ಮೋದಿಯವರಿಂದ ಕರ್ನಾಟಕದ ಜನತೆ ನಿರೀಕ್ಷಿಸಿದ್ದ ಮಾತುಗಳು

ಹೆಚ್ಚುತ್ತಿರುವ ನಿರುದ್ಯೋಗಕ್ಕೆ ಪರಿಹಾರ
ರೈತರ ಆತ್ಮಹತ್ಯೆಗಳ ತಡೆ
ನೆರೆ ಪರಿಹಾರ
ಹಣದುಬ್ಬರದ ತಡೆ
ಜಿಡಿಪಿ ಬೆಳವಣಿಗೆಯನ್ನು
ಮಹಿಳೆಯರ ಸುರಕ್ಷತೆ
ಸಿಎಎ, ಎನ್‌ಆರ್‌ಸಿ ವಾಪಸ್‌ ತೆಗೆದುಕೊಳ್ಳುವುದು

ಆದರೆ ಮೋದಿ ಹೇಳಿದ್ದು. “ಪಾಕಿಸ್ತಾನದ ಹಿಂದಿನ ದೌರ್ಜನ್ಯಗಳ ವಿರುದ್ಧ ನಿಮ್ಮ ದನಿ ಎತ್ತಿ….”

ಇದು ಇಂದು ಟ್ವಿಟ್ಟರ್‌ನಲ್ಲಿ ವೈರಲ್‌ ಆದ ಒಂದು ಟ್ವೀಟ್‌.. ಇಂದು ಕರ್ನಾಟಕದ ತುಮಕೂರಿಗೆ ಪ್ರಧಾನಿ ಮೋದಿ ಬಂದಿದ್ದಾರೆ. ಬೆಳಿಗ್ಗೆಯಿಂದ ಎಲ್ಲಾ ವಾಹಿನಿಗಳಲ್ಲಿಯೂ ಅವರ ಆಗಮನ, ಅದಕ್ಕೆ ನಡೆದ ತಯಾರಿಗಳ ಸಭೆ ವರಿಯಾಗುತ್ತಿದ್ದವು. ಆದರೆ ಯಾವಾಗ ಮೋದಿಯವರು ಮತ್ತೆ ಪಾಕಿಸ್ತಾನದ ವಿರುದ್ಧ ಭಾಷಣ ಮಾಡಿದರೋ ಒಮ್ಮೆಗೆ ಟ್ವಿಟ್ಟರ್‌ನಲ್ಲಿ ಗೋ ಬ್ಯಾಕ್‌ ಮೋದಿ ಹ್ಯಾಸ್‌ಟ್ಯಾಗ್‌ ನಂಬರ್‌ 1 ಸ್ಥಾನದಲ್ಲಿ ಟ್ರೆಂಡಿಂಗ್‌ ಆಗಿದೆ.

ನೂರಾರು ಜನ ಮೋದಿಯವರ ಭಾಷಣಕ್ಕೆ ಅಪಸ್ವರ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಕೆಲ ಆಯ್ದ ಟ್ವೀಟ್‌ಗಳು ಇಲ್ಲಿವೆ..

ಶಿವಕುಮಾರ ಸ್ವಾಮಿಗಳು ನಿಧನರಾದಾಗ, ಪ್ರವಾಹ ಬಂದು ಜನ ಸಂಕಷ್ಟದಲ್ಲಿದ್ದಾಗ, ಜನರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬಯಸಿದಾಗ ಬಾರದಿದ್ದ ಪ್ರಧಾನಿ ಮೋದಿಯವರು ಈಗ ಬಂದು ಕೆಲಸಕ್ಕೆ ಬಾರದ ಭಾಷಣ ಮಾಡಿದ್ದಾರೆ. ಅವರನ್ನು ತಿರಸ್ಕರಿಸಿ ಎಂದು ಆದರ್ಶ ಕುಮಾರ್‌ ಎಚ್‌.ಎನ್‌ ಎಂಬುವವರು ಕಿಡಿಕಾರಿದ್ದಾರೆ.

ಸಿದ್ದಗಂಗ ಸ್ವಾಮೀಜಿಗಳಿಗೆ ಗೌರವ ಕೊಟು ಅವರ ಅಂತ್ಯಕ್ರಿಯೆಗೂ ಸಹ ಭೇಟಿ ನೀಡದ ಮೋದಿ, ಇಂದು ಅವರದೇ ಆಶ್ರಮದಲ್ಲಿ ರಾಜಕೀಯ ಭಾಷಣ ಮಾಡುತ್ತಿದ್ದಾರೆ!

ಕರ್ನಾಟಕದಲ್ಲಿ ಈ ರೀತಿಯ ರಾಜಕೀಯಕ್ಕೆ ಧಾರ್ಮಿಕ ಆಶ್ರಮವನ್ನು ಎಂದಿಗೂ ಬಳಸಲಾಗಿಲ್ಲ. ಎಂತಹ ನಾಚಿಕೆಯಿಲ್ಲದ ವ್ಯಕ್ತಿ ನಮ್ಮ ಪ್ರಧಾನಿ? ಎಂದು ಶ್ರೀವತ್ಸ ಎನ್ನುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಹಿಂದಿನ ದೌರ್ಜನ್ಯಗಳ ವಿರುದ್ಧ ಹೋರಾಡಿ ಎಂದು ಮೋದಿ ಹೇಳಿರುವುದು ಶುದ್ಧ ಅಸಂಬದ್ಧ. ಆತ್ಮೀಯ ಪ್ರಧಾನಿ, ಪಾಕಿಸ್ತಾನ ನಮ್ಮ ಸಮಸ್ಯೆಯಲ್ಲ. ನಾವು ದೇಶದೊಳಗಿನ ಸಮಸ್ಯೆಗಳ ವಿರುದ್ಧ ಹೋರಾಡುತ್ತೇವೆ. ಪ್ರತಿಭಟನೆ ನಡೆಸಬೇಡಿ ಎಂದು ಹೇಳಲು ನಿಮಗೆ ಯಾವುದೇ ಹಕ್ಕಿಲ್ಲ. ಚುನಾಯಿತ ಸರ್ಕಾರವು ಬಾಹ್ಯ ವ್ಯವಹಾರಗಳನ್ನು ನಿರ್ವಹಿಸಬೇಕೇ ಹೊರತು ಪ್ರಜೆಗಳಲ್ಲ. ಕಾಮನ್ಸೆನ್ಸ್ ಇಲ್ಲದ ಯಾರಾದರೂ ಮಕ್ಕಳ ಮುಂದೆ ರಾಜಕೀಯ ಭಾಷಣ ಮಾಡಿದಾಗ ಇದು ಸಂಭವಿಸುತ್ತದೆ! ಎಂದು ಕುಂಟಾಡಿ ನಿತೇಶ್‌ ರವರು ಅಸಮಾನಧಾನ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸುಳ್ಳನ್ನು ಇಲ್ಲಿ ಹರಡಬೇಡಿ ಮತ್ತು ದ್ವೇಷಿಸಬೇಡಿ. ಕರ್ನಾಟಕವು ಎಲ್ಲರನ್ನೂ ಒಳಗೊಂಡ ರಾಜ್ಯವಾಗಿದೆ. ನಾವು ಯಾರನ್ನೂ ಹೊರಗಿಡುವ ಅಗತ್ಯವಿಲ್ಲ. ಕರ್ನಾಟಕದ ಪುಷ್ಪಗುಚ್ಛದಲ್ಲಿ ಎಲ್ಲಾ ರೀತಿಯ ಹೂವುಗಳಿವೆ! ನಿಮ್ಮ ಸಿಎಎ ಧಿಕ್ಕಾರ, ಗೋ ಬ್ಯಾಕ್‌ ಮೋದಿ ಎಂದು ಕೆ.ಪಿ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here