದೇಶಿಸಲಾಗಿದೆ. ಈ ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡುವಲ್ಲಿ ರಾಜ್ಯವು ಯಾವುದೇ ಶಿಕ್ಷಣ ಸಂಸ್ಥೆಯನ್ನು ಧರ್ಮ ಅಥವಾ ಭಾಷೆಯ ಆಧಾರದ ಮೇಲೆ ಅಲ್ಪಸಂಖ್ಯಾತರ ನಿರ್ವಹಣೆಗೆ ಒಳಪಟ್ಟಿದೆ ಎಂಬ ಕಾರಣಕ್ಕೆ ತಾರತಮ್ಯ ಮಾಡಬಾರದು. ಎಂದು ತಿಳಿಸುತ್ತದೆ.

ಅಲ್ಪ ಸಂಖ್ಯಾತರಿಗೆ ಅವರ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡಿರುವುದು, ಅಲ್ಪ ಸಂಖ್ಯಾತರ ಶೈಕ್ಷಣಿಕೆ, ಸಾಮಾಜಿಕ ಅಭಿವೃದ್ದಿಗಾಗಿ ಆಗಿದೆ. ಅಲ್ಲದೆ, ಅಲ್ಪ ಸಂಖ್ಯಾತರ ಧಾರ್ಮಿಕ ಶಿಕ್ಷಣವನ್ನು ಹರಡಲು ಅಲ್ಲ. ಇಲ್ಲಿ ಅಲ್ಪ ಸಂಖ್ಯಾತರು ಎಂದರೆ ಕೇವಲ ಮುಸ್ಲಿಮರು ಎಂಬುವುದು ತಪ್ಪು ಕ್ರೈಸ್ತರು, ಬೌದ್ಧರು, ಜೈನರು ಮತ್ತು ಪಾರ್ಸಿಗಳು ಕೂಡ ಅಲ್ಪ ಸಂಖ್ಯಾತರಾಗಿದ್ದಾರೆ.

ಹಾಗಾಗಿ, ಆರ್ಟಿಕಲ್ 25, 28, 30ರ ಮೂಲಕ ಕಾಂಗ್ರೆಸ್ ಮತಾಂತರವನ್ನು ಕಾನೂನು ಬದ್ದಗೊಳಿಸಿದೆ. ಹಿಂದೂಗಳನ್ನು ಧಾರ್ಮಿಕ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದೆ. ಹಿಂದೂ ಧರ್ಮದ ಬಗ್ಗೆ ಭೋದಿಸುವಂತಿಲ್ಲ ಎಂಬುದು ಸುಳ್ಳು ಪ್ರತಿಪಾದನೆಯಾಗಿದೆ.

ನಾವು ಮೇಲೆ ಉಲ್ಲೇಖಿಸಿದ ಪುರಾವೆಗಳನ್ನು ಹೊರತುಪಡಿಸಿ ನೋಡುವುದಾದರೆ, ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಸಂದೇಶ ಒಂದು ರೀತಿ ಬಾಲಿಶತನದಿಂದ ಕೂಡಿದೆ ಎಂದು ಹೇಳಬಹುದು. ಯಾಕೆಂದರೆ, ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇಲ್ಲಿರುವ ಪ್ರಸ್ತುತ ಕಾನೂನುಗಳ ಬಗ್ಗೆ ಸಾಮಾನ್ಯ ಅರಿವಿದೆ. ಇಲ್ಲಾ ಅಂದರೆ, ಸುಮ್ಮನೆ ಗೂಗಲ್ ಮೂಲಕ ಸರ್ಚ್ ಮಾಡಿದರೆ ಮೇಲೆ ಉಲ್ಲೇಖಿಸಿದ ಆರ್ಟಿಕಲ್‌ಗಳ ಬಗ್ಗೆ ಎಷ್ಟು ಮಾಹಿತಿ ಬೇಕಾದರು ಹಲವು ಮೂಲಗಳಲ್ಲಿ ಲಭ್ಯವಿದೆ.

ಹಿಂದೂಗಳು ಧರ್ಮ ಬೋಧಿಸುವಂತಿಲ್ಲ ಎಂಬುವುದು ಸುಳ್ಳು ಪ್ರತಿಪಾದನೆಯಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನ ಅಡಿ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಹೊಂದಿರುತ್ತಾರೆ. ದೇಶದಲ್ಲಿ ಪ್ರಸ್ತುತ ಹಿಂದೂ ಧಾರ್ಮಿಕ ಆಚರಣೆಗಳು ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿದೆ.

ಇದನ್ನೂ ಓದಿ : Fact Check : ‘ಮೋದಿ ದೇಶದ್ರೋಹಿ’ ಎಂಬ ಭಾಗ ಕೈಬಿಟ್ಟು ವೈಕೋ ಹೇಳಿಕೆ ಹಂಚಿಕೊಂಡ ANI

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...