Homeಅಂತರಾಷ್ಟ್ರೀಯಹಣ ವಂಚನೆ ಪ್ರಕರಣ: ಮಲೇಷ್ಯಾ ಮಾಜಿ ಪಧಾನಿ ನಜೀಬ್‌ಗೆ 12 ವರ್ಷ ಜೈಲು

ಹಣ ವಂಚನೆ ಪ್ರಕರಣ: ಮಲೇಷ್ಯಾ ಮಾಜಿ ಪಧಾನಿ ನಜೀಬ್‌ಗೆ 12 ವರ್ಷ ಜೈಲು

- Advertisement -
- Advertisement -

ಮಲೇಷ್ಯಾದ ಮಾಜಿ ಪ್ರಧಾನಿ ನಜೀಬ್ ರಜಾಕ್ ವಿರುದ್ಧ ಹಣ ವಂಚನೆ ಆರೋಪಗಳು ಸಾಬೀತಾದ ಹಿನ್ನಲೆಯಲ್ಲಿ 12 ವರ್ಷ ಸೆರೆವಾಸ ಶಿಕ್ಷೆ ವಿಧಿಸಿ ಕೌಲಾಲಂಪುರ್ ಹೈಕೋರ್ಟ್ ಇಂದು ತೀರ್ಪು ನೀಡಿದೆ.

ಕಳ್ಳಸಾಗಣೆ, ಹಣ ವರ್ಗಾವಣೆ ಮತ್ತು ಅಧಿಕಾರ ದುರುಪಯೋಗ ಸೇರಿದಂತೆ ಏಳು ಪ್ರಕರಣಗಳನ್ನು ನಜೀಬ್‌ ವಿರುದ್ಧ ಹೊರಿಸಲಾಗಿದ್ದು, ಕಳೆದ ಎರಡು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಇಂದು ಈ ತೀರ್ಪು ಹೊರ ಬಂದಿದೆ.

ಮಲೇಷಿಯಾದ ಅಭಿವೃದ್ಧಿ ನಿಧಿಯ (1 ಎಂಡಿಬಿ) ಅಂಗಸಂಸ್ಥೆಗಳಲ್ಲಿ ಒಂದಾದ ಎಸ್‌ಆರ್‌ಸಿ ಇಂಟರ್‌ನ್ಯಾಷನಲ್‌ನ ನಿಧಿಯಿಂದ ಸುಮಾರು 42 ಮಿಲಿಯನ್ ಮಲೇಷಿಯಾ ರಿಂಗ್‌ಗಿಟ್ ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನಜೀಬ್ ರಜಾಕ್ ವಿರುದ್ಧದ ಎದ್ದ ಪ್ರಮುಖ ಆರೋಪವಾಗಿತ್ತು.

ನಜೀಬ್ ಶಿಕ್ಷೆಗೊಳಗಾಗಿದ್ದರಿಂದ ಅವರ ಬೆಂಬಲಿಗರು ತೀರಾ ದುಃಖದಲ್ಲಿ ಮುಳುಗುತ್ತಿದ್ದಾರೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಘೋಷಿಸಿದ್ದಾರೆ.

ಈ ತೀರ್ಪು ಮಲೇಷಿಯಾದ ರಾಜಕೀಯದ ಬದಲಾವಣೆಗೆ ಕಾರಣವಾಗಬಹುದು ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.


ಓದಿ: ಪಿಎಂ ಕೇರ್ಸ್‌ಗೆ 60,000 ಕೋಟಿ ಹರಿದುಬಂದಿದೆ, ಆದರೂ ಮೋದಿ ಲೆಕ್ಕ ಕೊಡುತ್ತಿಲ್ಲ: ಸಿದ್ದರಾಮಯ್ಯ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ ಐತಿಹಾಸಿಕ...