Homeಮುಖಪುಟವಾಯು ಮಾಲಿನ್ಯ ಸಭೆಗೆ ಗಂಭೀರ್‌ ಚಕ್ಕರ್‌: ಕೇವಲ ಕಮೆಂಟ್ರಿ ಬಾಕ್ಸ್‌ಗೆ ’ಗಂಭೀರ’ತೆ ಸೀಮಿತ..!?

ವಾಯು ಮಾಲಿನ್ಯ ಸಭೆಗೆ ಗಂಭೀರ್‌ ಚಕ್ಕರ್‌: ಕೇವಲ ಕಮೆಂಟ್ರಿ ಬಾಕ್ಸ್‌ಗೆ ’ಗಂಭೀರ’ತೆ ಸೀಮಿತ..!?

- Advertisement -
- Advertisement -

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟವಾಗಿರುವ ವಾಯು ಮಾಲಿನ್ಯದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಸರಿಪಡಿಸಲು ತಲೆಕೆಡಿಸಿಕೊಂಡಿದೆ. ಇಂದು ವಾಯು ಮಾಲಿನ್ಯ ಕಡಿಮೆ ಮಾಡಲು ಪರಿಹಾರೋಪಾಯ ಕಂಡುಕೊಳ್ಳಲು ನಗರ ವಿಕಾಸ್‌ ಸಚಿವಾಲಯದಿಂದ ಸಂಸದೀಯ ಸಭೆ ಕರೆಯಲಾಗಿತ್ತು. ಅತ್ತ ದೆಹಲಿಯಲ್ಲಿ ಮುಖ್ಯ ಸಭೆ ನಡೆಯುತ್ತಿದ್ದರೆ, ಅದೇ ಸಮಯದಲ್ಲಿ ಇತ್ತ ಸಂಸದ ಗೌತಮ್‌ ಗಂಭೀರ್‌ ಸಭೆಗೆ ಚಕ್ಕರ್‌ ಹೊಡೆದು ಇಂದೋರ್‌ನಲ್ಲಿ ಜಿಲೇಬಿ ತಿನ್ನುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ದೆಹಲಿ ವಾಯು ಮಾಲಿನ್ಯ ತಗ್ಗಿಸಲು, ಮುಖ್ಯ ಪರಿಹಾರೋಪಾಯ ಕಂಡು ಹಿಡಿಯಲು ನಡೆದ ಸಭೆಯಲ್ಲಿ ಭಾಗಿಯಾಗದ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟರ್‌ ಗೌತಮ್‌ ಗಂಭೀರ್‌ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ…ಆಮ್‌ ಆದ್ಮಿ ಪಕ್ಷ, ವಾಯು ಮಾಲಿನ್ಯದಂಥ ಗಂಭೀರ ವಿಷಯದ ಬಗ್ಗೆ ಗೌತಮ್‌ ಗಂಭೀರ್‌ ಅವರಿಗಿರುವ ಗಂಭೀರತೆ ಕೇವಲ ಕಮೆಂಟ್ರಿ ಬಾಕ್ಸ್‌ಗೆ ಸೀಮಿತವಾಗಿದೆಯಾ..? ಅಂತಾ ಟೀಕಿಸಿದೆ.

ಈಗ ದೆಹಲಿಯಲ್ಲಿ ಹೆಚ್ಚಿರುವ ವಾಯು ಮಾಲಿನ್ಯವನ್ನು ಪ್ರಮುಖ ಅಸ್ತ್ರವಾಗಿಸಿಕೊಂಡು, ರಾಜಕೀಯ ನಾಯಕರು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇಂದು ನಡೆದ ಸಭೆಯಲ್ಲಿ ಹಲವು ನಾಯಕರು ಹಾಜರಾಗಿರಲಿಲ್ಲ.

ದೆಹಲಿ ಮತ್ತು ಎನ್‌ಸಿಆರ್‌ ನಲ್ಲಿ ಹೆಚ್ಚಿರುವ ವಿಷಕಾರಕ ವಾಯು ಮಾಲಿನ್ಯದ ಬಗ್ಗೆ ಪರಿಹಾರ ಕಂಡುಕೊಳ್ಳಲು ಮಧ್ಯಾಹ್ನ ಆಮ್‌ ಆದ್ಮಿ ಪಕ್ಷದಿಂದ ಪ್ರಮುಖ ಸಭೆ ಕರೆಯಲಾಗಿತ್ತು. ಈ ಬಗ್ಗೆ ಒಂದು ವಾರದ ಮೊದಲೇ ಎಲ್ಲರಿಗೂ ತಿಳಿಸಲಾಗಿತ್ತು. ಹೀಗಿದ್ದರೂ ಸಹ ಇಡೀ ದೆಹಲಿ ಜನರ ಉಸಿರಿನ ಸಮಸ್ಯೆಯಾಗಿರುವ ವಾಯು ಮಾಲಿನ್ಯದ ಬಗ್ಗೆ ಚರ್ಚಿಸಲು ಗೌತಮ್‌ ಗಂಭೀರ್‌ ಚಕ್ಕರ್‌ ಹೊಡೆದು, ಗೆಳೆಯರೊಂದಿಗೆ ಜಿಲೇಬಿ ತಿನ್ನುತ್ತಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಹಾಗಾದ್ರೆ ಗಂಭೀರ್‌ ಅವರ ಗಂಭೀರತೆ ಕಮೆಂಟ್ರಿ ಬಾಕ್ಸ್‌ಗೆ ಮಾತ್ರ ಸೀಮಿತವಾಗಿದೆಯಾ..? ಎಂದು ಆಮ್‌ ಆದ್ಮಿ ಟ್ವೀಟ್‌ ಮಾಡಿ ವ್ಯಂಗ್ಯವಾಡಿದೆ.

ಇಂದು ನಡೆದ ಸಂಸದೀಯ ಸಭೆಯಲ್ಲಿ ಕೆಲವೇ ಕೆಲ ಸಂಸದರು ಸಭೆಗೆ ಹಾಜರಾಗಿದ್ದರು. ಕಮಿಟಿ ಪರವಾಗಿ ಹಿರಿಯ ಅಧಿಕಾರಿಗಳಿಗೆ ಸಲಹೆ ನೀಡುವಂತೆ ಹೇಳಲಾಗಿತ್ತು. ಆದರೆ ಅವರ್‍ಯಾರೂ ಸಭೆಗೆ ಬಾರದೇ ಕಿರಿಯ ಅಧಿಕಾರಿಗಳನ್ನು ಸಭೆಗೆ ಕಳುಹಿಸಿಕೊಟ್ಟಿದ್ದರು. ಇದರಿಂದ ಸಮಿತಿಯ ಮುಖ್ಯಸ್ಥೆ ಜಗದಂಬಿಕಾ ಅವರು ಕೋಪಗೊಂಡರು. ಹೀಗಾಗಿ ಪ್ರಸೆಂಟೇಷನ್‌ ಕೂಡ ನಡೆಯಲಿಲ್ಲ. ಈ ಸಮಿತಿಯ ಸದಸ್ಯರಾಗಿರುವ ಗೌತಮ್‌ ಗಂಭೀರ್‌ ಕೂಡ ಸಭೆಗೆ ಹಾಜರಾಗದೇ ಇಂದೋರ್‌ನಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ಮ್ಯಾಚ್‌ ನೋಡುತ್ತ ಕಮೆಂಟ್ರಿ ಮಾಡ್ತಿದ್ದಾರೆ ಎಂದು ಆಮ್‌ ಆದ್ಮಿ ಆರೋಪಿಸಿದೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​ಗೆ ನಿರ್ದೇಶನ ನೀಡಲು ಬರಬೇಡಿ: ಇಡಿ ವಕೀಲರ ವಿರುದ್ಧ ಸುಪ್ರೀಂ ಗರಂ

ರಾಷ್ಟ್ರ ರಾಜಧಾನಿ ದೆಹಲಿ ವಾಯು ಮಾಲಿನ್ಯದಿಂದಾಗಿ ತತ್ತರಿಸಿ ಹೋಗಿದೆ. ವಿಷಕಾರಕ ಹೊಗೆಯಿಂದ ದೆಹಲಿ ಜನತೆಯ ಉಸಿರಿಗೆ ಆಪತ್ತು ಬಂದಿದೆ. 15 ದಿನಗಳಾದರೂ ದೆಹಲಿಯ ವಾಯು ಗುಣಮಟ್ಟ ಸುಧಾರಿಸುವ ಯಾವುದೇ ಲಕ್ಷಣಗಳೇ ಕಾಣ್ತಿಲ್ಲ. ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ವಾಯು ಮಾಲಿನ್ಯ ಕಡಿಮೆ ಮಾಡಲು ಶೀಘ್ರ ಪರಿಹಾರೋಪಾಯ ಕಂಡುಕೊಳ್ಳುವಂತೆ ಸುಪ್ರೀಂಕೋರ್ಟ್‌ ಚಾಟಿ ಬೀಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...