Homeಮುಖಪುಟಗರುಡ ಪುರಾಣವನ್ನು ಹೇಗೆ ಗ್ರಹಿಸಬೇಕು?

ಗರುಡ ಪುರಾಣವನ್ನು ಹೇಗೆ ಗ್ರಹಿಸಬೇಕು?

- Advertisement -
- Advertisement -

ಗರುಡ ಪುರಾಣವನ್ನು ಓದಿದಾಗ ಗ್ರಹಿಕೆಗೆ ಸಿಕ್ಕುವುದು ವೈರಾಗ್ಯದ ಸಾರ. ಪ್ರಾಣವಾಯುವಿನ ಸೂಕ್ಷ್ಮತೆಗಳನ್ನು ಪ್ರತಿಮಾರೂಪದಲ್ಲಿ, ಒಗಟುಗಳಲ್ಲಿ ವಿವರಿಸಿದಂತೆ ತೋರುತ್ತದೆ. ಪ್ರಸ್ತುತ ಜೀವನ ಮತ್ತು ಜೀವನದಾಚೆಯ ಮರ್ಮ – ಇವುಗಳನ್ನು ಅರಿತುಕೊಳ್ಳಲು ಸಾಧ್ಯವಾಗುವಂತಹ ಸೂಕ್ಷ್ಮ ಮಾರ್ಗಗಳನ್ನು, ಸಂವೇದನೆಗಳನ್ನು ಗ್ರಹಿಸಲು ಸಾಧ್ಯವೆಂಬಂತೆ ಭಾಸವಾಗುತ್ತದೆ. ಪ್ರಾಣವು ಚಲಿಸುವಂತದ್ದು ಮತ್ತು ಅದು ಚಲನೆಯಲ್ಲಿರುವುದು. ಹಾಗೆ ಚಲಿಸುವಾಗ ಅದನ್ನು ಮನಸ್ಸೆಂಬುದನ್ನು ಹೇಗೆ ಗ್ರಹಿಸುತ್ತದೆ? ಬುದ್ಧಿ ಹೇಗೆ ವಿಶ್ಲೇಷಿಸಬಹುದು? ಇತ್ಯಾದಿಗಳನ್ನು ಈ ಪ್ರಾಣದ ಪ್ರಯಾಣ ಸೂಚಿಸುವುದರಿಂದಲೇ ಹಾರುವ ಗರುಡನ ಪ್ರತಿಮೆ ಇಲ್ಲಿ ರೂಪಕವಾಗಿದೆ ಎಂದು ಗ್ರಹಿಸಬಹುದು. ಆದರೆ ಇದು ಬರಿಯ ಒಂದು ಮಗ್ಗುಲಿನ ಆಲೋಚನೆಯಾಗುತ್ತದೆ. ಅದರ ಆಳ ಮತ್ತು ವಿಸ್ತಾರದ ಜೊತೆಗೆ ನಂತರ ಸೇರ್ಪಡೆಯಾದ ಹುನ್ನಾರಗಳು ಕೂಡ ಅಧ್ಯಯನ ವ್ಯಾಪ್ತಿಯು ಹಿರಿದಾಗಿಸುತ್ತದೆ.

ಗರುಡ ಪುರಾಣವನ್ನು ಓದಿದರೆ ವೈರಾಗ್ಯವುಂಟಾಗಿ ಸಂಸಾರದ ಮೇಲೆ ಜಿಗುಪ್ಸೆ ಬರಬಹುದೆಂಬ ಕಾರಣದಿಂದ ನಿಷೇಧವನ್ನು ಹೇರಿರಬೇಕು. ಗರುಡ ಪುರಾಣ ಉಂಟು ಮಾಡುವ ವೈರಾಗ್ಯದ ಗಾಢ ಪ್ರಭಾವವನ್ನು ಗಮನಿಸಿರುವವರಿಗೆ ಇದು ನಿಜವೆನಿಸುತ್ತದೆ. ಸಾವು ಸಂಭವಿಸಿದಾಗ ಓದುವುದರಿಂದ ಹದಿನೈದು ದಿನಗಳ ಅಪರ ಕಾರ್ಯದ ವೇಳೆಯಲ್ಲಿ ಸಂಬಂಧಿಕರಲ್ಲಿ ವೈರಾಗ್ಯವು ನೆಲೆಸಿ, ಸಾವು ಎಂಬುದು ಅಂತಹ ಆಘಾತಕಾರಿಯಾದ ಅವಘಡ ಅಲ್ಲ, ಸಹಜವಾದದ್ದು, ನೈಸರ್ಗಿಕವಾದದ್ದು ಎಂಬ ಅರಿವು ಉಂಟಾಗಿ ಮನಸ್ಸಿಗೆ ಶಾಂತಿ ಲಭಿಸಲಿ ಎಂಬ ಉದ್ದೇಶವೇ ಹೊರತು ಬೇರೆ ಏನೂ ಇಲ್ಲ. ಕಾಲಾನಂತರದಲ್ಲಿ ಇದು ವಾಡಿಕೆಯಾಯಿತು.

ವಿಷ್ಣು ತನ್ನ ವಾಹನವಾದ ಗರುಡನಿಗೆ ನೀಡುವ ಉಪದೇಶದ ರೂಪದಲ್ಲಿರುವ ಗರುಡ ಪುರಾಣ ನಾನಾ ಕಾರಣಗಳಿಂದ ಆಕರ್ಷಕ. ಸಾಮಾನ್ಯ ಜನರಿಗೆ ತಿಳಿದಿರುವ ಹಾಗೆ ಅದು ನರಕದ ವರ್ಣನೆ, ಸಾವಿನ ಕುರಿತಾದದ್ದು ಎಂಬ ಭಾವ. ಅದು ನಿಜವಾದರೂ ಅದರ ವಿಚಾರವೇ ಇಡೀ ಗರುಡ ಪುರಾಣವೇನಲ್ಲ. ಪ್ರೇತಕಾಂಡ ಅಥವಾ ಪ್ರೇತಕಲ್ಪವು ಅದರ ಒಂದು ಭಾಗ ಅಷ್ಟೇ. ಎಲ್ಲಾ ಪುರಾಣಗಳನ್ನೂ ಅನಾದಿ, ಪುರಾತನ ಎಂದು ಹೇಗೆ ಕರೆಯಲು ಸಾಧ್ಯವಿಲ್ಲವೋ ಹಾಗೆಯೇ ಗರುಡ ಪುರಾಣವೂ ಕೂಡ ಪೂರ್ಣ ಪುರಾತನವೇನಲ್ಲ. ಕಾಲದಿಂದ ಕಾಲಕ್ಕೆ ಹಲವಾರು ಕರ್ತೃಗಳು ಇದರಲ್ಲಿ ಲೇಖನಿಗಳನ್ನಾಡಿಸುತ್ತಾ ಕೃತಿಯನ್ನು ವಿಸ್ತರಿಸಿದ್ದಾರೆ. ಹಾಗಾಗಿ ಇಡೀ ಗರುಡಪುರಾಣ ಏನನ್ನು ಧ್ವನಿಸಲು ಹೊರಟಿತ್ತು, ಈಗ ಅದರಲ್ಲಿ ಏನೇನೆಲ್ಲಾ ಇದೆ ಎಂದು ಚುಟುಕಾಗಿ ಹೇಳಲು ಕಷ್ಟವಾಗುವುದು.

ಗರುಡನೊಬ್ಬ ಅಪ್ರತಿಮ ವೀರ. ದಾಸ್ಯದ ವಿರುದ್ಧ ದನಿ ಎತ್ತಿದ ಬಂಡಾಯಗಾರ. ಹಾಗೂ ಆರ್ಯರ ಕುಟಿಲತನಕ್ಕೆ ಮೋಸ ಹೋದ ಮತ್ತು ಸೋತ ದುರಂತ ಪ್ರತಿಮೆ ಕೂಡಾ. ನಾಗ ಮತ್ತು ಗರುಡ ಈ ಎರಡೂ ಗಣಗಳು ಅಥವಾ ಕುಲಗಳೂ ಒಂದೇ ಮೂಲದಿಂದ ಬಂದಿರುವವಾದರೂ ತಮ್ಮ ಆಂತರಿಕ ಕಲಹದಿಂದ ಅಥವಾ ದಾಯಾದೀ ಜಗಳದಿಂದ ಆರ್ಯರ ರಾಜಕೀಯ ತಂತ್ರಕ್ಕೆ ಬಲಿಪಶುಗಳಾದರು. ನಾಗಕುಲವಾದರೂ ದೇವತೆಗಳ ವಿರುದ್ಧ ಸೆಣೆಸುತ್ತಲೇ ಬಂತು. ಆದರೆ ಗರುಡ, ದೇವತೆಗಳ ತಂತ್ರಕ್ಕೆ ಬಲಿಯಾಗಿ ತಮ್ಮದೇ ಮೂಲದ ಗಣದವರಿಗೆ ಶತ್ರುಗಳಾದರು. ಗರುಡ ವಿಷ್ಣುವಿನ ವಾಹನವೆಂದರೆ, ಆರ್ಯರ ರೂಪಕವಾದ ವಿಷ್ಣುವು ಬುಡಕಟ್ಟಿನ ಗರುಡನನ್ನು ತನ್ನ ಅಧೀನದಲ್ಲಿಟ್ಟುಕೊಂಡು, ನಂತರ ವಿರೋಧಿಗಳಾದ ನಾಗರ ಮೇಲೆ ತನ್ನ ವೈಷಮ್ಯವನ್ನು ಸಾಧಿಸುವುದರ ಸಂಕೇತ.
ಆರ್ಯ ರಾಜಕೀಯ ಹುಟ್ಟಿಹಾಕಿದ ಮೌಢ್ಯಕ್ಕೆ ನಮ್ಮ ಜನ ಇಂದೂ ಸಹೋದರರಾದ ನಾಗ ಮತ್ತು ಗರುಡರನ್ನು ಶತ್ರುಗಳಂತೆ ನೋಡುತ್ತಿದ್ದಾರೆ. ಜೊತೆಗೆ ಗರುಡ ಮಚ್ಚೆ ಇದ್ದರೆ ಹಾವುಗಳು ಬಾಧಿಸವು, ಸರ್ಪದೋಷ ಬಾರದು ಎಂಬ ಮೌಢ್ಯಗಳು ಬೇರೆ. ಗರುಡನಂತ ಮುಗ್ಧ ಮತ್ತು ವೀರನನ್ನು ತಮ್ಮ ಕಾವಲು ಭಟನಂತೆ ಅಥವಾ ಸಾರಥಿಯಂತೆ ವಾಹಕವನ್ನಾಗಿ ಮಾಡಿಕೊಂಡ ಕತೆಯನ್ನು ಪುರಾಣಗಳು ತಿಳಿಸುತ್ತವೆ.

ಗರುಡನ ಪುರಾಣದ ಕಥೆಯನ್ನು ಗಮನಿಸಿದರೆ ಕದ್ರು ಮತ್ತು ವಿನುತೆಯರಿಬ್ಬರೂ ತಾಯಾಳಿಕೆಯವರಾಗಿದ್ದವರೆಂದು ತೋರುತ್ತದೆ. ಜೊತೆಗೆ ಅವರಿಬ್ಬರೂ ಕೂಡ ಗಣಗಳ ಮತ್ತು ಬಣಗಳ ಒಡತಿಯರೆಂದು ಕೂಡ ಕಾಣುತ್ತದೆ. ಅವರಿಬ್ಬರಲ್ಲಿ ನಡೆಯುವ ಸಂಘರ್ಷದ ಕತೆಯು ಮಕ್ಕಳಿಗೆ ಮುಂದುವರಿದಿತ್ತು. ಪಂಥವು ಅದೇನೇ ಇರಲಿ, ನಾಗರನ್ನು ದ್ವೇಷಿಸಲು ಇಂದ್ರನು, ಆರ್ಯರ ದೇವರಾಜನು ಕುಮ್ಮಕ್ಕು ಕೊಡುತ್ತಾನೆ. ಅವರಿಬ್ಬರನ್ನೂ ಒಂದಾಗಲು ಬಿಡುವುದಿಲ್ಲ. ಒಡೆದು ಆಳುವ ನೀತಿಯನ್ನು ಆರ್ಯರಲ್ಲಿ ಕಾಣುತ್ತೇವೆ. ಆದರೆ ಅದೇ ಇಂದ್ರ ಅಮೃತವನ್ನು ಕದಿಯುತ್ತಾನೆ.

ಅದೇನೇ ಇರಲಿ, ಕರ್ನಾಟಕದಲ್ಲಿಯೂ ಸ್ವಾಮಿನಿಷ್ಠ ಸಾಹಸಿಗಳನ್ನು, ಪ್ರಾಣವನ್ನೇ ಮುಡಿಪಿಟ್ಟು ತಮ್ಮ ದಣಿಯನ್ನು ಕಾಪಾಡುತ್ತಿದ್ದ ನಿಷ್ಠರನ್ನು ಗರುಡ ಎಂದು ಕರೆಯುವುದು ಕಾಕತಾಳೀಯವೇನಲ್ಲ. ಪೌರಾಣಿಕ ಗರುಡನ ಸ್ವಾಮಿನಿಷ್ಠತೆಯು ಇಲ್ಲಿಯವರೆಗೂ ಧ್ವನಿಸಿದೆ.
ಇಂಥಾ ಗರುಡನಿಗೆ ಯಮಮಾರ್ಗದ ಬಗ್ಗೆ ವಿಷ್ಣುವು ಹೇಳುತ್ತಾನೆ.

ಇಂತೆಲ್ಲಾ ಮಾಹಿತಿಗಳಿಂದ ಗರುಡ ಪುರಾಣವು ಪರಿಷ್ಕೃತಗೊಂಡಿರುವುದು ಮಹಾಭಾರತದ ನಂತರದ ಕಾಲದಲ್ಲಿ ಎಂದು ಅವಲೋಕಿಸಬಹುದು. ಅದೂ ಚಾರ್ವಾಕರ ನಂತರ. ಚಾರ್ವಾಕರ ಪ್ರಭಾವ ದಟ್ಟವಾಗುತ್ತಿದ್ದ ಸಮಯದಲ್ಲಿ ಜನಗಳಲ್ಲಿ ತಾವು ಮಾಡುವ ಕರ್ಮಗಳ ಭಯ ಹುಟ್ಟಿಸುವ ಅಗತ್ಯ ವೈದಿಕರಿಗಿತ್ತು. ಹಾಗಾಗಿ ಗರುಡಪುರಾಣದಲ್ಲಿ ನರಕದ ಬಾಧೆ ಸೇರಿಸಲಾಯಿತು.

ಸಾವಿನ ಭಯವನ್ನು ಗೆಲ್ಲಲು ಮತ್ತು ಬದುಕಿರುವಾಗ ನೈತಿಕತೆಯನ್ನು ಮೀರದಿರುವ ಆಶಯ ಗರುಡ ಪುರಾಣ ಕೃತಿಯಲ್ಲಿ ಅಡಗಿದೆ. ವಿಪರೀತದ ಪ್ರತಿಮಾ ರೂಪಕಗಳನ್ನು ನೇರವಾಗಿ ಗ್ರಹಿಸಿದರೆ ಗರುಡ ಪುರಾಣದ ಓದು ಮೌಢ್ಯತೆಯ ಪಾಲಾಗುತ್ತದೆ.‌

  • ಯೋಗೇಶ್‌ ಮಾಸ್ಟರ್

ಇದನ್ನೂ ಓದಿ: ತಾನೊಂದು ಹೆಣ್ಣಾಗಿದ್ದು ಶಾಪ, ಕಪ್ಪು ಹೆಣ್ಣಾಗಿದ್ದು ಮಹಾಶಾಪ : ಮೇರಿ ಪ್ರಿನ್ಸ್ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...