Homeಚಳವಳಿಪ್ರಜಾಪ್ರಭುತ್ವದ ಮುಖವಾಡ ಹಾಕುವಲ್ಲಿ ಸಫಲವಾದ ಜೀವವಿರೋಧಿ ಮೋದಿ ಸರ್ಕಾರ: ಜಿ.ರಾಜಶೇಖರ್

ಪ್ರಜಾಪ್ರಭುತ್ವದ ಮುಖವಾಡ ಹಾಕುವಲ್ಲಿ ಸಫಲವಾದ ಜೀವವಿರೋಧಿ ಮೋದಿ ಸರ್ಕಾರ: ಜಿ.ರಾಜಶೇಖರ್

ಸದ್ಯಕ್ಕೆ ಮೋದಿ ಸರಕಾರದ ಆಳ್ವಿಕೆಯಲ್ಲಿ ಪ್ರಭುತ್ವ ತನ್ನ ಜೀವವಿರೋಧಿ ಹಾಗೂ ಮಾನವ ದ್ವೇಷಿಯಾದರೂ ಪ್ರಜಾಪ್ರಭುತ್ವದ ಮುಖವಾಡ ಹಾಕುವುದರಲ್ಲಿ ಸಫಲವಾಗಿದೆ

- Advertisement -
- Advertisement -

ಉಡುಪಿಯಲ್ಲಿ ಜೀವವಿಮಾ ಕಂಪೆನಿಯ ನೌಕರರಾಗಿದ್ದ ಜಿ. ರಾಜಶೇಖರ್ ಕನ್ನಡದ ಪ್ರಮುಖ ಸಾಹಿತ್ಯ ವಿಮರ್ಶಕರಲ್ಲೊಬ್ಬರು. ತನಗೆ ಸತ್ಯ ಎನಿಸಿದ್ದನ್ನು ಯಾವುದೇ ಹಿಂಜರಿಕೆಯಿಲ್ಲದೇ ಗಟ್ಟಿದನಿಯಲ್ಲಿ ನೇರವಾಗಿ ಹೇಳುವುದು ಅವರ ಬರಹ ಮತ್ತು ಬದುಕುಗಳ ಸ್ಥಾಯೀಗುಣ. ಕರಾವಳಿ ಪ್ರದೇಶದ ಕೋಮುವಾದೀಕರಣ ಹೆಚ್ಚುತ್ತಿದ್ದಂತೆ ಸತ್ಯ ಹೇಳುವ ದಿಟ್ಟತನವೂ ರಾಜಶೇಖರ್ ಅವರಲ್ಲಿ ಹೆಚ್ಚುತ್ತಾ ಹೋಯಿತು. ತಾನು ಅಭಿಮಾನಿಸುವ ಎಡಪಂಥದ ಕುರಿತ ಭಿನ್ನಮತವನ್ನೂ ಅಷ್ಟೇ ದಿಟ್ಟವಾಗಿ ಮುಂದಿಡುತ್ತಾ, ನೆಲದ ಸಂಕಷ್ಟಕ್ಕೆ ಸದಾ ಓಗೊಡುವ ಸಾವಯವ ಬುದ್ಧಿಜೀವಿ.

ಇದು ಎಂತಹ ಕೆಟ್ಟಕಾಲ ಎಂದರೆ ಜನಸಾಮಾನ್ಯರಲ್ಲಿ ಹೆಚ್ಚಿನವರಿಗೆ ಸ್ವಾತಂತ್ರ್ಯವಿಲ್ಲ ಎಂಬ ಸತ್ಯ ಕೂಡ ಗೊತ್ತಿಲ್ಲ. ಅವರು ಈಗಲೂ ತಾವು ಸ್ವತಂತ್ರರು ಎಂಬ ಭ್ರಮೆಯಲ್ಲಿ ಇದ್ದಾರೆ. ಸ್ವಾತಂತ್ರ್ಯದ ಮರೀಚಿಕೆಯನ್ನೇ ಜನರೆಲ್ಲಾ ವಾಸ್ತವವೆಂದು ನಂಬಿದ್ದಾರೆ. ಇಂತಹ ಸನ್ನಿವೇಶದಲ್ಲಿ ಅವರಿಗೆ ಅವರ ಪರಾಧೀನತೆಯನ್ನು ಹೇಗೆ ಮನವರಿಕೆ ಮಾಡುವುದು? ಜಗತ್ತಿನಲ್ಲಿ ಯಾವ ಪ್ರಭುತ್ವವು ತನ್ನ ಪ್ರಜೆಗಳ ಬಗ್ಗೆ ಎಲ್ಲಾ ಸತ್ಯಗಳನ್ನು ಹೇಳುವುದಿಲ್ಲ ಎಂಬುದು ನಾವು ಎದುರಿಸಲೇಬೇಕಾದ ವಾಸ್ತವ. ಜಗತ್ತಿನ ಪ್ರಭುತ್ವಗಳ ನಡುವೆ ತರತಮ ವ್ಯತ್ಯಾಸಗಳಿವೆ. ಮೇಲುನೋಟಕ್ಕೆ ನಮಗೆಲ್ಲ ತಿಳಿದಿರುವ ಹಾಗೆ, ಕೆಲವು ಪ್ರಭುತ್ವಗಳು ಹೆಚ್ಚು ಪ್ರಜಾಪ್ರಭುತ್ವವಾದಿಗಳಾಗಿ ತಮ್ಮ ಆಳ್ವಿಕೆಯ ಬಗ್ಗೆ ಪ್ರಾಮಾಣಿಕವಾಗಿ ಜನರ ಮುಂದೆ ಹೇಳಿಕೊಳ್ಳುತ್ತವೆ. ಆದರೆ ಸದ್ಯಕ್ಕೆ ಮೋದಿ ಸರಕಾರದ ಆಳ್ವಿಕೆಯಲ್ಲಿ ಪ್ರಭುತ್ವ ತನ್ನ ಜೀವವಿರೋಧಿ ಹಾಗೂ ಮಾನವ ದ್ವೇಷಿಯಾದರೂ ಪ್ರಜಾಪ್ರಭುತ್ವದ ಮುಖವಾಡ ಹಾಕುವುದರಲ್ಲಿ ಸಫಲವಾಗಿದೆ.

ಈ ದೃಷ್ಟಿಯಿಂದ ನೋಡಿದರೆ ಕಾಶ್ಮೀರದಲ್ಲಿ ಸದ್ಯಕ್ಕೆ ಇರುವ ಕತ್ತು ಹಿಸುಕುವ ವಾತಾವರಣ ಇಡೀ ದೇಶದ ರೂಪಕವಾಗಿದೆ. ಶ್ರೀಮಂತ ಪಟ್ಟಭದ್ರರು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಅವುಗಳ ನಿಯಂತ್ರಣದಲ್ಲಿರುವ ಮಾಧ್ಯಮಗಳ ಒತ್ತಾಸೆಯೊಂದಿಗೆ ನರೇಂದ್ರ ಮೋದಿ ಮತ್ತು ಅವರ ಬಿಜೆಪಿ ಪಕ್ಷ ಚುನಾವಣೆಗಳನ್ನು ಗೆದ್ದುಕೊಂಡು ಅಧಿಕಾರಕ್ಕೆ ಬಂದಿದೆ. ಇದಕ್ಕೆ ಭಾರತದ ಎಡ ಪಕ್ಷಗಳನ್ನು ಹೊರತುಪಡಿಸಿ ಇತರ ಸೋ ಕಾಲ್ಡ್ ಲಿಬರಲ್, ಸೆಕ್ಯುಲಾರ್, ರಾಜಕೀಯ ಪಕ್ಷಗಳು – ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಗೋಸುಂಬೆ ನೀತಿಯು ಸ್ವಲ್ಪ ಕಾರಣವೆಂಬುದನ್ನು ನಾವು ಮರೆಯಕೂಡದು.

ನಿಜಕ್ಕೂ ಜನಾಂಗ ದ್ವೇಷಿ ರಾಜಕೀಯ ಪಕ್ಷ ಬಿಜೆಪಿ ಮತ್ತು ಅದಕ್ಕೆ ಎದುರಾಗಿ ಇನ್ನೊಂದು ಮಾನವೀಯತೆಯ ಮುಖವಾಡ ತೊಟ್ಟ ಆದರೆ ತನ್ನ ಎದುರಾಳಿಯಷ್ಟೇ ಅಲ್ಪಸಂಖ್ಯಾತರನ್ನು ತಿರಸ್ಕಾರದಿಂದ ಕಾಣುವ ರಾಜಕೀಯ ಪಕ್ಷ ಕಾಂಗ್ರೆಸ್, ಸದ್ಯಕ್ಕೆ ಇದು ನಮ್ಮ ರಾಜಕೀಯ ಸನ್ನಿವೇಶ! (ಈ ಮಾತು ಉತ್ಪ್ರೇಕ್ಷೆ ಎಂದು ಭಾವಿಸುವವರು ಬಾಬರಿ ಮಸೀದಿ ಧ್ವಂಸದ ನಂತರ ಮುಂಬೈ ಶಹರದಲ್ಲಿ ಕಾಂಗ್ರೆಸ್ ಸರಕಾರದ ಆಳ್ವಿಕೆಯಲ್ಲಿ ಭುಗಿಲೆದ್ದ ಮುಸ್ಲಿಮ್ ವಿರೋಧಿ ಹಿಂಸೆಯನ್ನು ಮರೆಯಬಾರದು). ಈ ಹಿನ್ನೆಲೆಯಲ್ಲಿ ಪ್ರಜೆಗಳ ಪ್ರಜಾಸತ್ತಾತ್ಮಕ ಆಯ್ಕೆಯ ಸ್ವಾತಂತ್ರ್ಯ ಎಂಬುದು ನಿಜಕ್ಕೂ ಒಂದು ಮರೀಚಿಕೆಯೇ ಸರಿ!

ಚುನಾವಣೆ ಎಂಬುದು ಕೇವಲ ದುಡ್ಡಿನ ಚೀಲಗಳ ಮೇಲಾಟವಲ್ಲ. ಅದು ಮತಾಂಧತೆ ಧರ್ಮನಿರಪೇಕ್ಷತೆ ಸಮಾಜವಾದ ಮುಂತಾದ ಛದ್ಮವೇಶ ವೇಷಗಳನ್ನು ತೊಟ್ಟು ದುಡ್ಡಿನ ಚೀಲಗಳು ಆಡುವ ನಾಟಕ ಕೂಡ! ಇಂತಹ ಸೋಗಲಾಡಿ ಪ್ರಜಾಪ್ರಭುತ್ವವಿರುವಾಗಲೇ ನಮ್ಮ ದೇಶದಲ್ಲಿ ಗೌರಿ ಲಂಕೇಶ್ ಮಾತ್ರವಲ್ಲ, ನರೇಂದ್ರ ಧಾಬೋಲ್ಕರ್ ಗೋವಿಂದ ಪನ್ಸಾರೆ ಎಂಎಂ ಕಲಬುರ್ಗಿ ಮುಂತಾದವರು ಕೊಲೆಯಾಗುತ್ತಾರೆ ಎಂದರೆ ಈ ನಾಡು ಎಂತಹ ದುಸ್ಥಿತಿಯಲ್ಲಿದೆ ಎಂದು ಯಾರಿಗಾದರೂ ದಿಗ್ಭ್ರಮೆ ಆದೀತು.

ಮೊನ್ನೆ ಸೆಪ್ಟೆಂಬರ್ 5ಕ್ಕೆ ಗೌರಿ ಕೊಲೆಯಾಗಿ ಎರಡು ವರ್ಷಗಳಾದವು. ಕರ್ನಾಟಕದಲ್ಲಿ ಆಕೆಯ ಸಂಸ್ಮರಣೆಯ ಕುರಿತ ಕಾರ್ಯಕ್ರಮವನ್ನು ನನಗೆ ಗೊತ್ತಿರುವ ಮಟ್ಟಿಗೆ ಯಾರು ಹಮ್ಮಿಕೊಳ್ಳಲಿಲ್ಲ. ಅಥವಾ ನಮ್ಮ ಪತ್ರಿಕೆಗಳು ಆ ಬಗ್ಗೆ ವರದಿ ಮಾಡಲೇ ಇಲ್ಲವೇ? ಅದು ಹೇಗಿದ್ದರೂ ಈ ನಾಡನ್ನು ನಾಡಿನ ಜನತೆಯನ್ನು ಇನ್ನಿಲ್ಲದಂತೆ ಪ್ರೀತಿಸಿದ ಜನಸಾಮಾನ್ಯರ ಏಳಿಗೆಯನ್ನು ನನ್ನ ಬದುಕಿನ ಉಸಿರಾಗಿ ಮಾಡಿಕೊಂಡ ಒಂದು ಜೀವದ ಕೊಲೆಯಾಗಿ ಇದೇ ಸೆಪ್ಟೆಂಬರ್ 5ಕ್ಕೆ ಎರಡು ವರ್ಷ ಕಳೆಯಿತು. ನನಗೆ ಗೊತ್ತಿರುವ ಮಟ್ಟಿಗೆ ಕರ್ನಾಟಕದಲ್ಲಿ ಯಾರು ಅಷ್ಟೊಂದು ತೀವ್ರವಾಗಿ ಹಚ್ಚಿಕೊಂಡಂತೆ ಕಾಣಲಿಲ್ಲ. ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಎಂಎಂ ಕಲಬುರ್ಗಿ ಮುಂತಾದ ಈ ನಾಡಿನ ಸಂಸ್ಕೃತಿಯ ಹೀರೋಗಳು. ಹೀರೋಗಳು ಎಂಬ ಕಾರಣಕ್ಕೇನೆ ಕೊಲೆಯಾಗಿ ಜನ ಅದನ್ನು ತೀವ್ರವಾಗಿ ಹಚ್ಚಿಕೊಳ್ಳದಿದ್ದರೆ ಕ್ರಮೇಣ ಮಾನವ ದ್ವೇಷಿಗಳು ಸಾಮಾನ್ಯರನ್ನು ಸಹ ಕಾರಣವಿಲ್ಲದೆ ಕೊಲೆ ಮಾಡುವುದು ಸುಲಭವಾಗುತ್ತದೆ.

ಇದಕ್ಕೆ ಒಂದು ಉದಾಹರಣೆ ಎಂದರೆ ಎರಡು ವರ್ಷಗಳ ಕೆಳಗೆ, ನಿಖರವಾಗಿ ಹೇಳಬೇಕು ಎಂದರೆ 2017ರ ಜೂನ್ ತಿಂಗಳ 27ನೇ ತಾರೀಖಿನಂದು ರಾಜಧಾನಿ ನವದೆಹಲಿಯ ಹೊರವಲಯದಲ್ಲಿ ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕನಾಗಿದ್ದ ಹದಿಹರೆಯದ ಮುಸ್ಲಿಂ ಯುವಕ ಹಾಫೀಸ್ ಜುನೈದ್ ಖಾನ್ ಎಂಬ ಮುಸ್ಲಿಂ ತರುಣನನ್ನು ಅವನಿಗೆ ಚೂರು ಪರಿಚಯವಿಲ್ಲದ ಅವನ ಸಹಪ್ರಯಾಣಿಕರು ಹಣ್ಣು ಕತ್ತರಿಸುವ ಸಾಮಾನ್ಯ ಚಾಕುವಿನಲ್ಲಿ ಇರಿದು ಇರಿದು ಕೊಂದರು. ಈ ಕೊಲೆಗೆ ಕಾರಣವಾದದ್ದು ಹಾಫೀಸ್ ಜುನೈದ್ ಧರಿಸಿದ ಟೊಪ್ಪಿಗೆ. ಅದು ಮುಸ್ಲಿಮರು ಮಾತ್ರ ಧರಿಸುವಂತಹ ನಮೂನೆಯ ಟೊಪ್ಪಿಗೆ ಆಗಿತ್ತು. ಜುನೈದ್ ಅದನ್ನು ಧರಿಸಿದ್ದೆ ಅವನು ಒಬ್ಬ ಮುಸ್ಲಿಂ ಎಂದು ಅವನ ಪ್ರಯಾಣಿಕರಿಗೆ ಗೊತ್ತಾಗಿ ಅವನು ಕೊಲೆಯಾದ. ಹಾಫೀಸ್ ಜುನೈದ್‍ಗೆ ತನ್ನ ಕೊಲೆಗಡುಕರಲ್ಲಿ ಯಾರ ಪರಿಚಯವೂ ಇರಲಿಲ್ಲ. ಹಾಫೀಸ್‍ನನ್ನು ಕೊಂದವರಿಗೆ ಸಹ ಅವನ ಪರಿಚಯವಿರಲಿಲ್ಲ. ಹಾಫೀಸ್‍ನನ್ನು ಕೊಲ್ಲುವ ಆ ಅಪರಾಧಿ ಕೃತ್ಯಕ್ಕೆ ಅವನು ಕೊಲೆಗಡುಕರ ಧರ್ಮಕ್ಕಿಂತ ಭಿನ್ನವಾದ ಇನ್ನೊಂದು ಧರ್ಮಕ್ಕೆ ಸೇರಿದವನು ಎಂಬ ಕಾರಣ ಬಿಟ್ಟರೆ ಬೇರೆ ಕಾರಣವೇ ಇರಲಿಲ್ಲ.

ತಮ್ಮ ಧರ್ಮ ಕೊಲೆಗಡುಕ ಎಂದು ಕರೆದರೆ ಬಹುಸಂಖ್ಯಾತ ಹಿಂದೂಗಳು ಈಗಲೂ ಬೆಚ್ಚಿಬೀಳುತ್ತಾರೆ. ಆದರೆ ಈ ವರ್ತಮಾನ ಕಾಲದಲ್ಲೂ ಹಿಡಿಯಷ್ಟು ಸಂಖ್ಯೆಯ ಹಿಂದುತ್ವವಾದಿಗಳು ಹಿಂದೂ ಧರ್ಮವನ್ನು ಒಂದು ಕೊಲೆಗಡುಕ ಶ್ರದ್ಧೆಯನ್ನಾಗಿ ಪರಿವರ್ತಿಸಲು ತಮ್ಮ ಸಂಘಟಿತ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕಿಂತ ದುರದೃಷ್ಟಕರವಾದ ಸಂಗತಿಯೆಂದರೆ ನಮ್ಮ ಸದ್ಯದ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯ ಮತ್ತು ಪ್ರಜೆಗಳ ಹಕ್ಕುಗಳ ಸಂವಿಧಾನದ ಚೌಕಟ್ಟನ್ನು ಬಳಸಿಕೊಂಡೆ ಅವರು ತಮ್ಮ ಸಂಘಟನೆಯ ಮತೀಯ ದ್ವೇಷದ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಫೀಸ್ ಜುನೈದ್‍ನನ್ನು ಸಲೀಸಾಗಿ ಕೊಲ್ಲುವ ಸಮಾಜದಲ್ಲಿ ಅಷ್ಟೇ ಸುರಳೀತವಾಗಿ ಗೌರಿ ಲಂಕೇಶ್, ದಾಬೋಲ್ಕರ್, ಪನ್ಸಾರೆ ಮತ್ತು ಕಲಬುರ್ಗಿ ಅಂತವರನ್ನು ಕೊಲ್ಲಲಾಗುತ್ತದೆ. ಹಾಗಾಗಿ ಸಾಮಾನ್ಯರ ಕೊಲೆ ಬುದ್ಧಿಜೀವಿಗಳ ಕೊಲೆ ಎಂದು ಕೊಲೆಗಳನ್ನು ನಾವು ವಿಂಗಡಿಸುವುದು ಮತ್ತು ಬುದ್ಧಿಜೀವಿಗಳ ಕೊಲೆಯನ್ನು ಮಾತ್ರ ಮುಖ್ಯವಾಗಿ ಪರಿಗಣಿಸುವುದು ಸರಿಯಲ್ಲ. ನಮ್ಮ ಸೂಕ್ಷ್ಮಜ್ಞರು ಈ ಸತ್ಯಗಳನ್ನು ಇನ್ನಾದರೂ ಗಮನಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...