Homeಮುಖಪುಟ'ಭಾರತೀಯ' ಎಂದು ಘೋಷಿಸಲ್ಪಟ್ಟು ನಂತರ 'ವಿದೇಶಿ' ಎಂದು ಬಂಧಿಸಲ್ಪಟ್ಟ ಮಹಿಳೆಯ ಬಿಡುಗಡೆಗೆ ಗುವಾಹಟಿ ಹೈಕೋರ್ಟ್ ಆದೇಶ

‘ಭಾರತೀಯ’ ಎಂದು ಘೋಷಿಸಲ್ಪಟ್ಟು ನಂತರ ‘ವಿದೇಶಿ’ ಎಂದು ಬಂಧಿಸಲ್ಪಟ್ಟ ಮಹಿಳೆಯ ಬಿಡುಗಡೆಗೆ ಗುವಾಹಟಿ ಹೈಕೋರ್ಟ್ ಆದೇಶ

- Advertisement -
- Advertisement -

ವಿದೇಶಿಯರ ನ್ಯಾಯಮಂಡಳಿ (ಎಫ್‌ಟಿ)ಯು 2016 ರಲ್ಲಿ ‘ಭಾರತೀಯ’ ಎಂದು ಘೋಷಿಸಿ ನಂತರ, 2021 ರಲ್ಲಿ ‘ವಿದೇಶಿ’ ಎಂದು ಘೋಷಿಸಿದ್ದ 55 ವರ್ಷದ ಅಸ್ಸಾಂ ನಿವಾಸಿ ಹಸೀನಾ ಭಾನು ಅವರನ್ನು ಬಿಡುಗಡೆಗೊಳಿಸುವಂತೆ ಗುವಾಹಟಿ ಹೈಕೋರ್ಟ್‌ ಮಧ್ಯಪ್ರವೇಶಿಸಿ ಆದೇಶ ನೀಡಿದೆ.

ಹಸೀನಾ ಭಾನು, ಅಸ್ಸಾಂನ ದರ್ರಾಂಗ್ ನಿವಾಸಿಯಾಗಿದ್ದು, ಎಫ್‌ಟಿಯು ಅಕ್ಟೋಬರ್‌ ತಿಂಗಳಲ್ಲಿ ವಿದೇಶಿಯೆಂದು ಘೋಷಿಸಿತ್ತು. ಇದರ ನಂತರ ಅವರನ್ನು ತೇಜ್‌ಪುರ ಬಂಧನ ಶಿಬಿರದಲ್ಲಿ ಇರಿಸಲಾಗಿತ್ತು. ಈ ವೇಳೆ ಅವರು, 2016 ರಲ್ಲಿ ಎಫ್‌ಟಿಯು ತನ್ನನ್ನು ವಿದೇಶಿ ಅಥವಾ ಅಕ್ರಮ ವಲಸಿಗ ಅಲ್ಲ ಎಂದು ಘೋಷಿಸಿದ್ದನ್ನು ಉಲ್ಲೇಖಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.

ಇದನ್ನೂ ಓದಿ:ಕಳೆದ 5 ವರ್ಷಗಳಲ್ಲಿ ಭಾರತದ ಪೌರತ್ವ ಪಡೆದವರಿಗಿಂತ ತ್ಯಜಿಸಿದವರು 56 ಪಟ್ಟು ಜಾಸ್ತಿ!

ಅಸ್ಸಾಂನ ಮಾಂಗ್ಲೋದೊಯ್‌‌ನಲ್ಲಿರುವ 1 ನೇ ಎಫ್‌ಟಿಯು 2016ರ ಆಗಸ್ಟ್ ತಿಂಗಳಲ್ಲಿ, “ಹಸೀನಾ ಭಾನು ವಿದೇಶಿ ಅಥವಾ ಅಕ್ರಮ ವಲಸಿಗ” ಅಲ್ಲ ಎಂದು ಘೋಷಿಸಿತ್ತು. ಆದಾಗ್ಯೂ, 2017ರಲ್ಲಿ ಆಕೆ ಬಾಂಗ್ಲಾದೇಶಿ ಪ್ರಜೆಯೆಂದು ಶಂಕಿಸಿ ಅಸ್ಸಾಂ ಬಾರ್ಡರ್ ಪೋಲೀಸರು ಉಲ್ಲೇಖಿಸಿದ ನಂತರ ಅದೇ ಎಫ್‌ಟಿಯಲ್ಲಿ ಆಕೆಯ ವಿರುದ್ಧ ಮತ್ತೊಂದು ಪ್ರಕರಣವನ್ನು ದಾಖಲಿಸಲಾಗಿತ್ತು.

2021 ಮಾರ್ಚ್‌ ತಿಂಗಳಲ್ಲಿ ನ್ಯಾಯಮಂಡಳಿಯು ಆಕೆಯನ್ನು “ವಿದೇಶಿ” ಎಂದು ಘೋಷಿಸುವ ಅಭಿಪ್ರಾಯವನ್ನು ಅಂಗೀಕರಿಸಿತ್ತು. ಇದರ ನಂತರ ಆಕೆಯನ್ನು ಬಂಧಿಸಿ ಅಕ್ಟೋಬರ್‌ನಲ್ಲಿ ತೇಜ್‌ಪುರ ಜೈಲಿನಲ್ಲಿ ಬಂಧನ ಶಿಬಿರದಲ್ಲಿ ಇರಿಸಲಾಗಿತ್ತು.

ಗುವಾಹತ್‌ ಹೈಕೋರ್ಟ್‌ ಸೋಮವಾರದಂದು ವಿದೇಶಿಯರ ನ್ಯಾಯಮಂಡಳಿಯ 2021 ರ ಅಭಿಪ್ರಾಯವನ್ನು ಬದಿಗಿಟ್ಟು, “ಎಫ್‌‌ಟಿಯ ಎರಡೂ ತೀರ್ಪುಗಳಲ್ಲಿ ಅರ್ಜಿದಾರರ ಗುರುತು ಒಂದೇ ಆಗಿರುತ್ತದೆ ಮತ್ತು ಒಂದೇ ವ್ಯಕ್ತಿಗೆ ಸಂಬಂಧಿಸಿದಂತೆ ಎರಡನೇ ಆಕ್ಷೇಪಾರ್ಹ ಅಭಿಪ್ರಾಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದೆ.

ಇದನ್ನೂ ಓದಿ:ಮುಸ್ಲಿಮೇತರ ನಿರಾಶ್ರಿತರಿಂದ ಪೌರತ್ವಕ್ಕಾಗಿ ಅರ್ಜಿ ಆಹ್ವಾನಿಸಿದ ಕೇಂದ್ರ ಸರ್ಕಾರ

2019 ರ ಸುಪ್ರೀಂ ಕೋರ್ಟ್ ತೀರ್ಪನ್ನೂ ಉಲ್ಲೇಖಿಸಿದ [ಅಬ್ದುಲ್ ಕುದ್ದೂಸ್ Vs. ಯೂನಿಯನ್ ಆಫ್ ಇಂಡಿಯಾ, (2019) 6 SCC 604] ಹೈಕೋರ್ಟ್‌, “ರೆಸ್ ಜುಡಿಕಟ ತತ್ವವು ಒಮ್ಮೆ ತೀರ್ಪು ನೀಡಿದ ನಂತರ ಅದೇ ಜನರು ಅದೇ ಸಮಸ್ಯೆಯನ್ನು ಪುನಃ ತೆರೆಯುವುದನ್ನು ತಡೆಯುತ್ತದೆ. ಈ ತತ್ವ ವಿದೇಶಿಯರ ನ್ಯಾಯಮಂಡಳಿಯ ಮುಂದೆ ನಡೆಯುವ ಪ್ರಕ್ರಿಯೆಯಲ್ಲಿಯೂ ಸಹ ಅನ್ವಯಿಸುತ್ತದೆ” ಎಂದು ಹೇಳಿದೆ.

“ವಿದೇಶಿಯರ ನ್ಯಾಯಮಂಡಳಿಯು ಈ ವಿಷಯವನ್ನು ಹೇಗೆ ಪರಿಶೀಲಿಸಿತು ಮತ್ತು ಮೇಲೆ ಹೇಳಿದ ಅವಲೋಕನವನ್ನು ಹೇಗೆ ಮಾಡಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎನ್ ಕೋಟೀಶ್ವರ್ ಸಿಂಗ್ ಮತ್ತು ಮಾಲಾಶ್ರೀ ನಂದಿ ಅವರ ಪೀಠವು ಹೇಳಿದ್ದು, ಹೆಚ್ಚಿನ ದಾಖಲೆಗಳನ್ನು ಕೇಳದೆ ಅರ್ಜಿಯನ್ನು ವಿಲೇವಾರಿ ಮಾಡುವಂತೆ ಸೂಚಿಸಿದೆ.

ಸೋಮವಾರ ನ್ಯಾಯಾಲಯದ ನಿರ್ದೇಶನದ ನಂತರ ಹಸೀನಾ ಭಾನು ಅವರನ್ನು ಬಿಡುಗಡೆ ಆದೇಶವನ್ನು ಅನುಮೋದಿಸಿದ್ದಾಗಿ ದರ್ರಾಂಗ್ ಎಸ್ಪಿ ಸುಶಾಂತ ಬಿಸ್ವಾ ಶರ್ಮಾ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಕನ್ಹಯ್ಯ ಕುಮಾರ್ ಪೌರತ್ವ ರದ್ದುಗೊಳಿಸಿ ಎಂದ ಅರ್ಜಿದಾರನಿಗೆ 25 ಸಾವಿರ ದಂಡ!

ಹಸೀನಾ ಭಾನು ಅವರನ್ನು ಗುರುವಾರದಂದು ತೇಜ್‌ಪುರ ಜೈಲಿನಿಂದ (ದರ್ಂಗ್‌ನಿಂದ ಸುಮಾರು 100 ಕಿಮೀ ದೂರ) ಕರೆದುಕೊಂಡು ಹೋಗುವುದಾಗಿ ಕುಟುಂಬಸ್ಥರು ತಿಳಿಸಿದ್ದರು.

“ನಮಗೆ ಈಗ ಸಮಾಧಾನವಾಗಿದೆ. ಅವರನ್ನು ಈಗಾಗಲೇ 2016 ರಲ್ಲಿ ಭಾರತೀಯ ಎಂದು ಘೋಷಿಸಲಾಗಿತ್ತು. ಆದರೆ ಅದೇ ನ್ಯಾಯಾಲಯವು 2019 ರಲ್ಲಿ ಅವರ ಮೇಲೆ ಮತ್ತೊಂದು ವಿದೇಶಿ ಪ್ರಕರಣವನ್ನು ಹಾಕಿ…ನಮ್ಮನ್ನು ಓಡಾಡುವಂತೆ ಮಾಡಿತು. ಇದರಿಂದಾಗಿ ಸಾಕಷ್ಟು ಹಣವು ಖರ್ಚಾಗಿದ್ದು, ನಮಗೆ ಕಿರುಕುಳವು ಆಯಿತು. ನ್ಯಾಯ ನೀಡಿದ್ದಕ್ಕಾಗಿ ನಾವು ಗುವಾಹಟಿ ಹೈಕೋರ್ಟ್‌ಗೆ ಕೃತಜ್ಞರಾಗಿರುತ್ತೇವೆ” ಎಂದು ಹಸಿನಾ ಭಾನು ಅವರ ಸೋದರ ಅಕ್ರಂ ಹುಸೇನ್ ಹೇಳಿದ್ದಾರೆ.

“ಹಸೀನಾ ಭಾನು ಬಡ ರೈತ ಕುಟುಂಬಕ್ಕೆ ಸೇರಿದವರಾಗಿದ್ದು, ಅವರ ಎಲ್ಲಾ ದಾಖಲೆಗಳು ಕ್ರಮಬದ್ಧವಾಗಿವೆ” ಎಂದು ಹಸೀನಾ ಭಾನು ಅವರ ವಕೀಲ ಜಾಕಿರ್ ಹುಸೇನ್ ಹೇಳಿದ್ದಾರೆ.

ಅಸ್ಸಾಂನಲ್ಲಿ ಪೌರತ್ವ ಪ್ರಕರಣಗಳಲ್ಲಿ ಕೆಲಸ ಮಾಡುತ್ತಿರುವ ವಕೀಲಾಗಿರುವ ಜಾಕಿರ್‌ ಹುಸೇನ್‌, “ಈ ತೀರ್ಪು ಬಹಳ ಮಹತ್ವದ್ದಾಗಿದೆ. ಯಾಕೆಂದರೆ ವಿದೇಶಿಯರ ನ್ಯಾಯಮಂಡಳಿಗಳು ಈ ಹಿಂದೆ ‘ಭಾರತೀಯ’ ಎಂದು ಘೋಷಿಸಿದ ಅದೇ ವ್ಯಕ್ತಿಗಳ ವಿರುದ್ಧ ವಿಚಾರಣೆಯನ್ನು ಪ್ರಾರಂಭಿಸುವುದು ಸಾಮಾನ್ಯವಾಗಿದೆ. ಇದರ ವಿರುದ್ದ ಈ ತೀರ್ಪು ಉತ್ತಮ ನಿದರ್ಶನವಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ದೇಶ ವಿಭಜನೆ ಕಾಲದ ನಿರಾಶ್ರಿತರಿಗೆ ಪೌರತ್ವದ ಕುರಿತು ಸಂವಿಧಾನ ಸಭೆಯಲ್ಲಿ ಕಾವೇರಿದ ಚರ್ಚೆ: ಯುದ್ಧವಿನ್ನೂ ಮುಗಿದಿಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...