Homeಮುಖಪುಟಹೈದರಾಬಾದ್: ಮಲದ ಗುಂಡಿಗೆ ಕುಸಿದು ಬಿದ್ದ ಓರ್ವ ನೈರ್ಮಲ್ಯ ಕಾರ್ಮಿಕರನ್ನು ರಕ್ಷಿಸಲು ಹೋದ ಮತ್ತಿಬ್ಬರು ಕಾರ್ಮಿಕರ...

ಹೈದರಾಬಾದ್: ಮಲದ ಗುಂಡಿಗೆ ಕುಸಿದು ಬಿದ್ದ ಓರ್ವ ನೈರ್ಮಲ್ಯ ಕಾರ್ಮಿಕರನ್ನು ರಕ್ಷಿಸಲು ಹೋದ ಮತ್ತಿಬ್ಬರು ಕಾರ್ಮಿಕರ ದುರಂತ ಅಂತ್ಯ

- Advertisement -
- Advertisement -

ಹೈದರಾಬಾದ್: ಸೆಪ್ಟಿಕ್ ಟ್ಯಾಂಕ್ (ಮಲದ ಗುಂಡಿ) ಸ್ವಚ್ಛಗೊಳಿಸುವ ವೇಳೆ ವಿಷಕಾರಿ ಅನಿಲ ಸೇವಿಸಿ ಮೂವರು ನೈರ್ಮಲ್ಯ ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ಹೈದರಾಬಾದ್‌ನ ಬಚುಪಲ್ಲಿಯಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿ ನವೆಂಬರ್ 24ರಂದು (ಮಂಗಳವಾರ) ನಡೆದಿದೆ. ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ಕಾರ್ಮಿಕರೊಬ್ಬರು ಒಳಗೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಾಗ, ಅವರನ್ನು ರಕ್ಷಿಸಲು ಒಬ್ಬರ ಹಿಂದೆ ಮತ್ತೊಬ್ಬರು ಒಳಗೆ ಇಳಿದ ಇಬ್ಬರು ಕಾರ್ಮಿಕರೂ ಹೊರಬರಲಾಗದೆ ಪ್ರಾಣ ಕಳೆದುಕೊಂಡಿದ್ದಾರೆ. ಕಾನೂನಿನ ಮೂಲಕ ನಿಷೇಧಿಸಲಾಗಿರುವ ಅಪಾಯಕಾರಿ ಕೈಯಿಂದ ಮಲ ಸ್ವಚ್ಛಗೊಳಿಸುವ ಪದ್ಧತಿ ಇಂದಿಗೂ ಮುಂದುವರಿದಿರುವುದು ಈ ದುರಂತದ ಮೂಲಕ ಮತ್ತೊಮ್ಮೆ ಬಹಿರಂಗವಾಗಿದೆ.

ಮೃತರನ್ನು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯವರಾದ ಕೆ. ಷಣ್ಮುಖ ರಾವ್ ಅಲಿಯಾಸ್ ಸುಮನ್ (26), ಸುರೇಶ್ ಗಜಿಕಿ (24) ಮತ್ತು ವೈ. ಪವನ್ (20) ಎಂದು ಗುರುತಿಸಲಾಗಿದೆ. ಕಾರ್ಮಿಕರನ್ನು ನೇಮಿಸಿಕೊಂಡಿದ್ದ ಕಂಪನಿಯ ಮಾಲೀಕ ರವಿ ವಿರುದ್ಧ ಪೊಲೀಸರು ಕೊಲೆಯಲ್ಲದ ಅಪರಾಧಿಕ ನರಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಸಾಧನಗಳನ್ನು ಒದಗಿಸದೆ, ಸೂಕ್ತ ಮೇಲ್ವಿಚಾರಣೆಯನ್ನೂ ಮಾಡದೆ ಅಪಾಯಕಾರಿ ಕೆಲಸಕ್ಕೆ ನಿಯೋಜಿಸಿದ ಆರೋಪ ಅವರ ಮೇಲಿದೆ.

ಸುರೇಶ್ ಅವರ ಸಂಬಂಧಿ ತೊಲುಗು ಬಾಲ ಸಾಯಿ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಸುರೇಶ್ ಅವರಿಗೆ ಯಾರೋ ಕೆಲಸ ಕೊಡಿಸುವುದಾಗಿ ಹೇಳಿದ್ದರು. ಅದರಂತೆ ಬಾಲ ಸಾಯಿ ಮತ್ತು ಸುರೇಶ್ ಇಬ್ಬರೂ ಹೈದರಾಬಾದ್‌ನ ಬಚುಪಲ್ಲಿಯ ದಿನೇಶ್ ಆರಿಕ್ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಅಲ್ಲಿ ಸುಮನ್ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಬಾಲ ಸಾಯಿ ಸಮೀಪದಲ್ಲೇ ಇದ್ದರು. ಇದ್ದಕ್ಕಿದ್ದಂತೆ ಸುಮನ್ ಟ್ಯಾಂಕ್ ಒಳಗೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಅವರೊಂದಿಗೆ ಕೆಲಸ ಮಾಡುತ್ತಿದ್ದ ಪವನ್, ಸುಮನ್ ಅವರನ್ನು ರಕ್ಷಿಸುವ ಉದ್ದೇಶದಿಂದ ಟ್ಯಾಂಕ್ ಒಳಗೆ ಇಳಿದಿದ್ದಾರೆ. ಆದರೆ, ಅವರೂ ವಿಷಕಾರಿ ಅನಿಲದ ಪರಿಣಾಮದಿಂದ ಪ್ರತಿಕ್ರಿಯೆ ನೀಡದ ಸ್ಥಿತಿಗೆ ತಲುಪಿದ್ದಾರೆ. ಬಳಿಕ ಸುರೇಶ್ ಇಬ್ಬರನ್ನೂ ನೋಡಲು ಮತ್ತು ರಕ್ಷಿಸಲು ಟ್ಯಾಂಕ್ ಒಳಗೆ ಇಳಿದಿದ್ದಾರೆ. ದುರದೃಷ್ಟವಶಾತ್, ಒಳಗೆ ಹೋದ ಮೂವರಲ್ಲಿ ಒಬ್ಬರೂ ಮತ್ತೆ ಹೊರಬರಲಿಲ್ಲ.

ಈ ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ಸಫಾಯಿ ಕರ್ಮಚಾರಿ ಆಂದೋಲನದ (ಎಸ್‌ಕೆಎ) ರಾಷ್ಟ್ರೀಯ ಸಂಚಾಲಕ ಬೆಜವಾಡ ವಿಲ್ಸನ್, ಹೈದರಾಬಾದ್‌ನಲ್ಲಿ ಸಂಭವಿಸಿರುವ ಈ ಮೂರು ಸಾವುಗಳೊಂದಿಗೆ ಈ ವರ್ಷ ದೇಶಾದ್ಯಂತ ಸೆಪ್ಟಿಕ್ ಟ್ಯಾಂಕ್‌ಗಳ ಸ್ವಚ್ಛತೆ ವೇಳೆ ಮೃತಪಟ್ಟವರ ಸಂಖ್ಯೆ 138 ದಾಟಿದೆ ಎಂದು ತಿಳಿಸಿದ್ದಾರೆ. ಇಷ್ಟೊಂದು ಸಾವುಗಳು ಸಂಭವಿಸುತ್ತಿದ್ದರೂ ಸರ್ಕಾರಗಳು ಈ ವಿಚಾರದಲ್ಲಿ ‘ಅಪರಾಧಿಕ ಮೌನ ಮತ್ತು ನಿರ್ಲಕ್ಷ್ಯ’ವನ್ನು ಕಾಯ್ದುಕೊಂಡಿವೆ ಎಂದು ಅವರು ತೀವ್ರವಾಗಿ ಆರೋಪಿಸಿದ್ದಾರೆ.

ಇಂತಹ ಸಾವುಗಳನ್ನು ತಡೆಯಲು ಭಾರತದಲ್ಲಿ ಈಗಾಗಲೇ ಕಾನೂನು ಚೌಕಟ್ಟು ಅಸ್ತಿತ್ವದಲ್ಲಿದೆ. 2013ರ ಕೈಯಿಂದ ಮಲ ಸ್ವಚ್ಛಗೊಳಿಸುವ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆಯು ಒಳಚರಂಡಿ ಹಾಗೂ ಸೆಪ್ಟಿಕ್ ಟ್ಯಾಂಕ್‌ಗಳ ಅಪಾಯಕಾರಿ ಸ್ವಚ್ಛತಾ ಕೆಲಸಗಳಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವುದನ್ನು ನಿಷೇಧಿಸುತ್ತದೆ. ಇಂತಹ ಸಾವುಗಳನ್ನು ತಡೆಯುವುದು, ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವುದು ಹಾಗೂ ಯಾಂತ್ರೀಕೃತ ಮತ್ತು ಸುರಕ್ಷಿತ ನೈರ್ಮಲ್ಯ ವ್ಯವಸ್ಥೆಯನ್ನು ಉತ್ತೇಜಿಸುವಂತೆ ಸುಪ್ರೀಂ ಕೋರ್ಟ್ ಕೂಡ ಸರ್ಕಾರಗಳಿಗೆ ಹಲವು ಬಾರಿ ನಿರ್ದೇಶನ ನೀಡಿದೆ.

ಆದರೆ, ಕಾನೂನು ಮತ್ತು ನ್ಯಾಯಾಲಯದ ನಿರ್ದೇಶನಗಳ ಹೊರತಾಗಿಯೂ ಕಾರ್ಮಿಕರು ಇಂದಿಗೂ ಒಳಚರಂಡಿ, ಮ್ಯಾನ್‌ಹೋಲ್, ತೆರೆದ ಚರಂಡಿ, ಸೆಪ್ಟಿಕ್ ಟ್ಯಾಂಕ್ ಸೇರಿದಂತೆ ಅಪಾಯಕಾರಿ ಮತ್ತು ಸೀಮಿತ ಸ್ಥಳಗಳೊಳಗೆ ಸಮರ್ಪಕ ರಕ್ಷಣಾ ಸಾಧನಗಳಿಲ್ಲದೆ ಇಳಿಯಬೇಕಾದ ಪರಿಸ್ಥಿತಿ ಮುಂದುವರಿದಿದೆ. ಕಾನೂನು ನಿಷೇಧಿಸಿರುವ ಅಪಾಯಕಾರಿ ಕೆಲಸಗಳನ್ನು ಕಾರ್ಮಿಕರಿಂದ ಮಾಡಿಸುವ ಮೂಲಕ ಅವರ ಜೀವವನ್ನೇ ಅಪಾಯಕ್ಕೆ ತಳ್ಳಲಾಗುತ್ತಿದೆ.

ಇನ್ನು, ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ವೇಳೆ ಸಂಭವಿಸುವ ಕಾರ್ಮಿಕರ ಸಾವುಗಳನ್ನು ಕೇಂದ್ರ ಸರ್ಕಾರ ಕಡಿಮೆ ಪ್ರಮಾಣದಲ್ಲಿ ದಾಖಲಿಸುತ್ತಿದೆ ಎಂದು ಎಸ್‌ಕೆಎ ಈ ಹಿಂದೆಯೂ ಆರೋಪಿಸಿತ್ತು. 2021ರ ಜನವರಿಯಿಂದ 2026ರ ಜುಲೈವರೆಗೆ ದೇಶದಲ್ಲಿ ಇಂತಹ ಕೆಲಸಗಳಲ್ಲಿ 593 ಮಂದಿ ಮೃತಪಟ್ಟಿದ್ದಾರೆ ಎಂದು ಸಂಘಟನೆ ಹೇಳಿದೆ. ಆದರೆ, ಇದೇ ಅವಧಿಯಲ್ಲಿ 332 ಸಾವುಗಳು ಮಾತ್ರ ಸಂಭವಿಸಿವೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ಅಂದರೆ, ಸಂಘಟನೆಯ ಅಂಕಿಅಂಶಗಳ ಪ್ರಕಾರ 261 ಸಾವುಗಳು ಅಧಿಕೃತ ದಾಖಲೆಗಳಿಂದ ಹೊರಗುಳಿದಿವೆ.

ಕಾನೂನುಗಳಿದ್ದರೂ, ಸುಪ್ರೀಂ ಕೋರ್ಟ್ ನಿರ್ದೇಶನಗಳಿದ್ದರೂ, ಸುರಕ್ಷಿತ ಸ್ವಚ್ಛತಾ ವ್ಯವಸ್ಥೆ ಜಾರಿಗೊಳಿಸುವ ಭರವಸೆಗಳಿದ್ದರೂ ನೈರ್ಮಲ್ಯ ಕಾರ್ಮಿಕರ ಜೀವಕ್ಕೆ ರಕ್ಷಣೆ ಸಿಗುತ್ತಿಲ್ಲ. ಒಬ್ಬರನ್ನು ರಕ್ಷಿಸಲು ಹೋದ ಮತ್ತಿಬ್ಬರೂ ಪ್ರಾಣ ಕಳೆದುಕೊಂಡಿರುವ ಹೈದರಾಬಾದ್‌ನ ಈ ಘಟನೆ, ದೇಶದಲ್ಲಿ ನೈರ್ಮಲ್ಯ ಕಾರ್ಮಿಕರು ಎದುರಿಸುತ್ತಿರುವ ಅಮಾನವೀಯ ಕೆಲಸದ ಪರಿಸ್ಥಿತಿ, ಸರ್ಕಾರಗಳ ನಿರ್ಲಕ್ಷ್ಯ ಮತ್ತು ಸುರಕ್ಷತಾ ಕಾನೂನುಗಳ ಅನುಷ್ಠಾನದ ವೈಫಲ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸೌರವ್ ದಾಸ್ ಬಳಿಕ ಅಭಿಜಿತ್ ದಿಪ್ಕೆ, ಆಶುತೋಷ್ ರಂಕಾ ವಿರುದ್ಧವೂ ಲುಕ್‌ಔಟ್ ನೋಟಿಸ್

ಅಕ್ಟೋಬರ್ 2ರಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅನುಮತಿ ನಿರಾಕರಿಸಿದ್ದರೂ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಅಭಿಜಿತ್ ದಿಪ್ಕೆ ಮತ್ತು ಆಶುತೋಷ್ ರಂಕಾ ವಿರುದ್ಧ ಲುಕ್‌ಔಟ್ ಸುತ್ತೋಲೆಗಳನ್ನು...

ಏಪ್ರಿಲ್‌-ಜೂನ್ ನಡುವೆ ಭಾರತದ 34.4 ಲಕ್ಷ ವಿಡಿಯೋಗಳನ್ನು ತೆಗೆದುಹಾಕಿದ ಯೂಟ್ಯೂಬ್: ವಿಶ್ವದಲ್ಲೇ ಹೆಚ್ಚು

ಈ ವರ್ಷದ ಏಪ್ರಿಲ್ ಮತ್ತು ಜೂನ್ ನಡುವೆ ಭಾರತದಿಂದ ಅಪ್‌ಲೋಡ್ ಆದ ಬರೋಬ್ಬರಿ 34.4 ಲಕ್ಷ ವೀಡಿಯೊಗಳನ್ನು ಯೂಟ್ಯೂಬ್ ತೆಗೆದುಹಾಕಿದೆ. ಇದು ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಸಂಖ್ಯೆಯಾಗಿದ್ದು, ಹಿಂದಿನ...

ಸೌರವ್ ದಾಸ್‌ಗೆ ಆಕ್ಸ್‌ಫರ್ಡ್, ಎಲ್‌ಎಸ್‌ಇ ಆಹ್ವಾನ: ಸರ್ಕಾರಕ್ಕೆ ‘ಅಸೂಯೆ’ ಎಂದ ಅಭಿಜಿತ್ ದಿಪ್ಕೆ

ಪ್ರತಿಷ್ಠಿತ ಸಂಸ್ಥೆಗಳಿಗೆ 27 ವರ್ಷದ ಯುವಕನಿಗೆ ಆಹ್ವಾನ ಬಂದಿದ್ದನ್ನು ಕಂಡು ಸರ್ಕಾರಕ್ಕೆ "ಅಸೂಯೆ" ಉಂಟಾದ ಕಾರಣ, ಸಿಜೆಪಿ (ಸಿಜೆಪಿ) ಸಹ-ಸಂಚಾಲಕ ಸೌರವ್ ದಾಸ್ ಅವರಿಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಆಕ್ಸ್‌ಫರ್ಡ್...

ಯುಎಪಿಎ ಪ್ರಕರಣಗಳಲ್ಲಿ ಮುಸ್ಲಿಮರನ್ನೇ ಹೆಚ್ಚು ಗುರಿಯಾಗಿಸಲಾಗುತ್ತಿದೆ: ಕರ್ನಾಟಕದ ಅಧ್ಯಯನ ಉಲ್ಲೇಖಿಸಿದ ಹ್ಯೂಮನ್‌ ರೈಟ್ಸ್‌ ವಾಚ್!

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್ (HRW), ಭಾರತದಲ್ಲಿ ಭಯೋತ್ಪಾದನೆ ನಿಗ್ರಹ ಕಾನೂನುಗಳ ಬಳಕೆಯ...

ದೆಹಲಿ ಪ್ರತಿಭಟನೆ ವೇಳೆ ಪತ್ರಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ತನಿಖಾ ಸಮಿತಿಗೆ ಒಪ್ಪಿಸಿದ ಸುಪ್ರೀಂ ಕೋರ್ಟ್

ಕಳೆದ ಅಕ್ಟೋಬರ್‌ನಲ್ಲಿ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆಗಳನ್ನು ವರದಿ ಮಾಡುವಾಗ ತಮ್ಮ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಮತ್ತು ಅಕ್ರಮವಾಗಿ ಬಂಧಿಸಿದ್ದಾರೆ ಎಂದು...

ಸರ್ಕಾರಿ ಶಾಲೆಗಳ ದತ್ತು ನೀತಿ ವಿರೋಧಿ ಧರಣಿ ಸ್ಥಳಕ್ಕೆ ಶಿಕ್ಷಣ ಇಲಾಖೆ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ಭೇಟಿ; ಹೋರಾಟಗಾರರ ಅಹವಾಲು ಸರ್ಕಾರಕ್ಕೆ ತಲುಪಿಸುವ ಭರವಸೆ

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸಮಗ್ರವಾಗಿ ಜಾರಿಯಾಗಬೇಕು ಮತ್ತು ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳಿಗೆ ದತ್ತು ನೀಡುವ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಕರ್ನಾಟಕ...

ಸ್ವತಂತ್ರ ಕಾರ್ಯವೈಖರಿಯ ಮೂಲಕ ನ್ಯಾಯಾಂಗವು ಸಾರ್ವಜನಿಕ ವಿಶ್ವಾಸವನ್ನು ಉಳಿಸಿಕೊಳ್ಳುತ್ತಿರಬೇಕು: ಸಿಜೆಐ ಸೂರ್ಯ ಕಾಂತ್

ಪ್ರತಿಯೊಂದು ಭಿನ್ನಾಭಿಪ್ರಾಯವನ್ನೂ ತನ್ನ ಅಧಿಕಾರಕ್ಕೆ ಎದುರಾದ ಸವಾಲು ಎಂದು ಭಾವಿಸದೆ, ಟೀಕೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಆತ್ಮವಿಶ್ವಾಸದ ಸಂಸ್ಥೆಯೊಂದು ಹೊಂದಿರಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು ಗುರುವಾರ (ನ.26)...

‘ಸರ್ಕಾರಿ ಶಾಲೆಗಳನ್ನು ನಡೆಸಬೇಕಿರುವುದು ಸರ್ಕಾರ, ಕಂಪನಿಗಳಲ್ಲ’: ರಾಜ್ಯ ಸರ್ಕಾರದ ವಿರುದ್ಧ ಶ್ರೀಪಾದ್ ಭಟ್ ವಾಗ್ದಾಳಿ 

‘ಸರ್ಕಾರಿ ಶಾಲೆಗಳನ್ನು ನಡೆಸಬೇಕಿರುವುದು ಸರ್ಕಾರವೇ ಹೊರತು ಅಂಬಾನಿ, ಅದಾನಿ ಅಥವಾ ಟೊಯೋಟಾ ಕಂಪನಿಗಳಲ್ಲ. ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡಲು ಜನರು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿಲ್ಲ. ಶಿಕ್ಷಕರು, ಶೌಚಾಲಯ, ಪಠ್ಯಪುಸ್ತಕ ಸೇರಿದಂತೆ...

ಶಿಕ್ಷಣ ದಾನ ಅಥವಾ ಭಿಕ್ಷೆಯಲ್ಲ ಮೂಲಭೂತ ಹಕ್ಕು, ಬೇಡಿಕೆ ಈಡೇರುವವರೆಗೆ ಫ್ರೀಡಂ ಪಾರ್ಕ್‌ ಬಿಟ್ಟು ಕದಲುವುದಿಲ್ಲ : ನಿರಂಜನಾರಾಧ್ಯ

ಶಿಕ್ಷಣ ದಾನ ಅಥವಾ ಭಿಕ್ಷೆಯಲ್ಲ, ಅದು ನಮ್ಮ ಮೂಲಭೂತ ಹಕ್ಕು. ನಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೆ ಫ್ರೀಡಂ ಪಾರ್ಕ್‌ ಬಿಟ್ಟು ಕದಲುವುದಿಲ್ಲ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ...

ಸೌರವ್ ದಾಸ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ: ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ

ಬ್ರಿಟನ್‌ಗೆ ಪ್ರಯಾಣಿಸಲು ಮುಂದಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ ಸಂಚಾಲಕ ಸೌರವ್ ದಾಸ್ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಂಬೈ ಪೊಲೀಸರು ಅವರ ವಿರುದ್ಧ ಲುಕ್ ಔಟ್ ಸರ್ಕ್ಯುಲರ್...