Homeಮುಖಪುಟಅಮೆರಿಕದ ಇತಿಹಾಸದಲ್ಲಿ ಮೊದಲ ಪ್ರಕರಣ: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ

ಅಮೆರಿಕದ ಇತಿಹಾಸದಲ್ಲಿ ಮೊದಲ ಪ್ರಕರಣ: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ

- Advertisement -
- Advertisement -

2020ರ ಜಾರ್ಜಿಯಾ ಚುನಾವಣಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಲಾಗಿದೆ. ಆದರೆ ಕೂಡಲೇ 200,000 ಡಾಲರ್ ಬಾಂಡ್ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.

ಅಮೆರಿಕದ 2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಲೆಕೆಳಗಾಗಿಸಲು ಇತರೆ 18 ಜನರೊಂದಿಗೆ ಸೇರಿಕೊಂಡು ಪಿತೂರಿ ನಡೆಸಿದ್ದರು ಎಂಬ ಆರೋಪ ಟ್ರಂಪ್ ಮೇಲಿದೆ. ಅವರು ಅಟ್ಲಾಂಟಾದ ಫುಲ್ಟೋನ್ ಕೌಂಟಿ ಜೈಲಿನ ಒಳಗೆ ಸರಿಸುಮಾರು 30 ನಿಮಿಷ ಕಳೆದರು. ಬಳಿಕ ಬಿಡುಗಡೆಯಾಗಿ ಬೆಂಗಾವಲು ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು.

ಈ ಪ್ರಕರಣದಲ್ಲಿ ಉಳಿದ ಆರೋಪಿಗಳಂತೆಯೇ ಶರಣಾಗತರಾದ 77 ವರ್ಷದ ಟ್ರಂಪ್, ಬಂಧನ ಪ್ರಕ್ರಿಯೆ ವೇಳೆ ಮಗ್ ಶಾಟ್ (ಭುಜದ ಮೇಲಿನ ಮುಖದ ಚಿತ್ರ) ಫೋಟೋ ತೆಗೆಸಿಕೊಳ್ಳುವಂತಾಗಿದೆ.

ಅಟ್ಲಾಂಟಾ ಜೈಲಿನಲ್ಲಿನ ಟ್ರಂಪ್ ಅವರ ಚಿತ್ರವನ್ನು ಜಾರ್ಜಿಯಾದ ಫುಲ್ಫಾನ್ ಕೌಂಟಿಯ ಮೆಫ್ ಕಚೇರಿ ಬಿಡುಗಡೆ ಮಾಡಿದೆ. ಪೆರಿಫ್ ಕಚೇರಿ ಬಿಡುಗಡೆ ಮಾಡಿರುವ ಚಿತ್ರದಲ್ಲಿ ಕಡು ನೀಲಿ ಸೂಟ್, ಬಿಳಿ ಅಂಗಿ ಮತ್ತು ಕೆಂಪು ಟೈ ತೊಟ್ಟಿದ್ದ ಟ್ರಂಪ್, ಕ್ಯಾಮೆರಾ ಕಡೆ ಮುಖ ಗಂಟಿಕ್ಕಿಕೊಂಡಿರುವುದನ್ನು ನೋಡಬಹುದು. ಅಮೆರಿಕದ ಇತಿಹಾಸದಲ್ಲಿ ಹಾಲಿ ಅಥವಾ ಯಾವುದೇ ಮಾಜಿ ಅಧ್ಯಕ್ಷರು ಈ ರೀತಿ ಜೈಲಿಗೆ ಹೋಗಿದ್ದು ಇದು ಮೊದಲ ನಿದರ್ಶನವಾಗಿದೆ.

ಕಳೆದ ಮಾರ್ಚ್‌ನಿಂದ ಟ್ರಂಪ್‌ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳಲ್ಲಿ ಇದು ನಾಲ್ಕನೆಯದಾಗಿದೆ. ಫಾರಿಡಾ, ವಾಷಿಂಗ್ಟನ್‌ನಲ್ಲಿಯೂ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಟ್ರಂಪ್

ಶರಣಾಗುತ್ತೇನೆ ಎಂದಿದ್ದ ಟ್ರಂಪ್

ತಮ್ಮ ಬಂಧನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ”ಇದು ಅಮೆರಿಕಕ್ಕೆ ದುಃಖದ ದಿನ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ”ಇಲ್ಲಿ ನಡೆದಿರುವುದು ನ್ಯಾಯದ ಅಣಕ. ನಾನು ಯಾವ ತಪ್ಪೂ ಮಾಡಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಸ್ವಂತ ಟ್ರುತ್ ಸಾಮಾಜಿಕ ಜಾಲತಾಣದಲ್ಲಿ ಮಗ್ ಶಾಟ್ ಫೋಟೋ ಹಂಚಿಕೊಂಡಿರುವ ಟ್ರಂಪ್, ‘ಚುನಾವಣೆಯಲ್ಲಿ ಹಸ್ತಕ್ಷೇಪ’ ಎಂಬ ಅಡಿ ಶೀರ್ಷಿಕೆ ನೀಡಿದ್ದಾರೆ. ಅದರ ಜತೆ ತಮ್ಮ ಪ್ರಚಾರದ ವೆಬ್‌ಸೈಟ್‌ನ ಕೊಂಡಿ ಪೋಸ್ಟ್ ಮಾಡಿದ್ದಾರೆ. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ಟ್ರಂಪ್ ಮುಂಚೂಣಿಯಲ್ಲಿದ್ದಾರೆ.

ಫುಲ್ಟೋನ್ ಕೌಂಟಿ ಜೈಲಿನಲ್ಲಿ ಟ್ರಂಪ್ ಅವರಿಗೆ ಕೈದಿ ಸಂಖ್ಯೆ ”PO1135809” ನೀಡಲಾಗಿತ್ತು. ಅವರ ಎತ್ತರ 6.3 ಅಡಿ, ತೂಕ 97 ಕೆಜಿ ಎಂದು ನಮೂದಿಸಲಾಗಿದ್ದು, ಅವರ ಕೂದಲಿನ ಬಣ್ಣವನ್ನು ಹೊಂಬಣ್ಣ ಅಥವಾ ಸ್ಟ್ರಾಬೆರ್ರಿ ಎಂದು ಉಲ್ಲೇಖಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...