Homeಮುಖಪುಟನಾಲ್ವರು ನಕ್ಸಲರ ಹತ್ಯೆ; ಪೊಲೀಸ್ ಸಿಬ್ಬಂದಿ ಸಾವು

ನಾಲ್ವರು ನಕ್ಸಲರ ಹತ್ಯೆ; ಪೊಲೀಸ್ ಸಿಬ್ಬಂದಿ ಸಾವು

- Advertisement -
- Advertisement -

ದಂತೇವಾಡ: ಛತ್ತೀಸಗಢದ ಬಸ್ತಾರ್‌ ಪ್ರದೇಶದಲ್ಲಿ ಭಾನುವಾರದಂದು ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲರು ಹತ್ಯೆಯಾಗಿದ್ದು, ಒಬ್ಬ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್ ಮೃತಪಟ್ಟಿದ್ದಾರೆ ಎಂದು ಬಸ್ತಾರ್ ನ ಐಜಿ ಪಿ.ಸುಂದರರಾಜ್ ತಿಳಿಸಿದ್ದಾರೆ.

ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಕ್ಷಿಣ ಅಬುಜ್‌ಮದ್‌ ಅರಣ್ಯದಲ್ಲಿ ಶನಿವಾರ ಸಂಜೆ ಭದ್ರತಾ ಸಿಬ್ಬಂದಿ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆಯಿತು ಎಂದು ಐಜಿ ತಿಳಿಸಿದ್ದಾರೆ.

ಶನಿವಾರ ತಡರಾತ್ರಿ ಗುಂಡಿನ ಚಕಮಕಿ ನಿಂತಿದ್ದು, ಸ್ಥಳದಿಂದ ನಾಲ್ವರು ನಕ್ಸಲೀಯರ ಮೃತದೇಹಗಳು, ಎಕೆ-47 ರೈಫಲ್ ಮತ್ತು ಸ್ವಯಂ ಲೋಡಿಂಗ್ ರೈಫಲ್ (SLR) ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತಪಟ್ಟ  ಹೆಡ್ ಕಾನ್‌ಸ್ಟೆಬಲ್ ಕರಮ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತೀಚಿನವರೆಗೂ ಮಾವೋವಾದಿಗಳ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟ ಛತ್ತೀಸಗಡದಲ್ಲಿ  ಭದ್ರತಾ ಪಡೆಗಳು ಕಳೆದ ಕೆಲವು ತಿಂಗಳುಗಳಲ್ಲಿ  ಅನೇಕ ನಕ್ಸಲೀಯರನ್ನು ಮಟ್ಟಹಾಕಿವೆ.

ಶುಕ್ರವಾರ ಮುಂಜಾನೆ, ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ಕಂಡೇಶರ್ ಗ್ರಾಮದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಮೂವರು ನಕ್ಸಲೀಯರು ಹತರಾಗಿದ್ದರು. ಎನ್‌ಕೌಂಟರ್ ಸ್ಥಳದಿಂದ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು.

ಕಳೆದ ವರ್ಷ ಡಿಸೆಂಬರ್‌ನಲ್ಲಿ, ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನ ಇಬ್ಬರು ಕೋಬ್ರಾ ಕಮಾಂಡೋಗಳು ಗಾಯಗೊಂಡಿದ್ದರು.

ಬಸಗುಡ ಪೊಲೀಸ್ ಠಾಣಾ ವ್ಯಾಪ್ತಿಯ ನೇಂದ್ರ-ಪುನ್ನೂರು ಅರಣ್ಯದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ. ಸ್ಥಳದಿಂದ ಒಟ್ಟು ಎರಡು 12 ಬೋರ್ ಬಂದೂಕುಗಳು, ನಕ್ಸಲ್ ಸಮವಸ್ತ್ರಗಳು, ಸಾಹಿತ್ಯ, ಸ್ಫೋಟಕಗಳು ಮತ್ತು ಇತರ ನಕ್ಸಲ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಜಯವಾಡ ಕಸ್ಟಡಿಯಲ್ಲಿ ಸಾಯಿ ಕೃಷ್ಣ ಸಾವು: ಶವ ದಹನ, ಸಾಕ್ಷ್ಯ ನಾಶ ಖಚಿತ ಪಡಿಸಿದ ಎಸ್ಐಟಿ; ಸುಪ್ರೀಂ ಕೋರ್ಟ್ ನೇರ ಮೇಲ್ವಿಚಾರಣೆ 

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿ 25 ವರ್ಷದ ಗದೆ ಸಾಯಿ ಕೃಷ್ಣ ಅವರ ನಾಪತ್ತೆ ಹಾಗೂ ಶಂಕಿತ ಕಸ್ಟಡಿ ಸಾವಿನ ಪ್ರಕರಣ ಇದೀಗ ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಗೆ ಒಳಪಟ್ಟಿದೆ. ಕೃಷ್ಣಲಂಕಾ ಪೊಲೀಸರು ವಶಕ್ಕೆ...

ಜ್ಞಾನೇಶ್ ಕುಮಾರ್‌ನನ್ನು ವಜಾಗೊಳಿಸಿ-SIR ರದ್ದುಗೊಳಿಸುವಂತೆ ಒತ್ತಾಯಿಸಿ ಸೆ.26 ಪ್ರತಿಭಟನೆಗೆ ಎಡ ಪಕ್ಷಗಳು ಹಾಗೂ SIR ವಿರೋಧಿ ಒಕ್ಕೂಟ ಕರೆ

ಕೇಂದ್ರ ಚುನಾವಣಾ ಆಯೋಗವು ಎಸಗಿರುವ ಅಕ್ರಮಗಳ ಪಾಪದ ಕೊಡ ತುಂಬಿದ್ದು, ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳು ಜಗಜ್ಜಾಹೀರಾಗಿವೆ ಎಂದು ‘SIR ವಿರೋಧಿ ಜನಪರ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ’ ಆಕ್ರೋಶ ವ್ಯಕ್ತಪಡಿಸಿದೆ. ಮುಖ್ಯ...

SIR ಜಾರಿಯಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮೇಲೆ ಸಂಶಯ ಮೂಡಿದೆ: ಅಶೋಕ್ ಲವಾಸ ಕಳವಳ

ಚುನಾವಣಾ ಪ್ರಕ್ರಿಯೆಯ ಶುದ್ಧೀಕರಣದ ನೆಪದಲ್ಲಿ ನೈಜ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಅಥವಾ ಬೇಟೆಯಾಡುವ ಪ್ರವೃತ್ತಿಯನ್ನು ತಕ್ಷಣವೇ ಕೈಬಿಡಬೇಕು, SIR ಪ್ರಕ್ರಿಯೆಯಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ವರ್ಚಸ್ಸಿಗೆ ಭಾರೀ ಧಕ್ಕೆಯಾಗುತ್ತಿದೆ ಎಂದಿರುವ ಮಾಜಿ...

“ಟರ್ನ್ ಅಪ್ರೂವರ್ ಆಗಿ”: ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯ; ಮತ ಕಳ್ಳತನ ಆರೋಪದಲ್ಲಿ ಮೋದಿ, ಶಾ ತನಿಖೆ ನಡೆಯಬೇಕಿದೆ: ರಾಹುಲ್ ಗಾಂಧಿ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣಾ ವ್ಯವಸ್ಥೆಯಲ್ಲಿ ನಡೆದಿರುವುದಾಗಿ ಆರೋಪಿಸಲಾಗುತ್ತಿರುವ ಅಕ್ರಮಗಳ ಕುರಿತು “ಅನುಮೋದಕರಾಗಿ” (ಅಪ್ರೂವರ್) ಬದಲಾಗಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ...

SIR : ಭಾಲ್ಕಿ, ಬೆಳಗಾವಿ ಉತ್ತರ-ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಅರ್ಹ ಮತಗಳ ಡಿಲೀಟ್‌ಗೆ ಯತ್ನ; ಅನ್ಯರು ಫಾರಂ-7 ಸಲ್ಲಿಸಿರುವುದು ಬಯಲು!

ಭಾರತೀಯ ಚುನಾವಣಾ ಆಯೋಗದಲ್ಲಿ (ಇಸಿಐ) ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆ ಬಟಾಬಯಲಾಗಿ ದೇಶದಾದ್ಯಂತ ಭಾರೀ ಚರ್ಚೆಯಾಗುತ್ತಿರುವ ನಡುವೆಯೇ, ಕರ್ನಾಟಕದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌)...

‘ದಿಮಾಗಿ ನಕ್ಸಲರು ಚುನಾವಣಾ ಆಯುಕ್ತರನ್ನು ಗುರಿಯಾಗಿಸಿಕೊಂಡಿದ್ದಾರೆ..’; ಗ್ಯಾನೇಶ್‌ ಕುಮಾರ್ ಬೆಂಬಲಕ್ಕೆ ನಿಂತ ಅಸ್ಸಾಂ ಸಿಎಂ

ಮುಖ್ಯ ಚುನಾವಣಾ ಆಯುಕ್ತರು ಇತರ ಚುನಾವಣಾ ಆಯುಕ್ತರನ್ನು ಸಂಪರ್ಕಿಸದೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಯು ಇದು ರಾಜಕೀಯ ಪ್ರಚಾರ ಹಾಗೂ ವಿರೋಧ ಪಕ್ಷಗಳ...

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯ: ಸಂಕಷ್ಟದಲ್ಲಿ ಲಕ್ಷಾಂತರ ‘Gen Z’ ಯುವಕರ ಮತದಾನದ ಹಕ್ಕು!

ಭಾರತೀಯ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಇಬ್ಬರು ಆಯುಕ್ತರ ನಡುವೆ ಉಂಟಾಗಿದೆ ಎನ್ನಲಾದ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ, ದೇಶದ ನೂತನ ಯುವ ಮತದಾರರ ಸೇರ್ಪಡೆ ಪ್ರಕ್ರಿಯೆ ಮಂದಗತಿಯಲ್ಲಿದೆ ಎಂಬ ವರದಿ...

‘ಅನ್ಯಾಯಯುತ’ ಚುನಾವಣೆಗಳಿಗೆ ಅವಕಾಶ ನೀಡಿದ್ದಕ್ಕಾಗಿ ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು: ಪ್ರಿಯಾಂಕಾ ಗಾಂಧಿ

ವಯನಾಡ್: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಕೋಟ್ಯಂತರ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿರುವ ವಿಚಾರದ ನಡುವೆಯೇ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ನ ವಾಗ್ದಾಳಿ ಮತ್ತಷ್ಟು ತೀವ್ರಗೊಂಡಿದೆ. ಮತದಾರರ...

48 ಗಂಟೆಯೊಳಗೆ ರಾಜೀನಾಮೆ ನೀಡದಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ; ಗ್ಯಾನೇಶ್ ಕುಮಾರ್‌ಗೆ ಸಿಜೆಪಿ ಎಚ್ಚರಿಕೆ

ದೇಶದ ಅತ್ಯಂತ ದೊಡ್ಡ ರಾಷ್ಟ್ರದ್ರೋಹಿ ಎಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), "ಮತದಾರರ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದ್ದಾರೆ" ಎಂದು ಆರೋಪಿಸಿ ಅವರ...

11 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಗರ್ಭಧಾರಣೆ ಮುಂದುವರಿಸಲು ಒತ್ತಾಯಿಸಲಾಗದು: 24 ವಾರ ಮೀರಿದರೂ ಗರ್ಭಪಾತಕ್ಕೆ ಜಮ್ಮು-ಕಾಶ್ಮೀರ ಹೈಕೋರ್ಟ್ ಅನುಮತಿ

ಶ್ರೀನಗರ: ಲೈಂಗಿಕ ದೌರ್ಜನ್ಯದಿಂದ ಗರ್ಭಿಣಿಯಾಗಿರುವ 11 ವರ್ಷದ ಬಾಲಕಿಯನ್ನು ಕಾನೂನಿನಲ್ಲಿರುವ ನಿಗದಿತ ಅವಧಿಯನ್ನು ಮೀರಿದೆ ಎಂಬ ಕಾರಣಕ್ಕೆ ಗರ್ಭಧಾರಣೆಯನ್ನು ಪೂರ್ಣ ಅವಧಿಯವರೆಗೆ ಮುಂದುವರಿಸುವಂತೆ ಒತ್ತಾಯಿಸಲಾಗುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್...