Homeಮುಖಪುಟಉತ್ತರಾಖಂಡ ಭಾರಿ ಮಳೆ: ಭೀಕರ ಪ್ರವಾಹದಿಂದ ಸಾವಿನ ಸಂಖ್ಯೆ 46ಕ್ಕೆ ಏರಿಕೆ

ಉತ್ತರಾಖಂಡ ಭಾರಿ ಮಳೆ: ಭೀಕರ ಪ್ರವಾಹದಿಂದ ಸಾವಿನ ಸಂಖ್ಯೆ 46ಕ್ಕೆ ಏರಿಕೆ

- Advertisement -
- Advertisement -

ಉತ್ತರಾಖಂಡದಲ್ಲಿ ಸತತ ನಾಲ್ಕನೇ ದಿನ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದಾದ್ಯಂತ ಅವ್ಯವಸ್ಥೆ ಮತ್ತು ಅನಾಹುತ ಸಂಭವಿಸಿದೆ. ಉಕ್ಕಿ ಹರಿಯುತ್ತಿರುವ ನದಿಗಳು, ಜಲಮೂಲಗಳಿಂದಾಗಿ ರಸ್ತೆಗಳು, ಕಟ್ಟಡಗಳು, ಸೇತುವೆಗಳು ಕೊಚ್ಚಿ ಹೋಗಿವೆ.

ಪ್ರವಾಹದಿಂದಾಗಿ ಇಲ್ಲಿಯವರೆಗೆ 467 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಕಟ್ಟಡ, ಭೂಕುಸಿತಗಳಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎಂದು ಅಧಿಕರತ ಮೂಲಗಳು ತಿಳಿಸಿವೆ.

ಸ್ಥಳೀಯರು ಮತ್ತು ಪ್ರವಾಸಿಗರು ದೂರದ ಸಂಪರ್ಕ ರಹಿತ  ಮತ್ತು ಅಪಾಯಕಾರಿ ಸ್ಥಳಗಳಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಾಖಂಡದ ರಾಣಿಖೇತ್ ಮತ್ತು ಅಲ್ಮೋರಾದಲ್ಲಿ ಸತತ ಎರಡನೇ ದಿನವೂ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ: ರೈಲ್ ರೋಕೋ ಚಳವಳಿ: ನೂರಾರು ರೈತರ ವಿರುದ್ದ FIR ದಾಖಲಿಸಿದ ಹರಿಯಾಣ ಸರ್ಕಾರ

ಕುಮಾವಾನ್ ವಿಭಾಗದ ಎರಡು ಹವಾಮಾನ ಕೇಂದ್ರಗಳಲ್ಲಿ 24 ಗಂಟೆಗಳ ಅವಧಿಯಲ್ಲಿ ಅತಿ ಹೆಚ್ಚು ಮಳೆ ದಾಖಲೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಡೆಹ್ರಾಡೂನ್ ಕೇಂದ್ರ ತಿಳಿಸಿದೆ.

ಅವಶೇಷಗಳಡಿ ಜೀವಂತ ಸಮಾಧಿಯಾದ ನೇಪಾಳದ ಕಾರ್ಮಿಕರು ಮತ್ತು ಭೂಕುಸಿತದಿಂದ ಮನೆ ಕುಸಿದ ಚಂಪಾವತ್ ಜಿಲ್ಲೆಯ ಜನರು ಸೇರಿದಂತೆ ಒಟ್ಟು 46 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  ಅವಶೇಷಗಳ ಅಡಿಯಲ್ಲಿ ಮತ್ತಷ್ಟು ಮಂದಿ ಸಿಲುಕಿರುವ ಸಂಶಯ ವ್ಯಕ್ತವಾಗಿದೆ. ಇಲ್ಲಿಯವರೆಗೆ ಪ್ರವಾಹ ಪೀಡಿತ ಪ್ರದೇಶಗಳಿಂದ 300 ಜನರನ್ನು ರಕ್ಷಿಸಲಾಗಿದೆ.

ಭಾರಿ ಮಳೆಯಿಂದ ನೈನಿತಾಲ್ ಜಿಲ್ಲೆಯ ಜಿಯೋಲಿಕೋಟೆಯಲ್ಲಿ ರಸ್ತೆ ಕುಸಿದಿದ್ದು, ಯಂತ್ರಗಳ ಸಹಾಯದಿಂದ ರಸ್ತೆಯ ಒಂದು ಭಾಗವನ್ನು ತೆರವುಗೊಳಿಸಲಾಗಿದೆ. ಅದರ ಸಮೀಪದಲ್ಲಿಯೂ ಭೂಕುಸಿತ ಸಂಭವಿಸಿದೆ.


ಇದನ್ನೂ ಓದಿ: ಪ್ರವಾಹದಿಂದಾಗಿ ಉತ್ತರಾಖಂಡ ತತ್ತರ, 11 ಮಂದಿ ದುರ್ಮರಣ: ಫೋಟೋ, ವಿಡಿಯೊ ನೋಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...