Homeಮುಖಪುಟದೇಶದ ಶೇ.90ರಷ್ಟು ನೌಕರರ ತಿಂಗಳ ಸಂಬಳ 25000 ರುಪಾಯಿಗಳಿಗಿಂತ ಕಡಿಮೆ!

ದೇಶದ ಶೇ.90ರಷ್ಟು ನೌಕರರ ತಿಂಗಳ ಸಂಬಳ 25000 ರುಪಾಯಿಗಳಿಗಿಂತ ಕಡಿಮೆ!

- Advertisement -
- Advertisement -

ಮೊದಲಿಗೆ ಈ ಕೆಲವು ಅಂಕಿಅಂಶಗಳ ಬಗ್ಗೆ ಗಮನ ಹರಿಸೋಣ;

  • ಈ ದೇಶದಲ್ಲಿ ದುಡಿಯುತ್ತಿರುವ ಒಟ್ಟು 60 ಕೋಟಿ ಜನರಲ್ಲಿ 9 ಕೋಟಿ ಜನರ ತಿಂಗಳ ಸರಾಸರಿ ಆದಾಯ 5000 ರುಪಾಯಿಗಿಂತ ಕಡಿಮೆ!
  • 2019-20ರ ಒಟ್ಟು ವಾರ್ಷಿಕ ವೇತನದಲ್ಲಿ ಹೆಚ್ಚು ವೇತನ (ಮೇಲಿನ 1% ಜನ) ಪಡೆಯುವವರ (ಅಂದಾಜು 60 ಲಕ್ಷ ಜನ) ಪಾಲು ಶೇ.6.48!
  • ಅದೇ 2019-20ರ ಒಟ್ಟು ವಾರ್ಷಿಕ ವೇತನದಲ್ಲಿ ಅತ್ಯಂತ ಕಡಿಮೆ ವೇತನ (ಕೆಳಗಿನ 10% ಜನ) ಪಡೆಯುವರ (ಅಂದಾಜು 6 ಕೋಟಿ ಜನ) ಪಾಲು ಕೇವಲ ಕೇವಲ ಶೇ.1.71!
  • ಇದೇ ಸಮಯದಲ್ಲಿ, ಒಟ್ಟು ವಾರ್ಷಿಕ ವೇತನದಲ್ಲಿ ಹೆಚ್ಚು ಸಂಬಳ ಪಡೆಯುವ (ಮೇಲಿನ 10% ಜನ) ಗುಂಪಿನ (ಅಂದಾಜು 6 ಕೋಟಿ) ಜನರ ಪಾಲು ಶೇ.32.5!
  • 2017-18ರಿಂದ 2019-20ರ ನಡುವೆ ಕಡಿಮೆ ವೇತನ (ಕೆಳಗಿನ 50%) ಗುಂಪಿನ ಜನರ ವೇತನ ಶೇ.3.9ನಷ್ಟು ಹೆಚ್ಚಾಗಿದ್ದರೆ, ಹೆಚ್ಚು ವೇತನ ಗುಂಪಿನ (ಮೇಲಿನ 10% ) ಜನರ ವೇತನ ಶೇ.8.1ರಷ್ಟು ಹೆಚ್ಚಾಗಿದೆ.
  • ಅದೇ ಕಾಲಘಟ್ಟದಲ್ಲಿ ಹೆಚ್ಚು ವೇತನ (ಮೇಲಿನ 1%) ಗುಂಪಿನ ಮಂದಿಯ ವೇತನ ಶೇ.15ರಷ್ಟು ಹೆಚ್ಚಾಗಿದೆ!
  • ಇದಕ್ಕೆ ತದ್ವಿರುದ್ಧವಾಗಿ ಕಡಿಮೆ ವೇತನ (ಕೆಳಗಿನ 10%) ಗುಂಪಿನ ಮಂದಿಯ ವೇತನ ಶೇ.1ರಷ್ಟು ಇಳಿಕೆಯಾಗಿದೆ!

ಮೇಲಿನವು ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಪರಿಷತ್ ಸಿದ್ಧಪಡಿಸಿ ಪ್ರಧಾನಿಗೆ ಸಲ್ಲಿಸಿರುವ ’ಭಾರತದಲ್ಲಿ ಅಸಮಾನತೆಯ ಸ್ಥಿತಿಗತಿ’ ಕುರಿತ ವರದಿಯಲ್ಲಿರುವ ಕೆಲ ಮುಖ್ಯ ಅಂಕಿಅಂಶಗಳು.

ನವ ಉದಾರವಾದಿ ಆರ್ಥಿಕ ನೀತಿಗಳು ವಿಶ್ವದಾದ್ಯಂತ ಅಸಮಾನತೆಯನ್ನು ಹೆಚ್ಚಿಸುತ್ತಲೇ ಇರುವುದು ಈಗ ಮನುಕುಲದ ಭೀಕರ ಸಮಸ್ಯೆಯಾಗಿ ಬಹುತೇಕ ಪರಿವರ್ತಿತವಾಗಿದೆ. ಭಾರತದಲ್ಲೂ ಕೂಡ ಈ ನವ ಆರ್ಥಿಕ ನೀತಿಗಳು ಶ್ರೀಮಂತರನ್ನು ಕಲ್ಪನೆಗೆ ನಿಲುಕದಷ್ಟು ಮತ್ತಷ್ಟು ಶ್ರೀಮಂತರನ್ನಾಗಿಸುತ್ತಾ, ಬಡವರನ್ನು ಮತ್ತಷ್ಟು ಕಡುಭೀಕರ ಬಡತನದತ್ತ ತಳ್ಳುತ್ತ ಬಂದಿವೆ. ಇದು ಉಳ್ಳವರ ಮತ್ತು ಬಡವರ ಮಧ್ಯೆ ಭಾರೀ ಕಂದಕವನ್ನೇ ಸೃಷ್ಟಿಸಿದ್ದು, ಈಗಾಗಲೇ ಇದರ ಘೋರ ದುರಂತಗಳನ್ನು ನಾವು ನೋಡುತ್ತಿದ್ದೇವೆ ಮತ್ತು ಅನುಭವಿಸುತ್ತಿದ್ದೇವೆ.

ಈ ವರ್ಷದ ಜನವರಿಯಲ್ಲಿ ಆಕ್ಸ್‌ಫಾಮ್‌ನವರ (Oxfam report) “ಅಸಮಾನತೆ ಕೊಲ್ಲುತ್ತದೆ” (Inequality kills) ಎಂಬ ವರದಿಯಲ್ಲಿ ಅತ್ಯಂತ ಸ್ಪಷ್ಟ ಅಂಕಿಅಂಶಗಳೊಂದಿಗೆ ಕೋವಿಡ್ ಕಾರಣಕ್ಕೆ ಭಾರತದಲ್ಲಿ (ವಿಶ್ವದ ಬೇರೆ ದೇಶಗಳಲ್ಲಿ ಕೂಡ) ಹೇಗೆ ಬಡವರೇ ಹೆಚ್ಚಾಗಿ ಸತ್ತರು ಎಂಬುದನ್ನು ಆಳವಾದ ಅಧ್ಯಯನದ ಮೂಲಕ ತೋರಿಸಲಾಗಿದೆ. ಮತ್ತು, ಹಾಗೆ ಬಡವರೇ ಹೆಚ್ಚಾಗಿ ಸಾಯಲು ಕೋವಿಡ್‌ಗಿಂತ ಅಸಮಾನತೆಯೇ ಹೇಗೆ ಮುಖ್ಯ ಕಾರಣವಾಗಿತ್ತು ಎಂಬುದನ್ನೂ ಆ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಅದೇ ವರದಿಯಲ್ಲಿ, ಕೋವಿಡ್ ಲಾಕ್‌ಡೌನ್‌ನಿಂದ ಇಡೀ ದೇಶದ ಆರ್ಥಿಕತೆ ತತ್ತರಿಸಿದ್ದಾಗಲೂ. ಗೌತಮ್ ಅದಾನಿಯವರ ಆಸ್ತಿ ಕೇವಲ ಒಂದೂವರೆ ವರ್ಷಗಳಲ್ಲಿ ಸಾವಿರಾರು ಕೋಟಿಗಳಷ್ಟು ಹೆಚ್ಚಾಗಿದ್ದು, ಭಾರತದಲ್ಲಿ ನೂರು ಜನ ಹೊಸಾ ಬಿಲಿಯನೇರುಗಳು ಸೃಷ್ಟಿಯಾಗಿದ್ದು ಮತ್ತು ಅದೇ ಒಂದೂವರೆ ವರ್ಷಗಳಲ್ಲಿ ಎಂಟೂವರೆ ಕೋಟಿಯಷ್ಟು ಭಾರತೀಯರು ಕಡುಬಡತನಕ್ಕೆ ಜಾರಿದ್ದನ್ನು ಅಧ್ಯಯನದ ಮೂಲಕ ತಿಳಿಸಲಾಗಿದೆ.

ಅಂದರೆ, ಇದು ಭಾರತ ಅಳವಡಿಸಿಕೊಂಡಿರುವ ಆರ್ಥಿಕ ನೀತಿಯ ಕಥೆಯನ್ನು ಹೇಳುತ್ತದೆ. ಹೇಗೆ ಇಡೀ ದೇಶ ಆರ್ಥಿಕವಾಗಿ ಹಿಂಜರಿದಾಗಲೂ ಅತಿ ಶ್ರೀಮಂತರು ಇನ್ನೂ ಶ್ರೀಮಂತರಾಗಲು ದೇಶದ ಆರ್ಥಿಕ ನೀತಿ ಪೂರಕವಾಗಿದೆ ಎಂದು Oxfam ವರದಿ ಸ್ಪಷ್ಟಪಡಿಸುತ್ತದೆ.

ಆದರೆ, Oxfam ವರದಿಯನ್ನು ತಿರಸ್ಕರಿಸಿದ ಒಕ್ಕೂಟ ಸರ್ಕಾರ ಈಗ ತನ್ನದೇ ವರದಿಯಲ್ಲಿ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಅಸಮಾನತೆ ಜಾಸ್ತಿಯಾಗುತ್ತಲೇ ಬಂದಿರುವುದನ್ನು ಒಪ್ಪಿಕೊಂಡಿದೆ.
ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಪರಿಷತ್ ತನ್ನ ’ಭಾರತದಲ್ಲಿ ಅಸಮಾನತೆಯ ಸ್ಥಿತಿಗತಿ’ ವರದಿಯಲ್ಲಿ ಅಸಮಾನತೆ ಜಾಸ್ತಿಯಾಗುತ್ತಿರುವದನ್ನು ಒಪ್ಪಿಕೊಂಡಿರುವುದಷ್ಟೇ ಅಲ್ಲದೆ, ಇದರ ಅಪಾಯಗಳನ್ನೂ ಗುರುತಿಸಿದೆ.

ಯಾವುದೇ ಸಮಾಜದಲ್ಲಿ ಹೆಚ್ಚುತ್ತಿರುವ ಈ ಅಸಮಾನತೆಯ ತಣ್ಣನೆಯ ಕ್ರೌರ್ಯ ಏನು ಎಂಬುದು ‘Inequality kills ( ಅಸಮಾನತೆ ಕೊಲ್ಲುತ್ತದೆ) ಎನ್ನುವ ಈ ಒಂದೇಒಂದು ಪದಗುಚ್ಚದ ಮೂಲಕ ನಮಗೆ ಸುಲಭವಾಗಿ ಅರ್ಥವಾಗುತ್ತದೆ. ಸದ್ಯದ ಆರ್ಥಿಕ ನೀತಿಯೊಳಗೆ ಈ ಅಸಮಾನತೆಯನ್ನು ಒಂದು ಮಟ್ಟಿಗೆ ಕಡಿಮೆ ಮಾಡಲು ಇರುವ ದಾರಿಯೆಂದರೆ ಸಮಾಜ ಕಲ್ಯಾಣ (Social welfare scheme) ಕಾರ್ಯಕ್ರಮಗಳಿಗೆ ಹೆಚ್ಚುಹೆಚ್ಚು ಹಣ ಒದಗಿಸುವುದು ಮತ್ತು ದೈನಂದಿನ ಬಳಕೆ ವಸ್ತುಗಳ ಬೆಲೆಗಳನ್ನು ನಿಯಂತ್ರಣದಲ್ಲಿಡುವುದು.

ಆದರೆ, ನಮ್ಮ ದೇಶದ ದುರಂತವನ್ನು ಈ ಕಾಲಾನುಕ್ರಮದ ಮೂಲಕ ಅರ್ಥ ಮಾಡಿಕೊಳ್ಳಬಹುದು;

1) ಕಳೆದ ಜನವರಿಯಲ್ಲಿ Oxfam ವರದಿ ಬರುತ್ತದೆ.

2) ಆ ವರದಿಯಲ್ಲಿ ಸ್ಪಷ್ಟವಾಗಿ ಕೋವಿಡ್ ವೇಳೆಯಲ್ಲಿ ದೇಶದೊಳಗೆ ಅಸಮಾನತೆ ಮತ್ತಷ್ಟು ಹೆಚ್ಚಾಗಿರುವುದನ್ನು ತೋರಿಸಲಾಗಿರುತ್ತದೆ.

3) ಇದಕ್ಕೆ ಒಂದು ಮಟ್ಟದ ಪ್ರಮುಖ ಪರಿಹಾರವೆಂದರೆ ಸೋಷಿಯಲ್ ವೆಲ್‌ಫೇರ್ ಸ್ಕೀಮ್‌ಗಳಿಗೆ ಹೆಚ್ಚಿನ ಅನುದಾನ ಕೊಡುವುದೆಂದೂ ಹೇಳಲಾಗಿರುತ್ತದೆ.

ಆದರೆ, ಒಕ್ಕೂಟ ಸರ್ಕಾರ ಈ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ಟಿನಲ್ಲಿ ಅತ್ಯಂತ ಅಮಾನವೀಯವಾಗಿ ಸೋಷಿಯಲ್ ವೆಲ್‌ಫೇರ್ ಸ್ಕೀಮ್‌ಗಳಿಗೆ ಕಳೆದ ವರ್ಷಕ್ಕಿಂತಲೂ ಕಡಿಮೆ ಹಣ ನಿಗದಿಪಡಿಸುತ್ತದೆ. ಅಂದರೆ, ಈ ದೇಶದಲ್ಲಿ ಅಸಮಾನತೆ ಕಡಿಮೆ ಮಾಡುವ ಯಾವ ಅಶಾಭಾವನೆಯನ್ನೂ ಈ ಬಜೆಟ್ ಹುಟ್ಟುಹಾಕುವುದಿಲ್ಲ.

ಈಗ ಸರ್ಕಾರದ ಸಮಿತಿಯ ವರದಿಯೇ ದೇಶದಲ್ಲಿ ಅಸಮಾನತೆ ಹೆಚ್ಚುತ್ತಿರುವುದಾಗಿ ಹೇಳಿರುವುದನ್ನಾದರೂ ಒಕ್ಕೂಟ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಅಸಮಾನತೆಯನ್ನು ತಗ್ಗಿಸಲು ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕಿದೆ.

ಇಲ್ಲವಾದಲ್ಲಿ, ಈ ದೇಶ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಕುಸಿಯುವ ಅಪಾಯವಿದೆ.

ಡಾ. ಬಿ.ಸಿ. ಬಸವರಾಜು

ಡಾ. ಬಿ.ಸಿ. ಬಸವರಾಜು
ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜು ಹಾಡುಗಾರರೂ, ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ.


ಇದನ್ನೂ ಓದಿ: ವಿಶೇಷ ವರದಿ: ಬಿಜೆಪಿ ಅವಧಿಯಲ್ಲಿ ಪರೀಕ್ಷಾ ಅಕ್ರಮ, ಎಡವಟ್ಟುಗಳು & ಶೈಕ್ಷಣಿಕ ಅವ್ಯವಸ್ಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....