Homeಮುಖಪುಟದ್ವೇಷ ಭಾಷಣ ಮಾಡುವವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲೇಬೇಕು: ಆರ್‌ಎಸ್‌ಎಸ್‌ ಮುಖಂಡ

ದ್ವೇಷ ಭಾಷಣ ಮಾಡುವವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲೇಬೇಕು: ಆರ್‌ಎಸ್‌ಎಸ್‌ ಮುಖಂಡ

- Advertisement -
- Advertisement -

ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ಹತ್ಯಾಕಾಂಡಕ್ಕೆ ಬಹಿರಂಗವಾಗಿ ಕರೆ ನೀಡಿದ ದ್ವೇಷ ಭಾಷಣಗಳನ್ನು ಖಂಡಿಸಿರುವ ಆರ್‌ಎಸ್‌ಎಸ್‌ನ ಹಿರಿಯ ನಾಯಕ ಇಂದ್ರೇಶ್ ಕುಮಾರ್, ‘ಪ್ರಚೋದನಕಾರಿ ಮತ್ತು ಜನರನ್ನು ವಿಭಜಿಸುವಂತಹ ಹೇಳಿಕೆಗಳನ್ನು ನೀಡುವ ಎಲ್ಲರಿಗೂ ಯಾವುದೇ ವಿನಾಯಿತಿ ಇಲ್ಲದೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು’ ಎಂದಿದ್ದಾರೆ.

ದ್ವೇಷದ ರಾಜಕೀಯವನ್ನು “ಭ್ರಷ್ಟಾಚಾರ” ಎಂದು ಕರೆದಿರುವವರು, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅದರ ನಾಯಕರು ದ್ವೇಷ ಭಾಷಣ ಮಾಡುವುದು ಮತ್ತು ಸಮಾಜದ ಒಂದು ವರ್ಗವನ್ನು ಇನ್ನೊಂದು ವರ್ಗದ ವಿರುದ್ಧ ಎತ್ತಿಕಟ್ಟುವುದನ್ನು ತಡೆಯಬೇಕೆಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಕರೆ ನೀಡಿದ್ದಾರೆ.

’ಯಾವುದೇ ಸಮುದಾಯ, ಜಾತಿ, ಸಮುದಾಯದ ವಿರುದ್ಧ ಪ್ರಚೋದನಕಾರಿ ಮತ್ತು ವಿಭಜಿಸುವ ಟೀಕೆಗಳನ್ನು ಮಾಡುವ ಬದಲು, ದೇಶ ಮತ್ತು ಜನರ ಹಿತದೃಷ್ಟಿಯಿಂದ ಸಹೋದರತೆ ಮತ್ತು ಅಭಿವೃದ್ಧಿಯ ರಾಜಕಾರಣ ಮಾಡಬೇಕು’ ಎಂದು ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿರುವ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ದ್ವೇಷ ಭಾಷಣ, ಜಾತಿ ಆಧಾರಿತ ಹಿಂಸಾಚಾರದ ವಿರುದ್ಧ ಮಾತನಾಡುವಂತೆ ಪ್ರಧಾನಿ ಮೋದಿಗೆ ಐಐಎಂ ವಿದ್ಯಾರ್ಥಿಗಳು, ಅಧ್ಯಾಪಕರ ಪತ್ರ

“ಯಾವುದೇ ರೀತಿಯ ದ್ವೇಷದ ಭಾಷಣಗಳು ಖಂಡನೀಯ. ಎಲ್ಲಾ ದ್ವೇಷದ ಭಾಷಣಗಳನ್ನು ಕಾನೂನಿನ ಪ್ರಕಾರ ಖಂಡಿಸಬೇಕು ಮತ್ತು ಶಿಕ್ಷಿಸಬೇಕು. ಯಾರಿಗೂ ವಿನಾಯಿತಿ ನೀಡಬಾರದು” ಎಂದು ಉತ್ತರಾಖಂಡದ ಹರಿದ್ವಾರ, ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆದ ಧರ್ಮ ಸಂಸದ್‌ನ ದ್ವೇಷದ ಭಾಷಣಗಳ ಬಗ್ಗೆ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

’ದೇಶದ ವಾತಾವರಣವನ್ನು ಹಾಳುಮಾಡುವ ಇಂತಹ ಎಲ್ಲಾ ವಿಭಜಕ ಕೃತ್ಯಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಈ ಸಮಯದ ಅಗತ್ಯವಾಗಿದೆ. “ಕ್ರೂರ” ದ್ವೇಷದ ಭಾಷಣಗಳಿಗೆ ಹಲವಾರು ಉದಾಹರಣೆಗಳಿವೆ’ ಎಂದು ಹೇಳಿದ್ದಾರೆ.

ಮಹಾತ್ಮಾ ಗಾಂಧಿಯವರ ಹತ್ಯೆಗೆ ಆರ್‌ಎಸ್‌ಎಸ್ ಮತ್ತು ಅದರ ಸಿದ್ಧಾಂತವನ್ನು ದೂಷಿಸುತ್ತಿರುವ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳನ್ನು ಟೀಕಿಸಿರುವ ಅವರು, ತಮ್ಮ ಆರೋಪವನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲದಿದ್ದರೂ, ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

ಆರ್‌ಎಸ್‌ಎಸ್ ವಿರುದ್ಧದ ಆಧಾರರಹಿತ ಆರೋಪಗಳು ಸಹ ದ್ವೇಷದ ಭಾಷಣವಾಗಿದೆ. ಇದುವರೆಗೆ ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ..?  ಒಂದು ವರ್ಗದ ಜನರು ಅಥವಾ ಸಂಘಟನೆಯ ವಿರುದ್ಧ ದ್ವೇಷವನ್ನು ಉಂಟುಮಾಡುವ ಆಧಾರರಹಿತ ಆರೋಪಗಳನ್ನು “ದ್ವೇಷ ಭಾಷಣಗಳು” ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಇಂದ್ರೇಶ್ ಕುಮಾರ್ ಅವರು ಸಂಘದ ಅಂಗಸಂಸ್ಥೆ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಸಂಸ್ಥಾಪಕರೂ ಆಗಿದ್ದಾರೆ. ಜೊತೆಗೆ RSS ನ ಮುಸ್ಲಿಂ ಘಟಕದ ರೀತಿಯಲ್ಲಿ ಕೆಲವು ವರ್ಷಗಳ ಹಿಂದೆ ಕ್ರಿಶ್ಚಿಯನ್ ರಾಷ್ಟ್ರೀಯ ಮಂಚ್ ಎಂಬ ಮತ್ತೊಂದು ಸಂಘಟನೆಯನ್ನು ಸ್ಥಾಪಿಸಿದ್ದಾರೆ.


ಇದನ್ನೂ ಓದಿ: ‘ಧರ್ಮ ಸಂಸತ್‌‌’ ದ್ವೇಷ ಭಾಷಣ ಕುರಿತ ಪ್ರಶ್ನೆಗೆ ಸಿಟ್ಟಾಗಿ ಸಂದರ್ಶನ ಅರ್ಧಕ್ಕೆ ನಿಲ್ಲಿಸಿದ ಯುಪಿ ಉಪಮುಖ್ಯಮಂತ್ರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...