Homeಮುಖಪುಟಅತ್ಯಾಚಾರ ಆರೋಪಿಯಿಂದ 20 ಲಕ್ಷ ರೂ ಲಂಚ: ಗುಜರಾತ್‌ನ ಮಹಿಳಾ ಪಿಎಸ್‌ಐ ಬಂಧನ

ಅತ್ಯಾಚಾರ ಆರೋಪಿಯಿಂದ 20 ಲಕ್ಷ ರೂ ಲಂಚ: ಗುಜರಾತ್‌ನ ಮಹಿಳಾ ಪಿಎಸ್‌ಐ ಬಂಧನ

- Advertisement -
- Advertisement -

ಅತ್ಯಾಚಾರ ಆರೋಪಿಯ ಮೇಲೆ ಸಾಮಾಜಿಕ ವಿರೋಧಿ ಚಟುವಟಿಕೆ ತಡೆ ಕಾಯ್ದೆ ಹಾಕದೆ, 20 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಗುಜರಾತ್‌ನ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಹಮದಾಬಾದ್-ಪಶ್ಚಿಮ ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಶ್ವೇತಾ ಜಡೇಜಾ ಅವರು ಕೆನಾಲ್ ಷಾ ಎಂಬಾತನ ಮೇಲೆ 2019 ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದರು. ಷಾ ಸಹೋದರನಿಂದ 35 ಲಕ್ಷ ರೂ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಮಾಜ ವಿರೋಧಿ ಚಟುವಟಿಕೆ ತಡೆ ಕಾಯ್ದೆ ಕಾಯ್ದೆಯನ್ನು ಹಾಕದಿರಲು ಕೆನಾಲ್ ಷಾ ನಿಂದ ಹಣವನ್ನು ಕೋರಿದ್ದಾರೆ. ನಗರ ಅಪರಾಧ ಶಾಖೆ ಸಲ್ಲಿಸಿದ ಪ್ರಥಮ ಮಾಹಿತಿ ವರದಿಯ (ಎಫ್‌ಐಆರ್) ಪ್ರಕಾರ, ಜಡೇಜಾ ಮಧ್ಯವರ್ತಿಯೊಬ್ಬರ ಮೂಲಕ 20 ಲಕ್ಷ ರೂ. ಸ್ವೀಕರಿಸಿದ್ದಾರೆ. ಅಲ್ಲದೇ ಅತ್ಯಾಚಾರ ಪ್ರಕರಣದ ಆರೋಪಿಯಿಂದ ಹೆಚ್ಚುವರಿ 15 ಲಕ್ಷ ರೂಗಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ.

ಫೆಬ್ರವರಿಯಲ್ಲಿ ಜಡೇಜಾಗೆ 20 ಲಕ್ಷ ರೂ. ನೀಡಿದ್ದ ಷಾ ಸಹೋದರ ಉಳಿದ ಮೊತ್ತವನ್ನು ಪಾವತಿಸುವಂತೆ ಸಬ್ ಇನ್ಸ್‌ಪೆಕ್ಟರ್‌ ಒತ್ತಾಯಿಸುತ್ತಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಎಫ್‌ಐಆರ್ ತಿಳಿಸಿದೆ.

ಆರೋಪಿ ಶ್ವೇತಾ ಜಡೇಜಾಳನ್ನು ಶುಕ್ರವಾರ ಬಂಧಿಸಲಾಗಿದ್ದು, ಆಕೆಯ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆಕೆಯನ್ನು ಶನಿವಾರ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ಅಲ್ಲಿ ನ್ಯಾಯಾಧೀಶರು ಅವಳನ್ನು ಮೂರು ದಿನಗಳವರೆಗೆ ಪೊಲೀಸ್ ಬಂಧನಕ್ಕೆ ಕಳಿಸಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸುಧೀರ್ ಬ್ರಹ್ಮಭಟ್ ಹೇಳಿದ್ದಾರೆ.

“ಆರೋಪಿಯು ಸ್ವೀಕರಿಸಿದ 20 ಲಕ್ಷ ರೂಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಲಂಚದ ಹಣವನ್ನು ಮಧ್ಯವರ್ತಿ ಶ್ವೇತಾ ಜಡೇಜಾಳಿಗೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ” ಎಂದು ಪ್ರಾಸಿಕ್ಯೂಟರ್ ಹೇಳಿದ್ದಾರೆ.

ಷಾ ಅಹಮದಾಬಾದ್‌ನ ಬೆಳೆ ಪರಿಹಾರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕನಾಗಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ರ ಅಡಿಯಲ್ಲಿ ಎರಡು ಪ್ರತ್ಯೇಕ ಅತ್ಯಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಅದರಲ್ಲಿ ಒಂದನ್ನು ಜಡೇಜಾ ತನಿಖೆ ನಡೆಸುತ್ತಿದ್ದರು.


ಇದನ್ನೂ ಓದಿ: ಆಂಬುಲೆನ್ಸ್ ವಿಳಂಬ, ಸೋಂಕಿತ ಸಾವು: ಕೈಮುಗಿದ ಕ್ಷಮೆ ಕೇಳಿದ BBMP ಕಮಿಷನರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...