PC: NDTV

ಮೂರು ವಿವಾದಾತ್ಮಕ ಕಾಯ್ದೆಗಳನ್ನು ವಾಪಸ್‌ ತೆಗೆದುಕೊಳ್ಳುವಂತೆ ದೆಹಲಿಯ ಹೊರಭಾಗದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿದೆ.

ಸುಪ್ರೀಂ ಕೋರ್ಟ್ ಈ ಹೋರಾಟಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಕೈಗೆತ್ತುಕೊಳ್ಳಲಿದ್ದು, ರೈತರು ತಮ್ಮ ಬಲವರ್ಧನೆಗೆ ಮುಂದಾಗಿದ್ದಾರೆ. ಇದರ ಭಾಗವಾಗಿ ‘ದೆಹಲಿ ಚಲೋ’ ಕಾರ್ಯಕ್ರಮಕ್ಕೆ ಕರೆ ನೀಡಿದ್ದಾರೆ. ಒಂದು ವರ್ಷದ ದಿಗ್ಬಂಧನದ ಅಂತ್ಯವೂ ಇದಾಗಬಹುದು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಿಂದ ರೈತರು ಬಂದು ದೆಹಲಿಯ ಗಡಿಗಳಲ್ಲಿ ಚಳವಳಿಯಲ್ಲಿ ಭಾಗವಹಿಸುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಪ್ರತಿಭಟನೆಯ ಹಕ್ಕು ಸಂಪೂರ್ಣವಾದ್ದದ್ದೇ ಎಂಬುದನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು. ಕಾಯ್ದೆಗಳಿಗೆ ಕೋರ್ಟ್ ತಡೆ ನೀಡಿದ್ದು, ವಿಚಾರಣೆ ನಡೆಯುತ್ತಿರುವುದರಿಂದ ರೈತರು ಬೀದಿಗೆ ಇಳಿಯುವ ಹಕ್ಕನ್ನು ಹೊಂದಿದ್ದಾರೆಯೇ ಎಂದು ಸುಪ್ರೀಂ ಪರಿಶೀಲಿಸಲಿದೆ ಎನ್ನಲಾಗಿದೆ. ಮೂರು ಹೊಸ ಕೃಷಿ ಕಾನೂನುಗಳ ಕುರಿತ ದಾವೆ ಸುಪ್ರೀಂಕೋರ್ಟ್‌ ನಡೆಯುತ್ತಿದೆ.

ಅಕ್ಟೋಬರ್‌ 3ರಂದು ನಾಲ್ಕು ಜನರ ರೈತರ ಹತ್ಯೆ ಸೇರಿದಂತೆ ಎಂಟು ಜನರ ಸಾವಿನ ಸಂಬಂಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು. ಉತ್ತರ ಪ್ರದೇಶದ ಲಖಿಂಪುರ್‌ನಲ್ಲಿ ನಡೆದ ಘಟನೆಯನ್ನು ಖಂಡಿಸಲಾಗಿತ್ತು.

ಲಖಿಂಪುರ್ ಖೇರಿಯಂತಹ ಘಟನೆಗಳನ್ನು ಅನುಮತಿಸಲಾಗದ ಕಾರಣ “ಇನ್ನು ಮುಂದೆ ರೈತ ಪ್ರತಿಭಟನೆಗಳು ಇರಬಾರದು” ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಈ ಮೂಲಕ ರೈತ ಚಳವಳಿಯನ್ನು ದಮನ ಮಾಡಲು ಸರ್ಕಾರ ಯತ್ನಿಸುತ್ತಿದೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಬಯಸಿರುವ ರೈತರ ಗುಂಪಿನ ಅರ್ಜಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ನೀಡಿದೆ. ಕೇಂದ್ರ ಸರ್ಕಾರವು ಅದನ್ನು ವಿರೋಧಿಸುತ್ತಿರುವಾಗ, ಉತ್ತರ ಪ್ರದೇಶದ ಹಿಂಸೆಯನ್ನು ಉಲ್ಲೇಖಿಸಿದೆ.

ಇದನ್ನೂ ಓದಿರಿ: ರೈತ ಹೋರಾಟ ನೆಲದಲ್ಲಿ ಹತ್ಯೆ: ಬಿಜೆಪಿ ಸಚಿವರೊಂದಿಗೆ ಆರೋಪಿತ ನಿಹಾಂಗ್ ಗುಂಪಿನ ಮುಖ್ಯಸ್ಥ ಸಭೆ

“ನಿನ್ನೆ ಲಖಿಂಪುರ್ ಖೇರಿಯಲ್ಲಿ ನಡೆದ ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಪ್ರತಿಭಟನೆಗಳು ಈ ರೀತಿ ನಡೆಯಲು ಸಾಧ್ಯವಿಲ್ಲ” ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹೇಳಿದ್ದಾರೆ. “ಕಾನೂನುಗಳನ್ನು ಈಗಾಗಲೇ ಕೋರ್ಟ್‌ ವ್ಯವಹರಿಸುತ್ತಿರುವಾಗ ಪ್ರತಿಭಟನೆಗೆ ಹೋಗಲು ಸಾಧ್ಯವಿಲ್ಲ ಎಂದು ದಯವಿಟ್ಟು ಹೇಳಿ” ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿ, “ಇಂತಹ ಘಟನೆಗಳು ಸಂಭವಿಸಿದಾಗ ಯಾರೂ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಜೀವ ಮತ್ತು ಆಸ್ತಿ ನಷ್ಟ. ಯಾರೂ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ” ಎಂದಿತ್ತು.

ರಾಜಸ್ಥಾನ ಮೂಲದ ರೈತ ಸಮೂಹವು ಜಂತರ್ ಮಂತರ್‌‌ನಲ್ಲಿ 200 ರೈತರೊಂದಿಗೆ “ಸತ್ಯಾಗ್ರಹ” ಆರಂಭಿಸಲು ಅನುಮತಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಈ ಹಿಂದೆ ನಡೆದ ಅಹಿತಕರ ಘಟನೆಗಳನ್ನು ಸುಪ್ರೀಂ ಉಲ್ಲೇಖಿಸಿದೆ. ಹೆದ್ದಾರಿಗಳನ್ನು ನಿರ್ಬಂಧಿಸುವುದು ಗುಂಪುಗಳ ಭಾಗವಲ್ಲ ಎಂದು ಅಫಿಡವಿಟ್ ಸಲ್ಲಿಸುವಂತೆ ಅರ್ಜಿದಾರರಿಗೆ ಹೇಳಲಾಗಿತ್ತು.

ಕೃಷಿ ಕಾನೂನುಗಳ ವಿರುದ್ಧ ಜಂತರ್‌ಮಂತರ್‌‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಕ್ಷೇಪಿಸಿದೆ.

“ದೆಹಲಿಯ ಗಡಿಗಳಲ್ಲಿ ಹೋರಾಟ ಮಾಡುತ್ತಿರುವ ಸಂಘಟನೆಗಳಿಗೂ ತನಗೂ ಯಾವ ರೀತಿಯಲ್ಲೂ ಸಂಬಂಧವಿಲ್ಲ, ತಾನು ಆ ಹೋರಾಟದ ಭಾಗವಾಗಿಲ್ಲ, ಹಾಗಾಗಿ ಜಂತರ್ ಮಂತರ್ ಅನುಮತಿ ಕೇಳುತ್ತಿದ್ದೇವೆ ಎಂದು ಅಫಿದಾವಿತ್ ಸಲ್ಲಿಸಿ” ಎಂದು ಆ ಸಂಘಟನೆಯನ್ನು ಸುಪ್ರೀಂ ಕೇಳಿದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆಗಳ ಸಂಪೂರ್ಣ ರದ್ಧತಿಗೆ ಆಗ್ರಹಿಸಿ ರೈತರು ಕೋರ್ಟ್ ಮೇಲೆ ಒತ್ತಡ ತರಲು ಮುಂದಾಗಿದ್ದಾರೆ.

ದಮನಕಾರಿ ಪ್ರವೃತ್ತಿ: ಕೇಸರಿ ಹರವು

ರೈತ ಚಳವಳಿಯನ್ನು ದಮನ ಮಾಡಲು ಯತ್ನಿಸುತ್ತಿರುವ ಸಾಲು ಸಾಲು ಘಟನೆಗಳನ್ನು ಉಲ್ಲೇಖಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವ ಚಿಂತಕ ಕೇಸರಿ ಹರವು ಅವರು, “ಕೇಂದ್ರ ಸರ್ಕಾರ ಮೂರನ್ನು ಆರು ಮಾಡಿ, ಆರನ್ನು ಒಂಭತ್ತು ಮಾಡಿಯಾದರೂ ಸರಿ, ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಸತ್ಯಾಗ್ರಹವನ್ನು ಕೊನೆಗಾಣಿಸಬೇಕು ಎನ್ನುವ ಹವಣಿಕೆಯಲ್ಲಿದೆ” ಎಂದಿದ್ದಾರೆ.

ಮುಂದುವರಿದು, “ಈ ವಾರ ಸುಪ್ರೀಂ ಕೋರ್ಟು ‘ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ಅನುಮತಿ ನೀಡಬೇಕೋ ಬೇಡವೋ’ ಎನ್ನುವ ಬಗ್ಗೆ ಮತ್ತೆ ವಿಚಾರಣೆ ನಡೆಸುತ್ತದೆ. ಅಂದೇ ತೀರ್ಪು ಬಂದರೂ ಬರಬಹುದು. ರಾಜಸ್ಥಾನದ ಒಂದು ರೈತ ಸಂಘಟನೆ ತಾನು ಸುಮಾರು ಇನ್ನೂರು ರೈತರನ್ನು ಸೇರಿಸಿ ಈ ಮೂರು ಕೃಷಿ ಕಾಯ್ದೆಗಳ ವಿರುದ್ಧ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಬೇಕೆಂದು ಅರ್ಜಿ ಹಾಕಿಕೊಂಡಿತ್ತು. ಅಲ್ಲದೇ, ಆ ಸಂಘಟನೆ ರಾಜಾಸ್ಥಾನದ ಹೈಕೋರ್ಟಿನಲ್ಲೂ ಈ ಕಾಯ್ದೆಗಳನ್ನು ಪ್ರಶ್ನಿಸಿದೆ. ಕಾಯ್ದೆಗಳನ್ನು ಕೋರ್ಟಿನಲ್ಲಿ ಪ್ರಶ್ನಿಸಿದ ಮೇಲೆ ನೀವು ಹೊರಗೆ ಪ್ರತಿಭಟನೆ ಏಕೆ ನಡೆಸಬೇಕು ಎನ್ನುತ್ತೀರಿ? ಅದಕ್ಕೆ ಅವಕಾಶ ನೀಡಬಹುದೇ? ಎಂದು ಕೋರ್ಟು ಕೇಳಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ರೈಲ್ ರೋಕೋ ಚಳವಳಿ: ನೂರಾರು ರೈತರ ವಿರುದ್ದ FIR ದಾಖಲಿಸಿದ ಹರಿಯಾಣ ಸರ್ಕಾರ

LEAVE A REPLY

Please enter your comment!
Please enter your name here