Homeಚಳವಳಿಸ್ವಾಮಿ ನಾರಾಯಣ ಗುರುಗಳು ಮತ್ತು ಮುಸ್ಲಿಮರು.. - ಇಸ್ಮತ್ ಪಜೀರ್

ಸ್ವಾಮಿ ನಾರಾಯಣ ಗುರುಗಳು ಮತ್ತು ಮುಸ್ಲಿಮರು.. – ಇಸ್ಮತ್ ಪಜೀರ್

- Advertisement -
- Advertisement -

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಳೆದೆರಡು ದಶಕಗಳ ಕೋಮು ಸಂಘರ್ಷದ ಇತಿಹಾಸ ತೆಗೆದು ನೋಡಿದರೆ‌ ಇಲ್ಲಿ ಕೋಮು ಬೆಂಕಿಗೆ ಅತೀ ಹೆಚ್ಚು ಉರುವಲಾಗಿ ಬಳಕೆಯಾದವರು ಬಿಲ್ಲವರು ಎಂಬ ಸತ್ಯ ನಮಗೆ ಮನವರಿಕೆಯಾಗುತ್ತದೆ.‌ ಅದಾಗ್ಯೂ ಆ ಸಮುದಾಯಕ್ಕೆ ವಸ್ತುಸ್ಥಿತಿ ಯಾಕೆ ಅರ್ಥವಾಗುತ್ತಿಲ್ಲ ಎನ್ನುವುದೇ ನಮ್ಮ ಮುಂದಿರುವ ಉತ್ತರವಿಲ್ಲದ ಪ್ರಶ್ನೆ.

ಹಾಗೆ ನೋಡ ಹೋದರೆ ಬಿಲ್ಲವರು ಮತ್ತು ಮುಸ್ಲಿಮರೇನೂ ಆ ಜನ್ಮ ವೈರಿಗಳಲ್ಲ. ಇಲ್ಲಿನ ಮುಸ್ಲಿಮರಲ್ಲಿ ದೊಡ್ಡ ಸಂಖ್ಯೆಯವರು ಒಂದು ಕಾಲದ ಬಿಲ್ಲವರೋ, ದಲಿತರೋ ಆಗಿದ್ದವರು. ಸ್ವಯಂ ಘೋಷಿತ ಉಚ್ಚ ಕುಲದವರ ಶೋಷಣೆ, ದೌರ್ಜನ್ಯ ತಾಳಲಾರದೇ ಇಸ್ಲಾಂ ಧರ್ಮ ಸ್ವೀಕರಿಸಿದವರು.

ಇದನ್ನೇ ಮಲಯಾಳಂ ಮಹಾಕವಿ ಕುಮಾರನಾಶಾನ್ ತನ್ನ ಕವಿತೆಯಲ್ಲಿ ಹೀಗೆ ಬರೆದಿದ್ದಾರೆ.
“ಆಟ್ಟುಂ ವಿಲಕ್ಕುಂ ವಯಿಯಾಟ್ಟುಂ
ಮಟ್ಟುಮೀ ಕೂಟರ್ ಸಹಿಚ್ಚು
ಪೊರುದಿಮುಟ್ಟಿ ವಿಟ್ಟದಾಂ ಹಿಂದು ಮದಂ
ಜಾದಿಯಿಲ್ ತಾನ್ನ, ಕೆಟ್ಟು ಕಯಿಂಞ ನಂಬೂದಿರಿ ಮದಂ…

ಕೇರಳತ್ತಿಂಗಳ್ ಮುಸಲ್ಮಾನ್‌ಮಾರ್
ಪಶ್ಚಿಮ ಪಾರಂಙಳಿಲ್ ನಿನ್ನೋ..
ವನ್‌ಕಡಲ್ ಚೀರುಂ ತಿರಗಳ್ ಕಡನ್ನೋ…
ಹಿಮಾಲಯಮೇರಿ ವನ್ನವರೇರೆಯಿಲ್ಲ…
ರೇರೆಚ್ಚೆರುಮನ್ ಪೋಯಿ ತೊಪ್ಪಿಯಿಟ್ಟಾಲ್ ಚಿತ್ರಯವನೆತ್ತಿ ಚಾರುತ್ತರುತ್ತಿಡಾಂ..
ಚೆಟ್ಟುಂ  ತಂಬುರಾರೇ…..”

ಸಾರಾಂಶ : ಅಟಕಾಯಿಸುವುದನ್ನು, ಹೊಡೆಯುವುದನ್ನು, ದಾರಿಯಲ್ಲಿ ಕಂಡರೆ ಬಡಿಯುವುದನ್ನು… ಸಹಿಸಿ ತಾಳ್ಮೆ ಕಳಕೊಂಡ ಆ ಜನರು ಜಾತಿ ಪದ್ಧತಿಯಲ್ಲಿ ಕೆಟ್ಟು ಕೆರ ಹಿಡಿದು ಹೋದ ನಂಬೂದಿರಿಗಳ ಅಧಿಪತ್ಯದ (ಬ್ರಾಹ್ಮಣ) ಮತವನ್ನು ತ್ಯಜಿಸಿದರು.
ಕೇರಳದ ಮುಸ್ಲಿಮರಲ್ಲಿ ಪಶ್ಚಿಮ ಘಟ್ಟಗಳ ದಾಟಿಯೋ, ಕಡಲ ತೆರೆಗಳ ದಾಟಿಯೋ, ಹಿಮಾಲಯವೇರಿ ಬಂದವರು ಹೆಚ್ಚಿಲ್ಲ. ಅವರು ಹೋಗಿ ಟೊಪ್ಪಿಯಿಟ್ಟಾಗ (ಇಸ್ಲಾಂ ಸ್ವೀಕರಿಸಿದಾಗ) ಅವರ ಮೇಲಿನ ಶೋಷಣೆ ಕೊನೆಗೊಂಡಿತು.
ಈ ಕವಿತೆ ಬರೆದ ಕುಮಾರನಾಶಾನ್ ಬೇರೆ ಯಾರೂ ಅಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳ ಖಾಸಾ ಶಿಷ್ಯ ಮತ್ತು ಸಂಗಡಿಗ.

ಕೇರಳದಲ್ಲಿ ಈಳವ (ಬಿಲ್ಲವ) ಸಮುದಾಯ ಮತ್ತಿತರ ಕೆಳವರ್ಗದ ಮೇಲೆ ತಿರುವಾಂಕೂರು ಅರಸರು ಮೇಲ್ವರ್ಗದವರ ಚಿತಾವಣೆಯ ಮೇರೆಗೆ ಹೇರಿದ್ದ ದುಷ್ಟ ಮತ್ತು ಅಮಾನವೀಯ ತೆರಿಗೆಯೊಂದಿತ್ತು. ಅದೇ ಮುಲಕ್ಕರ ಅರ್ಥಾತ್ ಸ್ತನ ತೆರಿಗೆ. ಕೆಳವರ್ಗದ ಮಹಿಳೆಯರು ತಮ್ಮ ಸ್ತನಗಳನ್ನು ಮುಚ್ಚುವಂತಿರಲಿಲ್ಲ. ಒಂದು ವೇಳೆ ಮುಚ್ಚಿದರೆ ಅದಕ್ಕೆ ಬಾರೀ ತೆರಿಗೆ ಕಟ್ಟಬೇಕಿತ್ತು. ಮಲಬಾರ್ ಪ್ರದೇಶವು‌ ಟಿಪ್ಪು ಸುಲ್ತಾನರ ಅಧೀನಕ್ಕೆ ಬಂದಾಗ ಟಿಪ್ಪು ಅಂತಹ ಅಮಾನವೀಯ ತೆರಿಗೆಯನ್ನು ತೆಗೆದು ಹಾಕಿದರು ಮಾತ್ರವಲ್ಲದೇ ಅಂತಹ ನೀಚ ಪದ್ಧತಿಯನ್ನು ಹೇರುವವರಿಗೆ ಖಡಕ್ ಎಚ್ಚರಿಕೆ ಕೊಟ್ಟು ಅದನ್ನು ಕೊನೆಗೊಳಿಸಿದರು. ಟಿಪ್ಪು ಸುಲ್ತಾನರ ಮರಣಾನಂತರ ಮತ್ತೆ ಅದೇ ಅಮಾನವೀಯ ಪದ್ಧತಿ ಜಾರಿಗೆ ಬಂತು.‌ ಆ ಬಳಿಕ ಅದರ ವಿರುದ್ಧ ಹೋರಾಟ ಮಾಡಿ ಅದಕ್ಕೆ ಕೊನೆ ಹಾಡಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು.

ಇಂದು ಅದೇ ಟಿಪ್ಪುವಿನ ಸಮುದಾಯವಾದ ಮುಸ್ಲಿಮರ ವಿರುದ್ಧ ಅದೇ ಬ್ರಾಹ್ಮಣಶಾಹಿ ಶಕ್ತಿಗಳು ಬಿಲ್ಲವರನ್ನು ಎತ್ತಿ ಕಟ್ಟಿ ತಮಾಷೆ ನೋಡುತ್ತಿದೆ. ಈ ವಾಸ್ತವ ಎಲ್ಲಿಯವರೆಗೆ ಬಿಲ್ಲವರಿಗೆ ಅರ್ಥವಾಗುವುದಿಲ್ಲವೋ ಅಲ್ಲಿಯವರೆಗೆ ಅವರು ಬಲಿಪಶುವಾಗುವುದನ್ನು ತಡೆಯಲು ಯಾರಿಂದಲೂ‌ ಸಾಧ್ಯವಿಲ್ಲ.

ಸ್ವಾಮಿ ನಾರಾಯಣ ಗುರುಗಳು ಪ್ರವಾದಿ (ಸ) ಮತ್ತು ಇಸ್ಲಾಂ ಧರ್ಮದ ಬಗ್ಗೆ ಅತೀವ ಗೌರವವನ್ನೂ ಹೊಂದಿದ್ದರು.
ಅದಕ್ಕೆ ಅವರ ಒಂದು ಕವನವೇ ಸಾಕ್ಷಿ‌ಯೊದಗಿಸುತ್ತದೆ.

“ಪುರುಷಾಕೃತಿ ಪೂಂಡ ದೈವಮೋ…
ನರವಿಭ್ಯಾಕೃತಿ ಪೂಂಡ ಧರ್ಮಮೋ…
ಪರಮೇಶ ಪವಿತ್ರ ಪುತ್ರನೋ…
ಕರುಣಾಮಾನ್ ನೆಬಿ ಮುತ್ತು ರತ್ನಮೋ…..”
ಸಾರಾಂಶ : ಪುರುಷ ರೂಪ ತಾಳಿ ಬಂದ ದೇವನೋ…
ಮನುಷ್ಯ ರೂಪದಲ್ಲವತರಿಸಿದ ಧರ್ಮವೋ…
ಪರಮೇಶ್ವರ‌ನ ಪವಿತ್ರ ಪುತ್ರನೋ…
ಕರುಣಾಳು ಪ್ರವಾದಿ ಮುತ್ತು ರತ್ನವೋ…..

ಇಂದು ಅದೇ ಗುರುಗಳ ಹೆಸರಲ್ಲಿ ಹುಟ್ಟು ಹಾಕಲಾದ SNDP ಸ್ವಾಮಿ ನಾರಾಯಣಗುರು ಧರ್ಮ ಪರಿಪಾಲನಾ ಸಂಸ್ಥೆಯು ಇತಿಹಾಸವನ್ನು ಮರೆತು ಮತ್ತೆ ಅದೇ ಮನುವಾದಿಗಳ ತೆಕ್ಕೆಗೆ ಸರಿಯುತ್ತಿರುವುದನ್ನು ವರ್ತಮಾನದ ಕ್ರೂರ ವ್ಯಂಗ್ಯವೆನ್ನದೇ ವಿಧಿಯಿಲ್ಲ.

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ಇದನ್ನೂ ಓದಿ: ಒಂದು ಜಾತಿ, ಒಂದು ಮತ, ಒಂದೇ ದೇವರು ಎಂಬ ಸಂದೇಶ ಸಾರಿದ ಸಂತ ನಾರಾಯಣ ಗುರುಗಳು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...