HomeUncategorizedಸಾಮಾಜಿಕ ನೈತಿಕ ಮೌಲ್ಯಗಳ ದೃಷ್ಟಿಯಿಂದ ಪವಿತ್ರ ರಂಜಾನ್ ಮಾಸ

ಸಾಮಾಜಿಕ ನೈತಿಕ ಮೌಲ್ಯಗಳ ದೃಷ್ಟಿಯಿಂದ ಪವಿತ್ರ ರಂಜಾನ್ ಮಾಸ

- Advertisement -
- Advertisement -

ರಂಜಾನ್ ತಿಂಗಳು ಮುಸ್ಲಿಮರ ಅತ್ಯಂತ ಪವಿತ್ರ ಮಾಸವಾಗಿ ವಿಶೇಷವಾಗಿ ಗುರುತಿಸಿಕೊಳ್ಳುತ್ತದೆ. ಇದಕ್ಕೆ ಕಾರಣ, ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಖುರಾನ್ ಜಾರಿಯಾಗಿದ್ದು ಇದೆ ರಂಜಾನ್ ತಿಂಗಳಿನಲ್ಲಿ. ಇಸ್ಲಾಮಿನ ಪ್ರಮುಖ ಆಧಾರ ಸ್ತಂಭಗಳು ಎನ್ನುವ ಪಂಚ ತತ್ವಗಳಲ್ಲಿ, ಎರಡು ಮೂಲತತ್ವಗಳಾದ ರೋಜ (ತಿಂಗಳ ಉಪವಾಸ) ಮತ್ತು ಝಖಾತ್( ಧಾರ್ಮಿಕ ತೆರಿಗೆ) ಈ ತಿಂಗಳನಲ್ಲಿ ಆಚರಿಸಲ್ಪಡುತ್ತದೆ.

ಉಪವಾಸ, ಪ್ರಾರ್ಥನೆ, ಇಫ್ತಾರ್ ಕೂಟಗಳು, ದಾನ ಧರ್ಮಗಳು, ಧಾರ್ಮಿಕ ಆಚರಣೆಗಳು ಈ ತಿಂಗಳ ವಿಶೇಷ, ಧಾರ್ಮಿಕ ಸಂಗತಿಗಳ ಜೊತೆ ಜೊತೆಗೆ ರಂಜಾನ್ ಸಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಕೂಡ ಬಿತ್ತರಿಸುತ್ತದೆ ಎಂಬ ಅಂಶವನ್ನು ಕೂಡ ಸೂಕ್ಷ್ಮವಾಗಿ ಅವಲೋಕಿಸಬೇಕಾಗಿದೆ.

ಧಾರ್ಮಿಕವಾಗಿ ರಂಜಾನ್ ಉಪವಾಸಗಳಿಗೆ ಪ್ರಸಿದ್ಧವಾದದ್ದು, ಸೂರ್ಯ ಉದಯಿಸುವ ಮುಂಚೆ ಅನ್ನಾಹಾರಗಳನ್ನು ಸೇವಿಸಿ, ಸೂರ್ಯೋದಯದ ನಂತರ ಸೂರ್ಯಸ್ತಮಾನ ಆಗುವವರೆಗೆ ಯಾವುದೇ ಆಹಾರಗಳನ್ನು ಸ್ವೀಕರಿಸದೆ, ದೇವರ ಪ್ರಾರ್ಥನೆ ಮಾಡುವ ಒಂದು ವ್ರತ ಎಂಬುದಾಗಿ ಪರಿಗಣಿಸಲಾಗಿದೆ. ಅನ್ನ, ಆಹಾರ, ನೀರನ್ನು ತ್ಯಜಿಸುವುದು ಅಷ್ಟೇ ರಂಜಾನಿನ ಉಪವಾಸದ ಅರ್ಥವಲ್ಲ, ಇದರ ಆಂತರ್ಯವನ್ನ ತಿಳಿಯುವ ಅವಶ್ಯಕತೆ ಇದೆ.

ರಂಜಾನ್ ಅನ್ನಾ, ಅಹಾರ, ನೀರು ಮುಂತಾದ ತನ್ನ ಎಲ್ಲಾ ಕಾಮನೆಗಳ ಮೇಲೆ, ಬಯಕೆಗಳ ಮೇಲೆ ನಿಯಂತ್ರಣವನ್ನು ಹೇರಿಕೊಂಡು ಸಮಾಜದಲ್ಲಿ ನಾಗರಿಕನಾಗಿ, ಅರೋಪಗಳಿಂದ ಮುಕ್ತನಾಗಿ, ಅಪರಾದಗಳಿಂದ ದೂರವಿದ್ದು ಇತರರಿಗೆ ಮಾದರಿಯಾಗುವಂತ ಜೀವನ ತನ್ನದಾಗಿಸಿಕೊಳ್ಳುವ ಹಲವಾರು ಸಾಮಾಜಿಕ, ನೈತಿಕ ಮೌಲ್ಯಗಳನ್ನು ಕಲಿಸಿಕೊಡುವ ತರಬೇತಿಯಾಗಿದೆ. ಈ ತರಬೇತಿಯಂತೆ ಉಳಿದ 11 ತಿಂಗಳುಗಳು ಜೀವನವನ್ನು ಸಾಗಿಸಿ ಪಾವಿತ್ರತೆಯನ್ನು ಕಾಪಾಡಿಕೊಳ್ಳುವುದು ಇದರ ಸಂದೇಶವಾಗಿದೆ.

ಮಹಮ್ಮದ್ ಪೈಗಂಬರವರ(ಸ.ಅ.ಸ) ಸಂದೇಶಗಳು ಕೂಡ ಇದೇ ಆಗಿದೆ. ಅವರೇ ಹೇಳುವ ಹಾಗೆ ಕೇವಲ ಅನ್ನಾಹಾರಗಳನ್ನು ತ್ಯಜಿಸಿ ಮಾಡುವ ಉಪವಾಸ ಯಾವುದೇ ಪ್ರತಿಫಲ ನೀಡದು. ಉಪವಾಸ ಅನ್ನಾಹಾರಗಳ ತ್ಯಜಿಸುವುದರ ಜೊತೆಗೆ ಬಾಯಿ, ಕಿವಿ, ಕಣ್ಣು, ಕೈಕಾಲು ಹೀಗೆ ತನ್ನ ಇಂದ್ರಿಯಗಳ ಮೇಲೆ ಸ್ವ ನಿಯಂತ್ರಣವನ್ನು ಸಾಧಿಸಿ, ಪ್ರೀತಿ ಕರುಣೆ ಸೌಹಾರ್ದತೆ ಭಾತೃತ್ವಗಳನ್ನ ಅಳವಡಿಸಿಕೊಂಡು, ಕೆಡಕುಗಳಿಂದ, ಕ್ರೌರ್ಯಗಳಿಂದ ದೂರವಿದ್ದು ಆಂತರಿಕವಾಗಿ ಸ್ವಚ್ಛ ಮಾಡಿಕೊಂಡು ದೇವರ ವಿಶೇಷ ಕೃಪೆಗೆ ಪಾತ್ರರಾಗಿ ಜೀವಮಾನ ಪೂರ್ತಿ ಇದರಂತೆ ಬದುಕು ಎಂಬ ಸಂದೇಶ ನೀಡಿದ್ದಾರೆ.

  • ಕಣ್ಣುಗಳು – ಕೆಟ್ಟ ವಸ್ತುಗಳನ್ನು ನೋಡದಂತೆ, ಕೆಟ್ಟ ದೃಷ್ಟಿಯನ್ನು ಬೀರದಂತೆ, ಪರರ ವಸ್ತುಗಳನ್ನು, ಪರರ ಸಂಪತ್ತನ್ನು ಕಬಳಿಸುವ ದೃಷ್ಟಿಯಿಂದ ನೋಡದಂತೆ ಕಣ್ಣುಗಳಿಗೂ ಉಪವಾಸ ಮಾಡಬೇಕು. ಕಣ್ಣುಗಳನ್ನ ಪವಿತ್ರ ಗೊಳಿಸಿಕೊಳ್ಳಬೇಕು.
  • ಕಿವಿಗಳು – ಕಿವಿಗಳು ಕೆಟ್ಟ ಮಾತುಗಳನ್ನು ಕೇಳಿಸಿಕೊಳ್ಳದಂತೆ, ಇತರ ಚಾಡಿ ಮಾತುಗಳಿಗೆ ಕಿವಿಗೊಡದಂತೆ, ಇತರರ ನಿಂದನೆಗಳಿಗೆ ಕಿವಿಗೊಡದಂತೆ ಕಿವಿಗಳನ್ನು ರಕ್ಷಿಸಿಕೊಳ್ಳಬೇಕು.
  • ಬಾಯಿ – ಸುಳ್ಳು ಹೇಳದಂತೆ, ಇತರರಿಗೆ ಕೆಟ್ಟ ಮಾತನಾಡದಂತೆ. ಸುಳ್ಳುಸುದ್ದಿ ಹಬ್ಬಿಸದಂತೆ. ಇತರರಿಗೆ ನಿಂದಿಸದಂತೆ, ತನ್ನ ಆಶ್ರಯದಲ್ಲಿ ಇರುವವರ ಮೇಲೆ ಕೋಪ ಮಾಡಿಕೊಂಡು ಏರು ಧ್ವನಿಯಲ್ಲಿ ಮಾತನಾಡಿದಂತೆ, ಮಧ್ಯಪಾನ ಮಾಡದಂತೆ, ನಿಷೇಧಿತ ಅಹಾರಗಳನ್ನು ಸೇವಿಸದಂತೆ , ದುರ್ಮಾರ್ಗದಿಂದ ಸಂಪಾದಿಸಿದ ಹಣದಿಂದ ಆಹಾರ ಪದಾರ್ಥಗಳನ್ನು ಖರೀದಿಸಿ ತಿನ್ನದಂತೆ, ಬಾಯಿಯನ್ನು ಶುಚಿಯಾಗಿರಿಸಿಕೊಳ್ಳಬೇಕು.
  • ಕೈಗಳು – ಇತರರ ವಸ್ತುಗಳನ್ನು ಕದಿಯದಂತೆ, ಇತರರ ವಸ್ತುಗಳನ್ನು ಮುಟ್ಟದಂತೆ, ದುರ್ಬಲರು, ಅಮಾಯಕರು ಮತ್ತು ನಿರ್ಗತಿಕರ ಮೇಲೆ ಕೈ ಮಾಡದಂತೆ, ತನ್ನ ಆಶ್ರಯದಲ್ಲಿದ್ದವರ ಮೇಲೆ ಕೈ ಮಾಡದಂತೆ, ಕೆಟ್ಟ ವಸ್ತುಗಳನ್ನು ಮುಟ್ಟದಂತೆ, ನಿರ್ಬಂಧಿತ ವಸ್ತುಗಳನ್ನು ಮುಟ್ಟದಂತೆ ಕೈಗಳನ್ನು ಪವಿತ್ರಗೊಳಿಸಿಕೊಳ್ಳಬೇಕು
  • ಕಾಲುಗಳು – ಕೆಟ್ಟ ಸ್ಥಳಗಳಿಗೆ ಹೋಗದಂತೆ, ನಿಷೇಧಿತ ಪ್ರದೇಶಗಳಿಗೆ ಹೋಗದಂತೆ (ಜೂಜು ಅಡ್ಡೆಗಳು, ಮದ್ಯದಂಗಡಿಗಳು ಮುಂತಾದವು) ಶುಚಿತ್ವ ಇರದ ಸ್ಥಳಗಳಿಗೆ ಹೋಗದಂತೆ ನಿರ್ಬಂಧಿಸಿಕೊಳ್ಳುವುದು.
  • ಮಾನಸಿಕವಾಗಿ – ಮಾನಸಿಕವಾಗಿ ತನ್ನ ಎಲ್ಲಾ ಕಾಮನೆಗಳ ಮೇಲೆ, ತನ್ನ ಬಯಕೆಗಳ ಮೇಲೆ, ತನ್ನ ಕೆಟ್ಟ ಆಲೋಚನೆಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದು ಮತ್ತು ಇತರರಿಗೆ ಕೆಡುಕು ಮಾಡುವ ಆಲೋಚನೆಗಳಿಂದ, ಸಮಾಜಿಕ ಕೆಡಕುಗಳಾದ ಕೊಲೆ, ದರೋಡೆ, ಕಳ್ಳತನ, ಮೋಸ, ವಂಚನೆ ಮುಂತಾದವುಗಳಿಂದ ದೂರವಿರುವಂತೆ ತನಗೆ ತಾನು ಸ್ವನಿಯಂತ್ರಿಸಿಕೊಳ್ಳುವುದರ ಜೊತೆಗೆ
    ತಂದೆ, ತಾಯಿ, ಗುರು, ಹಿರಿಯರ ಬಗ್ಗೆ ಗೌರವ, ಚಿಕ್ಕವರ ಮೇಲೆ ಪ್ರೀತಿ, ದಯೆ, ಕರುಣೆ, ಸೌಹಾರ್ದತೆಯನ್ನು ಪಾಲಿಸಬೇಕು.
    ಉಪವಾಸ ಮನೆಯಲ್ಲಿ ಇದ್ದು ಅಥವಾ ಪೂರ್ಣ ದಿನ ಮಲಗಿ ಆಚರಿಸುವಂತದಲ್ಲ. ಉಪವಾಸವಿದ್ದು ತನ್ನ ದೈನಂದಿನ ಕೆಲಸ ಕಾರ್ಯಗಳಲ್ಲಿ ಭಾಗವಹಿಸಿ ದುಡಿಮೆ ಮಾಡುವುದರ ಜೊತೆಗೆ ಉಪವಾಸ ಆಚರಿಸಬೇಕು. ಇದರ ಮೂಲಕ ಹಸಿದವರ,ಬಡವ, ಶ್ರಮಿಕರ ಮತ್ತು ಕಾರ್ಮಿಕರ ನೋವುಗಳು ಅರಿವಾಗುತ್ತದೆ ಇದರಿಂದ ಅವರ ಬಗ್ಗೆ ಸಹಾನುಭೂತಿ ಬೆಳೆಯುತ್ತದೆ.
  • ಇಫ್ತಾರ್ – ಇಫ್ತಾರ್ ಆಚರಣೆಯ ಮೂಲಕ ಉಪವಾಸ ಕೊನೆಯಾಗುತ್ತದೆ. ಇಫ್ತಾರ್ ಕೂಟಗಳಲ್ಲಿ ಬಡವ ಶ್ರೀಮಂತ ನಿರ್ಗತಿಕ ಎಂಬ ಭೇದಭಾವ ಇಲ್ಲದೆ ಎಲ್ಲರೂ ಒಟ್ಟಾಗಿ, ಇರುವ ಆಹಾರಗಳನ್ನು ಹಂಚಿ ತಿಂದು ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡು ಬದುಕುವುದನ್ನು ಕಲಿಸುತ್ತದೆ. ಜೀವನದಲ್ಲಿ ಬಡವ ಶ್ರೀಮಂತ ಎಂಬ ಭೇದ ಭಾವ ಮಾಡದೆ ಸಾಮಾಜಿಕ ಸಮಾನತೆಯಿಂದ ಬದುಕುವುದನ್ನು ಕಲಿಸುತ್ತದೆ.

ಈ ಮೇಲಿನಂತೆ ಅನ್ನ, ಆಹಾರ, ಕೈ- ಕಾಲು, ಬಾಯಿ, ಇಂದ್ರಿಯಗಳ ನಿಗ್ರಹ, ಎಲ್ಲಾ ರೀತಿಯ ಕಾಮನೆಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದನ್ನ, ಸಮಾನತೆಯಿಂದ ಜೀವಿಸುವುದನ್ನ ಕಲಿಯುವುದು ರಂಜಾನ್ ಉಪವಾಸದ ತಿರುಳಾಗಿದೆ.

ಉಪವಾಸದಿಂದ ವಿನಾಯಿತಿ ವೃದ್ಧರು, ಚಿಕ್ಕ ಮಕ್ಕಳು, ಗರ್ಭಿಣಿ ಸ್ತ್ರೀಯರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಉಪವಾಸ ಆಚರಣೆಯಿಂದ ವಿನಾಯಿತಿ ನೀಡಲಾಗಿದೆ.

  • ಝಕಾತ್ – ಇಸ್ಲಾಂ ಧರ್ಮದ ಮತ್ತೊಂದು ಪ್ರಮುಖ ಮೂಲ ತತ್ವವಾದ ಝಕಾತ್(ಧಾರ್ಮಿಕ ತೆರಿಗೆ) ಇದೇ ತಿಂಗಳಲ್ಲಿ ಪಾವತಿ ಆಗಬೇಕು . ಜಕಾತ್ ಎಂದರೆ ಸ್ಥಿತಿವಂತರು(85 ಗ್ರಾಂ ಗಿಂತಲೂ ಹೆಚ್ಚು ಚಿನ್ನ ಅಥವಾ ಅದಕ್ಕೆ ಸಮಾನವಾದ ಮೊತ್ತದ ಹಣ ಹೊಂದಿರುವವರು) ತಮ್ಮ ಆದಾಯದ ಶೇಕಡಾ 2.5 ಭಾಗವನ್ನು ತೆಗೆದು ಬಡವರಿಗೆ, ನಿರ್ಗತಿಕರಿಗೆ ಹಂಚುವುದು. ಬಟ್ಟೆಯ ರೂಪದಲ್ಲಿ, ಆಹಾರ ಧಾನ್ಯಗಳ ರೂಪದಲ್ಲಿ, ಹಣದ ರೂಪದಲ್ಲಿ ನೀಡಬಹುದು. ಇದರ ಷರತೇನೆಂದರೆ ಝಕಾತ್ ಅನ್ನು ತನ್ನ ವಾರಸುದಾರರಿಗೆ ನೀಡುವ ಹಾಗಿಲ್ಲ. ಮೊದಲು ತನ್ನ ಅಕ್ಕಪಕ್ಕದಲ್ಲಿರುವ ಬಡವರನ್ನ, ನಿರ್ಗತಿಕರನ್ನು ಗುರುತಿಸಿ ನೀಡಬೇಕು. ತನ್ನ ಅಕ್ಕಪಕ್ಕದಲ್ಲಿ ನಿರ್ಗತಿಕರು ಇಲ್ಲದಿದ್ದರೆ ತನ್ನ ಊರಿನಲ್ಲಿ ರಕ್ತಸಂಬಂಧದಲ್ಲಿ ಇರುವ ಬಡವರು, ನಿರ್ಗತಿಕರನ್ನು ಹುಡುಕಿ ನೀಡಬೇಕು, ಊರಿನಲ್ಲಿ ಇಂತಹ ರಕ್ತಸಂಬಂಧಿಗಳಲ್ಲಿ ಇಲ್ಲವಾದಲ್ಲಿ, ಊರಿನಲ್ಲಿರುವ ಬಡವರು, ನಿರ್ಗತಿಕರಿಗೆ ಹಂಚಬೇಕು ಇದು ಕಡ್ಡಾಯವಾಗಿ ಪಾಲಿಸಬೇಕು ಇಲ್ಲವಾದಲ್ಲಿ ರಂಜಾನ್ ತಿಂಗಳಿನಲ್ಲಿ ಆತ ಮಾಡಿದ ಉಪವಾಸ, ಪ್ರಾರ್ಥನೆಗಳು ಸ್ವೀಕೃತವಲ್ಲ.

ಇದು ಧಾರ್ಮಿಕ ಷರತ್ತಾಗಿದರೂ, ಇರುವವರು ಇಲ್ಲದವರೊಂದಿಗೆ ಹಂಚಿಕೊಳ್ಳುವ ಸಾಮರಸ್ಯ ಮತ್ತು ಸಹಾಯಮಾಡುವ ಗುಣವನ್ನು ವೃದ್ಧಿಸುತ್ತದೆ. ಉಳ್ಳವರು ಇಲ್ಲದೆ ಇರುವವರಿಗೆ ಆರ್ಥಿಕ ಸಹಾಯ ಮಾಡುವ ಗುಣವನ್ನು ಬೆಳೆಸುವ ಒಂದು ಪ್ರಯತ್ನದ ಭಾಗವಾಗಿದೆ. ಉಳ್ಳವರು ಇಲ್ಲದವರೊಂದಿಗೆ ಬಡವ ಶ್ರೀಮಂತ ಎಂಬ ಭೇದಭಾವ ಇಲ್ಲದೆ ಸಾಮರಸ್ಯದಿಂದ ಬದುಕುವ ಕಲೆಯನ್ನು ತಿಳಿಸುತ್ತದೆ, ಉಳ್ಳವರು ನಿರ್ಗತಿಕರನ್ನು, ಬಡವರನ್ನ ಅವರ ಮೇಲೆ ದರ್ಪ ತೋರದಂತೆ ಇಸ್ಲಾಂ ಧರ್ಮ ನಿಯಂತ್ರಿಸುತ್ತದೆ. ಇದು ಕೇವಲ ರಂಜಾನ್ ತಿಂಗಳಿನಲ್ಲಿ ಸೀಮಿತವಾಗಿರದೆ ಉಳಿದ ಅವಧಿಯಲ್ಲಿಯೂ ಬಡವರಿಗೆ ನಿರ್ಗತಿಕರಿಗೆ ಸಹಾಯ ಮಾಡಲು ತರಬೇತಿ ಗೊಳಿಸುತ್ತದೆ .

  • ಖುರಾನ್ – ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಖುರಾನ್ ರಂಜಾನ್ ತಿಂಗಳಿನಲ್ಲಿ ಅವತೀರ್ಣವಾಗಿದೆ ಎಂಬ ನಂಬಿಕೆ ಇದೆ. ಇದರಿಂದ ರಂಜಾನ್ ತಿಂಗಳ ಮೊದಲ ಉಪವಾಸದಿಂದ ಹಿಡಿದು ಕೊನೆಯ ಉಪವಾಸದವರಿಗೆ ಪ್ರತಿದಿನ ಖುರಾನ್ ಪಠಣ ಮಾಡಲಾಗುತ್ತದೆ. ಕುರಾನ್ ನಲ್ಲಿರುವ ತತ್ವಗಳನ್ನು ಕಲಿತು, ಅರಿತು, ಪಾಲಿಸುವ ಹಾಗೆ ಇದು ಮಾರ್ಗದರ್ಶನ ಮಾಡುತ್ತದೆ.

ಹೀಗೆ ರಂಜಾನ್ ಮುಸಲ್ಮಾನರಿಗೆ ಧಾರ್ಮಿಕವಾಗಿ ಅಲ್ಲದೆ ಸಾಮಾಜಿಕ ಮತ್ತು ನೈತಿಕ ತತ್ವಗಳ ಪಾಲಕರನ್ನಾಗಿ ಮಾಡುವ ತರಬೇತಿಗೊಳಿಸಿ, ಇನ್ನುಳಿದ ತಮ್ಮ ಮುಂದಿನ ದಿನಗಳಲ್ಲಿ ಇದೇ ರೀತಿ ಬದುಕುವ ಪಾಠ ಕಲಿಸುತ್ತದೆ. ಉಪಾಸಕರು ಈ ಮೌಲ್ಯಗಳನ್ನು ಅರಿತು ರೂಢಿಸಿಕೊಂಡು ಆದರ್ಶ ಜೀವನ ಕ್ರಮವನ್ನು ತಮ್ಮ ದಾಗಿಸಿಕೊಳ್ಳುವತ್ತ ಗಮನ ಹರಿಸಬೇಕು, ಆದ್ದರಿಂದ ರಂಜಾನ್ ವಿಶೇಷವಾದ ಸ್ಥಾನವನ್ನು ಪಡೆದಿದೆ.

(ಲೇಖಕರು ಪ್ರಾಧ್ಯಾಪಕರು, ಅಭಿಪ್ರಾಯಗಳು ಅವರ ವೈಯಕ್ತಿಕವಾದವುಗಳು)


ಇದನ್ನೂ ಓದಿ: ಹಿಂದೂ ಯುವಕನಿಗೆ ರಕ್ತದಾನ ಮಾಡಲು ರಂಜಾನ್ ವ್ರತ ಮುರಿದ ಮುಸ್ಲಿಂ ಮಹಿಳೆ.


ಪ್ರತಿದಿನದ ವಿಶೇಷ ಕಾರ್ಯಕ್ರಮ “ಸದ್ದು…ಈ ಸುದ್ದಿಗಳೇನಾಗಿದೆ” ನೋಡಲು ಇಲ್ಲಿ ಕ್ಲಿಕ್ ಮಾಡಿ.


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....