Homeಮುಖಪುಟಬದಲಾಗುತ್ತಿರುವ ಸಮಯದಲ್ಲಿ ಯಾವ ಕಥೆ ಹೇಳಬೇಕು?

ಬದಲಾಗುತ್ತಿರುವ ಸಮಯದಲ್ಲಿ ಯಾವ ಕಥೆ ಹೇಳಬೇಕು?

- Advertisement -
- Advertisement -

| ರಾಜಶೇಖರ್ ಅಕ್ಕಿ |

‘ಇಂದಿನ ಮಾಡರ್ನ್ ಹುಡುಗಿಯರು ತುಂಬಾ ಸ್ಮಾರ್ಟ್, ಎಷ್ಟು ಫಾಸ್ಟ್ ಆಗಿರ್ತಾರೆ’, ‘ಇಂದಿನ ಮಕ್ಕಳನ್ನು ನೋಡಿ, ಅವರಿಗೆ ಎಲ್ಲವೂ ತಿಳಿಯುತ್ತೆ; ಆ ವಯಸ್ಸಿನಲ್ಲಿ ನಮಗೇನಾದರೂ ತಿಳೀತಿತ್ತಾ?’, ‘ಇಂದಿನ ಯುವಕರಿಗೆ ಜವಾಬ್ದಾರಿ ಎನ್ನುವುದೇ ಇಲ್ಲ, ತಾವಾಯಿತು, ತಮ್ಮ ಜಿಮ್ ಆಯಿತು, ತಮ್ಮ ಮೊಬೈಲ್ ಫೋನ್ ಆಯಿತು, ಬೇರೇನೂ ಮಾಡುವುದಿಲ್ಲ’, ‘ಮುಂಚೆ ಸಂಬಂಧಗಳು ಎಷ್ಟು ಚೆನ್ನಾಗಿದ್ದವು, ಎಷ್ಟು ನಂಬಿಕೆ ಇತ್ತು, ಎಲ್ಲಾ ಹದಗೆಟ್ಟು ಹೋಗ್ತಿವೆ.’

ಇವೆಲ್ಲ ನಾವು ಸಾಮಾನ್ಯವಾಗಿ ಕೇಳುವ ಮಾತುಗಳು. ಬದಲಾವಣೆ ಜಗತ್ತಿನ ನಿಯಮ. ಬದಲಾವಣೆಯನ್ನು ದಾಖಲಿಸುವುದು ಒಂದು ಮುಖ್ಯ ಕೆಲಸ. ಪ್ರಮುಖವಾಗಿ ಇತಿಹಾಸಕಾರರು ಮಾಡುವ ಈ ಕೆಲಸಕ್ಕೆ ಕಲಾವಿದರ ಕೊಡುಗೆಯೂ ಅಷ್ಟೇ ಮುಖ್ಯವಾಗಿದೆ (ಮುಖ್ಯವಾಗಿರಬೇಕು). ಬದಲಾವಣೆಯ ಸಮಯದಲ್ಲಿ ಯಾವ ಕಥೆ ಹೇಳಬೇಕು ಎನ್ನುವುದಕ್ಕೆ ಉತ್ತರ ಹುಡುಕುವ ಮುನ್ನ, ಈವರೆಗೆ ಆದ ಬದಲಾವಣೆಗಳನ್ನು ಗಮನಿಸುವ.

ಸುಮಾರು 13 ಸಾವಿರ ವರ್ಷಗಳ ಹಿಂದೆ ಕೃಷಿಯನ್ನು ಕಂಡುಹಿಡಿಯಲಾಯಿತಂತೆ. ಅದಕ್ಕಿಂತ ಮುಂಚೆ ಬೇಟೆಯಾಡಿ. ಅದನ್ನೇ ಸಂಗ್ರಹಿಸುವುದು ಒಂದೇ ಮನುಷ್ಯರ ಕಸುಬಾಗಿತ್ತು (hunter gatherers). ಕೃಷಿಯನ್ನು ಕಂಡುಹಿಡಿದ ಮೇಲೆ, ಅದನ್ನು ಸಂಗ್ರಹಿಸುವುದು, ಮಾರುವುದು ಕೊಳ್ಳುವುದು ಹೀಗೆಲ್ಲ ಶುರುವಾಗಿ ಅನೇಕ ಕಸುಬುಗಳು ಹುಟ್ಟಿಕೊಂಡವು. ಸಮಾಜ ಬದಲಾಗುತ್ತ ಬಂದಿತು. ಹೊಟ್ಟೆ ತುಂಬಿಸಿಕೊಳ್ಳುವುದೇ ಪ್ರಧಾನ ಕಸುಬು ಎನ್ನುವುದು ಇಲ್ಲವಾದೊಡನೇ ಇತರ ಕಸುಬುಗಳೊಂದಿಗೆ ಕಲೆ, ಕಲೆಯ ಇತರ ಮಾಧ್ಯಮಗಳೂ ಹುಟ್ಟಿಕೊಂಡವು. (ಈಜಿಪ್ಟಿನ ಪಿರಾಮಿಡ್‍ಗಳನ್ನು ಕಲಾಕೃತಿಯೆಂತಲೇ ಕರೆಯಬಹುದಲ್ಲವೇ?) ಮನುಷ್ಯರ ವಲಸೆ ಹೆಚ್ಚಾದಂತೆ, ಹೊಸ ಹೊಸ ನಾಗರಿಕತೆಗಳು ಹುಟ್ಟಿಕೊಂಡವು, ಯುದ್ಧಗಳಾದವು, ಸಾಮ್ರಾಜ್ಯಗಳನ್ನು ಕಟ್ಟಲಾಯಿತು. ಆ 13 ಸಾವಿರ ವರ್ಷಗಳ ಹಿಂದೆ ಲಕ್ಷಾಂತರ ವರ್ಷಗಳವರೆಗೆ ಆದ ಬದಲಾವಣೆ ಮತ್ತು ಕೃಷಿಯನ್ನು ಕಂಡುಹಿಡಿದ ನಂತರ ಆದ ಬದಲಾವಣೆಗಳನ್ನು ಹೋಲಿಸಿ ನೋಡಿದರೆ, ಈ 13 ವರ್ಷಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳೆಂದೇ ಹೇಳಬೇಕಾಗುತ್ತದೆ.

ಕೈಗಾರಿಕಾ ಕ್ರಾಂತಿಯಿಂದಾಗಿ ಕಳೆದ ಎರಡು ಶತಕಗಳಿಂದ ಬದಲಾವಣೆಯು ತೀವ್ರಗತಿ ಪಡೆದುಕೊಂಡಿತು. ಹೊಸ ತಂತ್ರಜ್ಞಾನಗಳು ಬಂದವು, ಹೊಸ ನಾಗರಿಕತೆಗಳು ಹುಟ್ಟಿಕೊಂಡವು. ಮಾಹಿತಿ ತಂತ್ರಜ್ಞಾನ ಮತ್ತು ಜಾಗತೀಕರಣದಿಂದ ಕಳೆದ ಕೆಲವು ದಶಕಗಳಲ್ಲಿ ಆದ ಕ್ಷಿಪ್ರಬದಲಾವಣೆಯೂ ಸಮಾಜದಲ್ಲಿ ಅತ್ಯಂತ ಗಹನವಾದದ್ದೇ.

ಭಾರತವೂ ಈ ಎಲ್ಲ ಬದಲಾವಣೆಗೆ ಹೊರತಾಗಿಲ್ಲ. ಕೈಗಾರಿಕಾ ಕ್ರಾಂತಿಯು ಪಾಶ್ಚಿಮಾತ್ಯ ದೇಶಗಳ ಜನರನ್ನು ಇಡಿಯಾಗಿ ಬಾಧಿಸಿ, ಅವರ ಜೀವನಶೈಲಿಯು ಇಡಿಯಾಗಿಯೇ ಬದಲಾದರೆ, ಭಾರತದ ಬದಲಾವಣೆ ಹಂತಹಂತವಾಯಿತು (ಆಗುತ್ತಿದೆ) ಹಾಗೂ ದೇಶದ ಎಲ್ಲರನ್ನೂ ಈ ಬದಲಾವಣೆಗಳು ಸಮಾನವಾಗಿ ಬಾಧಿಸಲಿಲ್ಲ. ನಗರೀಕರಣವು ಅತ್ಯಂತ ವೇಗ ಗತಿಯಲ್ಲಿ ಆಗುತ್ತಿದ್ದರೂ, ಎಲ್ಲಾ ಜನರ ಜೀವನವೂ ಒಂದೇ ರೀತಿಯಲ್ಲಿ ಬದಲಾವಣೆ ಆಗದೇ ಇರುವುದು ಸ್ಪಷ್ಟ. ಈ ಬದಲಾವಣೆಗಳು ನಮ್ಮ ಸಂಬಂಧಗಳಲ್ಲೂ ಬದಲಾವಣೆ ತಂದಿದ್ದು ಸ್ಪಷ್ಟವಾಗಿದೆ. ಬದಲಾವಣೆಯ ಹಂತದಲ್ಲಿರುವ ಸಂಬಂಧಗಳನ್ನು ಅರ್ಥೈಸಿಕೊಳ್ಳುವದು ಅಷ್ಟು ಸುಲಭವಲ್ಲ. ಇಂತಹ ಬದಲಾವಣೆಯ ಸಮಯದಲ್ಲಿ ಆಗುವ ಒಂದು ದೊಡ್ಡ ತೊಡಕೆಂದರೆ, confirmation bias. ಅಂದರೆ, ನಾವು ಕಾಣುವ ಎಲ್ಲಾ ವಿದ್ಯಮಾನಗಳನ್ನು ನಾವು ಮುಂಚೆಯೇ ನಿರ್ಧಾರಕ್ಕೆ ಬಂದ ನಿರ್ಣಯಗಳಿಗೆ ಅನುಗುಣವಾಗಿ ನೋಡುವುದು; ನಾವು ನೋಡುವ ಎಲ್ಲಾ ಉದಾಹರಣೆಗಳು, ಸಾಕ್ಷ್ಯಗಳು ನಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಸಿಗುತ್ತವೆ.

ಗ್ರಾಮೀಣ ಬದುಕಿನ ಕಥೆಗಳನ್ನು ಮತ್ತು ಬದಲಾವಣೆಯ ಸೋಂಕು ತಟ್ಟಿದರೂ ಹೆಚ್ಚಿನ ಬದಲಾವಣೆ ಆಗದೇ ಇರುವವರ ಕಥೆ ಹೇಳಿದಾಗ ಅವುಗಳು ಹಳತಾದ್ದವು ಅನಿಸುತ್ತವೆ; ಅದೇ ಆಧುನಿಕ ಜಗತ್ತಿನ ಕಥೆಗಳನ್ನು ಹೇಳಿದಾಗ ಅವುಗಳನ್ನು ಅರ್ಥಮಾಡಿಕೊಂಡಿಲ್ಲ ಮತ್ತು ಆಧುನಿಕ ಜನರನ್ನು ಪೂರ್ವಗ್ರಹಪೀಡಿತ ದೃಷ್ಟಿಯಿಂದ ನೋಡಲಾಗಿದೆ ಹಾಗೂ ಹುರುಳಿಲ್ಲದವು ಎನಿಸುತ್ತವೆ. ಆದರೆ ಈ ಎರಡು ಜಗತ್ತುಗಳು ನಮ್ಮೊಡನೇ ಏಕಕಾಲಕ್ಕೆ ಇರುವುದೂ ಸತ್ಯ. ಈ ಕಾರಣದಿಂದಾಗಿ ಯಾವುದೇ ಕಥೆ ಬರೆಯುವ ಮುನ್ನ ಅಧ್ಯಯನವು ಮುಖ್ಯವಾಗುತ್ತದೆ.

ಕೆಲವರ್ಷಗಳ ಹಿಂದೆ ಸ್ನೇಹಿತನೊಬ್ಬ ಭಾರತದಲ್ಲಿ ಹೆಚ್ಚಾಗುತ್ತಿರುವ ವಿಚ್ಛೇದನದ ಪ್ರಕರಣಗಳ ಬಗ್ಗೆ ಒಂದು ಕಿರುಚಿತ್ರವನ್ನು ಮಾಡಿದ್ದ. ಕ್ಷುಲ್ಲಕ ಕಾರಣಕ್ಕಾಗಿ ವಿಚ್ಛೇದನಗಳು ಆಗುತ್ತಿವೆ ಎಂದು ನಂಬಿದ್ದ ಆತ ಒಬ್ಬ ಯುವತಿಯು ವಿಚ್ಛೇದನ ಪಡೆಯುವುದಕ್ಕಾಗಿ ಒಬ್ಬ ವಕೀಲನ ಬಳಿ ಬರುತ್ತಾಳೆ. ಆ ವಕೀಲ ವಿಚ್ಛೇದನಕ್ಕೆ ಕಾರಣಗಳನ್ನು ಕೇಳಿ, ಅವಳು ನೀಡುವ ಕಾರಣ ಕ್ಷುಲ್ಲಕವಾಗಿದೆ ಹಾಗೂ ಈ ದಂಪತಿಗಳು ವಿಚ್ಛೇದನ ಪಡೆಯದೇ ಜೊತೆಗೇ ಇರಬೇಕೆಂದು ತೀರ್ಮಾನಿಸಿ, ವಿಚ್ಛೇದನದ ಪ್ರಕ್ರಿಯೆಯ ಕಾರಣ ಹೇಳಿ ಅವಳೊಂದಿಗೆ ಹಲವಾರು ಸಲ ಭೇಟಿಯಾಗುತ್ತಾನೆ. ವಕೀಲನೊಂದಿಗೆ ಸಮಾಲೋಚನೆಯಾದ ನಂತರ ಯುವತಿಯು ವಿಚ್ಛೇದನವನ್ನು ಪಡೆಯುವ ವಿಚಾರವನ್ನು ಕೈಬಿಟ್ಟು ತನ್ನ ಗಂಡನೊಂದಿಗೆ ವೈವಾಹಿಕ ಜೀವನ ಮುಂದುವರೆಸುತ್ತಾಳೆ.

ಮೇಲ್ನೋಟಕ್ಕೆ ಅವನು ಮಾಡಿದ್ದು ಅನೇಕರಿಗೆ ಸರಿಯೆನಿಸಬಹುದು (ಸರಿಯೆನಿಸಿದೆ ಕೂಡ, ಒಂದು ಚಿತ್ರಬರಹ ಕಾರ್ಯಾಗಾರದಲ್ಲಿ ಈ ಚಿತ್ರವನ್ನು ಪ್ರದರ್ಶನ ಮಾಡಲಾಗಿತ್ತು). ಹೇಗೂ ವಿಚ್ಛೇದನದ ಪ್ರಕರಣಗಳು ಹೆಚ್ಚುತ್ತಿವೆ, ಅದಕ್ಕೆ ಅನೇಕ ಕ್ಷುಲ್ಲಕವಾದ ಕಾರಣಗಳಿವೆ ಎಂದು ಪತ್ರಿಕೆಗಳಲ್ಲಿ ಓದಿದ್ದೂ ಇದೆ. ಆದರೆ ಇದು ನಿಜವಾ? ವಿಚ್ಛೇದನದ ಪ್ರಕರಣಗಳು ನಿಜಕ್ಕೂ ಹೆಚ್ಚಿವೆಯಾ? ಕ್ಷುಲ್ಲಕ ಕಾರಣಗಳಿಂದ ‘ಮಹಿಳೆಯರು’ ವಿಚ್ಛೇದನ ಪಡೆಯುತ್ತಿದ್ದಾರೆಯೇ? ಖಂಡಿತವಾಗಿಯೂ ಇಲ್ಲ. ಭಾರತದಲ್ಲಿ ವಿಚ್ಛೇದನದ ದರ ಶೇ.2ಕ್ಕಿಂತ ಕಡಿಮೆ. (ಕಳೆದ ವರ್ಷದ ಇಪಿಡಬ್ಲು ವರದಿಯ ಪ್ರಕಾರ). ಕ್ಷುಲ್ಲಕ ಕಾರಣದಿಂದ ಯಾವ ಮಹಿಳೆಗೂ ವಿಚ್ಛೇದನ ಪಡೆಯಲು ಅಸಾಧ್ಯವೆಂದೇ ಹೇಳಬಹುದು. ಸಂಗಾತಿ ಎಂತಹವನೇ ಆಗಿರಲಿ ಅವನೊಂದಿಗೆ ಇರಲೇಬೇಕು ಅಥವಾ ಸಾಯಬೇಕು ಎನ್ನುವ ಪರಿಸ್ಥಿತಿ ಇನ್ನೂ ಇದೆ. ಇದಕ್ಕೆ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರಿಗೇ ಸಿಗುತ್ತವೆ. ಆದರೆ ಇದೂ ಕನ್ಫರ್ಮೇಷನ್ ಬಯಾಸ್ ಅಲ್ಲ ಎಂದು ಹೇಗೆ ಹೇಳಬಲ್ಲೆವು?

ಮತ್ತೇ ಆ ತಪ್ಪನ್ನು ಮಾಡದಿರಲು, ಸರಿಯಾದ ಅಧ್ಯಯನದೊಂದಿಗೆ ನಾವು ಹೇಳುತ್ತಿರುವ ಪಾತ್ರಗಳನ್ನು ಕೂಲಂಕೂಷವಾಗಿ ಪರಿಶೀಲಿಸಬೇಕಿದೆ. ನಮ್ಮ ಪಾತ್ರಗಳು ಅಥವಾ ಪಾತ್ರಗಳಾಗಲಿರುವ ವ್ಯಕ್ತಿಗಳು ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದನ್ನು ನೋಡಬೇಕಾಗುತ್ತದೆ. ಆಯಾ ಪಾತ್ರಗಳು ಅವರು ಮಾಡುವ ಕೆಲಸಗಳಿಗೆ ನಮಗೆ ಕಾರಣಗಳನ್ನು ನೀಡಲು ಸಾಧ್ಯವಾಗದೇ ಹೋಗಬಹದು, ಆಯಾ ಪಾತ್ರಗಳೇ ಕಾರಣಗಳನ್ನು ಅರಿತಿರದೇ ಇರಬಹುದು.

ಬಹುಶಃ ಇದೇ ಕಾರಣಕ್ಕೆ ಹಾಲಿವುಡ್‍ನ ಚಿತ್ರಕಥೆ ಲೇಖಕ ಮತ್ತು ನಿರ್ದೇಶಕ ಡೇವಿಡ್ ಮ್ಯಾಮೆಟ್ ಅವರು ‘keep it simple and stupid’ ಎಂದು ಹೇಳಿರಬೇಕು. ಕಥೆಗಳನ್ನು ನಾವು ಕಂಡಂತೆ ದಾಖಲಿಸುತ್ತ ಹೋಗುವ, ನಮ್ಮ ಅಭಿಪ್ರಾಯಗಳನ್ನು, ಆದರ್ಶಗಳನ್ನು, ಸಿದ್ಧಾಂತಗಳನ್ನು ಬದಿಗಿಟ್ಟು ನಮ್ಮ ಪಾತ್ರಗಳನ್ನು, ಅವರು ಮಾಡುತ್ತಿರುವುದನ್ನು ನೋಡಿ ದಾಖಲಿಸುವ. ಹೀಗೆ ಬರೆದ ಕಥೆಗಳೇ ಮುಂದಿನ ದಿನಗಳಲ್ಲಿ ಸಾಮಾನ್ಯ ಜನತೆಯ ಬದುಕಿನ ಅಧ್ಯಯನವಾಗಿ ಕಾಣಿಸಿಕೊಳ್ಳಬಹುದು. ಗೊರೂರು ರಾಮಸ್ವಾಮಿ ಐಯಂಗಾರ್ ಅವರ ನಮ್ಮ ಊರಿನ ರಸಿಕರು ಇದಕ್ಕೆ ಅದ್ಭುತ ಉದಾಹರಣೆ. ಈ ಪುಸ್ತಕದಲ್ಲಿ ಪಾತ್ರಗಳು, ಕಥೆಗಳು ಹುಟ್ಟುತ್ತ ಹೋಗುತ್ತವೆ, ಅಲ್ಲಿ ಆ ದಿನಗಳ ಆರ್ಥಿಕ ಸಾಮಾಜಿಕ ವ್ಯವಸ್ಥೆಯ ವಿವರಣೆ ಅಥವಾ ಟಿಪ್ಪಣಿ ಮಾಡಲು ಹೋಗುವುದಿಲ್ಲ, ಜಾತಿಪದ್ಧತಿಯ ಬಗ್ಗೆ ಅಥವಾ ಅದರ ಕೆಡುಕಿನ ಬಗ್ಗೆ ಬರೆಯುವುದಿಲ್ಲ ಆದರೂ ಆ ಪುಸ್ತಕ ಆ ಪ್ರದೇಶದ ಮತ್ತು ಸಮಯದ ಕನ್ನಡಿಯಾಗಿದೆ.

ಪ್ರಾರಂಭದಲ್ಲಿ ಬರೆದ ಮಾತುಗಳೆಲ್ಲ ಸಂಪೂರ್ಣ ಸುಳ್ಳು ಎಂದು ಹೇಳಲಾಗದಿದ್ದರೂ, ಅಲ್ಲಿ ಯಾವುದೇ ಅಧ್ಯಯನ ಅಥವಾ ಪರಿಶೀಲನೆ ಕಂಡುಬರುವುದಿಲ್ಲ. ಆ ಮಾತುಗಳನ್ನು ನಂಬಿ, ಅದಕ್ಕೆ ಪೂರಕವಾದ ಕಥೆಗಳನ್ನು ಹೇಳಿದಾಗ ಅವುಗಳು ಕೆಟ್ಟ ಕಥೆಗಳಷ್ಟೇ ಅಲ್ಲ, ತಿರೋಗಾಮಿ ಪ್ರವೃತ್ತಿಯನ್ನು ಬೆಳೆಸಲು ಸಹಕಾರಿಯಾಗುವ ಕಥೆಗಳಾಗುತ್ತವೆ. ನಮ್ಮವರೇ ಆದ ಗೊರೂರು ರಾಮಸ್ವಾಮಿಯವರ ಕಥೆಗಳಿಂದ ಕಲಿತುಕೊಳ್ಳುವುದು ಸಾಕಷ್ಟಿದೆ. ಆಯಾ ಘಟನೆಗಳೇ ನಮ್ಮ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಬಗ್ಗೆ ಅಭಿಪ್ರಾಯಗಳನ್ನು ರೂಪಿಸಲಿ, ಆಯಾ ಪಾತ್ರಗಳೇ ಸಂಬಂಧಗಳು ಹೇಗಿದ್ದವು, ಕ್ಲಿಷ್ಟವಾಗಿದ್ದವಾ, ಸುಂದರವಾಗಿದ್ದವಾ, ಹದಗೆಟ್ಟಿದ್ದವಾ ಎನ್ನುವುದನ್ನು ಹೇಳಲಿ. ಕಥೆಯನ್ನು ಓದಿದ, ಚಿತ್ರವನ್ನು ನೋಡಿದ ನೋಡುಗರು ಯಾವುದೇ ಅಭಿಪ್ರಾಯ ಹೊಂದಿದ್ದರೂ ಸತ್ಯವನ್ನು ಅಲ್ಲಗಳೆಯಲಾಗದಂತಹ ಕಥೆಗಳನ್ನು ಹೇಳುವ. ಏನೇ ಆಗಲಿ ಯಾವ ಕಥೆಯನ್ನು, ಹೇಗೆ ಹೇಳಬೇಕು ಎನ್ನುವ ತೊಳಲಾಟವಂತೂ ಬಿಟ್ಟದ್ದಲ್ಲ. ಬದಲಾವಣೆಯೊಂದಿಗೆ ಈ ತೊಳಲಾಟವೂ ನಿರಂತರವೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...