Homeಮುಖಪುಟಸಚಿವ ಅಜಯ್ ಮಿಶ್ರಾ ಒಬ್ಬ ಕ್ರಿಮಿನಲ್: ರಾಹುಲ್ ಗಾಂಧಿ ಆಕ್ರೋಶ

ಸಚಿವ ಅಜಯ್ ಮಿಶ್ರಾ ಒಬ್ಬ ಕ್ರಿಮಿನಲ್: ರಾಹುಲ್ ಗಾಂಧಿ ಆಕ್ರೋಶ

ಆಶಿಶ್ ಮಿಶ್ರಾ ಕಾರು ಕೊಲ್ಲುವ ಉದ್ದೇಶದಿಂದಲೇ ರೈತರ ಮೇಲೆ ಕಾರು ಹರಿಸಿದ್ದಾರೆ. ಇದು ಪೂರ್ವಯೋಜಿತ ಪಿತೂರಿಯಾಗಿದೆ ಎಂದು ಎಸ್‌ಐಟಿ ತಿಳಿಸಿದೆ.

- Advertisement -
- Advertisement -

ಲಖಿಂಪುರ ಖೇರಿ ಹತ್ಯಾಕಾಂಡ ಘಟನೆ ಸಂಬಂಧಿತ ಪ್ರಶ್ನೆ ಕೇಳಿದ ಪತ್ರಕರ್ತರ ಮೇಲೆ ದಾಳಿ ನಡೆಸಿರುವ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್‌ ಮಿಶ್ರಾ ಅವರನ್ನು ‘ಕ್ರಿಮಿನಲ್‌’ ಎಂದಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ, ಮಿಶ್ರಾ ಅವರು ತಮ್ಮ ಸ್ಥಾನಕ್ಕೆ ಈ ಕೂಡಲೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

‘ಸಚಿವರು ಒಬ್ಬ ಕ್ರಿಮಿನಲ್‌. ಅವರು ರಾಜೀನಾಮೆ ನೀಡಬೇಕು’ ಎಂದು ರಾಹುಲ್‌ ಗಾಂಧಿ ಬುಧವಾರ ಲೋಕಸಭೆಯಲ್ಲಿ ತಿಳಿಸಿದರು. ಈ ವಿಷಯ ಕುರಿತಂತೆ ಉಂಟಾದ ಗದ್ದಲ, ಕೋಲಾಹಲದಿಂದಾಗಿ ಸದನವನ್ನು ಎರಡು ಗಂಟೆಗೆ ಮುಂದೂಡಲಾಯಿತು.

ಇದನ್ನೂ ಓದಿ: ಲಖಿಂಪುರ್‌‌ ಹತ್ಯಾಕಾಂಡ: ಜೈಲಿನಲ್ಲಿರುವ ಮಗನ ಬಗ್ಗೆ ಕೇಳಿದ ಪತ್ರಕರ್ತರನ್ನು ನಿಂದಿಸಿದ ಸಚಿವ ಅಜಯ್ ಮಿಶ್ರಾ

‘ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರನ್ನು ರಕ್ಷಿಸುತ್ತಿದ್ದಾರೆ’ ಎಂದು ರಾಹುಲ್ ಆರೋಪಿಸಿದರು.
‘ಲಖೀಂಪುರ ಖೇರಿ ಘಟನೆ ನಿಸ್ಸಂಶಯವಾಗಿ ಪೂರ್ವನಿಯೋಜಿತ ಪಿತೂರಿ ಎಂದು ಹೇಳಲಾಗಿದೆ. ಇದರಲ್ಲಿ ಯಾರ ಮಗ ಭಾಗಿಯಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ನಾವು ಸಚಿವರು ರಾಜೀನಾಮೆ ನೀಡಬೇಕೆಂದು ಬಯಸುತ್ತೇವೆ. ಈ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಎಂದು ಬಯಸುತ್ತೇವೆ. ಆದರೆ ಪ್ರಧಾನಿ ಅದನ್ನು ನಿರಾಕರಿಸುತ್ತಿದ್ದು, ಬದಲಿಗೆ ಸಚಿವರ ಪರವಾಗಿ ಸಮರ್ಥನೆಗಳನ್ನು ಮಾಡುತ್ತಿದ್ದಾರೆ’ ಎಂದು ರಾಹುಲ್‌ ಗಾಂಧಿ ಸುದ್ದಿಗಾರರಿಗೆ ತಿಳಿಸಿದರು.

‘ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಒಬ್ಬ ಕೊಲೆ ಆರೋಪಿ. ಅವರು ಕೊಲ್ಲುವ ಉದ್ದೇಶದಿಂದಲೇ ರೈತರ ಮೇಲೆ ಕಾರು ಹರಿಸಿದ್ದಾರೆ. ಇದು ಪೂರ್ವಯೋಜಿತ ಪಿತೂರಿಯಾಗಿದೆ ಎಂದು ಎಸ್‌ಐಟಿ ತಿಳಿಸಿದೆ.

ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಆರೋಪಿಯಾಗಿರುವ ಆಶಿಶ್ ಮಿಶ್ರಾ ಅವರ ತಂದೆ ಅಜಯ್ ಮಿಶ್ರಾ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಶಾಸಕರು ಉತ್ತರ ಪ್ರದೇಶ ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸಿದರು. “ನಾವು ವಿಧಾನಸಭೆಯಲ್ಲೂ ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತೇವೆ” ಎಂದು ಯುಪಿ ಕಾಂಗ್ರೆಸ್ ಮುಖ್ಯಸ್ಥ ಮತ್ತು ಶಾಸಕ ಅಜಯ್ ಕುಮಾರ್ ಲಲ್ಲು ಹೇಳಿದ್ದಾರೆ.

ಘಟನೆಯ ತನಿಖೆ ನಡೆಸುತ್ತಿರುವ ಪೊಲೀಸರು ಅಕ್ಟೋಬರ್‌ನಿಂದ ಜೈಲಿನಲ್ಲಿರುವ ಆಶಿಶ್ ಮಿಶ್ರಾ ಮತ್ತು ಇತರ 13 ಆರೋಪಿಗಳ ವಿರುದ್ಧ ‘ನಿರ್ಲಕ್ಷ್ಯದಿಂದ ಸಾವು’ ಬದಲಿಗೆ ‘ಕೊಲೆ ಪ್ರಯತ್ನ’ದಡಿ ಪ್ರಕರಣ ದಾಖಲಿಸಿದ್ದಾರೆ.


ಇದನ್ನೂ ಓದಿ; ಲಖಿಂಪುರ್ ಖೇರಿ ಹತ್ಯಾಕಾಂಡ ಪೂರ್ವಯೋಜಿತವಾದುದು: SIT

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...