Homeಮುಖಪುಟಗೋವಾ: ಕಾಂಗ್ರೆಸ್‌‌‌ನ ಮಾಜಿ ಕಾರ್ಯಾಧ್ಯಕ್ಷ, ಶಾಸಕ ಅಲೆಕ್ಸೊ ಟಿಎಂಸಿಗೆ ಸೇರ್ಪಡೆ

ಗೋವಾ: ಕಾಂಗ್ರೆಸ್‌‌‌ನ ಮಾಜಿ ಕಾರ್ಯಾಧ್ಯಕ್ಷ, ಶಾಸಕ ಅಲೆಕ್ಸೊ ಟಿಎಂಸಿಗೆ ಸೇರ್ಪಡೆ

- Advertisement -
- Advertisement -

ಗೋವಾದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ತಯಾರಾಗುತ್ತಿವೆ. ರಾಷ್ಟ್ರೀಯ ಪಕ್ಷದಿಂದ ಹಿಡಿದು ಪ್ರಾದೇಶಿಕ ಪಕ್ಷಗಳವರೆಗೂ ಎಲ್ಲವೂ ತಮ್ಮ ರಾಜಕೀಯ ಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ. ಹಲವು ಪಕ್ಷಗಳ ನಾಯಕರು ಗೋವಾದಲ್ಲಿ ತಮ್ಮ ಸಂಚಲನವನ್ನು ಉಂಟು ಮಾಡಿದ್ದಾರೆ.

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದ ಕಾಂಗ್ರೆಸ್‌ಗೆ ಐದು ವರ್ಷದಲ್ಲಿ ಹಲವು ಹೊಡೆತಗಳು ಬಿದ್ದಿವೆ. ಪಕ್ಷದ ಹಲವು ಶಾಸಕರು ಈಗಾಗಲೆ ಸಾಮೂಹಿಕವಾಗಿ ಪಕ್ಷಾಂತರಗೊಂಡಿದ್ದಾರೆ. ಇದೀಗ ಚುನಾವಣೆ ಮುಂದಿರುವಾಗಲೇ ಮತ್ತೊಂದು ಹಿನ್ನಡೆಯನ್ನು ಕಾಂಗ್ರೆಸ್ ಅನುಭವಿಸಿದೆ. ಗೋವಾ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಅವರು ಮಂಗಳವಾರದಂದು ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ:ಗೋವಾ: 4 ವರ್ಷದಲ್ಲಿ 50% ಶಾಸಕರು ಪಕ್ಷಾಂತರ!

ಸೋಮವಾರದಂದು ಅಲೆಕ್ಸೋ ಲೌರೆಂಕೊ ಅವರು ಕೋಲ್ಕತ್ತಾಗೆ ತೆರಳುವ ಮೊದಲು ಗೋವಾ ವಿಧಾನಸಭೆಯ ಶಾಸಕ ಸ್ಥಾನಕ್ಕೆ ಮತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.

TMC ಯ ಅಧಿಕೃತ ಟ್ವಿಟರ್‌ ಹ್ಯಾಂಡಲ್‌‌, “ಇಂದು, ಮಾಜಿ ಕಾಂಗ್ರೆಸ್‌ ಕರ್ಟೋರಿಮ್ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಅವರು ನಮ್ಮ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಮತ್ತು ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ನಮ್ಮನ್ನು ಸೇರಿಕೊಂಡರು. ನಾವು ಅವರಿಗೆ ಆತ್ಮೀಯ ಸ್ವಾಗತವನ್ನು ನೀಡುತ್ತೇವೆ! ಒಟ್ಟಾಗಿ, ನಾವು ಎಲ್ಲಾ ಗೋವನ್ನರ ಸುಧಾರಣೆಗಾಗಿ ಕೆಲಸ ಮಾಡುತ್ತೇವೆ” ಎಂದು ಟ್ವೀಟ್ ಮಾಡಿದೆ.

ಕರ್ಟೋರಿಮ್ ವಿಧಾನಸಭಾ ಕ್ಷೇತ್ರದಿಂದ ಎರಡು ಅವಧಿಯ ಶಾಸಕರಾಗಿರುವ ಅಲೆಕ್ಸೋ ಅವರನ್ನು ಇತ್ತೀಚೆಗೆ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಅವರ ರಾಜೀನಾಮೆಯಿಂದಾಗಿ 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲ 2ಕ್ಕೆ ಇಳಿದಿದೆ. ಪ್ರಸ್ತುತ ಬಿಜೆಪಿ ಆಡಳಿತ ನಡೆಸುತ್ತಿರುವ ಗೋವಾದಲ್ಲಿ ವಿಧಾನಸಭೆ ಚುನಾವಣೆಗಳು ಫೆಬ್ರವರಿ 2022 ರಲ್ಲಿ ನಡೆಯಲಿವೆ. ಇಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸ್ಪರ್ಧಿಸುವುದಾಗಿ ಘೋಷಿಸಿದೆ.

ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಆರೋಪ: ಗೋವಾ ಬಿಜೆಪಿ ಸಚಿವ ಮಿಲಿಂದ್ ನಾಯಕ್ ರಾಜೀನಾಮೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಉದ್ಯಾನವನಗಳಲ್ಲಿ ಯೋಗ ಮಾಡುವುದನ್ನು ತಡೆಯುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿಲ್ಲ

0
"ರಸ್ತೆಯಲ್ಲಿ ನಮಾಜ್ ಮಾಡದಂತೆ ನೀವು ತಡೆಯುವುದಾದರೆ, ಉದ್ಯಾನವನಗಳಲ್ಲಿ ಯೋಗ ಕೂಡ ಮಾಡುವುದನ್ನು ನಾವು ತಡೆಯುತ್ತೇವೆ-ಪ್ರಿಯಾಂಕಾ ವಾದ್ರಾ" "ಹಿಂದೂಗಳೇ, ಕಾಂಗ್ರೆಸ್ ಪಕ್ಷ ನೇರವಾಗಿ ಹಿಂದೂಗಳ ಅಸ್ಮಿತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ನೀವಿನ್ನೂ ನಿಮ್ಮ ಸ್ಥಳೀಯ...