HomeUncategorizedಕೇರಳ : ಸಿಪಿಐ ಹಿರಿಯ ನಾಯಕ ಆರ್‌.ರಾಮಚಂದ್ರನ್ ನಿಧನ

ಕೇರಳ : ಸಿಪಿಐ ಹಿರಿಯ ನಾಯಕ ಆರ್‌.ರಾಮಚಂದ್ರನ್ ನಿಧನ

- Advertisement -
- Advertisement -

ಕೇರಳದ ಕರುನಾಗಪ್ಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಸಿಪಿಐ ರಾಜ್ಯ ಸಮಿತಿ ನಾಯಕ ಆರ್‌. ರಾಮಚಂದ್ರನ್ ಇಂದು (ನ.21) ನಿಧನರಾಗಿದ್ದಾರೆ. ಲಿವರ್ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ರಾಮಚಂದ್ರನ್ ಅವರು ಕೊಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನಾಳೆ (ನ.22 ಬುಧವಾರ) ಕರುನಾಗಪಲ್ಲಿಯ ನಿವಾಸದ ಬಳಿ ರಾಮಚಂದ್ರನ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಕೊಲ್ಲಂ ಜಿಲ್ಲಾ ಸಿಪಿಐ ಕಚೇರಿ ಹಾಗೂ ಚಾವರ ಮತ್ತು ಕರುನಾಗಪಲ್ಲಿ ಮಂಡಲ ಸಿಪಿಐ ಕಚೇರಿಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ರಾಮಚಂದ್ರನ್ ಕಳೆದ ಬಾರಿಯ ಕೇರಳ ವಿಧಾನಸಭಾ ಚುನಾವಣೆಗೆ ಕರುನಾಗಪಲ್ಲಿ ಕ್ಷೇತ್ರದ ಸಿಪಿಐ ಅಭ್ಯರ್ಥಿಯಾಗಿದ್ದರು. ಅಲ್ಲದೆ, ಕೊಲ್ಲಂ ಜಿಲ್ಲಾ ಸಿಪಿಐ ಕಾರ್ಯದರ್ಶಿಯಾಗಿ ಸುದೀರ್ಘ ಸಮಯ ಕಾರ್ಯನಿರ್ವಹಿಸಿದ್ದರು. ಎಲ್‌ಡಿಎಫ್ ಕನ್ವೀನರ್‌ ಆಗಿಯೂ ರಾಮಚಂದ್ರನ್ ಕರ್ತವ್ಯ ನಿರ್ವಹಿಸಿದ್ದರು.

ಇದನ್ನೂ ಓದಿ : ಉತ್ತರ ಪ್ರದೇಶ: ಅತ್ಯಾಚಾರ ಸಂತ್ರಸ್ತೆಯನ್ನು ಹತ್ಯೆಗೈದ ಸಹೋದರರು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಪ್ರಕರಣ; ದಾಳಿಕೋರ ಥಾಮಸ್ ಮ್ಯಾಥ್ಯೂ ಗುರುತು ಪತ್ತೆ

0
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನದಲ್ಲಿ ಭಾಗಿಯಾಗಿರುವ ಶಂಕಿತನನ್ನು ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಎಫ್‌ಬಿಐ...