Homeಚಳವಳಿರೈತ ಹೋರಾಟ: ದೆಹಲಿಯ ಗಡಿಗಳಲ್ಲಿ ರೈತರ ತಿರಂಗಾ ಯಾತ್ರೆ

ರೈತ ಹೋರಾಟ: ದೆಹಲಿಯ ಗಡಿಗಳಲ್ಲಿ ರೈತರ ತಿರಂಗಾ ಯಾತ್ರೆ

- Advertisement -
- Advertisement -

ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವರ ರೈತರು, 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನವನ್ನು ‘ಕಿಸಾನ್ ಮಜ್ದೂರ್ ಆಜಾದಿ ಸಂಗ್ರಾಮ ದಿವಸ್’ ಎಂದು ಆಚರಿಸಿ, ತಿರಂಗಾ ಯಾತ್ರೆ ನಡೆಸಿದ್ದಾರೆ.

ಮಾಜಿ ಸೈನಿಕರು, ಪ್ರತಿಭಟನಾ ನಿರತ ರೈತರು ಭಾನುವಾರ ಸಿಂಘು ಗಡಿಯಲ್ಲಿ ತ್ರಿವರ್ಣ ಧ್ವಜ ಮೆರವಣಿಗೆ ನಡೆಸಿದ್ದಾರೆ. ಜೊತೆಗೆ ಪ್ರತಿಭಟನಾ ನಿರತ ರೈತರು ‘ಕಿಸಾನ್ ಮಜ್ದೂರ್ ಆಜಾದಿ ಸಂಗ್ರಾಮ ದಿವಸ್’ ಆಚರಿಸಿದ್ದಾರೆ.

ದೇಶಾದ್ಯಂತ ರೈತರು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ನಡೆಸಿದ್ದಾರೆ.  ಸಿಂಘು, ಟಿಕ್ರಿ ಮತ್ತು ಘಾಜಿಪುರ ಸೇರಿದಂತೆ ದೆಹಲಿಯ ಗಡಿಗಳಲ್ಲಿ, ದಿನವಿಡೀ ತ್ರಿವರ್ಣ ಧ್ವಜದ ಮೆರವಣಿಗೆಗಳು ಮತ್ತು ಕಾರ್ಯಕ್ರಮಗಳು ನಡೆದಿವೆ. ರೈತರ ಟೆಂಟ್, ಗುಡಿಸಲು, ಟ್ಯ್ರಾಲಿಗಳ ಮೇಲೆ ತಿರಂಗ ಧ್ವಜ ಹಾರಿಸಲಾಗಿದೆ.

ಇದನ್ನೂ ಓದಿ: ‘ಯೋಗಿ ನಿಮ್ಮ ಚರ್ಮ ಸುಲಿಯುತ್ತಾರೆ!’; ರೈತರಿಗೆ ಬಹಿರಂಗವಾಗಿ ಬೆದರಿಸಿದ ಯುಪಿ ಬಿಜೆಪಿ

Image

“ನಾವು ಬೆಳಿಗ್ಗೆ 8 ಗಂಟೆಗೆ ತಿರಂಗ ಧ್ವಜವನ್ನು ಹಾರಿಸಿದ್ದೇವೆ. ಸ್ವಾತಂತ್ರ್ಯ ದಿನವನ್ನು ಆಚರಿಸಲು ಹಪುರ್‌ನಿಂದ 500 ಮೋಟಾರ್ ಬೈಕ್‌ಗಳ ತಿರಂಗಾ ಯಾತ್ರೆ ಮಧ್ಯಾಹ್ನ 2 ಗಂಟೆಗೆ ಗಾಜಿಪುರ ಗಡಿಯನ್ನು ತಲುಪಿದೆ” ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನ ಧರ್ಮೇಂದ್ರ ಮಲ್ಲಿಕ್ ಹೇಳಿದ್ದಾರೆ.

ಪಂಜಾಬ್‌ನ ಮೊಗ್ಗ ಜಿಲ್ಲೆಯ ಅದಾನಿ ಸೈಲೋ ಬಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ಕೃಷಿ ಕಾನೂನುಗಳ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಸೈಲೋ ಕಟ್ಟಲು ಪ್ರಧಾನಿ ಮೋದಿಯವರು 2015 ರಲ್ಲಿ ಅಧಿಕಾರಕ್ಕೆ ಬಂದಾಗ ಸಹಾಯ ಮಾಡಿದರು. ಆಗ ಹೊಸ ಕಾನೂನುಗಳ ಮೂಲಕ ಅವರಿಗೆ ನೆರವಾಗುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ: ಮುಂದಿನ 6 ತಿಂಗಳಿಗಾಗಿ ಪಡಿತರ ಸಂಗ್ರಹಿಸುತ್ತಿರುವ ರೈತ ಮಹಿಳೆಯರು

“ಜನವರಿ 26 ರಂದು ನಡೆದ ಘಟನೆಗಳು ನಮ್ಮ ಚಳುವಳಿಗೆ ಧಕ್ಕೆ ತಂದಿವೆ. ಆದ್ದರಿಂದ ಆಗಸ್ಟ್ 15 ರಂದು ನಡೆಯುವ ತಿರಂಗಾ ಯಾತ್ರೆ ಯಾವುದೇ ನಗರವನ್ನು ಪ್ರವೇಶಿಸುವುದಿಲ್ಲ. ಆದರೆ ನಮ್ಮ ಬೇಡಿಕೆಗಳು ಈಡೇರುವವರೆಗೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ” ಎಂದು ರೈತ ನಾಯಕ ಜಗಮೋಹನ್ ಸಿಂಗ್ ಈ ಹಿಂದೆ ಸ್ಪಷ್ಟಪಡಿಸಿದ್ದರು.


ಇದನ್ನೂ ಓದಿ: ರೈತ ಹೋರಾಟ: ಸ್ವಾತಂತ್ರ್ಯ ದಿನದಂದು ತಿರಂಗಾ ಯಾತ್ರೆ ನಡೆಸಲಿರುವ ರೈತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...