Homeಚಳವಳಿಸ್ವಾತಂತ್ರ್ಯ ಹೋರಾಟಗಾರ್ತಿ, ಕವಯತ್ರಿ ಸುಭದ್ರಾ ಕುಮಾರಿ ಚೌಹಾಣ್‌ಗೆ ಗೂಗಲ್ ಡೂಡಲ್ ಗೌರವ

ಸ್ವಾತಂತ್ರ್ಯ ಹೋರಾಟಗಾರ್ತಿ, ಕವಯತ್ರಿ ಸುಭದ್ರಾ ಕುಮಾರಿ ಚೌಹಾಣ್‌ಗೆ ಗೂಗಲ್ ಡೂಡಲ್ ಗೌರವ

- Advertisement -
- Advertisement -

ಝಾನ್ಸಿ ಕಿ ರಾಣಿ ಪ್ರಸಿದ್ಧ ಕವಿತೆಯ ರಚನೆಕಾರರಾದ ಕವಯತ್ರಿ, ಸ್ವಾತಂತ್ರ್ಯ ಹೋರಾಟಗಾರ್ತಿ ಸುಭದ್ರಾ ಕುಮಾರಿ ಚೌಹಾಣ್ ಅವರ 117 ನೇ ಜನ್ಮ ದಿನಾಚರಣೆಯಂದು ಗೂಗಲ್ ಡೂಡಲ್ ಸೋಮವಾರ ವಿಶೇಷ ಗೌರವ ಸಲ್ಲಿಸಿದೆ.

ಸುಭದ್ರಾ ಕುಮಾರಿ ಚೌಹಾಣ್‌ ಪೆನ್ನು ಮತ್ತು ಪೇಪರ್‌ನೊಂದಿಗೆ ಕವಿತೆ ಬರೆಯಲು ಕುಳಿತಿರುವುದನ್ನು ಗೂಗಲ್ ಡೂಡಲ್ ತೋರಿಸುತ್ತದೆ. ಪ್ರಸಿದ್ಧ ಕವಿತೆ ಝಾನ್ಸಿ ಕಿ ರಾಣಿಯ ಸನ್ನಿವೇಶವನ್ನು ತೋರಿಸುವ ಸಲುವಾಗಿ ಒಂದು ಬದಿಯಲ್ಲಿ ರಾಣಿ ಲಕ್ಷ್ಮಿ ಬಾಯಿ ಕುದುರೆ ಸವಾರಿ ಮಾಡುತ್ತಿರುವುದನ್ನು ಚಿತ್ರಿಸಲಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮೆರವಣಿಗೆ ಹೊರಟಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತೊಂದು ಬದಿಯಲ್ಲಿ ತೋರಿಸಲಾಗಿದೆ.

ಸುಭದ್ರಾ ಕುಮಾರಿ ಹಿಂದಿ ಕಾವ್ಯದಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ, ಝಾನ್ಸಿ ಕಿ ರಾಣಿ ಅವರ ಅತ್ಯಂತ ಪ್ರಸಿದ್ಧ ಕವಿತೆ. ರಾಣಿ ಲಕ್ಷ್ಮಿ ಬಾಯಿ ಅವರ ಜೀವನವನ್ನು ವಿವರಿಸುವ ಈ ಕವಿತೆಯು ಹಿಂದಿ ಸಾಹಿತ್ಯದಲ್ಲಿ ಹೆಚ್ಚು ಓದಿಸಿಕೊಂಡಿರುವ ಮತ್ತು ಹಾಡಿರುವ ಕವಿತೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಹೊಸ ಐಟಿ ನಿಯಮ: ಏಪ್ರಿಲ್‌ನಲ್ಲಿ 59,350 ಕಂಟೆಂಟ್‌‌‌ಗಳನ್ನು ಕಿತ್ತು ಹಾಕಿದ ಗೂಗಲ್!

ಗೂಗಲ್ ಡೂಡಲ್ ಪ್ರಕಟಿಸಿರುವ ಚಿತ್ರವನ್ನು ನ್ಯೂಜಿಲೆಂಡ್ ಮೂಲದ ಅತಿಥಿ ಕಲಾವಿದೆ ಪ್ರಭಾ ಮಲ್ಯ ರಚಿಸಿದ್ದಾರೆ.

ಸುಭದ್ರಾ ಕುಮಾರಿ ಚೌಹಾಣ್ ಅವರ ಕವಿತೆ ಮತ್ತು ಗದ್ಯವು ಪ್ರಾಥಮಿಕವಾಗಿ ಲಿಂಗ ತಾರತಮ್ಯ ಮತ್ತು ಜಾತಿ ತಾರತಮ್ಯದಂತಹ ಭಾರತೀಯ ಮಹಿಳೆಯರು ಎದುರಿಸಿದ ಕಷ್ಟಗಳನ್ನು ಕೇಂದ್ರೀಕರಿಸಿವೆ.

Subhadra Kumari Chauhan Special | कविता और कहानियों से कहीं ज्यादा है Subhadra  Kumari Chauhan का योगदान
PC: thequint

ಸುಭದ್ರಾ ಕುಮಾರಿ ಆಗಸ್ಟ್ 16, 1904 ರಂದು ಉತ್ತರ ಪ್ರದೇಶದ ಪ್ರಯಾಗರಾಜ್‌ನ ನಿಹಾಲ್ಪುರ್ ಹಳ್ಳಿಯ ರಾಜಪುರ ಕುಟುಂಬದಲ್ಲಿ ಜನಿಸಿದರು. ಆಕೆ ಆರಂಭದಲ್ಲಿ ಪ್ರಯಾಗರಾಜ್‌ನ ಕ್ರೋಸ್ಟ್‌ವೈಟ್ ಬಾಲಕಿಯರ ಶಾಲೆಯಲ್ಲಿ ಅಧ್ಯಯನ ನಡೆಸಿದರು. 1919 ರಲ್ಲಿ ತಮ್ಮ 16 ನೇ ವಯಸ್ಸಿನಲ್ಲಿ ಖಾಂಡ್ವಾದ ಠಾಕೂರ್ ಲಕ್ಷ್ಮಣ್ ಸಿಂಗ್ ಚೌಹಾಣ್ ಅವರನ್ನು ವಿವಾಹವಾದರು.

ಸ್ವಾತಂತ್ರ್ಯ ಹೋರಾಟಗಾರ್ತಿ ಸುಭದ್ರಾ ಮತ್ತು ಅವರ ಪತಿ 1921 ರಲ್ಲಿ ಮಹಾತ್ಮಾ ಗಾಂಧಿಯವರ ಅಸಹಕಾರ ಚಳುವಳಿಗೆ ಸೇರಿದರು. ನಾಗ್ಪುರದಲ್ಲಿ ಬಂಧನಕ್ಕೊಳಗಾದ ಮೊದಲ ಮಹಿಳಾ ಸತ್ಯಾಗ್ರಹಿಯಾದರು.

1940 ರ ದಶಕದವರೆಗೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಕ್ರಾಂತಿಕಾರಿ ಕವಿತೆಗಳು, ಹೇಳಿಕೆಗಳನ್ನು ಬರೆಯುವುದನ್ನು ಮುಂದುವರೆಸಿದರು. 1923 ಮತ್ತು 1942 ರಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಎರಡು ಬಾರಿ ಜೈಲುವಾಸ ಅನುಭವಿಸಿದರು.  ಒಟ್ಟು 88 ಕವಿತೆಗಳು ಮತ್ತು 46 ಸಣ್ಣ ಕಥೆಗಳನ್ನು ಪ್ರಕಟಿಸಿದ್ದರು. ಫೆಬ್ರವರಿ 15, 1948ರಲ್ಲಿ ಕಾರು ಅಪಘಾತದಲ್ಲಿ ನಿಧನರಾದರು.


ಇದನ್ನೂ ಓದಿ: ಕನ್ನಡವನ್ನು ಕೊಳಕು ಭಾಷೆ ಎಂದು ತೋರಿಸಿದ್ದ ವೆಬ್‌ಸೈಟ್, ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...