Homeಕರ್ನಾಟಕಹಾಸನ : ಏಳರಲ್ಲಿ ನಾಲ್ಕು ಜೆಡಿಎಸ್ ಎರಡು ಬಿಜೆಪಿ ಒಂದು ಕಾಂಗ್ರೆಸ್

ಹಾಸನ : ಏಳರಲ್ಲಿ ನಾಲ್ಕು ಜೆಡಿಎಸ್ ಎರಡು ಬಿಜೆಪಿ ಒಂದು ಕಾಂಗ್ರೆಸ್

- Advertisement -
- Advertisement -

ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಜೆಡಿಎಸ್, 2 ಬಿಜೆಪಿ ಮತ್ತು ಕಾಂಗ್ರೆಸ್‌ ಒಂದು ಸ್ಥಾನ ಪಡೆದುಕೊಂಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ವಿಧಾನಸಭಾ ಚುನಾವನಾ ಕ್ಷೇತ್ರದಲ್ಲಿ ಜೆಡಿಎಸ್ ನ ಸ್ವರೂಪ್ ಪ್ರಕಾಶ್ 8 ಸಾವಿರ ಮತಗಳಿಂದ ಪ್ರೀತಮ್‌ಗೌಡ ವಿರುದ್ದ ಗೆಲುವು‌ ಸಾಧಿಸಿದ್ದಾರೆ.

ಹಾಸನ ಜಿಲ್ಲೆಯ ಕ್ಷೇತ್ರವಾರು ವಿವರ:

1) ಹಾಸನ ವಿಧಾನಸಭಾ ಕ್ಷೇತ್ರದ ವಿವರ

ಒಟ್ಟು ಮತದಾರರು: 2,23,021, ಪುರುಷ ಮತದಾರರು: 1,10,153, ಮಹಿಳಾ ಮತದಾರರು: 1,12,857.

2018ರ ವಿಜೇತರು: ಪ್ರೀತಂ ಗೌಡ (ಬಿಜೆಪಿ),

2023 ರ ಅಭ್ಯರ್ಥಿಗಳು;
ಸ್ವರೂಪ್ ಪ್ರಕಾಶ್ – ಜೆಡಿಎಸ್ – 85176
ಪ್ರೀತಂಗೌಡ – ಬಿಜೆಪಿ – 77322
ಕಾಂಗ್ರೆಸ್ – ಬನವಾಸೆ ರಂಗಸ್ವಾಮಿ 4305
ಆಪ್ – ಅಗಿಲೆ ಯೋಗೇಶ್ 1301

ಗೆಲುವಿನ ಅಂತರ – 7854

2) ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ವಿವರ

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ 5 ಬಾರಿ ಜೆಡಿಎಸ್ ಗೆದ್ದಿದ್ದರೆ, ಕಾಂಗ್ರೆಸ್ 4 ಬಾರಿ ಗೆದ್ದಿದೆ. ಈ  ಹಿಂದೆ ಶ್ರೀಕಂಠಯ್ಯನವರ ಕಾಲದಲ್ಲಿ ಕ್ಷೇತ್ರದಲ್ಲಿ ಹಿಡಿತ ಕಾಂಗ್ರೆಸ್ ಹಿಡಿತ ಸಾಧಿಸಿತ್ತು. ಆದರೆ ನಂತರದಲ್ಲಿ ಜೆಡಿಎಸ್ ಸತತವಾಗಿ ಗೆಲುವಿನಿಂದ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಸಿ.ಎನ್ ಬಾಲಕೃಷ್ಣ 50ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಜೆಡಿಎಸ್‌ನ ಸಿ.ಎನ್ ಬಾಲಕೃಷ್ಣ ಕಾಂಗ್ರೆಸ್ ಅಭ್ಯರ್ಥಿ ಎಂ.ಎ.ಗೋಪಾಲಸ್ವಾಮಿ ವಿರುದ್ದ ಗೆಲುವು ಸಾಧಿಸಿದ್ದಾರೆ.

ಒಟ್ಟು ಮತದಾರರು: 2,03,026, ಪುರುಷ ಮತದಾರರು: 1,00,604, ಮಹಿಳಾ ಮತದಾರರು: 1,02,419.

2023ರ ಅಭ್ಯರ್ಥಿಗಳು:

ಜೆಡಿಎಸ್ – ಸಿ.ಎನ್.ಬಾಲಕೃಷ್ಣ – 85668
ಕಾಂಗ್ರೆಸ್ – ಎಂ.ಎ.ಗೋಪಾಲಸ್ವಾಮಿ – 79023
ಬಿಜೆಪಿ – ಚಿದಾನಂದ್ – 5648

ಗೆಲುವಿನ ಅಂತರ – 6645

3) ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ವಿವರ

ಒಳಗೂ ಹೊಳೆ ಹೊರಗೂ ಹೊಳೆ ಎಂಬ ಮಾತು ಹೊಳೆನರಸೀಪುರಕ್ಕೆ ಅನ್ವರ್ಥದಂತಿದೆ. ಜೆಡಿಎಸ್‌ನ ಭದ್ರಕೋಟೆ ಎಂದು ಹೆಸರಾಗಿರುವ ಹೊಳೆನರಸೀಪುರದಲ್ಲಿ ಈ ಬಾರಿಯ 2023ರ ವಿಧಾನಸಭಾ ಚುನಾವಣೆಯಲ್ಲಿ ಹೊಳೆಸರಸೀಪುರ ಕ್ಷೇತ್ರದ ಜನ ಹೆಚ್‌.ಡಿ.ರೇವಣ್ಣ ಅವರಿಗೆ ಒಳೇಟು ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಮತ್ತೊಮ್ಮೆ ಹೆಚ್‌.ಡಿ.ರೇವಣ್ಣ ಶ್ರೇಯಸ್‌ ಪಾಟೇಲ್ ವಿರುದ್ದ ಗೆಲುವಿನ ನಗೆ ಬೀರಿದ್ದಾರೆ.

ಒಟ್ಟು ಮತದಾರರು: 2,18,097, ಪುರುಷ ಮತದಾರರು: 1,09,187, ಮಹಿಳಾ ಮತದಾರರು: 1,08,900.

2018ರ ವಿಜೇತರು: ಎಚ್‌.ಡಿ. ರೇವಣ್ಣ (ಜೆಡಿಎಸ್‌),

2023 ರ ಅಭ್ಯರ್ಥಿಗಳು;

ಜೆಡಿಎಸ್ – ಹೆಚ್.ಡಿ.ರೇವಣ್ಣ – 86401
ಕಾಂಗ್ರೆಸ್ – ಶ್ರೇಯಸ್ ಪಟೇಲ್ – 83747
ಬಿಜೆಪಿ – ದೇವರಾಜೇಗೌಡ – 4666

ಗೆಲುವಿನ ಅಂತರ – 2654

4) ಅರಕಲಗೂಡು ವಿಧಾನಸಭಾ ಕ್ಷೇತ್ರದ ವಿವರ

ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಬದಲಾದ ಚುನಾವಣಾ ಕಣದಲ್ಲಿ ಜೆಡಿಎಸ್‌ ನ ರಾಮಸ್ವಾಮಿ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರಿದ ಬಳಿಕ, ವಿರೋಧಿ ಪಾಳೆಯದಲ್ಲಿದ್ದ ಎ.ಮಂಜು ಬಿಜೆಪಿ ತೊರೆದು ಮತ್ತೆ ಜೆಡಿಎಸ್ ಸೇರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಮತ್ತೆ ಅರಕಲಗೂಡು ಕ್ಷೇತ್ರದ ಮತದಾರರು ಮತ್ತೆ ಜೆಡಿಎಸ್‌ನ ಕೈ ಹಿಡಿದಿದ್ದಾರೆ.

ಒಟ್ಟು ಮತದಾರರು: 2,25,746, ಪುರುಷ ಮತದಾರರು: 1,15,558, ಮಹಿಳಾ ಮತದಾರರು: 1,10,185.

2018ರ ವಿಜೇತರು: ಎ.ಟಿ. ರಾಮಸ್ವಾಮಿ (ಜೆಡಿಎಸ್‌),

2023 ರ ಅಭ್ಯರ್ಥಿಗಳು;

ಜೆಡಿಎಸ್ – ಎ.ಮಂಜು – 67499
ಪಕ್ಷೇತರ – ಕೃಷ್ಣೇಗೌಡ – 48620
ಕಾಂಗ್ರೆಸ್ – ಶ್ರೀಧರ್ ಗೌಡ – 33084
ಬಿಜೆಪಿ – ಯೋಗಾರಮೇಶ್ – 18477

ಗೆಲುವಿನ ಅಂತರ – 18,879

5) ಸಕಲೇಶಪುರ ವಿಧಾನಸಭಾ ಕ್ಷೇತ್ರದ ವಿವರ

ಒಟ್ಟು ಮತದಾರರು: 2,03,631, ಪುರುಷ ಮತದಾರರು: 1,01,582, ಮಹಿಳಾ ಮತದಾರರು: 1,02,044.

2018ರ ವಿಜೇತರು: ಎಚ್.ಕೆ. ಕುಮಾರಸ್ವಾಮಿ (ಜೆಡಿಎಸ್‌),

2023 ರ ಅಭ್ಯರ್ಥಿಗಳು:

ಬಿಜೆಪಿ – ಸಿಮೆಂಟ್ ಮಂಜು – 58604
ಜೆಡಿಎಸ್ – ಹೆಚ್.ಕೆ.ಕುಮಾರಸ್ವಾಮಿ – 56548
ಕಾಂಗ್ರೆಸ್ – ಮುರುಳಿಮೋಹನ್ – 42811

ಗೆಲುವಿನ ಅಂತರ – 2056

6) ಅರಸೀಕೆರೆ ವಿಧಾನಸಭಾ ಕ್ಷೇತ್ರದ ವಿವರ

ಅರಸೀಕೆರೆ ಕ್ಷೇತ್ರದಲ್ಲಿ ಶಿಲಿಂಗೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಮೂಲಕ ಬಿಗ್ ಶಾಕ್ ನೀಡಿದ್ದರು, ಕ್ಷೇತ್ರದಲ್ಲಿ ಬಿಗಿ ಹಿಡಿತ ಹೊಂದಿದ್ದ ಶಿವಲಿಂಗೇಗೌಡ 2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಟಿಕೆಟ್ ವಂಚಿತ ಅಭ್ಯರ್ಥಿ ಸಂತೋಷ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಿತ್ತು, ಆದರೆ ಸಂತೋಷ್ ಸೋಲು ಕಂಡಿದ್ದಾರೆ.

ಒಟ್ಟು ಮತದಾರರು: 2,14,020, ಪುರುಷ ಮತದಾರರು: 1,06,476, ಮಹಿಳಾ ಮತದಾರರು: 1,07,540.

2018ರ ವಿಜೇತರು: ಕೆ.ಎಂ. ಶಿವಲಿಂಗೇಗೌಡ (ಜೆಡಿಎಸ್‌);

2023 ರ ಅಭ್ಯರ್ಥಿಗಳು:

ಕಾಂಗ್ರೆಸ್ – ಕೆ.ಎಂ.ಶಿವಲಿಂಗೌಡ – 97099
ಜೆಡಿಎಸ್ – ಎನ್.ಆರ್.ಸಂತೋಷ್ – 77006
ಬಿಜೆಪಿ – ಜಿವಿಟಿ ಬಸವರಾಜ್ – 6456

ಗೆಲುವಿನ ಅಂತರ – 20093

7) ಬೇಲೂರು ವಿಧಾನಸಭಾ ಕ್ಷೇತ್ರದ ವಿವರ

ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹೆಚ್‌.ಕೆ. ಸುರೇಶ್ ಅವರು ಗೆಲ್ಲುವ ಮೂಲಕ ಬಿಜೆಪಿಯ ಕಮಲವನ್ನು ಹರಳುವಂತೆ ಮಾಡಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಲಿಂಗೇಶ್ ಸೋಲನಪ್ಪಿದ್ದಾರೆ.

ಒಟ್ಟು ಮತದಾರರು: 1,96,053, ಪುರುಷ ಮತದಾರರು: 98,719, ಮಹಿಳಾ ಮತದಾರರು: 97,330.

2018ರ ವಿಜೇತರು: ಕೆ.ಎಸ್‌.ಲಿಂಗೇಶ್‌ (ಜೆಡಿಎಸ್‌),

2023 ರ ಅಭ್ಯರ್ಥಿಗಳು;

ಬಿಜೆಪಿ – ಹೆಚ್.ಕೆ.ಸುರೇಶ್ – 63571
ಕಾಂಗ್ರೆಸ್ – ಬಿ.ಶಿವರಾಮ್ – 55835
ಜೆಡಿಎಸ್ – ಕೆ.ಎಸ್.ಲಿಂಗೇಶ್ – 38,893

ಗೆಲುವಿನ ಅಂತರ – 7736


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ವಿರುದ್ದ ಬ್ಲೂ ಕಾರ್ನರ್ ನೋಟಿಸ್: ಏನಿದು ರೆಡ್, ಬ್ಲೂ ಬಣ್ಣ ಆಧಾರಿತ...

0
ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಕರ್ನಾಟಕದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಪ್ರಜ್ವಲ್‌...