Homeಕರ್ನಾಟಕಐಐಟಿ ಬಾಂಬೆಯಲ್ಲಿನ ಜಾತಿ ಕಿರುಕುಳದ ಬಗ್ಗೆ ಸಾಯುವ ಮುನ್ನ ತಿಳಿಸಿದ್ದ; ದರ್ಶನ್ ಸೋಲಂಕಿ ಕುಟುಂಬ ಆರೋಪ

ಐಐಟಿ ಬಾಂಬೆಯಲ್ಲಿನ ಜಾತಿ ಕಿರುಕುಳದ ಬಗ್ಗೆ ಸಾಯುವ ಮುನ್ನ ತಿಳಿಸಿದ್ದ; ದರ್ಶನ್ ಸೋಲಂಕಿ ಕುಟುಂಬ ಆರೋಪ

- Advertisement -
- Advertisement -

ಐಐಟಿ ಬಾಂಬೆಯಲ್ಲಿ 18 ವರ್ಷದ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆಘಾತಕಾರಿ ಸಂಗತಿಗಳು ಹೊರಬೀಳತೊಡಗಿವೆ. “ಜಾತಿಯ ಕಾರಣಕ್ಕಾಗಿ ತನ್ನ ಸ್ನೇಹಿತರಿಂದ ಆತ ಅವಮಾನಕ್ಕೀಡಾಗಿದ್ದ” ಎಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯ ಪೋಷಕರು ಪ್ರತಿಕ್ರಿಯಿಸಿದ್ದಾರೆ.

‘ಎನ್‌ಡಿಟಿವಿ’ ಜೊತೆಯಲ್ಲಿ ಮಾತನಾಡಿರುವ ಕುಟುಂಬಸ್ಥರು, “ಐಐಟಿ ಬಾಂಬೆಯ ಅಧಿಕಾರಿಗಳು ಕ್ಯಾಂಪಸ್‌ನಲ್ಲಿ ಯಾವುದೇ ತಾರತಮ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಂಡಿರುವ ದರ್ಶನ್ ಸೋಲಂಕಿ, ತನಗಾಗುತ್ತಿರುವ ಜಾತಿ ಕಿರುಕುಳದ ಕುರಿತು ನಮ್ಮೊಂದಿಗೆ ಹೇಳಿಕೊಂಡಿದ್ದನು” ಎಂದು ಆರೋಪಿಸಿದ್ದಾರೆ.

“ಕಳೆದ ತಿಂಗಳು ದರ್ಶನ್‌ ಬಂದಿದ್ದಾಗ, ಬಾಂಬೆ ಐಐಟಿಯಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆ ಎಂದು ನನಗೆ ಮತ್ತು ಅಮ್ಮ-ಅಪ್ಪನಿಗೆ ಹೇಳಿದ್ದನು. ದರ್ಶನ್‌ ಪರಿಶಿಷ್ಟ ಜಾತಿಗೆ ಸೇರಿದವನು ಎಂದು ಆತನ ಸ್ನೇಹಿತರಿಗೆ ತಿಳಿದಿತ್ತು, ಆದ್ದರಿಂದ ಸ್ನೇಹಿತರ ವರ್ತನೆಗಳು ಬದಲಾದವು. ದರ್ಶನ್‌ ಜೊತೆಯಲ್ಲಿ ಅವರು ಮಾತನಾಡುವುದನ್ನೂ ನಿಲ್ಲಿಸಿದರು. ಅವನೊಂದಿಗೆ ಸುತ್ತಾಡುವುದನ್ನೂ ನಿಲ್ಲಿಸಿದ್ದರು” ಎಂದು ದರ್ಶನ್‌ ಸಹೋದರಿ ಜಾನ್ವಿ ಸೋಲಂಕಿ ತಿಳಿಸಿದ್ದಾರೆ.

“ಆತ ಸಂಕಷ್ಟದಲ್ಲಿದ್ದನು. ಆತನಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಅದಕ್ಕಾಗಿಯೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ದರ್ಶನ್ ಅವರ ತಾಯಿ ತರ್ಲಿಕಾಬೆನ್ ಸೋಲಂಕಿ ದೂರಿದ್ದಾರೆ.

ದರ್ಶನ್ ಅವರ ಚಿಕ್ಕಮ್ಮ ದಿವ್ಯಾಬೆನ್ ಪ್ರತಿಕ್ರಿಯಿಸಿ, “ಒಂದು ತಿಂಗಳ ಹಿಂದೆ ಆತ ಇಲ್ಲಿಗೆ ಬಂದಿದ್ದಾಗ ಸಂಕಷ್ಟ ತೋಡಿಕೊಂಡಿದ್ದನು. ಉಚಿತವಾಗಿ ಓದುತ್ತಿದ್ದೀಯ ಎಂದು ಅನೇಕ ವಿದ್ಯಾರ್ಥಿಗಳು ಆತನನ್ನು ಹಂಗಿಸುತ್ತಿದ್ದರು, ಅಸೂಯೆ ಪಟ್ಟಿಕೊಳ್ಳುತ್ತಿದ್ದರು, ನಾವು ಸಾಕಷ್ಟು ಖರ್ಚು ಮಾಡುತ್ತಿರುವಾಗ ನೀವು ಏಕೆ ಉಚಿತವಾಗಿ ಓದುತ್ತಿದ್ದೀರಿ ಎಂದು ಅಣಕ ಮಾಡುತ್ತಿದ್ದರು, ಅನೇಕ ವಿದ್ಯಾರ್ಥಿಗಳು ನನ್ನ ಬಗ್ಗೆ ಅಸೂಯೆ ಹೊಂದಿದ್ದಾರೆ ಎಂದು ಆತ ತಿಳಿಸಿದ್ದನು. ಕೆಲವು ಸ್ನೇಹಿತರು ಮಾತನಾಡುವುದನ್ನೂ ನಿಲ್ಲಿಸಿದ್ದರು” ಎಂದು ವಿವರಿಸಿದ್ದಾರೆ.

ದರ್ಶನ್ ಸಾವಿಗೆ ಶರಣಾಗುವ ಕೆಲವೇ ಗಂಟೆಗಳ ಮೊದಲು ನನಗೆ ಕರೆ ಮಾಡಿದ್ದನು ಎಂದು ದರ್ಶನ್ ಅವರ ತಂದೆ ರಮೇಶ್ ಭಾಯ್ ಸೋಲಂಕಿ ಪ್ರತಿಕ್ರಿಯಿಸಿದ್ದಾರೆ.

“ಆತ್ಮಹತ್ಯೆಗೆ ಎರಡು ಗಂಟೆಗಳ ಮೊದಲು, ನಮಗೆ ಐಐಟಿಯಿಂದ ಕರೆ ಬಂದಿತು, ‘ಹೇಗಿದ್ದೀರಿ’ ಎಂದು ಆತ ಕೇಳಿದನು, ಆತ ಸಾಮಾನ್ಯವಾಗಿಯೇ ಮಾತನಾಡುತ್ತಿದ್ದನು, ನನ್ನ ಅಣ್ಣನ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ತಿಳಿಸಿದನು. ಇಂದು ಹೊರಗೆ ಹೋಗುತ್ತಿದ್ದೇನೆ ಎಂದನು. ನಾನು ಸ್ವಲ್ಪ ಹಣವನ್ನು ಕಳುಹಿಸಿದೆ. ನನ್ನ ಬಳಿ ಹಣವಿದೆ, ನನಗೆ ಹಣದ ಅಗತ್ಯವಿಲ್ಲ ಎಂದು ಆತ ತಿಳಿಸಿದ. ಅವನು ಹೆಚ್ಚು ಖರ್ಚು ಮಾಡುತ್ತಿರಲಿಲ್ಲ. ಆದರೆ ನಾನು ಇನ್ನೂ ಸ್ವಲ್ಪ ಹಣವನ್ನು ಕಳುಹಿಸುತ್ತಿದ್ದೆ. ಈ ರೀತಿಯಾಗಬಹುದು ಎಂದು ನನಗೆ ತಿಳಿದಿರಲಿಲ್ಲ” ಎಂದಿದ್ದಾರೆ ದರ್ಶನ್ ತಂದೆ.

ಇದನ್ನೂ ಓದಿರಿ: ಜಾತಿ ನಿಂದನೆ ಆರೋಪ; ಬಾಂಬೆ ಐಐಟಿಯಲ್ಲಿ ದಲಿತ ವಿದ್ಯಾರ್ಥಿ ಆ*ಹತ್ಯೆ

ದರ್ಶನ್ ಸೋಲಂಕಿ ಅವರು ವ್ಯವಸ್ಥಿತವಾಗಿ ತಾರತಮ್ಯವನ್ನು ಎದುರಿಸಿದ್ದಾರೆ ಎಂಬ ಆರೋಪವನ್ನು ಐಐಟಿ ಬಾಂಬೆ ತಳ್ಳಿಹಾಕಿದೆ. ಅವರ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.

“ಐಐಟಿ ಬಾಂಬೆಯ 1ನೇ ವರ್ಷದ ಬಿಟೆಕ್ ವಿದ್ಯಾರ್ಥಿಯ ದುರಂತ ಸಾವಿನ ಬಗ್ಗೆ ಆಗುತ್ತಿರುವ ಕೆಲವು ಸುದ್ದಿಗಳನ್ನು ನಾವು ನಿರಾಕರಿಸುತ್ತೇವೆ. ಸಾಂಸ್ಥಿಕ ಕೊಲೆ ಇದಾಗಿದೆ, ತಾರತಮ್ಯ ನಡೆದಿದೆ ಎಂಬುದು ಸುಳ್ಳು” ಎಂದು ಶಿಕ್ಷಣ ಸಂಸ್ಥೆ ಮಂಗಳವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾನುವಾರ ಹಾಸ್ಟೆಲ್ ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ದರ್ಶನ್ ಸಾವನ್ನಪ್ಪಿದ ನಂತರ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಅವರಿಗೆ ಇನ್ನೂ ಸೂಸೈಡ್ ನೋಟ್ ಸಿಕ್ಕಿಲ್ಲ, ಆದರೆ ಕ್ಯಾಂಪಸ್‌ನಲ್ಲಿ ದಲಿತ ವಿದ್ಯಾರ್ಥಿಗಳ ವಿರುದ್ಧ ಆಗುತ್ತಿರುವ ತಾರತಮ್ಯದಿಂದಾಗಿ ದರ್ಶನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...